Airtel, Jio, BSNL and Vi: 250 ರೂ.ಒಳಗೆ ಲಭ್ಯವಾಗುವ ಪ್ರಿಪೇಯ್ಡ್‌ ಪ್ಲಾನ್‌ಗಳು!

|

ಟೆಲಿಕಾಂ ವಲಯದಲ್ಲಿ ಟೆಲಿಕಾಂ ಕಂಪೆನಿಗಳು ಗ್ರಾಹಕರನ್ನು ಸೆಳೆಯುವುದಕ್ಕಾಗಿ ಹಲವು ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ಅಗ್ಗದ ಬೆಲೆಯಲ್ಲಿ ಅಧಿಕ ಡೇಟಾ ನೀಡುವ ಪ್ಲಾನ್‌ಗಳನ್ನು ಪರಿಚಯಿಸಿ ಗಮನ ಸೆಳೆದಿವೆ. ಈ ಪೈಕಿ ಏರ್‌ಟೆಲ್, ಜಿಯೋ, ಬಿಎಸ್‌ಎನ್‌ಎಲ್ ಮತ್ತು ವಿ ಟೆಲಿಕಾಂಗಳು 250 ರೂ.ಗಳ ಅಡಿಯಲ್ಲಿ ಹಲವು ಪ್ರಿಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಿದ್ದು, ಈ ಪ್ಲಾನ್‌ಗಳಲ್ಲಿ ದೈನಂದಿನ 2GB ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದೆ.

ಪ್ರಿಪೇಯ್ಡ್‌

ಹೌದು, ಟೆಲಿಕಾಂ ಕಂಪೆನಿಗಳು ಮಾಸಿಕ, ವಾರ್ಷಿಕ ಅವಧಿ ಮಾನ್ಯತೆಯ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಅಲ್ಪಾವಧಿ ಮಾನ್ಯತೆ ಹೊಂದಿರುವ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ನೀವು ಬಯಸುವುದಾದರೆ ಅಂತಹ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕೆಲವು ಕಂಪನಿಗಳು ತಮ್ಮ ಪ್ರಿಪೇಯ್ಡ್ ಯೋಜನೆಗಳೊಂದಿಗೆ ಹೊಸ ಕೊಡುಗೆಗಳನ್ನು ಹೊರತರುತ್ತಿವೆ. ವಿ ಟೆಲಿಕಾಂ ಕೆಲವು ಯೋಜನೆಗಳೊಂದಿಗೆ ಹೆಚ್ಚುವರಿ ಡೇಟಾವನ್ನು ನೀಡುತ್ತಿದ್ದರೆ, ಜಿಯೋ ತನ್ನ ಕೆಲವು ಯೋಜನೆಗಳೊಂದಿಗೆ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಹಾಗಾದ್ರೆ 250 ರೂ. ಒಳಗಿನ ಪ್ರಿಪೇಯ್ಡ್‌ ಪ್ಲಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಿಎಸ್‌ಎನ್‌ಎಲ್

ಬಿಎಸ್‌ಎನ್‌ಎಲ್

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಬಿಎಸ್‌ಎನ್‌ಎಲ್ 250 ರೂ. ಗಿಂತ ಕಡಿಮೆ ಬೆಲೆಯಲ್ಲಿ ಹಲವಾರು ಪ್ರಿಪೇಯ್ಡ್ ಪ್ಲಾನ್‌ಗಳನ್ನು ಹೊಂದಿದೆ. ಈ ಪ್ಲಾನ್‌ಗಳು 97ರೂ. ಗಳಿಂದ ಆರಂಭವಾಗಿ 247ರೂ.ಗಳವರೆಗೆ ಲಭ್ಯವಿದೆ. ಇನ್ನು 97ರೂ. ಪ್ರಿಪೇಯ್ಡ್‌ ಪ್ಲಾನ್‌ 2GB ದೈನಂದಿನ ಡೇಟಾ ಡೇಟಾ ವೋಚರ್, ಅನಿಯಮಿತ ಕರೆಗಳು ಮತ್ತು 18 ದಿನಗಳ ವ್ಯಾಲಿಡಿಟಿ ಮತ್ತು ದಿನಕ್ಕೆ 100 SMS ನೀಡುತ್ತದೆ. ಇನ್ನು 118ರೂ ಮತ್ತು 187ರೂ ಬೆಲೆಯ ಪ್ಲಾನ್‌ಗಳು ಕ್ರಮವಾಗಿ 21 ದಿನ ಮತ್ತು 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತವೆ. ಈ ಪ್ಲಾನ್‌ಗಳ 0.5GBಯಿಂದ ದೈನಂದಿನ ಡೇಟಾ 2GB ದೈನಂದಿನ ಡೇಟಾ ನೀಡಲಿವೆ. ಬಿಎಸ್‌ಎನ್‌ಎಲ್‌ನ 249ರೂ ಪ್ರಿಪೇಯ್ಡ್ ಪ್ಲಾನ್ 50GB ಡೇಟಾವನ್ನು 30 ದಿನಗಳ ಅವಧಿಯಲ್ಲಿ ನೀಡಲಿದೆ.

ಏರ್‌ಟೆಲ್‌

ಏರ್‌ಟೆಲ್‌

ಏರ್‌ಟೆಲ್‌ ಟೆಲಿಕಾಂ 149ರೂ.ಬೆಲೆಯ ಪ್ರಿಪೇಯ್ಡ್ ಪ್ಲಾನ್ ದೈನಂದಿನ 2GB ಡೇಟಾ, ಅನಿಯಮಿತ ಕರೆ, ಪ್ರತಿನಿತ್ಯ ನೂರು ಎಸ್‌ಎಂಎಸ್‌ ಪ್ರಯೋಜನವನ್ನು ನೀಡಲಿದೆ. ಈ ಪ್ಲಾನ್‌ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರಲಿದೆ. ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಚಂದಾದಾರಿಕೆ, ಉಚಿತ ಹೆಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್‌ ಪ್ರಯೋಜನವನ್ನು ಪಡೆಯಬಹುದಾಗಿದೆ. ಇನ್ನು ಏರ್‌ಟೆಲ್‌ 219ರೂ. ಪ್ರಿಪೇಯ್ಡ್ ಪ್ಲಾನ್ ಕೂಡ ಹೊಂದಿದೆ. ಈ ಪ್ಲಾನ್ ದಿನಕ್ಕೆ 1 ಜಿಬಿ ಡೇಟಾವನ್ನು ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ನೀಡುತ್ತದೆ. ಇದಲ್ಲದೆ ಏರ್‌ಟೆಲ್‌ 249ರೂ. ಪ್ರಿಪೇಯ್ಡ್ ಪ್ಲಾನ್ ಕೂಡ ಲಭ್ಯವಿದೆ. ಈ ಪ್ಲಾನ್ ದಿನಕ್ಕೆ 1.5GB ಡೇಟಾವನ್ನು ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ನೀಡುತ್ತದೆ. ಈ ಯೋಜನೆಯ ಹೆಚ್ಚುವರಿ ಪ್ರಯೋಜನಗಳೆಂದರೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಚಂದಾದಾರಿಕೆ ಮತ್ತು ವಿಂಕ್ ಮ್ಯೂಸಿಕ್ ಉಚಿತವಾಗಿ ಪಡೆಯಬಹುದಾಗಿದೆ.

ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ

ಜಿಯೋ ಟೆಲಿಕಾಂ ಅಲ್ಫಾವಧಿಯ ಪ್ಲಾನ್‌ಗಳಲ್ಲಿ 149 ಮತ್ತು ರೂ 299 ಪ್ರಿಪೇಯ್ಡ್ ಪ್ಲಾನ್‌ಗಳು ಲಭ್ಯವಿದೆ. ಇದರಲ್ಲಿ 249ರೂ. ಪ್ರಿಪೇಯ್ಡ್ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇನ್ನು ಈ ಪ್ಲಾನ್‌ನಲ್ಲಿ ದಿನನಿತ್ಯ 2GB ಡೇಟಾ ಪ್ರಯೋಜನ ಸಿಗಲಿದ್ದು, ಒಟ್ಟು 56GB ಡೇಟಾವನ್ನು ನೀಡುತ್ತದೆ. ಈ ಪ್ಲಾನ್‌ನಲ್ಲಿ ಜಿಯೋದಿಂದ ಜಿಯೋ ಸಂಖ್ಯೆಗಳಿಗೆ ಅನಿಯಮಿತ ಕರೆ ಮತ್ತು ಜಿಯೋ ಅಲ್ಲದ ಸಂಖ್ಯೆಗಳಿಗಾಗಿ 1000 ನಿಮಿಷಗಳ ಎಫ್‌ಯುಪಿ ಮಿತಿಯೊಂದಿಗೆ ವಾಯ್ಸ್‌ ಕಾಲ್‌ ಪ್ರಯೋಜನವನ್ನು ಪಡೆಯಬಹುದಾಗಿದೆ. ಕರೆಗಳನ್ನು ತರುತ್ತದೆ. ಈ ಯೋಜನೆಯು ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯೊಂದಿಗೆ ದಿನಕ್ಕೆ 100 ಉಚಿತ SMS ನೀಡುತ್ತದೆ.

ವಿ ಟೆಲಿಕಾಂ

ವಿ ಟೆಲಿಕಾಂ

ವಿ ಟೆಲಿಕಾಂ ಕೂಡ ಹಲವು ಆಯ್ಕೆಯ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಹೊಂದಿದೆ. ಇದರಲ್ಲಿ ವಿ ಟೆಲಿಕಾಂ 219ರೂ. ಪ್ರಿಪೇಯ್ಡ್ ಪ್ಲಾನ್‌ ಅನಿಯಮಿತ ಟಾಕ್‌ಟೈಮ್‌ನೊಂದಿಗೆ 28 ​​ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ಪ್ರತಿನಿತ್ಯ 1 ಜಿಬಿ ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದೆ. ಅಲ್ಲದೆ ವಿ ಮೂವೀಸ್ ಮತ್ತು ಟಿವಿ ಪ್ರವೇಶದೊಂದಿಗೆ ಜೊಮಾಟೊದಿಂದ ಆಹಾರ ಆರ್ಡರ್‌ಗಳ ಮೇಲೆ ಪ್ರತಿದಿನ 75 ರೂಪಾಯಿ ರಿಯಾಯಿತಿ ಪಡೆಯಬಹುದಾಗಿದೆ. ಇದಲ್ಲದೆ ವಿ ಟೆಲಿಕಾಂನ 249ರೂ. ಪ್ರಿಪೇಯ್ಡ್ ಪ್ಲಾನ್ 28 ​​ದಿನಗಳ ಮಾನ್ಯತೆ ಪಡೆದಿದೆ. ಈ ಪ್ಲಾನ್‌ ದಿನಕ್ಕೆ 1.5 GB ಡೇಟಾವನ್ನು ನೀಡುತ್ತದೆ.

Best Mobiles in India

English summary
Airtel, Jio, BSNL and Vi are offering prepaid plans under Rs 250 that give up to 2GB daily data.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X