ನಿಮ್ಮ ಮನೆಯನ್ನು ಬೆಚ್ಚಗಿರಿಸಲು ನೀವು ಖರೀದಿಸಬಹುದಾದ ಬೆಸ್ಟ್‌ ರೂಮ್‌ ಹೀಟರ್‌ಗಳು!

|

ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಇದೇ ಕಾರಣಕ್ಕೆ ಮನೆಯ ವಾತಾವರಣ ಕೂಡ ಶೀತಾಂಶದಿಂದ ಕೂಡಿರುವ ಅನುಭವ ನಿಮಗೆ ಬರುತ್ತಿರಬಹುದು. ಇಂತಹ ಸನ್ನಿವೇಶದಲ್ಲಿ ನಿಮಗೆ ಬಿಸಿಗಾಳಿಯ ಅನುಭವ ಬೇಕು ಎನಿಸುವುದು ಸಹಜ. ಆದರೆ ಹೊರಗಡೆ ಮಳೆ ಬೀಳುತ್ತಿರುವುದರಿಂದ ನಿಮಗೆ ಬಿಸಿಗಾಳಿಯ ಅನುಭವ ಸಿಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ ನಿಮ್ಮ ರೂಮಿನ ವಾತಾವರಣವನ್ನು ಬಿಸಿಯಾಗಿಡುವುದು ಹೇಗೆ ಎನ್ನುವ ಚಿಂತೆ ಬರುವುದು ಸಹಜ. ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ, ಏಕೆಂದರೆ ಇಂದಿನ ಸ್ಮಾರ್ಟ್‌ ಜಗತ್ತಿನ ನಿಮ್ಮ ರೂಮ್‌ ಅನ್ನು ಬಿಸಿಯಾಗಿಡಬಲ್ಲ ರೂಮ್‌ ಹೀಟರ್‌ಗಳು ಕೂಡ ಲಭ್ಯವಿದೆ.

ರೂಮ್‌

ಹೌದು, ಶೀತಾಂಶದ ಸಮಯದಲ್ಲಿ ನಿಮ್ಮ ರೂಮ್‌ ಅನ್ನು ಬಿಸಿಯಾಗಿರುವಂತೆ ಇಡುವುದಕ್ಕೆ ರೂಮ್‌ ಹೀಟರ್‌ಗಳು ಸಹಾಯಕವಾಗುತ್ತವೆ. ಇದಕ್ಕಾಗಿಯೇ ಹಲವು ಕಂಪೆನಿ ವಿವಿಧ ಮಾದರಿಯ ರೂಮ್‌ ಹೀಟರ್‌ಗಳನ್ನು ಪರಿಚಯಿಸಿವೆ. ಇವುಗಳ ಮೂಲಕ ನಿಮ್ಮ ಕೊಠಡಿಯ ವಾತಾವರಣವನ್ನು ನವು ಬಿಸಿಗಾಳಿಗೆ ಬದಲಾಯಿಸುವುದಕ್ಕೆ ಸಾಧ್ಯವಾಗಲಿದೆ. ಅಲ್ಲದೆ ಶೀತಾಂಶದಿಂದ ನಿಮ್ಮ ಬಾಡಿಯನ್ನು ಬಿಸಿಯಾಗಿಡಲು ಸಹಾಯಕವಾಗಲಿದೆ. ಹಾಗಾದ್ರೆ ಭಾರತದಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ರೂಮ್‌ ಹೀಟರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌ ಬ್ರ್ಯಾಂಡ್ - ಸೊಲಿಮೊ 2000 ವ್ಯಾಟ್ಸ್‌ ರೂಮ್ ಹೀಟರ್

ಅಮೆಜಾನ್‌ ಬ್ರ್ಯಾಂಡ್ - ಸೊಲಿಮೊ 2000 ವ್ಯಾಟ್ಸ್‌ ರೂಮ್ ಹೀಟರ್

ಸೊಲಿಮೊ ರೂಮ್ ಹೀಟರ್ ಅಧಿಕ ಬಿಸಿಯಾಗದಂತೆ ಸೆಕ್ಯುರ್‌ ಆಗಿರುವ ಕ್ಯಾಪಸಿಟಿ ಹೊಂದಿದೆ. ಇದು 130 ° C ತಾಪಮಾನವನ್ನು ತಲುಪಿದರೆ ಮೋಟಾರ್ ಅನ್ನು ಸ್ವಯಂಚಾಲಿತವಾಗಿ ಸ್ವಿಚ್ ಆಫ್ ಆಗುವಂತೆ ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಹೀಟರ್‌ 126 ° C ತಾಪಮಾನವನ್ನು ತಲುಪಿದಾಗ ಸೆಕ್ಯುರ್‌ ಫ್ಯೂಸ್ ಕೂಡ ಹೊಂದಿದೆ. ಇನ್ನು ಈ ಹೀಟರ್‌ ಬಾಡಿ ಪ್ಲಾಸ್ಟಿಕ್ ನಿಂದ ಸುತ್ತುರಿದಿದ್ದು, ಮೆಟಲ್‌ ಅನ್ನು ಕೂಡ ಹೊಂದಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕೋಣೆಯನ್ನು ಬೆಚ್ಚಗಾಗಲು ಇದು ಉಪಯುಕ್ತವಾಗಿದೆ. ಪ್ರಸ್ತುತ ಅಮೆಜಾನ್‌ನಲ್ಲಿ ಇದನ್ನು 959ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ.

Orpat OEH-1220

Orpat OEH-1220

ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳಲ್ಲಿ ಒರ್ಪಾಟ್ ಕಂಪೆನಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಒರ್ಪಾಟ್‌ ಕಂಪೆನಿ ಪರಿಚಯಿಸಿರುವ Orpat OEH-1220 2000-ವ್ಯಾಟ್ ಫ್ಯಾನ್ ಹೀಟರ್
ಸ್ಪಾಟ್ ಹೀಟರ್ ಆಗಿದೆ. ಇದನ್ನು 100% ತಾಮ್ರದ ವೈರಿಂಗ್ ಅನ್ನು ಬಳಸಿ ಮಾಡಲಾಗಿದೆ. ಇದರ ಬಾಡಿ ಮೆಟಲ್‌ ಮತ್ತು ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ. ಇನ್ನು ಈ ಹೀಟರ್‌ ದೀರ್ಘಾವಧಿಯ ಹೀಟಿಂಗ್‌ ಎಲಿಮೆಂಟ್, ಒವರ್‌ ಹೀಟ್‌ ಪ್ರೊಟೆಕ್ಷನ್‌ ಮತ್ತು ಸೆಫ್ಟಿಯನ್ನು ಕೂಡ ಒಳಗೊಂಡಿದೆ. ಇದು ಮಧ್ಯಮ ಕೋಣೆಗೆ ಮಾತ್ರ ಸೂಕ್ತವಾಗಿದೆ. ಇದರ ಬೆಲೆ ಅಮೆಜಾನ್‌ನಲ್ಲಿ 1,149ರೂ. ಆಗಿದೆ.

ಒರ್ಪಾಟ್‌ OEH-1260

ಒರ್ಪಾಟ್‌ OEH-1260

ಒರ್ಪಾಟ್‌ ಸಂಸ್ಥೆಯ ಈ ಪ್ಯಾನ್‌ ಹೀಟರ್‌ 2000 ವ್ಯಾಟ್ ಫ್ಯಾನ್ ಹೀಟರ್ ಆಗಿದೆ. ಇದು ಕೂಡ ಮಧ್ಯಮ ಗಾತ್ರದ ಕೋಣೆಗೆ ಸೂಕ್ತವಾಗಿದೆ. ಈ ಹೀಟರ್ ಅನ್ನು 100% ತಾಮ್ರದ ತಂತಿಯೊಂದಿಗೆ ಜೋಡಿಸಲಾಗಿದೆ, ಇದು ಕೂಡ ಲೈಫ್‌ ಟೈಂ ಬಾಳಿಕೆಯನ್ನು ಹೊಂದಿದೆ. ಈ ಹೀಟರ್ ಅನ್ನು ಸುಲಭವಾಗಿ ಸಂಗ್ರಹಿಸಲು ಕಾರ್ಡ್-ವಿಂಡರ್ ಸೌಲಭ್ಯವಿದೆ. ಇದರಲ್ಲಿ ಥರ್ಮಲ್ ಕಟ್-ಆಫ್ ಫೀಚರ್ಸ್‌ ಅನ್ನು ನೀಡಲಾಗಿದೆ. ಇದು ಪ್ರಸ್ತುತ ಅಮೆಜಾನ್‌ ತಾಣದಲ್ಲಿ 1,440ರೂ. ಬೆಲೆಯಲ್ಲಿ ದೊರೆಯಲಿದೆ.

ಓರಿಯಂಟ್ ಎಲೆಕ್ಟ್ರಿಕ್ ಅರೆವಾ FH20WP

ಓರಿಯಂಟ್ ಎಲೆಕ್ಟ್ರಿಕ್ ಅರೆವಾ FH20WP

ಓರಿಯಂಟ್‌ ಕಂಪೆನಿಯ ಈ ರೂಮ್ ಹೀಟರ್ 2000/1000 ವ್ಯಾಟ್ಸ್ ಫ್ಯಾನ್ ರೂಮ್ ಹೀಟರ್ ಆಗಿದೆ. ಇದು ಎಬಿಎಸ್ ಪ್ಲಾಸ್ಟಿಕ್ ಬಾಡಿ ಮತ್ತು ಕಂಪ್ಲೀಟ್‌ ತಾಮ್ರದ ಮೋಟಾರ್ ಹೊಂದಿರುವ ಸ್ಪಾಟ್ ಹೀಟರ್ ಆಗಿದೆ. ಈ ಹೀಟರ್ ಹೆಚ್ಚಿನ ಬಾಳಿಕೆ ಬರಲಿದ್ದು, 1.3m ಬಳ್ಳಿಯನ್ನು ಹೊಂದಿದೆ. ಇನ್ನು ಹೀಟರ್ ಅನ್ನು ಲಂಬವಾಗಿ ಮತ್ತು ಅಡ್ಡಲಾಗಿ ಜೋಡಿಸಬಹುದು. ಈ ಓರಿಯಂಟ್ ಹೀಟರ್ ಹೊಂದಾಣಿಕೆಯ ಥರ್ಮೋಸ್ಟಾಟ್ ಅನ್ನು ಸಹ ಹೊಂದಿದೆ. ಇದನ್ನು ನೀವು 180 ಸ್ಕವೇರ್‌ ಫಿಟ್‌ ಹೊಂದಿರುವ ಕೊಠಡಿಗಳಲ್ಲಿ ಬಳಸಲು ಸೂಕ್ತವಾಗಿದೆ. ಇದು 2300 RPM ನಲ್ಲಿ ರನ್ ಆಗುತ್ತಿದೆ, ಇದನ್ನು ಬೇಸಿಗೆಯಲ್ಲಿ ಫ್ಯಾನ್ ಆಗಿ ಕೂಡ ಬಳಸಬಹುದಾಗಿದೆ. ಪ್ರಸ್ತುತ ಅಮೆಜಾನ್‌ನಲ್ಲಿ ಇದರ ಬೆಲೆ 1,449ರೂ.ಆಗಿದೆ.

ಬಜಾಜ್ ಬ್ಲೋ ಹಾಟ್ 2000 ವ್ಯಾಟ್ಸ್

ಬಜಾಜ್ ಬ್ಲೋ ಹಾಟ್ 2000 ವ್ಯಾಟ್ಸ್

ಬಜಾಜ್ ಬ್ಲೋ ಹಾಟ್ 2000 ವ್ಯಾಟ್ಸ್ ಫ್ಯಾನ್ ಫೋರ್ಸ್ಡ್ ಸರ್ಕ್ಯುಲೇಶನ್ ರೂಮ್ ಹೀಟರ್ ಆಗಿದೆ. ಇದು ಭಾರತದಲ್ಲಿ ಲಭ್ಯವಾಗುವ ಅತ್ಯುತ್ತಮ ರೂಮ್ ಹೀಟರ್‌ಗಳಲ್ಲಿ ಒಂದಾಗಿದೆ. ಈ ಹೀಟರ್‌ ಸ್ಟೈಲಿಶ್ ಲುಕ್‌ ಹೊಂದಿದ್ದು, ಸುಲಭ ಚಲನಶೀಲತೆಗಾಗಿ ಬಾಗಿರುವ ಕಾಲುಗಳನ್ನು ಹೊಂದಿದೆ. ಇನ್ನು ಸುರಕ್ಷತೆಗಾಗಿ ನಿಕಲ್ ಮತ್ತು ಕ್ರೋಮ್ ಮೆಶ್ ಉತ್ತಮ ಆಡ್-ಆನ್ ಹೊಂದಿದೆ. ಇನ್ನು ಇದರಲ್ಲಿ ಸ್ಟೇನ್ಲೆಸ್ ಸ್ಟೀಲ್ ರೆಫ್ಲೆಕ್ಟರ್‌ ಅನ್ನು ನೀಡಲಾಗಿದ್ದು, ಚಳಿಗಾಲದಲ್ಲಿ ಸೂಕ್ತವಾದ ಹೀಟರ್‌ ಆಗಿದೆ. ಪ್ರಸ್ತುತ ಅಮೆಜಾನ್‌ ತಾಣದಲ್ಲಿ ಈ ಹೀಟರ್‌ ಅನ್ನು ನೀವು 2,275ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಬಜಾಜ್ ಫ್ಲ್ಯಾಶಿ 1000 ವ್ಯಾಟ್ಸ್ ರೇಡಿಯಂಟ್ ರೂಮ್ ಹೀಟರ್

ಬಜಾಜ್ ಫ್ಲ್ಯಾಶಿ 1000 ವ್ಯಾಟ್ಸ್ ರೇಡಿಯಂಟ್ ರೂಮ್ ಹೀಟರ್

ಬಜಾಜ್‌ ಕಂಪೆನಿಯ ಫ್ಲ್ಯಾಶಿ 1000 ವ್ಯಾಟ್ಸ್ ರೇಡಿಯಂಟ್ ರೂಮ್ ಹೀಟರ್‌ ಭಾರತದ ಅತ್ಯುತ್ತಮ ರೂಮ್ ಹೀಟರ್‌ಗಳಲ್ಲಿ ಒಂದಾಗಿದೆ. ಈ ಹೀಟರ್‌ ಸೆಕ್ಯುರಿಟಿ ಫೀಚರ್ಸ್‌ ಹೊಂದಿದ್ದು, ಮಿತಿಮೀರಿದ ಟೆಂಪ್‌ರೇಚರ್‌ ತಡೆಗಟ್ಟಲು ಸ್ಟೇನ್ಲೆಸ್ ಸ್ಟೀಲ್ ರಿಪ್ಲೆಕ್ಟರ್‌ ಅನ್ನು ಹೊಂದಿದೆ. ಅಲ್ಲದೆ ಉತ್ತಮವಾದ ಟೆಂಪ್‌ರೇಚರ್‌ ನೀಡುವುದಕ್ಕಾಗಿ ಹೊರಗಿನ ಜಾಲರಿಯು ನಿಕಲ್ ಕ್ರೋಮ್‌ನಿಂದ ಮಾಡಲ್ಪಟ್ಟಿದೆ. ಇದು 2 ವರ್ಷದ ವಾರೆಂಟಿಯೊಂದಿಗೆ ಬರಲಿದೆ. ಪ್ರಸ್ತುತ ಅಮೆಜಾನ್‌ನಲ್ಲಿ ಈ ಹೀಟರ್‌ 999ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ಹ್ಯಾವೆಲ್ಸ್ ಕೋ ಜಿಯೋ ಕ್ವಾರ್ಟ್ಜ್ ರೂಮ್ ಹೀಟರ್

ಹ್ಯಾವೆಲ್ಸ್ ಕೋ ಜಿಯೋ ಕ್ವಾರ್ಟ್ಜ್ ರೂಮ್ ಹೀಟರ್

ಹ್ಯಾವೆಲ್ಸ್ ಕಂಪೆನಿಯ Co zio ಕ್ವಾರ್ಟ್ಜ್ ಹೀಟರ್ ಸ್ಮಾರ್ಟ್‌ ರೂಮ್‌ ಹೀಟರ್ ಆಗಿದೆ. ಈ ಹೀಟರ್ ಬಿಸಿ ಅನುಭವವನ್ನು ನೀಡುವುದಕ್ಕಾಗಿ ತುಕ್ಕು-ಮುಕ್ತ ಸ್ಟೇನ್ಲೆಸ್ ಸ್ಟೀಲ್ ರಿಪ್ಲೆಕ್ಟ್‌ ಅನ್ನು ಹೊಂದಿದೆ. ಇದಲ್ಲದೆ ಈ ಹೀಟರ್‌ನಲ್ಲಿ ಸುರಕ್ಷತೆಗಾಗಿ ಮುಂಭಾಗದ ಗ್ರಿಲ್‌ಗಳನ್ನು ಒದಗಿಸಲಾಗಿದೆ. ಇದು 800W ಪವರ್‌ ಅನ್ನು ನೀಡಲಿದ್ದು, 2 ವರ್ಷಗಳ ವಾರೆಂಟಿಯನ್ನು ಹೊಂದಿದೆ. ಇನ್ನು ಈ ಹೀಟರ್‌ ಪ್ರಸ್ತುತ ಅಮೆಜಾನ್‌ ತಾಣದಲ್ಲಿ 1,890ರೂ.ಬೆಲೆಯನ್ನು ಹೊಂದಿದೆ.

Best Mobiles in India

Read more about:
English summary
best room heaters to buy this winter that are cheap and effective

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X