ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿ ಏರ್ ಟೆಲ್ ಕೊಟ್ಟ ಬೆಸ್ಟ್ ಆಫರ್...!

|

ಟೆಲಿಕಾಂ ಮಾರುಕಟ್ಟೆಯಲ್ಲಿ ಮಾತ್ರವೇ ಕಾಣಸಿಗುತ್ತಿದ್ದ ದರ ಸಮರವೂ ಸದ್ಯ ಬ್ರಾಡ್ ಬ್ಯಾಂಡ್ ಲೋಕಕ್ಕೂ ಜಿಯೋದೊಂದಿಗೆ ಕಾಲಿಟ್ಟಿದೆ. ಈಗಾಗಲೇ ಮಾರುಕಟ್ಟೆಗೆ ಜಿಯೋ ಗಿಗಾ ಫೈಬರ್ ಸೇವೆಯನ್ನು ಆರಂಭಿಸಿದ ಬೆನ್ನಲೇ ಇತರೆ ಟೆಲಿಕಾಂ ಕಂಪನಿಗಳು ತಮ್ಮ ಉಳಿವಿಗಾಗಿ ದರ ಸಮರದ ಮೊರೆ ಹೋಗಿವೆ. ಈಗಾಗಲೇ ಸರಕಾರಿ ಸ್ವಾಮ್ಯದ BSNL ತನ್ನ ಪ್ಲಾನ್ ಗಳ ಬೆಲೆಯನ್ನು ಇಳಿಕೆ ಮಾಡಿದೆ. ಸದ್ಯ ಈಗ ಸರದಿ ಏರ್ ಟೆಲ್ ನದ್ದು.

ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿ ಏರ್ ಟೆಲ್ ಕೊಟ್ಟ ಬೆಸ್ಟ್ ಆಫರ್...!

ಮಾರುಕಟ್ಟೆಯಲ್ಲಿ ತನ್ನ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಏರ್ ಟೆಲ್ ದೊಡ್ದದಾದ ಕೊಡುಗೆಯೊಂದನ್ನು ನೀಡಲು ಮುಂದಾಗಿದೆ. ಇದರಲ್ಲಿ ಬಳಕೆದಾರಿಗೆ ಡೇಟಾ ಬಳಕೆಯೂ ಇನ್ನು ಹೆಚ್ಚಿನ ಪ್ರಮಾಣದಲ್ಲಿ ದೊರೆಯಲಿದೆ ಎನ್ನಲಾಗಿದೆ. ಬೇರೆ ಬೇರೆ ಟೆಲಿಕಾಂ ಕಂಪನಿಗಳು ನೀಡದ ಮಾದರಿಯ ಆಫರ್ ವೊಂದನ್ನು ನೀಡಲು ಮುಂದಾಗಿದ್ದು, ನೇರಾವಾಗಿ ಜಿಯೋಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ.

ಯಾವುದೇ ಲಿಮಿಟ್ ಇಲ್ಲ:

ಯಾವುದೇ ಲಿಮಿಟ್ ಇಲ್ಲ:

ಇಷ್ಟು ದಿನ ತನ್ ಬಳಕೆದಾರರಿಗೆ ತಿಂಗಳ ಮಟ್ಟದಲ್ಲಿ FUPಯನ್ನು ಬಳಕೆದಾರರಿಗೆ ವಿಧಿಸುತ್ತಿದೆ. ಇದೇ ಏರ್ ಟೆಲ್ ಗೆ ಹಿನ್ನಲೆಯಾಗಲಿದೆ ಎನ್ನುವ ಕಾರಣಕ್ಕಾಗಿ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಜಾರಿಯಲ್ಲಿ ಇರಿಸುವ ಸಲುವಾಗಿ ಯಾವುದೇ ಲಿಮಿಟ್ ಇಲ್ಲದೇ ಡೇಟಾವನ್ನು ಬಳಕೆಗೆ ನೀಡಲು ಮುಂದಾಗಿದೆ. ಅಲ್ಲದೇ ವೇಗದ ಸೇವೆಯನ್ನು ನೀಡಲು ಯೋಜನೆಯನ್ನು ರೂಪಿಸಿದೆ ಎನ್ನಲಾಗಿದೆ.

ಹೊಸ ಪ್ಲಾನ್ ಗಳು:

ಹೊಸ ಪ್ಲಾನ್ ಗಳು:

ಇದಕ್ಕಾಗಿಯೇ ಏರ್ಟೆಲ್ ಹೊಸ ಪ್ಲಾನ್ ಗಳನ್ನು ಲಾಂಚ್ ಮಾಡಿದ್ದು, ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದೆ. ಪ್ರತಿ ಪ್ಲಾನ್ ಗೂ ಬೇರೆ ಬೇರೆ ವೇಗದ ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದ್ದು, ಇದರಿಂದಾಗಿ ಹೆಚ್ಚಿನ ಲಾಭವಾಗಲಿದೆ. ಹೆಚ್ಚಿನ ವೇಗದ ಡೇಟಾವನ್ನು ಕಡಿಮೆ ಬೆಲೆಗೆ ಪಡೆಯಬಹುದಾಗಿದೆ

ರೂ.349 ನಿಂದ ರೂ.1299 ವರೆಗೂ ಪ್ಲಾನ್ ಇದೆ:

ರೂ.349 ನಿಂದ ರೂ.1299 ವರೆಗೂ ಪ್ಲಾನ್ ಇದೆ:

ಏರ್ ಟೆಲ್ ಹೊಸದಾಗಿ ಪ್ಲಾನ್ ಗಳನ್ನು ಲಾಂಚ್ ಮಾಡಿದ್ದು, ರೂ.349 ನಿಂದ ರೂ.1299 ವರೆಗೂ ಪ್ಲಾನ್ ಇದೆ. ಇದರಲ್ಲಿ ಡೇಟಾ ಬಳಕೆಗೆ ಯಾವುದೇ ಮಿತಿಯೂ ಇರುವುದಿಲ್ಲ. ಬದಲಿಗೆ ಡೇಟಾ ನೀಡುವ ವೇಗದಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ. ಬಳಕೆದಾರರು ತಮ್ಮ ಆದ್ಯತೆಗೆ ತಕ್ಕ ಹಾಗೆ ಪ್ಲಾನ್ ಗಳನ್ನು ಪಡೆದುಕೊಳ್ಳಬಹುದಾಗಿದೆ.

ಡಿಸ್ಕೌಂಟ್ ಸಹ ಇದೆ:

ಡಿಸ್ಕೌಂಟ್ ಸಹ ಇದೆ:

ಇದಲ್ಲದೇ ಬಳಕೆದಾರರಿಗೆ ಪ್ಲಾನ್ ಗಳ ಮೇಳೆ ಡಿಸ್ಕೌಂಟ್ ಅನ್ನು ನೀಡಲು ಏರ್ ಟೆಲ್ ಮುಂದಾಗಿದ್ದು, ಬಳಕೆದಾರರಿಗೆ ಆರು ತಿಂಗಳು ರಿಚಾರ್ಜ್ ಮಾಡಿಸಿಕೊಂಡರೆ ಶೇ.10% ಡಿಸ್ಕೌಂಟ್ ಮತ್ತು ಒಂದು ವರ್ಷಕ್ಕೆ ರಿಚಾರ್ಜ್ ಮಾಡಿಕೊಂಡರೆ ಶೇ.20 ರಷ್ಟು ಕಡಿತವನ್ನು ನೀಡುವ ಪ್ಲಾನ್ ಅನ್ನು ಜಾರಿಗೆ ತಂದಿದೆ ಎನ್ನಲಾಗಿದೆ.

Best Mobiles in India

English summary
Bharti Airtel Removes FUP on its Broadband Plans to Tackle Jio GigaFiber. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X