ಸ್ಮಾರ್ಟ್‌ಫೋನಿನಲ್ಲಿ ಸುಮ್ಮನೆ ಜಾಹೀರಾತು ಬರುತ್ತಿದ್ದೆಯೇ..? ಎಚ್ಚರ 5 ಲಕ್ಷ ಸ್ಮಾರ್ಟ್‌ಫೋನ್‌ ಹ್ಯಾಕ್ ಆಗಿದೆ..!

|

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿ ನಿಮಗೆ ತಿಳಿಯಂತೆ ಆಡ್‌ಗಳು ಕಾಣಿಸಿಕೊಳ್ಳುತ್ತಿದೆಯೇ..? ಹಾಗಿದ್ರೆ ನಿಮ್ಮ ಸ್ಮಾರ್ಟ್‌ಫೋನ್ ಮಾಲ್ವೇರ್ ದಾಳಿಗೆ ತುತ್ತಾಗಿದೆ ಎಂದು ಅರ್ಥ. ಪ್ಲೇ ಸ್ಟೋರಿನಲ್ಲಿ ಲಭ್ಯವಿರುವ ಪ್ರಮುಖ ಆರು QR ಕೋಡ್ ಸ್ಕ್ಯಾನಿಂಗ್ ಆಪ್‌ಗಳಲ್ಲಿ ಮಾಲ್ವೇರ್‌ಗಳು ಕಂಡುಬಂದಿದ್ದು, ಸುಮಾರು 5 ಲಕ್ಷ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾಲ್ವೇರ್ ದಾಳಿಗೆ ಸಿಲುಕಿಕೊಂಡಿವೆ ಎನ್ನಲಾಗಿದೆ.

ಸ್ಮಾರ್ಟ್‌ಫೋನಿನಲ್ಲಿ ಸುಮ್ಮನೆ ಜಾಹೀರಾತು ಬರುತ್ತಿದ್ದೆಯೇ..?

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಮಾಲ್ವೇರ್ ದಾಳಿಗೆ ತುತ್ತಾಗುತ್ತಿರುವ ಪ್ರಕರಣಗಳು ಒಂದರ ಹಿಂದೆ ಒಂದು ವರದಿಯಾಗುತ್ತಿದ್ದು, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆಯಾಗುತ್ತಿರುವ ಥರ್ಡಪಾರ್ಟಿ QR ಕೋಡ್ ಸ್ಕ್ಯಾನರ್ ಮೂಲಕ ಮಾಲ್ವೇರ್‌ಗಳು ಸ್ಮಾರ್ಟ್‌ಫೋನ್‌ ಪ್ರವೇಶಿಸುವ ಸಾಧ್ಯತೆಯನ್ನು ಹೊಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

QR ಕೋಡ್ ಸ್ಕ್ಯಾನ್:

QR ಕೋಡ್ ಸ್ಕ್ಯಾನ್:

ದಿನೇ ದಿನೇ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸೇವೆಗಳನ್ನು ಪಡೆಯುವ ಪರಿಪಾಠ ಇಂದು ಹೆಚ್ಚಾಗುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಹ್ಯಾಕರ್ಸ್ ಗಳಿಂದ QR ಕೋಡ್ ಸ್ಕ್ಯಾನರ್ ಮೂಲಕವೇ ಸ್ಮಾರ್ಟ್‌ಫೋನ್‌ ಮೇಲೆ ದಾಳಿ ನಡೆಸಲಾಗಿದೆ. QR ಕೋಡ್ ಸ್ಕ್ಯಾನ್ ಮಾಡುವ ಸಂದರ್ಭದಲ್ಲಿ ಮಾಲ್ವೇರ್‌ಗಳು ಬೇರೆ ವೆಬ್‌ ಸೈಟ್‌ಗಳ ಕಡೆಗೆ ಬಳಕೆದಾರರನ್ನು ಕಳುಹಿಸುವ ಸಮಸ್ಯೆಯೂ ಹೆಚ್ಚಾಗಿದೆ.

ಪ್ಲೇ ಸೋರಿನಲ್ಲಿದೆ:

ಪ್ಲೇ ಸೋರಿನಲ್ಲಿದೆ:

ಪ್ಲೇ ಸ್ಟೋರಿನಲ್ಲಿ ಕೆಲವು ಆಪ್‌ಗಳು ಲಭ್ಯವಿದ್ದು, ಇವುಗಳು QR ಕೋಡ್‌ಗಳನ್ನು ರಿಡ್ ಮಾಡುವ ಮಾಲ್ವೇರ್‌ಗಳನ್ನು ಹೊಂದಿದ್ದು, ಇದು ಬಳಕೆದಾರರ QR ಕೋಡ್ ಗಳನ್ನು ಬಳಕೆದಾರರಿಗೆ ತಿಳಿಯದಂತೆ ಅಪರಿಸುತ್ತಿವೆ. ಇದುಗಳು ಬಳಕೆದಾರರ ಸ್ಮಾರ್ಟ್‌ಫೋನ್‌ಗೆ ಆಡ್‌ಗಳು ಸೇರಿದಂತೆ ವೈರಸ್‌ಗಳನ್ನು ತುಂಬುವ ಕೆಲಸವನ್ನು ಮಾಡುತ್ತಿದೆ.

5 ಲಕ್ಷ ಮಂದಿ:

5 ಲಕ್ಷ ಮಂದಿ:

ಈ ಮಾದರಿಯ ಮಾಲ್ವೇರ್ ಹೊಂದಿರುವ ಆಪ್‌ಗಳನ್ನು ಗೂಗಲ್ ಪ್ಲೇ ಸ್ಟೋರಿನಿಂದ ತೆಗೆಯುವ ಕಾರ್ಯವನ್ನು ಮಾಡುತ್ತಿದೆ. ಆದರೂ ಸಹ ಈಗಾಗಲೇ ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ಈ ಆಪ್‌ಗಳನ್ನು ಈಗಾಗಲೇ ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೆಚ್ಚಾಗಿ QR ಕೋಡ್ ಸ್ಕ್ಯಾನ್ ಆಪ್ ಬಳಕೆ ಮಾಡಿಕೊಂಡವರು ಈ ಮಾಲ್ವೇರ್ ದಾಳಿಗೆ ಸಿಲುಕಿದ್ದಾರೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?
ಬಳಕೆದಾರರಿಗೆ ತಿಳಿಯುವುದಿಲ್ಲ:

ಬಳಕೆದಾರರಿಗೆ ತಿಳಿಯುವುದಿಲ್ಲ:

ಬಳಕೆದಾರರು ಈ ಆಪ್‌ಗಳನ್ನು ಬಳಕೆ ಮಾಡಿಕೊಂಡ ನಂತರದಲ್ಲಿ ಒಂದೊಂದಾಗಿ ಆಪ್‌ಗಳು, ಕಾಣಿಸಿಕೊಳ್ಳುವ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ. ಅಲ್ಲದೇ ಥರ್ಡಪಾರ್ಟಿ ಆಪ್‌ಗಳನ್ನು ಬಳಕೆ ಮಾಡಿಕೊಳ್ಳುವವರು ಹೆಚ್ಚಾಗಿ ಈ ಮಾಲ್ವೇರ್ ದಾಳಿಯಿಂದ ಹೆಚ್ಚಿನ ತೊಂದರೆಯನ್ನು ಅನುಭವಿಸಲಿದ್ದಾರೆ ಎನ್ನಲಾಗಿದೆ.

Best Mobiles in India

English summary
Beware! This New Android Malware Infected 500,000 Android Users. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X