ಭಾರತದಲ್ಲಿ ಕೊಳ್ಳಬಹುದಾದ ಉತ್ತಮ ಸ್ಮಾರ್ಟ್ ಫುಲ್ ಎಚ್‍ಡಿ ಟಿವಿಗಳು

ದೂರದರ್ಶನಗಳು ಈಗ ಕೇವಲ ಶೋ ಗಳನ್ನು ನೋಡಲು ಸೀಮಿತವಾಗಿಲ್ಲಾ, ಸುಧಾರಿತ ತಂತ್ರಜ್ಞಾನ ದಿಂದಾಗಿ ಸ್ಮಾರ್ಟ್ ಫುಲ್ ಎಚ್‍ಡಿ ಎಲ್‍ಇಡಿ ಟಿವಿಗಳು ಸ್ಮಾರ್ಟ್‍ಫೋನ್ ಗಳಂತೆ ಆಪ್ ಹೊಂದಿದ್ದು ವಿವಿಧ ಉದ್ದೇಶಗಳಿಗೆ ಉಪಯೋಗಿಸಬಹುದಾಗಿದೆ.

By Prateeksha
|

ತಂತ್ರಜ್ಞಾನ ಬೆಳೆದಂತೆ ನಾವು ದೂರದರ್ಶನ ನೋಡುವ ರೀತಿ ಕಳೆದ ಕೆಲ ವರ್ಷಗಳಲ್ಲಿ ಬದಲಾಗಿದೆ. ಒಪರೇಟಿಂಗ್ ಸಿಸ್ಟಮ್ ಅನ್ನು ಹಾಕಿದ ಮೇಲೆ ಟಿವಿಯೊಂದಿಗೆ ಕೆಲ ಆಪ್‍ಗಳಾದಂತಹ ಯುಟ್ಯೂಬ್, ಫೇಸ್ಬುಕ್ ಇತ್ಯಾದಿ ಗಳನ್ನು ವೀಕ್ಷಕರು ಮತ್ತೊಂದು ಸ್ಥರದಲ್ಲಿ ಅನುಭವಿಸಲು ಅನುಕೂಲವಾಯಿತು.

ಭಾರತದಲ್ಲಿ ಕೊಳ್ಳಬಹುದಾದ ಉತ್ತಮ ಸ್ಮಾರ್ಟ್ ಫುಲ್ ಎಚ್‍ಡಿ ಟಿವಿಗಳು

ಹೀಗಾಗಿ, ಇಂದು ನಾವು 5 ಎಚ್‍ಡಿ ಸ್ಮಾರ್ಟ್ ಟಿವಿಗಳ ಪಟ್ಟಿಯೊಂದಿಗೆ ಬಂದಿದ್ದೇವೆ ನೋಡಿ.

ವಿಯು 32ಡಿ6475 ಎಚ್ ಫುಲ್ ಎಚ್‍ಡಿ ಸ್ಮಾರ್ಟ್ ಟಿವಿ

ವಿಯು 32ಡಿ6475 ಎಚ್ ಫುಲ್ ಎಚ್‍ಡಿ ಸ್ಮಾರ್ಟ್ ಟಿವಿ

ಎಲ್ಲಕ್ಕಿಂತ ಕಡಿಮೆ ದರದಿಂದ ಆರಂಭಿಸೋಣ. ಕ್ಯಾಲಿಫೋರ್ನಿಯನ್ ಮೂಲದ ಟಿವಿ ಉತ್ಪಾದಕರಾದ ವು ನವರದು ಈ ಟಿವಿ. ಈ ದರದಲ್ಲಿ ಏನು ಚೆನ್ನಾಗಿದೆ ಎಂದರೆ ಇದರಲ್ಲಿರುವ ಫೀಚರ್ಸ್‍ಗಳಾದ - ಬಿಲ್ಟ್ ಇನ್ ವೈ-ಫೈ ಮತ್ತು ಮೊಬೈಲ್ ಎಚ್‍ಡಿ. ಇದು ಇತರ ಸೇವೆಗಳಾದ ಯುಟ್ಯೂಬ್, ನೆಟ್‍ಫ್ಲಿಕ್ಸ್, ಕಿಡೊಜ್, ಫೇಸ್ಬುಕ್ ಇತ್ಯಾದಿ ಗಳನ್ನು ಸ್ಟ್ರೀಮ್ ಮತ್ತು ಬ್ರೌಸ್ ಮಾಡಲು ಅನುವು ಮಾಡುತ್ತದೆ.

ಡಿಸ್ಪ್ಲೆ 60 ಹಡ್ಜ್ ರಿಫ್ರೆಶ್ ರೇಟ್ ಮತ್ತು ಬ್ಯಾಕ್‍ಲೈಟ್ ನಿಯಂತ್ರಣ, ಅಡಾಪ್ಟಿವ್ ಬ್ಯಾಕ್‍ಲೈಟ್, ಡಿಜಿಟಲ್ ನಾಯಸ್ ರಿಡಕ್ಷನ್ ಇತ್ಯಾದಿ ಇದೆ.ಕನೆಕ್ಟಿವಿ ಬಗ್ಗೆ ಹೇಳುವುದಾದರೆ 2 ಯುಎಸ್‍ಬಿ, 2 ಎಚ್‍ಡಿಎಮ್‍ಐ, 1ಹೆಡ್‍ಫೋನ್ ಜ್ಯಾಕ್, ಆರ್‍ಎಫ್ ಕನೆಕ್ಟಿವಿಟಿ ಇನ್‍ಪುಟ್ ಹೊಂದಿದೆ.

ಎಲ್‍ಜಿ 43 ಎಲ್‍ಎಚ್576ಟಿ ಫುಲ್ ಎಚ್‍ಡಿ ಸ್ಮಾರ್ಟ್ ಟಿವಿ

ಎಲ್‍ಜಿ 43 ಎಲ್‍ಎಚ್576ಟಿ ಫುಲ್ ಎಚ್‍ಡಿ ಸ್ಮಾರ್ಟ್ ಟಿವಿ

ಬೆಲೆ ರೂ. 39,990. ಈ ಟಿವಿ 43 ಇಂಚು ಫುಲ್ ಎಚ್‍ಡಿ(1920 * 1080 ಪಿಕ್ಸೆಲ್ಸ್)ಎಲ್‍ಇಡಿ ಸ್ಕ್ರೀನ್ ಮತ್ತು ಬಿಲ್ಟ್ ಇನ್ ವೈಫೈ ವೈಫೈ ಡೈರೆಕ್ಟ್ ನೊಂದಿಗೆ, ಆಪ್ ಸ್ಟೊರ್, ಮಿರಾಕಾಸ್ಟ್, ನೆಟ್‍ವರ್ಕ್ ಫೈಲ್ ಬ್ರೌಸರ್, ಯುಟ್ಯೂಬ್ ಇತ್ಯಾದಿ ಹೊಂದಿದೆ ಜೊತೆಗೆ ಒಟ್ಟು 18 ಭಾಷೆಗಳನ್ನು ಹೊಂದಿದೆ ಹಿಂದಿ, ಬೆಂಗಾಳಿ ಎಲ್ಲಾ ಸೇರಿಸಿ.

ಉತ್ತಮ ಅನುಭವಕ್ಕೆ ಎಲ್‍ಜಿ ಯ ಟ್ರಿಪಲ್ ಎಕ್ಸ್‍ಡಿ ಎಂಜಿನ್ ಹೊಂದಿದೆ ಚಿತ್ರಗಳು ಉತ್ತಮವಾಗಿ ಕಾಣಲು. ಇದು 2 ಎಚ್‍ಡಿಎಮ್‍ಐ ಪೊಟ್ರ್ಸ್, 1 ಯುಎಸ್‍ಬಿ ಪೊರ್ಟ್, 1 ಹೆಡ್‍ಫೋನ್ ಜ್ಯಾಕ್, 1 ಆರ್‍ಡಿ ಇನ್‍ಪುಟ್, 1 ಡಿಜಿಟಲ್ ಆಡಿಯೊ ಔಟ್‍ಪುಟ್ ಮತ್ತು ಇತರೆ ಮೂಲಭೂತ ಪೊಟ್ರ್ಸ್ ಗಳಿವೆ.

ಸೊನಿ ಬ್ರೇವಿಯಾ ಕೆಡಿಎಲ್-43ಡಬ್ಲ್ಯು800ಡಿ 43 ಇಂಚಿನ 3ಡಿ ಸ್ಮಾರ್ಟ್ ಟಿವಿ

ಸೊನಿ ಬ್ರೇವಿಯಾ ಕೆಡಿಎಲ್-43ಡಬ್ಲ್ಯು800ಡಿ 43 ಇಂಚಿನ 3ಡಿ ಸ್ಮಾರ್ಟ್ ಟಿವಿ

ಸೊನಿ ಯಾವಾಗಲೂ ಟಿವಿಗಳಿಗೆ ಪ್ರಚಲಿತ. ಈ ಟಿವಿ ಸ್ಪೊಟ್ರ್ಸ್ 43 ಇಂಚಿನ ಫುಲ್ ಎಚ್‍ಡಿ ಡಿಸ್ಪ್ಲೆ ಇದೆ ಆಂಡ್ರೊಯಿಡ್ ಒಎಸ್ ನೊಂದಿಗೆ. ಇದರಲ್ಲಿ ಆಪ್ ಸ್ಟೊರ್ ಕೂಡ ಇದ್ದು ಕೆಲ ಸಾಮಾನ್ಯ ಆಪ್ ಗಳು ಇವೆ. ಉದಾ: ಯುಟ್ಯೂಬ್, ಸೊನಿ ಲಿವ್ ಇತ್ಯಾದಿ.

ಎಕ್ಸ್-ರಿಯಾಲಿಟಿ ಪ್ರೊ ಪಿಕ್ಚರ್ ಎಂಜಿನ್ ಇದೆ 800 ಹಡ್ಜ್ ರಿಫ್ರಶ್ ರೇಟ್ ನೊಂದಿಗೆ. ಮುಂದೆ ಡೊಲ್‍ಬೈ ಡಿಜಿಟಲ್ ಆಡಿಯೊ ತಂತ್ರಜ್ಞಾನ ದೊಂದಿಗೆ.

ಎಲ್‍ಜಿ 42ಎಲ್‍ಎ6910

ಎಲ್‍ಜಿ 42ಎಲ್‍ಎ6910

ಬೇರೆ ಹೈ ಎಂಡ್ ಟಿವಿಗಳ ಹಾಗೆ, ಎಲ್‍ಜಿ ಕೂಡ ಕೆಲ ಗಂಭೀರ ಸ್ಮಾರ್ಟ್ ಟಿವಿ ಫೀಚರ್ಸ್ ಗಳನ್ನು ಹೊಂದಿದೆ. ಚಿತ್ರಗಳನ್ನು ಮತ್ತು ಧ್ವನಿಯ ಗುಣಮಟ್ಟ ಹೆಚ್ಚಿಸಲು. ಇದರಲ್ಲಿ ಬಿಲ್ಟ್ ಇನ್ ಟ್ರಿಪಲ್ ಎಕ್ಸ್‍ಡಿ ಎಂಜಿನ್ ಇದೆ ಇದು ಉತ್ತಮ ವೀಡಿಯೊ ಪ್ರೊಸೆಸಿಂಗ್ ಮತ್ತು ಉತ್ತಮ ವಿವಿಧ ಬಣ್ಣಗಳನ್ನು ನೀಡುವುದು. ಇದರಲ್ಲಿ ಧ್ವನಿ ಗುರುತಿಸುವಿಕೆ, ಮೊಷನ್ ಇಕೊ ಸೆನ್ಸರ್ ಇದೆ ಜೊತೆಗೆ ಟೈಮ್ ಮಷಿನ್ 2 ಟಿವಿ ಶೋ ಗಳನ್ನು ಹಾರ್ಡ್ ಡಿಸ್ಕ್ ನಲ್ಲಿ ಉಳಿಸಲು.

ಸ್ಯಾಮ್ಸಂಗ್ 40ಎಫ್6400

ಸ್ಯಾಮ್ಸಂಗ್ 40ಎಫ್6400

ಇದರಲ್ಲಿ 200 ಹಡ್ಜ್ ನ ಕ್ಲಿಯರ್ ಮೊಷನ್ ರೇಟ್ ಮತ್ತು ವೈಡ್ ಕಲರ್ ಎನ್‍ಹಾನ್ಸರ್ ಪ್ಲಸ್ ಹೊಂದಿದೆ, ಇದು ಸ್ಪಷ್ಟ ಚಿತ್ರಗಳನ್ನು ನೀಡುತ್ತದೆ ಉತ್ತಮ ವಿವರಣೆಗಳೊಂದಿಗೆ. ಇದರಲ್ಲಿ ವಾಯಸ್ ಇಂಟರಾಕ್ಷನ್ ಫೀಚರ್ ಕೂಡ ಇದೆ. 400 ಹಡ್ಜ್ ರಿಫ್ರೆಶ್ ರೇಟ್ ಹೊಂದಿದೆ. ಇತರೆ ಫೀಚರ್ಸ್ ಗಳಾದ ಮೊಷನ್ ಕಂಟ್ರೊಲ್ ರೆಡಿ, ಸ್ಮಾರ್ಟ್ ಹಬ್, ಡಿಜಿಟಲ್ ಆಡಿಯೊ ಔಟ್‍ಪುಟ್, 3 ಯುಎಸ್‍ಬಿ ಪೊಟ್ರ್ಸ್, 1 ಈಥರ್‍ನೆಟ್, ವೈಫೈ, ಗೇಮ್ ಮೊಡ್ ಇತ್ಯಾದಿ ಹೊಂದಿದೆ.

Best Mobiles in India

Read more about:
English summary
With technology advancement, the way we watch Television has been changed in the past few years.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X