ಸ್ನಾಪ್‌ಡ್ರಾಗನ್‌ 8 Gen 1 ಪ್ರೊಸೆಸರ್‌ ಒಳಗೊಂಡ 5 ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು!

|

ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಬೇಡಕೆ ಪಡೆದುಕೊಂಡಿರುವುದು ಸಾಮಾನ್ಯವಾಗಿದೆ. ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ಗಳು ಹೊಂದಿರುವ ದಕ್ಷತೆ ಮತ್ತು ವೇಗದ ಕಾರ್ಯಕ್ಷಮತೆಯೇ ಇದಕ್ಕೆ ಕಾರಣವಾಗಿದೆ. ಇನ್ನು ಸ್ನಾಪ್‌ಡ್ರಾಗನ್‌ ಕೂಡ ಹೊಸ ಹೊಸ ಅಪ್ಡೇಟ್‌ಗಳನ್ನು ಪರಿಚಯಿಸುತ್ತಾ ಬಂದಿದ್ದು, ಬಳಕೆದಾರರಿಗೆ ಉತ್ತಮ ಅನುಭವ ನೀಡುತ್ತಿದೆ. ಸದ್ಯ ಇದೀಗ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ನ ಹೊಸ ಅಪ್ಡೇಟ್‌ ಸ್ನಾಪ್‌ಡ್ರಾಗನ್‌ 8 Gen 1 ಸಾಕಷ್ಟು ಸದ್ದು ಮಾಡುತ್ತಿದೆ. ಈ ಸ್ನಾಪ್‌ಡ್ರಾಗನ್‌ ಹೈ ಎಂಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದೆ.

ಸ್ನಾಪ್‌ಡ್ರಾಗನ್‌

ಹೌದು, ಸ್ನಾಪ್‌ಡ್ರಾಗನ್‌ನ ಹೊಸ ಅಪ್ಡೇಟ್‌ ಸ್ನಾಪ್‌ಡ್ರಾಗನ್‌ 8 Gen 1 ತನ್ನ ವಿಶೇಷ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಗೇಮಿಂಗ್‌ ಹಾಗೂ ಮಲ್ಟಿ ಟಾಸ್ಕಿಂಗ್‌ ವಿಚಾರದಲ್ಲಿ ಅತ್ಯುತ್ತಮ ಕಾರ್ಯದಕ್ಷತೆಯನ್ನು ನೀಡಲಿದೆ. ಇದಲ್ಲದೆ ಗ್ರಾಫಿಕ್ಸ್ ರೆಂಡರಿಂಗ್‌ನಲ್ಲಿ 30% ವೇಗವಾಗಿರುತ್ತದೆ ಎಂದು ವರದಿಯಾಗಿದೆ. ಜೊತೆಗೆ ಸ್ನಾಪ್‌ಡ್ರಾಗನ್ 888 SoC ಗಿಂತ 25% ಹೆಚ್ಚು ಶಕ್ತಿ-ಸಮರ್ಥವನ್ನು ಇದು ಒಳಗೊಂಡಿದೆ. ಹಾಗಾದ್ರೆ ಸ್ನಾಪ್‌ಡ್ರಾಗನ್‌ 8 Gen 1 ಚಿಪ್‌ಸೆಟ್‌ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದೆ, ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ನಾಪ್‌ಡ್ರಾಗನ್‌ 8 Gen 1 ಫೀಚರ್ಸ್‌

ಸ್ನಾಪ್‌ಡ್ರಾಗನ್‌ 8 Gen 1 ಫೀಚರ್ಸ್‌

ಸ್ನಾಪ್‌ಡ್ರಾಗನ್‌ನ ಹೊಸ ಅಪ್ಡೇಟ್‌ ವರ್ಷನ್‌ ಸ್ನಾಪ್‌ಡ್ರಾಗನ್‌ 8 Gen 1 ಅನ್ನು ಈಗಾಗಲೇ ಅನಾವರಣಗೊಳಿಸಲಾಗಿದೆ. ಇದು ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದೆ ಅನ್ನೊದನ್ನ ತಿಳಿಯುವುದಕ್ಕಿಂತ ಮೊದಲು ಈ ಸ್ನಾಪ್‌ಡ್ರಾಗನ್‌ನ ವಿಶೇಷತೆ ಏನು ಅನ್ನೊದನ್ನು ತಿಳಿಯುವುದು ಸೂಕ್ತ. ಈ ಸ್ನಾಪ್‌ಡ್ರಾಗನ್‌ AI ಕಂಪ್ಯೂಟೇಶನ್‌ಗಳಲ್ಲಿ 4x ವೇಗವಾಗಿರುತ್ತದೆ, ಗ್ರಾಫಿಕ್ಸ್ ರೆಂಡರಿಂಗ್‌ನಲ್ಲಿ 30% ವೇಗವಾಗಿರುತ್ತದೆ ಎನ್ನಲಾಗಿದೆ. ಇದು 1.8GHz ನಲ್ಲಿ ಡಯಲ್ ಮಾಡಲಾದ 4x ಕಾರ್ಟೆಕ್ಸ್-A510 ದಕ್ಷತೆಯ ಕೋರ್‌ಗಳನ್ನು ಒಳಗೊಂಡಿದೆ.

ಸ್ನಾಪ್‌ಡ್ರಾಗನ್‌

ಇನ್ನು ಸ್ನಾಪ್‌ಡ್ರಾಗನ್‌ 8 Gen 1 4nm ಪ್ರೊಸೆಸ್‌ ನೋಡ್ ಅನ್ನು ಆಧರಿಸಿದೆ. ಇದು ಇತ್ತೀಚಿನ Armv9 ಆರ್ಕಿಟೆಕ್ಚರ್ ಅನ್ನು ಬಳಸುವ ಮೊದಲ ಕ್ವಾಲ್ಕಾಮ್ ಚಿಪ್ ಆಗಿದ್ದು, ಸ್ನಾಪ್‌ಡ್ರಾಗನ್ 888 ಪ್ರೊಸೆಸರ್‌ಗೆ ಹೋಲಿಸಿದರೆ, ಇದು 20% ರಷ್ಟು ಸುಧಾರಿತ ಕಾರ್ಯಕ್ಷಮತೆಯನ್ನು ನೀಡಲಿದೆ. ಹಾಗೆಯೇ ಗ್ರಾಫಿಕ್ಸ್ ಲೋಡ್‌ಗಳಲ್ಲಿ 30% ಸ್ನ್ಯಾಪಿಯರ್, AI ಸಂಸ್ಕರಣೆಯಲ್ಲಿ 4x ವೇಗವನ್ನು ಹೊಂದಿದೆ. ಇದು X65 ಮೋಡೆಮ್‌ ಒಳಗೊಂಡಿದ್ದು, mmWave ಮತ್ತು ಸಬ್-6GHz 5G ಬೆಂಬಲವನ್ನು ಹೊರತುಪಡಿಸಿ, 10Gbps ಡೌನ್‌ಲಿಂಕ್ ರೇಟ್‌ ಅನ್ನು ಪಡೆದಿದೆ.

ಸ್ನಾಪ್‌ಡ್ರಾಗನ್‌ನಲ್ಲಿ

ಈ ಸ್ನಾಪ್‌ಡ್ರಾಗನ್‌ನಲ್ಲಿ ನಿಮಗೆ "ಸ್ನಾಪ್‌ಡ್ರಾಗನ್ ಸೈಟ್" ಅನ್ನು ನೀಡಲಾಗಿದೆ. ಇದು ಸ್ಪೆಕ್ಟ್ರಾ ಟ್ರಿಪಲ್-ISP ಸಿಸ್ಟಮ್ ಅನ್ನು ಒಳಗೊಂಡಿದ್ದು, 18-ಬಿಟ್ RAW ಮತ್ತು 8K ವೀಡಿಯೊವನ್ನು HDR10+ ಗುಣಮಟ್ಟದಲ್ಲಿ ಶೂಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ವರ್ಧಿತ ಡಾರ್ಕ್ ಮೋಡ್, "ಬೊಕೆ ಎಂಜಿನ್" ಪೋರ್ಟ್ರೇಟ್ ಶಾಟ್‌ಗಳು ಮತ್ತು 4K ವೀಡಿಯೊಗಳಲ್ಲಿ ಬೆಸ್ಟ್‌ ಬ್ಲಾರ್‌ ಬ್ಯಾಕ್‌ಗ್ರೌಂಡ್‌ಗಳನ್ನು ನೀಡಲಿದೆ. ಇದಲ್ಲದೆ ತ್ವರಿತ ಫೇಸ್ ಅನ್‌ಲಾಕಿಂಗ್ ಕಾರ್ಯವಿಧಾನಕ್ಕಾಗಿ ಆಲ್‌ವೇಸ್‌ ಕ್ಯಾಮೆರಾ ಆನ್‌ ಕಾರ್ಯನಿರ್ವಹಣೆಯೊಂದಿಗೆ ಡಿಸ್ಕ್ರೀಟ್ ISP ಸಹ ಇದೆ. ಇದು ಆಪ್ಟ್-ಇನ್-ಒನ್ಲಿ ಫಿಚರ್ಸ್‌ ಆಗಿದೆ. ಇನ್ನು ಭದ್ರತೆಗೆ ಸಂಬಂಧಿಸಿದಂತೆ, ಕ್ವಾಲ್ಕಾಮ್ ಇ-ಮನಿ ವ್ಯಾಲೆಟ್‌ಗಳು, ಡಿಜಿಟಲ್ ಕೀಗಳು, ಲೈಸೆನ್ಸ್‌ ಮತ್ತು ಐಡಿಗಳ ಸುರಕ್ಷಿತ ಸಂಗ್ರಹಣೆಗಾಗಿ "ಡೆಡಿಕೇಟೆಡ್ ಟ್ರಸ್ಟ್ ಮ್ಯಾನೇಜ್‌ಮೆಂಟ್ ಎಂಜಿನ್" ಅನ್ನು ಕೂಡ ಹೊಂದಿದೆ.

ಸ್ನಾಪ್‌ಡ್ರಾಗನ್‌ 8 Gen 1 ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳು!

ಸ್ನಾಪ್‌ಡ್ರಾಗನ್‌ 8 Gen 1 ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳು!

ಮೋಟೋ ಎಡ್ಜ್‌ 30ಪ್ರೊ

ಮೋಟೋ ಎಡ್ಜ್‌ 30ಪ್ರೊ ಸ್ಮಾರ್ಟ್‌ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ+ ಪೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಈ ಡಿಸ್ಪ್ಲೇಯು 2.5D ಕರ್ವ್ಡ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಆಂಟಿಫಿಂಗರ್‌ಪ್ರಿಂಟ್ ಕೋಟಿಂಗ್‌ ಪ್ರೊಟೆಕ್ಷನ್‌ ಅನ್ನು ಪಡೆದುಕೊಂಡಿದೆ. ಇದು ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ 4,800mAh ಬ್ಯಾಟರಿಯನ್ನು ಹೊಂದಿದೆ. ಇದು 68W ಟರ್ಬೊ ಪವರ್‌ ಫಾಸ್ಟ್ ವೈರ್ಡ್ ಚಾರ್ಜಿಂಗ್ ಬೆಂಬಲಿಸಲಿದೆ.

ರಿಯಲ್‌ಮಿ GT 2 ಪ್ರೊ

ರಿಯಲ್‌ಮಿ GT 2 ಪ್ರೊ

ರಿಯಲ್‌ಮಿ GT 2 ಪ್ರೊ ಸ್ಮಾರ್ಟ್‌ಫೋನ್‌ 6.7 ಇಂಚಿನ 2K LTPO 2.0 ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಒಳಗೊಂಡಿದೆ. ಇದು ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್‌ 12 ಆಧಾರಿತ ರಿಯಲ್‌ಮಿ UI 3.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 65W ಸೂಪರ್‌ಡಾರ್ಟ್ ಚಾರ್ಜ್ ವರ್ಧಿತ ವೇಗದ ಚಾರ್ಜಿಂಗ್‌ ಅನ್ನು ಒಳಗೊಂಡಿದೆ.

ಶಿಯೋಮಿ 12 ಪ್ರೊ

ಶಿಯೋಮಿ 12 ಪ್ರೊ

ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್‌ 6.72 ಇಂಚಿನ WQHD+ E5 ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು 1,500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್‌ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 12 ಅನ್ನು MIUI 13 ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX707 ಸೆನ್ಸಾರ್‌ ಅನ್ನು ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಬೆಂಬಲಿಸುವ f/1.8 ಲೆನ್ಸ್‌ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಜೊತೆಗೆ 4,600mAh ಲಿ-ಪಾಲಿಮರ್‌ ಬ್ಯಾಟರಿಯನ್ನು ಹೊಂದಿದೆ. ಇದು 120W ಶಿಯೋಮಿ ಹೈಪರ್‌ ಚಾರ್ಜ್ ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಸರಣಿ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಸರಣಿ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಸರಣಿಯ ಸ್ಮಾರ್ಟ್‌ಫೋನ್‌ಗಳು ಕೂಡ ಸ್ನಾಪ್‌ಡ್ರಾಗನ್‌ 8 Gen 1 ಪ್ರೊಸೆಸರ್‌ ಹೊಂದಿವೆ. ಈ ಸರಣಿಯಲ್ಲಿ ಗ್ಯಾಲಕ್ಸಿ S22, ಗ್ಯಾಲಕ್ಸಿ S22ಪ್ಲಸ್‌ ಮತ್ತು ಗ್ಯಾಲಕ್ಸಿ S22 ಅಲ್ಟ್ರಾ ಫೋನ್‌ಗಳು ಲಭ್ಯವಿದೆ. ಇದರಲ್ಲಿ ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್‌ 6.1 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಗ್ಯಾಲಕ್ಸಿ S22 ಅಲ್ಟ್ರಾ ಸ್ಮಾರ್ಟ್‌ಫೋನ್‌ 6.8 ಇಂಚಿನ ಎಡ್ಜ್‌ QHD ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದೆ.

ಐಕ್ಯೂ 9 ಪ್ರೊ

ಐಕ್ಯೂ 9 ಪ್ರೊ

ಐಕ್ಯೂ ಕಂಪೆನಿಯ ಐಕ್ಯೂ 9 ಪ್ರೊ ಸ್ಮಾರ್ಟ್‌ಫೋನ್‌ ಕೂಡ ಸ್ನಾಪ್‌ಡ್ರಾಗನ್ 8 Gen 1 ಒಳಗೊಂಡಿದೆ. ಇದು 3D ಕರ್ವ್ಡ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಒಳಗೊಂಡಿದೆ. ಜೊತೆಗೆ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 120W ಫ್ಲ್ಯಾಶ್ ಚಾರ್ಜರ್ ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನ 8GB ರೂಪಾಂತರದ ಆಯ್ಕೆಗೆ 64,990ರೂ.ಆಗಿದ್ದು, 12GB ರೂಪಾಂತರದ ಬೆಲೆ 69,990 ರೂ.ಆಗಿದೆ.

Best Mobiles in India

English summary
Snapdragon 8 Gen 1 smartphones are already out in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X