ಒಂದು ಮಿಸ್ ಕಾಲ್ – 1.86 ಕೋಟಿ ಲಾಸ್

|

ಮುಂಬೈ ಮೂಲದ ಬ್ಯುಸಿನೆಸ್ ಮ್ಯಾನ್ ಒಬ್ಬರು ಇತ್ತೀಚೆಗೆ 1.86 ಕೋಟಿ ರುಪಾಯಿಯನ್ನು ಕೇವಲ ಒಂದು ಮಿಸ್ ಕಾಲ್ ನಿಂದಾಗಿ ಕಳೆದುಕೊಂಡಿದ್ದಾರೆ. ಹೇಗೆ ಎಂದು ಆಶ್ಚರ್ಯವಾಗುತ್ತಿದ್ದೆಯಾ? ಇದು ಸಿಮ್ ಸ್ವ್ಯಾಪ್ ಎಂದು ಕರೆಯಲ್ಪಡುವ ಬಹಳ ಡೇಂಜರಸ್ ಆಗಿರುವ ಬ್ಯಾಂಕಿಂಗ್ ಮೋಸಗಾರಿಕೆ ಇದಾಗಿದೆ. ಕೋಲ್ಕತ್ತಾ, ಬೆಂಗಳೂರು, ಮುಂಬೈ ಮತ್ತು ದೆಹಲಿಯ ಸೈಬರ್ ಸೆಲ್ ನ ಪೋಲೀಸರು ಈ ನಿಟ್ಟಿನಲ್ಲಿ ಹಲವಾರು ಪ್ರಕರಣವನ್ನು ವರದಿ ಮಾಡಿದ್ದಾರೆ.

ಒಂದು ಮಿಸ್ ಕಾಲ್ – 1.86 ಕೋಟಿ ಲಾಸ್

ಡಿಜಿಟಲ್ ವ್ಯವಹಾರ ತಿಳಿಯದ ಮುಗ್ಧರು ಮಾತ್ರವೇ ಇದಕ್ಕೆ ಬಲಿಯಾಗಿದ್ದಾರೆ ಎಂದು ಭಾವಿಸಬೇಡಿ. ಬದಲಾಗಿ ಕೆಲವು ಟೆಕ್ಕಿಗಳು ಕೂಡ ಇದರ ಬಲಿಪಶುಗಳಾಗಿದ್ದಾರೆ.

ಸಿಮ್ ಸ್ವ್ಯಾಪಿಂಗ್ ಬಗ್ಗೆ ನೀವು ತಿಳಿದಿರಬೇಕಾಗಿರುವ ಕೆಲವು ಅಂಶಗಳ ಬಗ್ಗೆ ನಾವಿಲ್ಲಿ ತಿಳಿಸುತ್ತಿದ್ದೇವೆ ಮತ್ತು ಮುಂಬೈ ಮೂಲದ ಬ್ಯುಸಿನೆಸ್ ಮ್ಯಾನ್ ಒಬ್ಬರು ಹೇಗೆ ಹಣ ಕಳೆದುಕೊಂಡರು ಎಂಬ ಬಗ್ಗೆ ಕೂಡ ಇಲ್ಲಿ ಹೇಳುತ್ತಿದ್ದೇವೆ.

ಹಣಕಳೆದುಕೊಳ್ಳುವಿಕೆ ಮತ್ತು ಮಿಸ್ ಕಾಲ್ ನಡುವಿನ ಲಿಂಕ್ : ಸಿಮ್ ಸ್ವ್ಯಾಪ್ ಒಂದು ಮಿಸ್ ಕಾಲ್ ನಲ್ಲಿ ಹಣ ಕಳೆದುಕೊಳ್ಳುವಿಕೆ ಎಂಬ ವಿಚಾರವು ಸ್ವಲ್ಪ ವಿಚಿತ್ರವೆಂದೆನಿಸಬಹುದು ಮತ್ತು ನಿಮ್ಮನ್ನ ವಿಚಲಿತಗೊಳಿಸಬಹುದು. ಆದರೆ ಈ ಸ್ಕ್ಯಾಪ್ ಈಗಾಗಲೇ ಭಾರತದಾದ್ಯಂತ ನಡೆಯುತ್ತಿದೆ ಎಂದರೆ ನೀವು ನಂಬಲೇಬೇಕು. ಮೋಸಗಾರರು ಕೆಲವು ಟ್ರಿಕ್ ಗಳನ್ನು ಬಳಸಿ ಮೊಬೈಲ್ ಫೋನ್ ಬಳಕೆದಾರರಿಂದ ಕೆಲವೇ ನಿಮಿಷಗಳಲ್ಲಿ ಹಣವನ್ನು ಕೊಳ್ಳೆಹೊಡೆಯುತ್ತಿದ್ದಾರೆ.

SIM ಸ್ವ್ಯಾಪ್ ಅಂದರೆ ನಿಮ್ಮಲ್ಲಿರುವ ಸಿಮ್ ಕಾರ್ಡ್ ಬದಲಾಗಿ ಡುಪ್ಲಿಕೇಟ್ ಸಿಮ್ ಕಾರ್ಡ್ ನ್ನು ರಿಪ್ಲೇಸ್ ಮಾಡುವುದು

SIM ಸ್ವ್ಯಾಪ್ ಅಂದರೆ ನಿಮ್ಮಲ್ಲಿರುವ ಸಿಮ್ ಕಾರ್ಡ್ ಬದಲಾಗಿ ಡುಪ್ಲಿಕೇಟ್ ಸಿಮ್ ಕಾರ್ಡ್ ನ್ನು ರಿಪ್ಲೇಸ್ ಮಾಡುವುದು

ನೀವು 2ಜಿಯಿಂದ 3ಜಿ ಅಥವಾ 4ಜಿ ಸಿಮ್ ಕಾರ್ಡ್ ಗೆ ಬದಲಾಯಿಸುವ ಸಂದರ್ಬದಲ್ಲಿ ಇದೇ ಸಿಮ್ ಸ್ವ್ಯಾಪಿಂಗ್ ತಂತ್ರಜ್ಞಾನವನ್ನು ಬಳಕೆ ಮಾಡುತ್ತೀರಿ. ಹೊಸ ಸಿಮ್ ಕಾರ್ಡ್ ನ್ನು ನಿಮ್ಮ ಈಗಿರುವ ಫೋನ್ ನಂಬರಿನೊಂದಿಗೆ ರಿಜಿಸ್ಟ್ರರ್ ಮಾಡಿಕೊಳ್ಳುವುದಕ್ಕಾಗಿ ಬಳಕೆ ಮಾಡುವ ತಂತ್ರಜ್ಞಾನವಿದು.ಸಾಂಪ್ರದಾಯಿಕ ಸಿಮ್ ಕಾರ್ಡ್ ನಿಂದ ನ್ಯಾನೋ ಸಿಮ್ ಕಾರ್ಡ್ ಗಳಿಗೆ ಸ್ವಿಚ್ ಆಗುವ ಸಂದರ್ಬದಲ್ಲೂ ಕೂಡ ಇದೇ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ.

20 ಡಿಜಿಟ್ಟಿನ ಯೂನಿಕ್ ಸಿಮ್ ನಂಬರ್ ಬೇಕು!

20 ಡಿಜಿಟ್ಟಿನ ಯೂನಿಕ್ ಸಿಮ್ ನಂಬರ್ ಬೇಕು!

SIM ಸ್ವ್ಯಾಪ್ ನ್ನು ಮಾಡುವುದು ಸಾಧ್ಯವಾಗುವುದು ನಿಮ್ಮ 20 ಡಿಜಿಟ್ಟಿನ ಸಿಮ್ ನ ಮೇಲೆ ಬರೆದಿರುವ ಸಿಮ್ ನಂಬರ್ ತಿಳಿದಾಗ ಮಾತ್ರವೇ ಸಾಧ್ಯವಾಗುತ್ತದೆ . ಪ್ರತಿ ಸಿಮ್ ಕಾರ್ಡ್ ನಲ್ಲೂ ಕೂಡ ಈ 20 ಡಿಜಿಟ್ಟಿನ ಸಿಮ್ ನಂಬರ್ ನ್ನು ಸಿಮ್ ನ ಹಿಂಭಾಗದಲ್ಲಿ ನಮೂದಿಸಲಾಗಿರುತ್ತದೆ. ಮೋಸಗಾರರು ನಿಮಗೆ ಕರೆ ಮಾಡಿ ಬೇರೆಬೇರೆ ಸುಳ್ಳು ಕಾರಣಗಳನ್ನು ಹೇಳಿ ಈ ನಂಬರ್ ತಿಳಿಸುವಂತೆ ಹೇಳಬಹುದು ಅಥವಾ ಅವರು ಈ ನಂಬರ್ ನ್ನು ಹ್ಯಾಕ್ ಮಾಡಿರುವ ಸಾಧ್ಯತೆ ಇದೆ.

ಉದ್ಯೋಗಿಯ ಸಿಮ್ ನಂಬರ್ ತಿಳಿದ ಮೋಸಗಾರರು

ಉದ್ಯೋಗಿಯ ಸಿಮ್ ನಂಬರ್ ತಿಳಿದ ಮೋಸಗಾರರು

ಮುಂಬೈ ಸೈಬರ್ ಪೋಲೀಸರು ಅಂದಾಜಿಸುವ ಪ್ರಕಾರ ಕ್ರಿಮಿನಲ್ ಗಳಿಗೆ ಮುಂಬೈ ಮೂಲದ ಉದ್ಯೋಗಿಯ ಸಿಮ್ ನಂಬರ್ ನ್ನು ತಿಳಿದುಕೊಂಡಿದ್ದರು ಮತ್ತು ರಾತ್ರಿಯ ವೇಳೆ ಉದ್ಯೋಗಿ ನಿದ್ರಿಸುತ್ತಿರುವ ಸಂದರ್ಬದಲ್ಲಿ ಸಿಮ್ ಸ್ವ್ಯಾಪಿಂಗ್ ಕೆಲಸವನ್ನು ಮಾಡಿದ್ದಾರೆ.

ಸಿಮ್ ಕಾರ್ಡ್ ಹ್ಯಾಕ್ ನ ನಂತರ ಹಣ ಕಳೆದುಕೊಂಡಿದ್ದು ಹೇಗೆ?

ಸಿಮ್ ಕಾರ್ಡ್ ಹ್ಯಾಕ್ ನ ನಂತರ ಹಣ ಕಳೆದುಕೊಂಡಿದ್ದು ಹೇಗೆ?

ಇದು ಸಾಮಾನ್ಯವಾಗಿ ಎರಡು-ಹಂತದ ಪ್ರೊಸೆಸ್. ದುಃಖದ ವಿಚಾರವೆನೆಂದರೆ ಸಿಮ್ ಸ್ವ್ಯಾಪಿಂಗ್ ಫ್ರಾಡ್ ಪ್ರೊಸೆಸ್ ನ ಎರಡನೇ ಹಂತವಾಗಿರುತ್ತದೆ. ಹೆಚ್ಚಿನ ಮೋಸಗಾರರಿಗೆ ನಿಮ್ಮ ಬ್ಯಾಂಕಿಂಗ್ ಐಡಿ ಮತ್ತು ಪಾಸ್ ವರ್ಡ್ ಮೊದಲೇ ತಿಳಿದಿರುತ್ತದೆ. ಅವರಿಗೆ ಬೇಕಾಗಿರುವುದು ನಿಮ್ಮರಿಜಿಸ್ಟರ್ ಆಗಿರುವ ಮೊಬೈಲ್ ನಂಬರಿಗೆ ಬರುವ ಓಟಿಪಿ. ಆ ಮೂಲಕ ಮಾತ್ರ ಅವರು ಹಣಕಾಸು ವ್ಯವಹಾರ ನಡೆಸಲು ಸಾಧ್ಯವಾಗುತ್ತದೆ.

ಬ್ಯಾಂಕಿಂಗ್ ವಿವರಗಳನ್ನು ಅವರು ಹೇಗೆ ಪಡೆದುಕೊಳ್ಳುತ್ತಾರೆ.

ಬ್ಯಾಂಕಿಂಗ್ ವಿವರಗಳನ್ನು ಅವರು ಹೇಗೆ ಪಡೆದುಕೊಳ್ಳುತ್ತಾರೆ.

ಇದು ಹೆಚ್ಚಾಗಿ ಫಿಶ್ಶಿಂಗ್ ಅಟ್ಯಾಕ್ ನಿಂದ ಸಾಧ್ಯವಾಗುತ್ತದೆ. ಫೇಕ್ ಬ್ಯಾಂಕಿಂಗ್ ವೆಬ್ ಸೈಟ್ ಗಳನ್ನು ನೀಡುತ್ತಾರೆ ಮತ್ತು ಅಲ್ಲಿ ಗ್ರಾಹಕರು ತಮ್ಮ ಬ್ಯಾಕಿಂಗ್ ವಿವರಗಳನ್ನು ದಾಖಲಿಸಿದಾಗ ಹ್ಯಾಕರ್ ಗಳಿಗೆ ಕೂಡಲೇ ಬ್ಯಾಂಕಿಂಗ್ ನ ಎಲ್ಲಾ ವಿವರಗಳು ಲಭ್ಯವಾಗಿಬಿಡುತ್ತದೆ.

ಕೆಲವೊಮ್ಮೆ ಒಳಗಿನವರೂ ಕೂಡ ಹ್ಯಾಕರ್ ಗಳ ಜೊತೆ ಕೈಜೋಡಿಸಿರುವ ಸಾಧ್ಯತೆ

ಕೆಲವೊಮ್ಮೆ ಒಳಗಿನವರೂ ಕೂಡ ಹ್ಯಾಕರ್ ಗಳ ಜೊತೆ ಕೈಜೋಡಿಸಿರುವ ಸಾಧ್ಯತೆ

ವಯಕ್ತಿಕ ಬ್ಯಾಕಿಂಗ್ ವ್ಯವಹಾರದ ವಿವರಗಳು ಮತ್ತು ಯೂನಿಕ್ ಸಿಮ್ ಕಾರ್ಡ್ ನಂಬರ್ ಗಳನ್ನು ಮೋಸಗಾರರು ತಮ್ಮ ಸ್ನೇಹವನ್ನು ಬಳಸಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಇದೆ.

ರಾತ್ರಿ 11 ರಿಂದ ಮಧ್ಯರಾತ್ರಿ 2 ಘಂಟೆವರೆಗೆ 6 ಮಿಸ್ ಕಾಲ್ ಗಳು

ರಾತ್ರಿ 11 ರಿಂದ ಮಧ್ಯರಾತ್ರಿ 2 ಘಂಟೆವರೆಗೆ 6 ಮಿಸ್ ಕಾಲ್ ಗಳು

ಮುಂಬೈ ಮೂಲದ ಬ್ಯುಸಿನೆಸ್ ಮೆನ್ ರಾತ್ರಿ 11 ಘಂಟೆಯಿಂದ ಮಧ್ಯರಾತ್ರಿ 2 ಘಂಟೆಯ ವರೆಗೆ ಎರಡು ನಂಬರ್ ಗಳಿಂದ 6 ಮಿಸ್ ಕಾಲ್ ಗಳನ್ನು ಪಡೆದಿದ್ದಾರೆ. ಅದರಲ್ಲಿ ಯುನೈಟೆಡ್ ಕಿಂಗ್ ಡಂನ ಡಯಲಿಂಗ್ ಕೋಡ್ +44 ನಮೂದಿಸಲಾಗಿದೆ ಮತ್ತು ಬೆಳಿಗ್ಗೆ ಏಳುವಷ್ಟರಲ್ಲಿ ಸಿಮ್ ಕಾರ್ಡ್ ಕೆಲಸ ಮಾಡುತ್ತಿರಲಿಲ್ಲ. ಫೋನ್ ಕೂಡ ರಾತ್ರಿ ಸೈಲೆಂಟ್ ನಲ್ಲಿತ್ತು ಹಾಗಾಗಿ ಕರೆಯನ್ನು ಬ್ಯುಸಿನೆಸ್ ಮೆನ್ ರಾತ್ರಿಯ ವೇಳೆ ಗುರುತಿಸಲೇ ಇಲ್ಲ.

1.8 ಕೋಟಿ ದೋಖಾ:

1.8 ಕೋಟಿ ದೋಖಾ:

ಸಿಮ್ ಕಾರ್ಡ್ ಸ್ವ್ಯಾಪಿಂಗ್ ನ ನಂತರ ಒಟ್ಟು 1.86 ಕೋಟಿ ಹಣವನ್ನು ದೇಶದ ಬೇರೆಬೇರೆ 14 ಬ್ಯಾಂಕ್ ಅಕೌಂಟ್ ನಿಂದ ಟ್ರಾನ್ಸ್ಫರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಕೇವಲ 20 ಲಕ್ಷವನ್ನು ಮಾತ್ರ ರಿಕವರ್ ಮಾಡಿಕೊಳ್ಳಲು ಸಾಧ್ಯವಾಗಿದೆ.

ಫೋನ್ ನಲ್ಲಿ ಮಾಹಿತಿ ಹಂಚಿಕೊಳ್ಳುವ ಮೂಲಕ ಕೂಡ ಸಿಮ್ ಸ್ವ್ಯಾಪಿಂಗ್ ಗೆ ಬಲಿಯಾಗುವ ಸಾಧ್ಯತೆ ಇದೆ.

ಫೋನ್ ನಲ್ಲಿ ಮಾಹಿತಿ ಹಂಚಿಕೊಳ್ಳುವ ಮೂಲಕ ಕೂಡ ಸಿಮ್ ಸ್ವ್ಯಾಪಿಂಗ್ ಗೆ ಬಲಿಯಾಗುವ ಸಾಧ್ಯತೆ ಇದೆ.

ಸಿಮ್ ಸ್ವ್ಯಾಪ್ ಅಥವಾ ಸರಳವಾಗಿ ಹೇಳುವುದಾದರೆ ಸಿಮ್ ಕಾರ್ಡ್ ಎಕ್ಸ್ ಚೇಂಜ್ ಅನ್ನುವುದು ಒಂದು ಹೊಸ ಸಿಮ್ ಕಾರ್ಡ್ ನ್ನು ನಿಮ್ಮ ಫೋನ್ ನಂಬರ್ ಗೆ ರಿಜಿಸ್ಟರ್ ಮಾಡುವ ಪ್ರಕ್ರಿಯೆ. ಒಮ್ಮೆ ಇದನ್ನು ಸಾಧಿಸಿದ ನಂತರ ನಿಮ್ಮ ಹಳೆಯ ಸಿಮ್ ಕಾರ್ಡ್ ಇನ್ವ್ಯಾಲಿಡ್ ಆಗುತ್ತದೆ ಮತ್ತು ನಿಮ್ಮ ಫೋನ್ ಹಳೆಯ ಸಿಮ್ ಕಾರ್ಡ್ ನಲ್ಲಿ ಸಿಗ್ನಲ್ ರಿಸೀವ್ ಮಾಡುವುದನ್ನು ನಿಲ್ಲಿಸುತ್ತದೆ. ಯಾವಾಗ ಮೋಸಗಾರರ ಬಳಿ ನಿಮ್ಮ ಫೋನ್ ನಂಬರ್ ಲಭ್ಯವಾಗುತ್ತದೆಯೋ ಆಗ ಅವರಿಗೆ ಓಟಿಪಿ ಪಡೆಯುವುದು ಸುಲಭವಾಗುತ್ತದೆ.ಇದರ ಮೂಲಕ ಅವರು ಬ್ಯಾಂಕ್ ಟ್ರಾನ್ಫ್ಸರ್ ಮತ್ತು ಟ್ರಾನ್ಸ್ಯಾಕ್ಷನ್ ಗಳನ್ನು ಸುಲಭದಲ್ಲಿ ಸಾಧಿಸಿಕೊಳ್ಳಬಹುದು.

ಸಿಮ್ ಸ್ವ್ಯಾಪಿಂಗ್ ಗೆ ಕಾನೂನಿನಲ್ಲಿ ಅವಕಾಶ, ಆದರೂ ಇದೀಗ ಸಮಸ್ಯೆಯ ಮೂಲ

ಸಿಮ್ ಸ್ವ್ಯಾಪಿಂಗ್ ಗೆ ಕಾನೂನಿನಲ್ಲಿ ಅವಕಾಶ, ಆದರೂ ಇದೀಗ ಸಮಸ್ಯೆಯ ಮೂಲ

ಸ್ವಿಮ್ ಸ್ವ್ಯಾಪ್ ಒಂದು ಶಕ್ತಿಶಾಲಿಯಾಗಿರುವ ಟೂಲ್ ಮತ್ತು ಇದು ನೀವು ಯಾರೊಂದಿಗೆ ಸಂಪರ್ಕಿಸುತ್ತೀರಿ ಎಂಬುದನ್ನೇ ಆಧರಿಸಿರುತ್ತದೆ. ಸಿಮ್ ಎಕ್ಸ್ ಚೇಂಜ್ ಪ್ರಕ್ರಿಯೆಯಲ್ಲಿ ನೀವು ನೇರವಾಗಿ ಏರ್ ಟೆಲ್, ವಡಾಫೋನ್ ಅಥವಾ ಐಡಿಯಾದಂತಹ ಸರ್ವೀಸ್ ಪ್ರೊವೈಡರ್ ಗಳಂತವರ ಜೊತೆಗೆ ಸಂಪರ್ಕದಲ್ಲಿರುತ್ತೀರಿ. ಈ ಆಪರೇಟರ್ ಗಳು ಅಧಿಕೃತ USSD ಕೋಡ್ ಗಳನ್ನು ಸಿಮ್ ಸ್ವ್ಯಾಪಿಂಗ್ ಗೆ ಬಳಸುತ್ತಾರೆ. ಬಟ್ ಸಮಸ್ಯೆ ಎದುರಾಗುವುದು ಯಾವಾಗ ನೀವು ಸ್ವತಃ ನೇರವಾಗಿ ಮಾಡಿಕೊಳ್ಳಲು ತೆರಳುತ್ತೀರಿ ಆಗ. ಒಂದು ವೇಳೆ ನೀವು ಯಾರಿಗಾದರೂ ಮೊಬೈಲ್ ಮೂಲಕ 20 ಡಿಜಿಟ್ ನ ಸಿಮ್ ನಂಬರ್ ನ್ನು ಹಂಚಿಕೊಂಡರೆ ಆತ ಸಿಮ್ ಸ್ವ್ಯಾಪಿಂಗ್ ಮಾಡಿಕೊಳ್ಳುವ ಸಾಧ್ಯತೆ ಇದ್ದು ಫ್ರಾಡ್ ನಡೆಯಬಹುದು.

ಅನಾಮಿಕ ಕರೆಗಳು:

ಅನಾಮಿಕ ಕರೆಗಳು:

ಏರ್ ಟೆಲ್, ವಡಾಫೋನ್ ಅಥವಾ ಇತರೆ ಯಾವುದೇ ಸರ್ವೀಸ್ ಪ್ರೊವೈಡರ್ ಗಳ ಹೆಸರಿನಲ್ಲಿ ಬರುವ ಅನಾಮಿಕ ಕರೆಗಳು ಈ ಮೋಸದ ಜಾಲದಲ್ಲಿವೆ.ಡ್ರಾಪ್ ಸಮಸ್ಯೆ ಮತ್ತು ಸಿಗ್ನಲ್ ಸಮಸ್ಯೆಯ ನಿವಾರಣೆಗೆ ಮಾಡುತ್ತಿರುವ ಸಾಮಾನ್ಯ ಕರೆಗಳು ಎಂದು ಸುಳ್ಳು ಹೇಳಿ ನಿಮ್ಮ ಬಳಿ ಮೊಬೈಲ್ ಡಾಟಾವನ್ನು ಅಭಿವೃದ್ಧಿ ಪಡಿಸಿಕೊಳ್ಳಲು 4ಜಿ ಗೆ ಸಿಮ್ ಕಾರ್ಡ್ ನ್ನು ಬದಲಿಸಿಕೊಳ್ಳುವಂತೆ ಇವರು ಮನವೊಲಿಸಿ ನಿಮ್ಮನ್ನ ಮೋಸದ ಜಾಲಕ್ಕೆ ಸಿಲುಕಿಸುತ್ತಾರೆ.

ಒಟ್ಟಾರೆ ಮಾತುಕತೆಯು 20 ಡಿಜಿಟಿನ ಸಿಮ್ ನಂಬರ್ ಪಡೆಯುವುದೇ ಆಗಿದೆ ಸ್ಕ್ಯಾಮ್ ಕರೆಗಳಲ್ಲಿನ ಮಾತುಕತೆಯ ಪ್ರಮುಖ ಉದ್ದೇಶವೇ ನಿಮ್ಮ ಬಳಿ ಸಿಮ್ ನಂಬರ್ ನ್ನು ಪಡೆದುಕೊಳ್ಳುವುದೇ ಆಗಿರುತ್ತದೆ. ಪ್ರತಿ ಸಿಮ್ ಕಾರ್ಡ ನಲ್ಲೂ ಈ 20 ಡಿಜಿಟ್ಟಿನ ನಂಬರ್ ಇರುತ್ತದೆ. ಅದನ್ನು ಹಂಚಿಕೊಳ್ಳುವುದಕ್ಕೆ ಅವರು ನಿಮ್ಮನ್ನ ಮನವೊಲಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.

ಸಿಮ್ ಸ್ವ್ಯಾಪಿಂಗ್ ಗೆ 1 (ಅಥವಾ ಇತರೆ ಯಾವುದೇ ಕೀ)ಯನ್ನು ಪ್ರೆಸ್ ಮಾಡಲು ಹೇಳಲಾಗುತ್ತದೆ.

ಸಿಮ್ ಸ್ವ್ಯಾಪಿಂಗ್ ಗೆ 1 (ಅಥವಾ ಇತರೆ ಯಾವುದೇ ಕೀ)ಯನ್ನು ಪ್ರೆಸ್ ಮಾಡಲು ಹೇಳಲಾಗುತ್ತದೆ.

ಸಿಮ್ ನಂಬರ್ ಪಡೆದ ನಂತರ ಅವರು ಒಂದನ್ನು ಅಥವಾ ಇತರೆ ಯಾವುದೇ ಕೀಯನ್ನು ಪ್ರೆಸ್ ಮಾಡುವುದಕ್ಕೆ ಹೇಳುತ್ತಾರೆ. ಅದು ಸಿಮ್ ಸ್ವ್ಯಾಪಿಂಗ್ ಗೆ ನಿಮ್ಮ ಒಪ್ಪಿಗೆ ಇದೆ ಎಂದು ಖಾತ್ರಿ ಪಡಿಸುವುದಕ್ಕಾಗಿ ಆಗಿದೆ. ನಿಮ್ಮ ಟೆಲಿಕಾಂ ಆಫರೇಟರ್ ಜೊತೆಗೆ ಅವರು ನಂತರ ಅಧಿಕೃತವಾಗಿ ಸ್ವ್ಯಾಪಿಂಗ್ ಕೆಲಸವನ್ನು ಮುಗಿಸಿಕೊಳ್ಳುತ್ತಾರೆ.

ನಿಮ್ಮ ಮೊಬೈಲ್ ಸಿಗ್ನಲ್ ರಿಸೀವ್ ಮಾಡುವುದನ್ನು ನಿಲ್ಲಿಸುತ್ತದೆ

ನಿಮ್ಮ ಮೊಬೈಲ್ ಸಿಗ್ನಲ್ ರಿಸೀವ್ ಮಾಡುವುದನ್ನು ನಿಲ್ಲಿಸುತ್ತದೆ

ಸ್ವ್ಯಾಪಿಂಗ್ ಯಶಸ್ವಿಯಾದ ನಂತರ ನಿಮ್ಮ ಹಳೆಯ ಸಿಮ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಮತ್ತು ಸ್ಕ್ಯಾಮರ್ ಬಳಿ ಇರುವ ಹೊಸ ಸಿಮ್ ನಲ್ಲಿ ನಿಮ್ಮ ನಂಬರ್ ರಿಜಿಸ್ಟರ್ ಆಗುತ್ತದೆ ಮತ್ತು ಅವರಿಗೆ ಸಿಗ್ನಲ್ ಲಭ್ಯವಾಗಲು ಆರಂಭವಾಗುತ್ತದೆ. ಒಟ್ಟಾರೆ ನಿಮ್ಮ ಮೊಬೈಲಿನ ಕಂಟ್ರೋಲ್ ನ್ನು ಅವರು ಪಡೆದುಕೊಳ್ಳಲು ಶುರು ಮಾಡುತ್ತಾರೆ.

ಮೋಸಗಾರರ ಫೋನ್ ನ್ನು ತಡೆಯುವುದಕ್ಕಾಗಿ ಫೋನ್ ನ್ನು ಸ್ವಿಚ್ ಆಫ್ ಅಥವಾ ಮ್ಯೂಟ್ ಮಾಡಬೇಡಿ

ಮೋಸಗಾರರ ಫೋನ್ ನ್ನು ತಡೆಯುವುದಕ್ಕಾಗಿ ಫೋನ್ ನ್ನು ಸ್ವಿಚ್ ಆಫ್ ಅಥವಾ ಮ್ಯೂಟ್ ಮಾಡಬೇಡಿ

ಒಮ್ಮೆ ಸ್ಕ್ಯಾಮರ್ ಸಿಮ್ ಸ್ವ್ಯಾಪಿಂಗ್ ಮಾಡಿದ ನಂತರ ನಿಮಗೆ ಅವರು ಕಿರಿಕಿರಿ ಉಂಟುಮಾಡುತ್ತಾರೆ ಮತ್ತು ಆ ಮೂಲಕ ನೀವು ನಿಮ್ಮ ಫೋನ್ ನ್ನು ಸ್ವಿಚ್ ಆಫರ್ ಅಥವಾ ಸೈಲೆಂಟ್ ಮೋಡ್ ಗೆ ಹಾಕಲಿ ಅನ್ನುವುದು ಅವರ ಉದ್ದೇಶವಾಗಿರುತ್ತದೆ. ಇದು ಅವರಿಗೆ ಬಹಳ ಮುಖ್ಯವಾಗಿರುವ ಸಂಗತಿಯಾಗಿರುತ್ತದೆ. ಯಾಕೆಂದರೆ ಟೆಲಿಕಾಂ ಆಪರೇಟರ್ ಗಳು ಹೊಸ ಸಿಮ್ ನ್ನು ಆಕ್ಟಿವೇಟ್ ಮಾಡಲು ಹೆಚ್ಚು ಕಡಿಮೆ ನಾಲ್ಕು ತಾಸುಗಳ ಸಮಯವನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ಸ್ಕ್ಯಾಮರ್ ಗಳು ನಿರಂತರವಾಗಿ ನಿಮಗ ಕರೆ ಮಾಡಿ ಫೋನ್ ಸ್ವಿಚ್ ಆಫ್ ಮಾಡುವಷ್ಟರ ಮಟ್ಟಿಗೆ ಕಿರಿಕಿರಿ ನೀಡುತ್ತಾರೆ.

ಐಡೆಂಟಿಟಿ ವೆರಿಫಿಕೇಷನ್ ಗೆ ಆಧಾರ್ ನಂಬರ್- ಆಧಾರ್ ಮಾಹಿತಿ ಫೋನ್ ಮೂಲಕ ಹಂಚಿಕೊಳ್ಳಬೇಡಿ

ಐಡೆಂಟಿಟಿ ವೆರಿಫಿಕೇಷನ್ ಗೆ ಆಧಾರ್ ನಂಬರ್- ಆಧಾರ್ ಮಾಹಿತಿ ಫೋನ್ ಮೂಲಕ ಹಂಚಿಕೊಳ್ಳಬೇಡಿ

ಮೋಸಗಾರರಿಗೆ ಫೋನ್ ನಂಬರ್ ಮತ್ತು ಆಧಾರ ನಂಬರ್ ಎರಡೂ ಲಭ್ಯವಾದರೆ ಇಂದಿನ ಕಾಲದಲ್ಲಿ ಏನು ಬೇಕಾದರೂ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ನಿಮ್ಮ ಆಧಾರ್ ನಂಬರ್ ನ್ನೂ ಕೂಡ ಬೇಕಾಬಿಟ್ಟಿಯಾಗಿ ಹಂಚಿಕೊಳ್ಳಬೇಡಿ.

ಬ್ಯಾಂಕ್ ಬ್ಯಾಲೆನ್ಸ್ ಯಾವಾಗಲೂ ಪರೀಕ್ಷಿಸುತ್ತಾ ಇರಿ

ಬ್ಯಾಂಕ್ ಬ್ಯಾಲೆನ್ಸ್ ಯಾವಾಗಲೂ ಪರೀಕ್ಷಿಸುತ್ತಾ ಇರಿ

ನಿಮ್ಮ ಬ್ಯಾಂಕ್ ಅಕೌಂಟ್ ನ್ನು ಆಗಾಗ ಟ್ರ್ಯಾಕ್ ಮಾಡುತ್ತಲೇ ಇರುವುದು ಬಹಳ ಒಳ್ಳೆಯ ಅಭ್ಯಾಸ. ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಪಾಸ್ ವರ್ಡ್ ನ್ನು ಕೂಡ ಆಗಾಗ ಬದಲಿಸುತ್ತಾ ಇರಿ.ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ ಎಂಬ ಗುಮಾನಿ ಇದ್ದರೆ ಕೂಡಲೇ ಬ್ಯಾಂಕ್ ಸಿಬ್ಬಂದಿಗೆ ಮಾಹಿತಿ ನೀಡಿ.

Best Mobiles in India

Read more about:
English summary
Beware of latest banking fraud as man loses Rs. 1,86 crore in Mumbai

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X