Subscribe to Gizbot

ಜಿಯೋದೊಂದಿಗೆ ಜಿದ್ದು: ಕಡಿಮೆ ಬೆಲೆಗೆ ನಿತ್ಯ 2GB-3GB ಡೇಟಾ ಕೊಟ್ಟ ಏರ್‌ಟೆಲ್‌..!

Written By:

ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋದೊಂದಿಗೆ ಜಿದ್ಡಿಗೆ ಬಿದ್ದಿರುವ ಏರ್‌ಟೆಲ್, ತನ್ನ ಬಳಕೆದಾರರಿಗೆ ಹೊಸ ಹೊಸ ಆಫರ್ ಗಳನ್ನು ಮೇಲಿಂದ ಮೇಲೆ ನೀಡುತ್ತಿದೆ. ಇದೇ ಮಾದರಿಯಲ್ಲಿ ಈಗಾಗಲೇ ಬಳಕೆದಾರರಿಗೆ ಮುಕ್ತವಾಗಿರುವ ಆಫರ್ ವೊಂದನ್ನು ರಿವರ್ಸ್ ಮಾಡಿದ್ದು, ರೂ. 249ಕ್ಕೆ ಹೆಚ್ಚಿನ ಲಾಭವನ್ನು ನೀಡಲು ಮುಂದಾಗಿದ್ದು, ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ 2GB ಡೇಟಾವನ್ನು ನೀಡಲಿದೆ. ಕಡಿಮೆ ಬೆಲೆಗೆ ಹೆಚ್ಚಿನ ಲಾಭವನ್ನು ಮಾಡಿ ಕೊಡಲು ಮುಂದಾಗಿದೆ.

ಜಿಯೋದೊಂದಿಗೆ ಜಿದ್ದು: ಕಡಿಮೆ ಬೆಲೆಗೆ ನಿತ್ಯ 2GB-3GB ಡೇಟಾ ಕೊಟ್ಟ ಏರ್‌ಟೆಲ್‌..!

ಮೈ ಏರ್‌ಟೆಲ್ ಆಪ್ ಮತ್ತು ಏರ್‌ಟೆಲ್ ವೆಬ್ ಸೈಟಿನ ಮೂಲಕ ಏರ್‌ಟೆಲ್ ಬಳಕೆದಾರರು ಈ ಹೊಸ ಪ್ಲಾನ್ ಅನ್ನು ರಿಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಪ್ರತಿ ನಿತ್ಯ 2GB ಡೇಟಾವನ್ನು ಬಳಕೆದಾರರಿಗೆ ನೀಡಲಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದ ಡೇಟಾ ಅವಶ್ಯವಿರುವವರು ಸುಲಭವಾಗಿ ಏರ್‌ಟೆಲ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ ಮತ್ತು ಈ ಪ್ಲಾನಿನ ಲಾಭವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿತ್ಯ 3GB ಡೇಟಾ:

ನಿತ್ಯ 3GB ಡೇಟಾ:

ಇದಲ್ಲದೇ ರೂ.349ರ ಪ್ಲಾನ್ ಸಹ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದರಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ ಏರ್‌ಟೆಲ್ 3GB ಡೇಟಾವನ್ನು ನೀಡಲಿದೆ ಎನ್ನಲಾಗಿದೆ. ಮೊದಲು ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 2.5GB ಡೇಟಾವನ್ನು ನೀಡುತಿತ್ತು. ಅದನ್ನು ಬದಲಾಯಿಸಿ ಹೆಚ್ಚಿನ ಲಾಭವನ್ನು ಮಾಡಿಕೊಟ್ಟಿದೆ. ಜಿಯೋ ಸಹ ಮಾರುಕಟ್ಟೆಯಲ್ಲಿ ಇದೇ ಮಾದರಿಯ ಆಫರ್ ಗಳನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಹೆಚ್ಚಿನ ಬಳಕೆದಾರರು ಆಕರ್ಷಿತರಾಗುತ್ತಿದ್ದು, ಇದಕ್ಕಾಗಿ ಏರ್‌ಟೆಲ್‌ ಹೆಚ್ಚಿನ ಡೇಟಾ ಆಫರ್ ಗಳನ್ನು ಲಾಂಚ್ ಮಾಡುತ್ತಿದೆ ಎನ್ನಲಾಗಿದೆ.

ರೂ. 249 ಪ್ಲಾನ್:

ರೂ. 249 ಪ್ಲಾನ್:

ರೂ. 249 ಪ್ಲಾನ್‌ನಲ್ಲಿ ಬಳಕೆದಾರರಿಗೆ ನಿತ್ಯ 2GB ಡೇಟಾವನ್ನು ನೀಡುವುದು ಮಾತ್ರವಲ್ಲದೇ 28 ದಿನಗಳ ವ್ಯಾಲಿಡಿಟಿಯಲ್ಲಿ ಉಚಿತವಾಗಿ ಅನ್‌ಲಿಮಿಟೆಡ್ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಲ್ಲದೇ ಉಚಿತವಾಗಿ ರೋಮಿಂಗ್ ಕರೆಗಳನ್ನು ಬಳಕೆದಾರರು ಮಾಡಬಹುದಾಗಿದೆ. ಜೊತೆಗೆ ನಿತ್ಯ 100 SMSಗಳನ್ನು ಉಚಿತವಾಗಿ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ.

ರೂ.499 ಪ್ಲಾನ್:

ರೂ.499 ಪ್ಲಾನ್:

ಇದೇ ಮಾದರಿಯಲ್ಲಿ ರೂ.499 ಪ್ಲಾನ್‌ವೊಂದನ್ನು ಬಳಕೆದಾರರಿಗೆ ನೀಡಿದ್ದು, ಇದರಲ್ಲಿ ನಿತ್ಯ 2GB ಡೇಟಾ ಬಳಕೆಗೆ ದೊರೆಯಲಿದ್ದು, 82 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿಯೂ ಉಚಿತವಾಗಿ ಅನ್‌ಲಿಮಿಟೆಡ್ ಕರೆಗಳನ್ನು ಮಾಡುವ ಅವಕಾಶದೊಂದಿಗೆ ಉಚಿತವಾಗಿ ರೋಮಿಂಗ್ ಕರೆಗಳನ್ನು ಮಾಡುವ ಅವಕಾಶವು ಬಳಕೆದಾರರಿಗೆ ದೊರೆಯಲಿದ.ಎ ನಿತ್ಯ 100 SMSಗಳನ್ನು ಉಚಿತವಾಗಿ ಕಳುಹಿಸಬಹುದಾಗಿದೆ.

ಏರ್‌ಟೆಲ್ ಅಬ್ಬರ:

ಏರ್‌ಟೆಲ್ ಅಬ್ಬರ:

ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಜಿಯೋ ಆಫರ್ ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸ್ಪರ್ಧೆಯನ್ನು ನೀಡಲು ಮುಂದಾಗಿರುವ ಏರ್‌ಟೆಲ್, ಬಳಕೆದಾರರಿಗೆ ಹೆಚ್ಚಿನ ಪ್ರಮಾಣದ ಲಾಭವನ್ನು ಅತೀ ಕಡಿಮೆ ಬೆಲೆಗೆ ಮಾಡಿಕೊಡುತ್ತಿದೆ. ಇದರಿಂದಾಗಿ ಹೆಚ್ಚಿನ ಲಾಭ ಪಡೆದ ಗ್ರಾಹಕರು ಏರ್‌ಟೆಲ್‌ನಲ್ಲಿಯೇ ಉಳಿಯಬಹುದು ಮತ್ತು ಹಿಂತಿರುಗಿ ಬರಬಹುದು ಎಂಬುದು ಯೋಜನೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Bharti Airtel Unveils Rs 249 Prepaid Plan With 2GB Data Per Day. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot