ಏರ್‌ಟೆಲ್ ಗ್ರಾಹಕರಿಗೆ ಕಂಪೆನಿಯಿಂದ ಮತ್ತೊಂದು ಬಿಗ್ ಶಾಕ್!

|

ಭಾರತದ ಟೆಲಿಕಾಂ ಉದ್ಯಮದಲ್ಲಿ ಪ್ರಮುಖ ಕಂಪೆನಿಗಳಲ್ಲಿ ಒಂದಾದ ಭಾರತಿ ಏರ್‌ಟೆಲ್ ಮತ್ತೊಂದು ಶಾಕ್ ನೀಡಿದೆ. ಪ್ರತಿ ಬಳಕೆದಾರರಿಂದ ಕನಿಷ್ಟ ಆದಾಯ ಪಡೆಯುವ ತನ್ನ ಪ್ರೀಪೇಡ್ ಯೋಜನೆಗಳನ್ನು ಕಂಪೆನಿ ಮತ್ತೊಮ್ಮೆ ಪರಿಷ್ಕರಿಸಿದ್ದು, ಪ್ರಿಪೇಯ್ಡ್ ಪ್ಲ್ಯಾನ್ ಹಾಕಿಸಿಕೊಂಡ ಬಳಿಕ ಗ್ರಾಹಕರು ಅದರ ವ್ಯಾಲಿಡಿಟಿ ಮುಗಿದ ನಂತರ ಏಳು ದಿನದವರೆಗೆ ಮಾತ್ರ ಒಳಬರುವ ಕರೆ ಪಡೆಯಬಹುದು ಎಂಬ ಶಾಕಿಂಗ್ ಸುದ್ದಿಯನ್ನು ತನ್ನ ಗ್ರಾಹಕರಿಗೆ ನೀಡಿದೆ.

ಏರ್‌ಟೆಲ್ ಗ್ರಾಹಕರಿಗೆ ಕಂಪೆನಿಯಿಂದ ಮತ್ತೊಂದು ಬಿಗ್ ಶಾಕ್!

ಹೌದು, ಪ್ರತಿ ಬಳಕೆದಾರರಿಂದ ಸರಾಸರಿ ಆದಾಯವನ್ನು ಪಡೆಯುವ ಸಲುವಾಗಿ ಏರ್‌ಟೆಲ್ ಕನಿಷ್ಟ ರೀಚಾರ್ಜ್ ಪದ್ದತಿಯನ್ನು ಜಾರಿಗೆ ತಂದಿತ್ತು. ಏರ್‌ಟೆಲ್ ಬಳಕೆದಾರರು ಒಳಬರುವ ಕರೆಗಳಿಗಾಗಿ ಪ್ರತಿತಿಂಗಳು ಕನಿಷ್ಟ 35 ರೂಪಾಯಿಗಳ ರೀಚಾರ್ಜ್ ಮಾಡಿಸಿಕೊಳ್ಳಬೇಕು ಅಥವಾ ಅದಕ್ಕಿಂತ ದೊಡ್ಡ ಮತ್ತದ ಯಾವುದೇ ಯೋಜನೆಯನ್ನು ಪಡೆದುಕೊಳ್ಳಬೇಕು ಎಂಬ ನಿಯಮವನ್ನು ತಂದಿತ್ತು. ಈ ನಿಮಯದಲ್ಲಿ ಇದೀಗ ಮತ್ತೊಮ್ಮೆ ಬದಲಾವಣೆಯಾಗಿದೆ.

ಈ ಮೊದಲು ತಂದಿದ್ದ ಕನಿಷ್ಟ ರೀಚಾರ್ಜ್ ಪದ್ದತಿಯಯಲ್ಲಿ ಈ ಮೊದಲು ಒಳಬರುವ ಕರೆಗಳ ವ್ಯಾಲಿಡಿಟಿಯು ಪ್ಲ್ಯಾನ್ ಮುಗಿದ ಬಳಿಕ 15 ದಿನದವರೆಗೆ ಇತ್ತು. ಆದರೆ, ಇದೀಗ ಬದಲಾದ ನಿಯಮದಂತೆ, ಏರ್‌ಟೆಲ್ ಪ್ರಿಪೇಯ್ಡ್ ಪ್ಲ್ಯಾನ್ ಹಾಕಿಸಿಕೊಂಡ ಬಳಿಕ ಗ್ರಾಹಕರು ಅದರ ವ್ಯಾಲಿಡಿಟಿ ಮುಗಿದ ನಂತರ ಏಳು ದಿನದವರೆಗೆ ಮಾತ್ರ ಒಳಬರುವ ಕರೆ ಪಡೆಯಬಹುದು ಎಂದು ತಿಳಿಸಿದೆ. ಹೀಗೆ ಗ್ರಾಹಕರ ಮೇಲೆ ಮತ್ತಷ್ಟು ಒತ್ತಡವನ್ನು ಏರಲು ಕಂಪೆನಿ ಮುಂದಾಗಿದೆ.

ಏರ್‌ಟೆಲ್ ಗ್ರಾಹಕರಿಗೆ ಕಂಪೆನಿಯಿಂದ ಮತ್ತೊಂದು ಬಿಗ್ ಶಾಕ್!

ಏರ್‌ಟೆಲ್ ಪ್ರಿಪೇಯ್ಡ್ ಬಳಕೆದಾರರು ಒಳಬರುವ ಧ್ವನಿ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗದ ಏಳು ದಿನಗಳ ನಂತರ ಅವರ ಸುಂಕದ ಪ್ಯಾಕ್‌ಗಳ ಸಿಂಧುತ್ವವು ಮುಕ್ತಾಯಗೊಳ್ಳುತ್ತದೆ. ಅಂತಹ ಬಳಕೆದಾರರು ತಮ್ಮ ಖಾತೆಯಲ್ಲಿ ಟಾಕ್ ಟೈಮ್ ಬ್ಯಾಲೆನ್ಸ್ ಉಳಿದಿದ್ದರೂ ಸಹ, ಯೋಜನೆ ಮುಗಿಯುವ ದಿನದಿಂದ ಹೊರಹೋಗುವ ಧ್ವನಿ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಆದರೆ, ಯಾವುದೇ ಒಳಕರೆಗಳು ಬರುವುದಿಲ್ಲ ಎಂದು ವರದಿಗಳು ತಿಳಿಸಿವೆ.

'ಡಿಜಿ ಲಾಕರ್' ಅನ್ನು ಪರಿಗಣಿಸಿ!..ಸಂಚಾರಿ ಪೊಲೀಸರಿಗೆ ಕಮಿಷನರ್ ನಿರ್ದೇಶನ!'ಡಿಜಿ ಲಾಕರ್' ಅನ್ನು ಪರಿಗಣಿಸಿ!..ಸಂಚಾರಿ ಪೊಲೀಸರಿಗೆ ಕಮಿಷನರ್ ನಿರ್ದೇಶನ!

ಏರ್‌ಟೆಲ್‌ನಿಂದ ಹೊಸ ನಡೆ ಹೊಸದಲ್ಲ. ಆದರೆ, ಒಳಬರುವ ಸಿಂಧುತ್ವವನ್ನು 15 ದಿನಗಳಿಂದ ಏಳು ದಿನಗಳವರೆಗೆ ಇಳಿಸಿರುವುದು ಗ್ರಾಹಕರ ಮೇಲೆ ಒತ್ತಡ ಏರುತ್ತಿರುವ ತಂತ್ರ ಎಂದು ಹೇಳಬಹುದಾಗಿದೆ. ಏರ್‌ಟೆಲ್ ಜೊತೆಗೆ ವೊಡಾಫೋನ್ ಐಡಿಯಾ ನೆಟ್‌ವರ್ಕ್‌ ಕೂಡ ಕನಿಷ್ಟ ರೀಚಾರ್ಜ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಏರ್ಟೆಲ್ ಒಳಬರುವ ಸಿಂಧುತ್ವವನ್ನು 15 ದಿನಗಳಿಂದ ಏಳು ದಿನಗಳಿಗೆ ಇಳಿಸಿದ್ದರೂ, ವೊಡಾಫೋನ್ ಐಡಿಯಾ ಈ ಮಾರ್ಗವನ್ನು ಅನುಸರಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ನೀವು PF ಖಾತೆಯನ್ನು ಹೊಂದಿದ್ದರೆ ಶೀಘ್ರವೇ ಈ ಕೆಲಸ ಮಾಡಿ!ನೀವು PF ಖಾತೆಯನ್ನು ಹೊಂದಿದ್ದರೆ ಶೀಘ್ರವೇ ಈ ಕೆಲಸ ಮಾಡಿ!

ಇನ್ನು ಏರ್‌ಟೆಲ್ ಗ್ರಾಹಕರು ಒಳಬರುವ ಮತ್ತು ಹೊರಹೋಗುವ ಕರೆಗಳನ್ನು ಸಕ್ರಿಯವಾಗಿಡಲು ಕನಿಷ್ಠ ರೀಚಾರ್ಜ್ ಬೆಲೆ 35 ರೂ. ಪ್ರಿಪೇಯ್ಡ್ ಕಾಂಬೊ ರೀಚಾರ್ಜ್ ಮಾಡಿಸಬೇಕು. ಈ ರೀಚಾರ್ಜ್ ಮಾಡಿಸಿದರೆ 100MB 3G / 4G ಡೇಟಾವನ್ನು ಏರ್‌ಟೆಲ್ ನೀಡುತ್ತದೆ ಮತ್ತು 26.66 ರೂ.ಟಾಕ್ ಟೈಮ್ ಸಹ ಬಳಕೆದಾರರಿಗೆ ಸಿಗಲಿದ್ದು, ಬಳಕೆದಾರರು ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳನ್ನು 1p / sec ನಲ್ಲಿ 28 ದಿನಗಳವರೆಗೆ ಮಾಡಬಹುದಾಗಿದೆ.

Best Mobiles in India

English summary
Bharti Airtel reduces incoming validity to seven days after prepaid recharge expires. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X