ಇಮೇಲ್ ನಲ್ಲಿ ಜಿಯೋ ಫೈಬರ್ ಚಂದಾದಾರಿಕೆ ನೆಪದಲ್ಲಿ ಬ್ಯಾಂಕ್ ಖಾತೆ ಪಡೆಯುತ್ತಿರುವ ಸ್ಕ್ಯಾಮ್

By Gizbot Bureau
|

ಸೆಪ್ಟೆಂಬರ್ 5 ರಿಂದ ಜಿಯೋ ಗಿಗಾ ಫೈಬರ್ ಭಾರತದಲ್ಲಿ ತನ್ನ ಸೇವೆಯನ್ನು ಕಮರ್ಷಿಯಲ್ ಆಗಿ ಪ್ರಾರಂಭಿಸಲಿದೆ. ಅಗಸ್ಟ್ 12 ರಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮಾಲೀಕ ಮುಖೇಶ್ ಅಂಬಾನಿ ಇದನ್ನು ಪ್ರಕಟಿಸಿದ ನಂತರ ಗ್ರಾಹಕರು ಬಹಳ ಕಾತರದಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಜಿಯೋ ಫೈಬರ್ ಭಾರತೀಯ ಡಿಜಿಟಲ್ ಜಗತ್ತಿನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡುವ ನಿರೀಕ್ಷೆ ಇದೆ.

ಸಮಸ್ಯೆ:

ಆದರೆ ಅದಕ್ಕಿಂತ ಮುನ್ನವೇ ಸಣ್ಣದೊಂದು ಸಮಸ್ಯೆ ಎದುರಾಗುತ್ತಿದ್ದು ಫಿಶ್ಶಿಂಗ್ ಸ್ಕ್ಯಾಮ್ ಪ್ರಾರಂಭವಾಗಿದೆ.ಆನ್ ಲೈನ್ ಸುರಕ್ಷತೆಗಾಗಿ ಕೆಲಸ ನಿರ್ವಹಿಸುತ್ತಿರುವವರು ಹೇಳುತ್ತಿರುವ ಪ್ರಕಾರ ಬ್ಯಾಂಕ್ ಖಾತೆಯ ವಿವರವನ್ನು ಕೇಳಿ ಸ್ಕ್ಯಾಮರ್ ಗಳು ಇಮೇಲ್ ನ್ನು ಹರಿಯಬಿಡುತ್ತಿದ್ದಾರೆ!

ಫಿಶ್ಶಿಂಗ್ ಇಮೇಲ್ ನಲ್ಲಿ ಏನಿದೆ?

ಜಿಯೋ ಫೈಬರ್ ಚಂದಾದಾರಿಕೆಯ ನೆಪದಲ್ಲಿ ಮಾಹಿತಿ ಲಭ್ಯವಿರದ ಜನರ ಬಳಿಯಲ್ಲಿ ಬ್ಯಾಂಕ್ ಖಾತೆಯನ್ನು ಪಡೆದುಕೊಳ್ಳುವುದು ಸ್ಕ್ಯಾಮರ್ ಗಳ ಹೊಸ ಪ್ಲಾನ್ ಆಗಿದೆ. ಆ ನಿಟ್ಟಿನಲ್ಲಿ ಸ್ಕ್ಯಾಮರ್ ಗಳು ಜಿಯೋ ಫೈಬರ್ ಹೆಸರಲ್ಲಿ ಇಮೇಲ್ ಕಳುಹಿಸುತ್ತಿದ್ದಾರೆ. ಫಿಶ್ಶಿಂಗ್ ಇಮೇಲ್ ನಲ್ಲಿ "ಜಿಯೋ ಫೈಬರ್ ಆಕ್ಟಿವೇಷನ್ ರಿಕ್ವೆಸ್ಟ್ ರಿಸೀವ್ಡ್" ಎಂದು ಬರೆದಿರುತ್ತದೆ ಮತ್ತು ಅದರ ಜೊತೆಗೆ ಕ್ಲಿಕ್ ಬಟನ್ ಕೂಡ ಇರುತ್ತದೆ.

ನೈಜ ಸೈಟ್ ನಂತೆಯೇ ಕಾಣುವ ಫೇಕ್ ಸೈಟ್:

ಈ ಬಗ್ಗೆ ಮಾಹಿತಿ ತಿಳಿಯದ ಬಳಕೆದಾರ ಅದನ್ನು ಕ್ಲಿಕ್ ಮಾಡಿದ ಕೂಡಲೇ ಅವರ ಮಾಹಿತಿಯನ್ನು ಕೇಳುವ ಸೈಟ್ ಗೆ ಅವರನ್ನು ಕರೆದುಕೊಂಡು ಹೋಗಲಾಗುತ್ತದೆ ಮತ್ತು ಅಲ್ಲಿ ಬಳಕೆದಾರರ ಸಂಪೂರ್ಣ ವಿವರದ ಜೊತೆಗೆ ಬ್ಯಾಂಕ್ ಖಾತೆಯ ವಿವರವನ್ನು ಕೂಡ ನಮೂದಿಸುವಂತೆ ಹೇಳಲಾಗುತ್ತದೆ. ನೈಜ ಸೈಟ್ ನಂತೆಯೇ ಕಾಣುವ ಹಾಗೆ ಫೇಕ್ ಸೈಟ್ ನಲ್ಲಿ ಬಣ್ಣಗಳು ಮತ್ತು ಫಾಂಟ್ ಗಳನ್ನು ಬಳಕೆ ಮಾಡಲಾಗಿದೆ.

ಜಿಯೋ ಫೈಬರ್ ಚಂದಾದಾರಿಕೆ ನಿಜವಾಗಿಯೂ ಕೆಲಸ ಮಾಡುವುದು ಹೇಗೆ? ಮೊದಲನೆಯದಾಗಿ ಗ್ರಾಹಕರು ತಿಳಿದಿರಬೇಕಾಗಿರುವ ಅಂಶವೇನೆಂದರೆ ರಿಲಯನ್ಸ್ ಜಿಯೋ ಚಂದಾದಾರಿಕೆಯ ಪ್ರೊಸೆಸ್ ಗಾಗಿ ಯಾವುದೇ ಬ್ಯಾಂಕ್ ಖಾತೆಯ ವಿವರವನ್ನಾಗಲಿ ಅಥವಾ ಬಳಕೆದಾರರ ವಯಕ್ತಿಕ ಮಾಹಿತಿಗಳನ್ನಾಗಲೀ ಕೇಳುವುದಿಲ್ಲ. ಹೊಸ ಕನೆಕ್ಷನ್ ಪಡೆಯುವುದಕ್ಕಾಗಿ ಜಿಯೋ ವೆಬ್ ಸೈಟ್ ನಲ್ಲಿ ಬಳಕೆದಾರರು ರಿಜಿಸ್ಟರ್ ಮಾಡಬೇಕು ಮತ್ತು ತಮ್ಮ ಸ್ಥಳೀಯ ಅಥವಾ ಟೌನ್ ಶಿಪ್ ನ ಪರವಾಗಿ ತಮ್ಮ ಆಸಕ್ತಿಯನ್ನು ತಿಳಿಯಪಡಿಸಬೇಕು.

ರಿಜಿಸ್ಟರ್ ಮಾಡುವುದು ಹೇಗೆ?

ರಿಜಿಸ್ಟರ್ ಮಾಡಿಕೊಳ್ಳುವುದಕ್ಕಾಗಿ ಗ್ರಾಹಕರು ಜಿಯೋ ಗಿಗಾಫೈಬರ್ ವೆಬ್ ಸೈಟ್ ಗೆ ತೆರಳಿ ಹೈ-ಸ್ಪೀಡ್ ಇಂಟರ್ನೆಟ್ ಕನೆಕ್ಷನ್ ಗಾಗಿ ತಮ್ಮ ಸಮಾಜದ ಪರವಾಗಿ ರಿಜಿಸ್ಟರ್ ಆಗಬೇಕು. ಜಿಯೋ ಗಿಗಾಫೈಬರ್ ನ ಆನ್ ಲೈನ್ ರಿಜಿಸ್ಟ್ರೇಷನ್ ಗಾಗಿ ಮೊದಲನೆಯದಾಗಿ ನೀವು ನಿಮ್ಮ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು.ನಿಮ್ಮ ವಿಳಾಸ, ಇಮೇಲ್, ಹೆಸರು ಮತ್ತು ಮೊಬೈಲ್ ನಂಬರ್ ಮತ್ತು ಒನ್ ಟೈಮ್ ಪಾಸ್ ವರ್ಡ್(OTP)(ನೀವು ನಮೂದಿಸಿದ ಮೊಬೈಲ್ ನಂಬರ್ ಗೆ ಕಳುಹಿಸಲಾಗುತ್ತದೆ)ನ್ನು ಎಂಟರ್ ಮಾಡಬೇಕು. ಒಮ್ಮೆ ವೆರಿಫಿಕೇಷನ್ ಮುಗಿದ ನಂತರ ಹೆಚ್ಚುವರಿ ಅಪ್ ಡೇಟ್ ಗಾಗಿ ಕಂಪೆನಿಯು ನಿಮ್ಮನ್ನ ಸಂಪರ್ಕಿಸಲಿದೆ ಎಂಬ ಮೆಸೇಜ್ ಡಿಸ್ಪ್ಲೇ ಆಗುತ್ತದೆ.

ಕನಿಷ್ಟ ಬೆಲೆಯಲ್ಲಿ ಬ್ರಾಡ್ ಬ್ಯಾಂಡ್:

ಜಿಯೋ ಫೈಬರ್ ಬಗ್ಗೆ ಸಾಕಷ್ಟು ಕುತೂಹಲವು ಗ್ರಾಹಕರ ಬಳಿ ಇದೆ. 4ಜಿ ಮಾರುಕಟ್ಟೆಯಲ್ಲಿ ಮಾಡಿದಂತೆಯೇ ಫಿಕ್ಸ್ಡ್ ಲೈನ್ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯನ್ನು ಮಾಡಬೇಕು ಎಂದು ಕಂಪೆನಿ ಪ್ರಯತ್ನಿಸುತ್ತಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಬ್ರಾಡ್ ಬ್ಯಾಂಡ್ ಸೇವೆಯನ್ನು ರಿಲಯನ್ಸ್ ಜಿಯೋ ಸಂಸ್ಥೆ ಆಫರ್ ಮಾಡುತ್ತಿದ್ದು ಪ್ಲಾನ್ ಗಳು ತಿಂಗಳಿಗೆ 700 ರುಪಾಯಿ ಪಾವತಿಸುವುದರ ಮೂಲಕ ಆರಂಭವಾಗುತ್ತದೆ. ಇದರ ಕನಿಷ್ಟ ಸ್ಪೀಡ್ 100 Mbps ಆಗಿದೆ. ಇದು 1Gbps ವರೆಗೂ ಕೂಡ ಮುಂದುವರಿಯಲಿದ್ದು ರುಪಾಯಿ 10,000ದ ವರೆಗೂ ಕೂಡ ಲಭ್ಯವಿದೆ.

Best Mobiles in India

English summary
Beware of Jio Fiber subscription scam asking bank account details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X