ಇಯರ್‌ಫೋನ್‌ ಖರೀದಿಸುವವರಿಗೆ ಅಮೆಜಾನ್‌ನಲ್ಲಿ ಸಿಗಲಿದೆ ಬಿಗ್‌ ಡಿಸ್ಕೌಂಟ್‌!

|

ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿದೆ. ವಿಶೇಷ ಡಿಸ್ಕೌಂಟ್‌ ಸೇಲ್‌ಗಳ ಮೂಲಕ ಆನ್‌ಲೈನ್‌ ಗ್ರಾಹಕರನ್ನು ಸೆಳೆಯುತ್ತಾ ಬಂದಿದೆ. ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ನಡೆಸುತ್ತಿದೆ. ಈ ಸೇಲ್‌ ಈಗಾಗಲೇ ಲೈವ್‌ ಆಗಿದ್ದು, ಇದೇ ಆಗಸ್ಟ್‌ 10ರಂದು ಎಂಡ್‌ ಆಗಲಿದೆ. ಇನ್ನು ಈ ಸೇಲ್‌ನಲ್ಲಿ ಅನೇಕ ಗ್ಯಾಜೆಟ್ಸ್‌ಗಳ ಮೇಲೆ ಬಿಗ್‌ ಆಫರ್‌ ಅನ್ನು ನೀಡಲಾಗ್ತಿದೆ. ಅದರಲ್ಲೂ ಟ್ರೂಲಿ ವಾಯರ್‌ಲೆಸ್‌ ಸ್ಟಿರಿಯೋ ಇಯರ್‌ಬಡ್ಸ್‌, ಇಯರ್‌ ಫೋನ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಅನ್ನು ನೀಡುತ್ತಿದೆ.

ಇಯರ್‌ಫೋನ್‌

ಹೌದು, ಇಯರ್‌ಫೋನ್‌, ಇಯರ್‌ಬಡ್ಸ್‌ ಮತ್ತು ಹೆಡ್‌ಫೋನ್‌ಗಳನ್ನು ಖರೀದಿಸುವವರಿಗೆ ಅಮೆಜಾನ್‌ನಲ್ಲಿ ಬಿಗ್‌ ಆಫರ್‌ ಲಭ್ಯವಿದೆ. ಅಮೆಜಾನ್‌ ತನ್ನ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಇಯರ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ. ಇದರಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳಾದ ಬೋಟ್‌, ಸೋನಿ, ರಾಕರ್ಜ್‌ ಕಂಪೆನಿಯ ಇಯರ್‌ಫೋನ್‌ಗಳು ಸೇರಿವೆ. ಇವುಗಳಲ್ಲಿ ನೀವು ನಿಮ್ಮ ಆಯ್ಕೆಯ ಇಯರ್‌ಫೋನ್‌ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಇದು ನಿಮಗೆ ಉತ್ತಮ ಅವಕಾಶವಾಗಿದೆ. ಹಾಗಾದ್ರೆ ಅಮೆಜಾನ್‌ ಗ್ರೇಟ್‌ ಪ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಯಾವೆಲ್ಲಾ ಇಯರ್‌ಫೋನ್‌ ಮತ್ತು ಇಯರ್‌ಬಡ್ಸ್‌ಗಳು ಡಿಸ್ಕೌಂಟ್‌ ಪಡೆದುಕೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬೋಟ್ ಏರ್‌ಡೂಪ್ಸ್‌ 121v2

ಬೋಟ್ ಏರ್‌ಡೂಪ್ಸ್‌ 121v2

ಬೋಟ್‌ ಕಂಪೆನಿಯ ಬೋಟ್ ಏರ್‌ಡೂಪ್ಸ್‌ 121v2 TWS ಇಯರ್‌ಫೋನ್‌ ಆಗಿದೆ. ಇದನ್ನು ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಪ್ರಯುಕ್ತ ನೀವು ಕೇವಲ 899ರೂ.ಬೆಲೆಯಲ್ಲಿ ಖರೀದಿಸಬಹುದಾಘಿದೆ. ಇದರ ಮೂಲ ಬೆಲೆ 2,990ರೂ.ಆಗಿದೆ. ಇನ್ನು ಈ ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜ್‌ನಲ್ಲಿ 3.5 ಗಂಟೆಗಳ ಪ್ಲೇಬ್ಯಾಕ್ ಅನ್ನು ನೀಡಲಿದೆ. ಹಾಗೆಯೇ ಚಾರ್ಜಿಂಗ್‌ ಕೇಸ್‌ನಲ್ಲಿ ಹೆಚ್ಚುವರಿ 10.5 ಗಂಟೆಗಳ ಬಾಳಿಕೆ ನೀಡಲಿದೆ. ಈ ಚಾರ್ಜಿಂಗ್ ಕೇಸ್ ನಿಫ್ಟಿ ಎಲ್ಇಡಿ ಪರದೆಯನ್ನು ಹೊಂದಿದ್ದು, ಚಾರ್ಜ್‌ ಮಾಹಿತಿಯನ್ನು ನೀಡಲಿದೆ. ಇದು ಕ್ಲೀನ್ ಮತ್ತು ಸಮತೋಲಿತ ಆಡಿಯೊವನ್ನು ತಲುಪಿಸುವ 8mm ಆಡಿಯೋ ಡ್ರೈವರ್‌ಗಳನ್ನು ನೀಡಲಿದೆ.

ಬೋಟ್ ಏರ್‌ಡೂಪ್ಸ್‌ 141

ಬೋಟ್ ಏರ್‌ಡೂಪ್ಸ್‌ 141

ಬೋಟ್‌ ಕಂಪೆನಿಯ ಮತ್ತೊಂದು ಇಯರ್‌ಬಡ್ಸ್‌ ಬೋಟ್ ಏರ್‌ಡೂಪ್ಸ್‌ 141 ಕೂಡ ಅಮೆಜಾನ್‌ನಲ್ಲಿ ವಿಶೇಷ ರಿಯಾಯಿತಿ ಪಡೆದುಕೊಂಡಿದೆ. 4,490ರೂ. ಮೂಲಬೆಲೆ ಹೊಂದಿರುವ ಈ ಇಯರ್‌ಬಡ್ಸ್‌ ಇದೀಗ ರಿಯಾಯಿತಿ ದರದಲ್ಲಿ ಕೇವಲ 1,198ರೂ. ಬೆಲೆಗೆ ದೊರೆಯಲಿದೆ. ಇನ್ನು ಈ ಇಯರ್‌ಬಡ್ಸ್‌ 6 ಗಂಟೆಗಳ ಪ್ಲೇಬ್ಯಾಕ್‌ ಟೈಂ ನೀಡಲಿದೆ. ಅಲ್ಲದೆ ಚಾರ್ಜಿಂಗ್‌ ಕೇಸ್‌ನಲ್ಲಿ ಒಟ್ಟು ಚಾರ್ಜ್ 42 ಗಂಟೆಗಳವರೆಗೆ ಬರುತ್ತದೆ. ಇದು ಲೋ ಲೇಟೆನ್ಸಿಯನ್ನು ಹೊಂದಿದ್ದು, ಗೇಮರ್‌ಗಳಿಗೆ ಸೂಕ್ತವಾಗಿದೆ. ಜೊತೆಗೆ ENx ಪರಿಸರದ ಶಬ್ದ ರದ್ದತಿ ತಂತ್ರಜ್ಞಾನವನ್ನು ಕೂಡ ಒಳಗೊಂಡಿದೆ.

ಬೋಟ್ ಏರ್‌ಡೂಪ್ಸ್‌ 441 ಮಸಾಬಾ ಆವೃತ್ತಿ

ಬೋಟ್ ಏರ್‌ಡೂಪ್ಸ್‌ 441 ಮಸಾಬಾ ಆವೃತ್ತಿ

ಬೋಟ್ ಏರ್‌ಡೋಪ್ಸ್ 441 ಮಸಾಬಾ ಆವೃತ್ತಿ ನಿಮಗೆ ಅಮೆಜಾನ್‌ ಸೇಲ್‌ನಲ್ಲಿ 2,299ರೂ. ಬೆಲೆಗೆ ಲಭ್ಯವಾಗಲಿದೆ. ಇದರ ನಿಯಮಿತ ಬೆಲೆ 5,999ರೂ. ಆಗಿದೆ ಅನ್ನೊದು ಗಮನಿಸಬೇಕಾದ ವಿಚಾರವಾಗಿದೆ. ಈ ಇಯರ್‌ಫೋನ್‌ ಇನ್‌ಸ್ಟಾ ವೇಕ್ ಎನ್ ಪೇರ್ ಟೆಕ್ನಾಲಜಿಯನ್ನು ಒಳಗೊಂಡಿರುವು ಒಂದು ದೊಡ್ಡ ಹೈಲೈಟ್ ಆಗಿದೆ. ಇದು ಇಯರ್‌ಬಡ್‌ಗಳಲ್ಲಿ ಪವರ್ ಮಾಡುತ್ತದೆ ಮತ್ತು ನೀವು ಚಾರ್ಜಿಂಗ್ ಕೇಸ್‌ನ ಮುಚ್ಚಳವನ್ನು ತೆರೆದ ತಕ್ಷಣ ಅವುಗಳನ್ನು ಕನೆಕ್ಷನ್ ಮೋಡ್‌ನಲ್ಲಿ ಇರಿಸುತ್ತದೆ. ಇನ್ನು ಈ ಇಯರ್‌ಫೋನ್‌ IPX7-ರೇಟೆಡ್ ವಾಟರ್‌ ರೆಸಿಸ್ಟೆನ್ಸಿಯನ್ನು ಹೊಂದಿದ್ದು, ಒಟ್ಟು 30 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ.

ಸೋನಿ WF-1000XM4

ಸೋನಿ WF-1000XM4

ಸೋನಿ ಕಂಪೆನಿಯ TWS ಇಯರ್‌ಬಡ್ಸ್‌ ಸೋನಿ WF-1000XM4 ಅಮೆಜಾನ್‌ನಲ್ಲಿ ಬಿಗ್‌ ಆಫರ್‌ ಪಡೆದುಕೊಂಡಿದೆ. ಇದರ ನಿಯಮಿತ ಬೆಲೆ 24,990 ರೂ ಆಗಿದ್ದು, ಅಮೆಜಾನ್‌ನ್ಲಿ ನಿಮಗೆ ಕೇವಲ15,990ರೂ. ಬೆಲೆಗೆ ದೊರೆಯಲಿದೆ. ಈ ಇಯರ್‌ಬಡ್ಸ್‌ ಇಂಟಿಗ್ರೇಟೆಡ್ ಪ್ರೊಸೆಸರ್ V1 ಮತ್ತು LDAC ಕೊಡೆಕ್‌ ಅನ್ನು ಒಳಗೊಂಡಿದೆ. ಇದರಲ್ಲಿ IPX4 ವಾಟರ್‌ ರೆಸಿಸ್ಟೆನ್ಸಿಯನ್ನು ನೀಡಲಾಗಿದೆ. ಇದು 8 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಚಾರ್ಜಿಂಗ್‌ ಕೇಸ್‌ನಲ್ಲಿ 16 ಗಂಟೆಗಳ ಬಾಳಿಕೆಯನ್ನು ನೀಡಲಿದೆ.

ಸೋನಿ WF-1000XM3

ಸೋನಿ WF-1000XM3

ಸೋನಿ WF-1000XM3 ಇಯರ್‌ಬಡ್ಸ್‌ HD ನಾಯ್ಸ್ ಕ್ಯಾನ್ಸೆಲಿಂಗ್ ಪ್ರೊಸೆಸರ್ QN1e ಹೊಂದಿದೆ. ಇದು 24-ಬಿಟ್ ಆಡಿಯೊ ಸಿಗ್ನಲ್ ಪ್ರೊಸೆಸಿಂಗ್ ಅನ್ನು ಬಳಸಿಕೊಂಡು ಸೌಂಡ್‌ ಗುಣಮಟ್ಟವನ್ನು ಅಪ್ಡೇಟ್‌ ಮಾಡಲಿದೆ. ಅಲ್ಲದೆ ಟ್ಯಾಪ್ ಅಥವಾ ಸ್ವೈಪ್ ಗೆಸ್ಚರ್‌ಗಳ ಮೂಲಕ ಇಯರ್‌ಬಡ್ಸ್‌ಗಳನ್ನು ಕಂಟ್ರೋಲ್‌ ಮಾಡುವುದಕ್ಕೆ ಅವಕಾಶವಿದೆ. ಇದು ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ. ಇದಲ್ಲದೆ ಈ ಇಯರ್‌ಬಡ್ಸ್‌ ಒಟ್ಟು 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಸದ್ಯ ಅಮೆಜಾನ್‌ ಸೇಲ್‌ನಲ್ಲಿ ಈ ಇಯರ್‌ಬಡ್ಸ್‌ ನಿಮಗೆ ಕೇವಲ 7,990ರೂ, ಬೆಲೆಗೆ ಲಭ್ಯವಾಗಲಿದೆ. ಅಲ್ಲದೆ SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಇದನ್ನು ನೀವು 6,740 ರೂ.ಗೆ ಖರೀದಿಸಬಹುದಾಗಿದೆ.

ಬೋಟ್ ರಾಕರ್ಜ್‌ 255 ಪ್ರೊ+

ಬೋಟ್ ರಾಕರ್ಜ್‌ 255 ಪ್ರೊ+

ಬೋಟ್‌ ರಾಕರ್ಜ್‌ 255 ಪ್ರೊ+ ಅನ್ನು ಅಮೆಜಾನ್‌ ಸೇಲ್‌ನಲ್ಲಿ ಕೇವಲ 1,099ರೂ.ಬೆಲೆಗೆ ಖರೀದಿಸಬಹುದಾಗಿದೆ. ಇದು ನೆಕ್‌ಬ್ಯಾಂಡ್‌ ಶೈಲಿಯ ಇಯರ್‌ಫೋನ್‌ ಆಗಿದ್ದು, 40 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದರಲ್ಲಿರುವ ASAP ಚಾರ್ಜ್ ಫೀಚರ್ಸ್‌ ಕೇವಲ 10 ನಿಮಿಷಗಳಲ್ಲಿ 10 ಗಂಟೆಗಳ ಬ್ಯಾಟರಿ ಪವರ್‌ ನೀಡಲಿದೆ. ಈ ಇಯರ್‌ಫೋನ್‌ಗಳು ಡ್ಯುಯಲ್ ಪೇರಿಂಗ್ ಅನ್ನು ಬೆಂಬಲಿಸುತ್ತವೆ.

ಬೋಟ್ ರಾಕರ್ಜ್ 450

ಬೋಟ್ ರಾಕರ್ಜ್ 450

ಬೋಟ್‌ ರಾಕರ್ಜ್‌ 450 ಇಯರ್‌ಫೋನ್‌ ಓವರ್-ದಿ-ಇಯರ್ ವಾಯರ್‌ಲೆಸ್ ಇಯರ್‌ಫೋನ್‌ ಆಗಿದೆ. ಈ ಇಯರ್‌ಫೋನ್‌ ಅತ್ಯುತ್ತಮವಾದ ಕಿವಿ ವಿನ್ಯಾಸವನ್ನು ಹೊಂದಿದ್ದು, ಗ್ರಾಹಕರ ಕಿವಿಗೆ ತಕ್ಕಂತೆ ಹೊಂದಿಕೊಳ್ಳಲಿದೆ. ಇದು ಒಟ್ಟು 15 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನು ಈ ಇಯರ್‌ಫೋನ್‌ 3.5mm ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಹಾಗೆಯೇ ಈ ಇಯರ್‌ಫೋನ್‌ಗಳನ್ನು ನಿಮ್ಮ ಶೈಲಿಗೆ ತಕ್ಕಂತೆ ವಿವಿಧ ಬಣ್ಣಗಳಲ್ಲಿ ಖರೀದಿಸಬಹುದು. ಈ ಇಯರ್‌ಫೋನ್‌ ಮೂಲ ಬೆಲೆ 3,990ರೂ. ಆಗಿದ್ದು, ಅಮೆಜಾನ್‌ ಸೇಲ್‌ನಲ್ಲಿ ಇದನ್ನು ನೀವು ಕೇವಲ 898ರೂ. ಬೆಲೆಗೆ ಖರೀದಿಸಬಹುದಾಗಿದೆ.

Best Mobiles in India

Read more about:
English summary
best selling TWS earphones to buy during Amazon Great Freedom Festival Sale 2022

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X