10 ಗಂಟೆಗಳಲ್ಲಿ 1 ಮಿಲಿಯನ್ ಉತ್ಪನ್ನ ಮಾರಾಟ ಮಾಡಿದ ಫ್ಲಿಪ್‌ಕಾರ್ಟ್

By Shwetha
|

ಹಬ್ಬದ ಸಂಭ್ರಮವನ್ನು ಹೆಚ್ಚಿಸಲೆಂದೇ ರೀಟೈಲ್ ತಾಣಗಳು ಬಿಗ್ ಬಿಲಿಯನ್ ಡೇ ಅಂತಹ ಆಫರ್‌ಗಳನ್ನು ಬಳಕೆದಾರರ ಮುಂದಿಟ್ಟಿದ್ದು ಆಕರ್ಷಕ ರಿಯಾಯಿತಿ ದರಗಳನ್ನು ಉತ್ಪನ್ನಗಳಿಗೆ ವಿಧಿಸುವುದರ ಮೂಲಕ ಬಳಕೆದಾರರಿಗೆ ಲಾಭವನ್ನುಂಟು ಮಾಡುವ ಅದ್ಭುತ ಯೋಜನೆಗೆ ಇ ಕಾಮರ್ಸ್ ತಾಣ ಕೈಹಾಕಿದೆ.

ಓದಿರಿ: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಒಳಗುಟ್ಟೇನು?

ಅದರ ಫಲವೆಂಬಂತೆ ಫ್ಲಿಪ್‌ಕಾರ್ಟ್ ಬರೇ 10 ಗಂಟೆಗಳಲ್ಲಿ 10 ಲಕ್ಷ ಉತ್ಪನ್ನಗಳನ್ನು ಮಾರಾಟ ಮಾಡಿದೆಯಂತೆ. ಈ ಕುರಿತು ಮಾಹಿತಿ ಕೆಳಗಿನ ಸ್ಲೈಡರ್‌ಗಳಲ್ಲಿ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಫೆಸ್ಟೀವ್ ಸೇಲ್‌

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಫೆಸ್ಟೀವ್ ಸೇಲ್‌

ಇ ಕಾಮರ್ಸ್ ಮಾರ್ಕೆಟ್ ಪ್ಲೇಸ್ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಫೆಸ್ಟೀವ್ ಸೇಲ್‌ನ ಮೊದಲ 10 ಗಂಟೆಗಳಲ್ಲಿ 10 ಲಕ್ಷ ಉತ್ಪನ್ನಗಳನ್ನು ಮಾರಾಟ ಮಾಡಿರುವುದಾಗಿ ಹೇಳಿಕೊಂಡಿದೆ.

ಸೆಕೆಂಡ್‌ಗೆ 25 ಐಟಮ್‌

ಸೆಕೆಂಡ್‌ಗೆ 25 ಐಟಮ್‌

ದೇಶಾದ್ಯಂತ ಆರು ಮಿಲಿಯನ್ ಭೇಟಿಗಳೊಂದಿಗೆ ಸೆಕೆಂಡ್‌ಗೆ 25 ಐಟಮ್‌ಗಳನ್ನು ಇದು ಮಾರಾಟ ಮಾಡಿದೆ.

ಪ್ರಮುಖ ನಗರ

ಪ್ರಮುಖ ನಗರ

ಬೆಂಗಳೂರು, ದೆಹಲಿ ಮತ್ತು ಚೆನ್ನೈ ಮೆಟ್ರೋ ನಗರಗಳ ಸ್ಥಾನದಲ್ಲಿ ಸೈಟ್‌ಗೆ ಭೇಟಿ ಮಾಡಿದವುಗಳಲ್ಲಿ ಪ್ರಮುಖ ಸ್ಥಾನದಲ್ಲಿದ್ದು, ನಾನ್ ಮೆಟ್ರೊ ನಗರಗಳೆಂಬ ಹಣೆಪಟ್ಟಿಯನ್ನು ಹೊತ್ತುಕೊಂಡ ಲಕ್ನೌ, ಲುಧಿಯಾನಾ ಮತ್ತು ಭೋಪಾಲ್ ಸೈಟ್‌ಗೆ ಭೇಟಿಕೊಟ್ಟ ಪ್ರಮುಖ ನಗರಗಳಾಗಿವೆ.

ಪುರುಷರ ಉತ್ಪನ್ನಗಳು

ಪುರುಷರ ಉತ್ಪನ್ನಗಳು

ಚಪ್ಪಲಿ, ಪುರುಷರ ಧಿರಿಸುಗಳು ಮತ್ತು ಆಕ್ಸೆಸರೀಸ್‌ಗಳು ಪ್ರಮುಖ ಮಾರಾಟ ಕ್ಯಾಟಗರಿಯಲ್ಲಿದ್ದು ಪುರುಷರ ಉತ್ಪನ್ನಗಳು ಭಾರೀ ಮೊತ್ತದಲ್ಲಿ ಮಾರಾಟವಾಗುತ್ತಿದೆ ಎಂದು ಕಂಪೆನಿ ತಿಳಿಸಿದೆ.

1 ಮಿಲಿಯನ್ ಯೂನಿಟ್‌ಗಳ ಮಾರಾಟ

1 ಮಿಲಿಯನ್ ಯೂನಿಟ್‌ಗಳ ಮಾರಾಟ

ಈಗಾಗಲೇ 1 ಮಿಲಿಯನ್ ಯೂನಿಟ್‌ಗಳ ಮಾರಾಟವನ್ನು ನಾವು ಮಾಡಿದ್ದು ಇಂದಿನ ಫ್ಯಾಶನ್ ಮಾರಾಟದ ಅಂತ್ಯದಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯನ್ನು ಎದುರು ನೋಡುತ್ತಿದ್ದೇವೆ.

1.6 ಮಿಲಿಯನ್ ಅಪ್ಲಿಕೇಶನ್ ಇನ್‌ಸ್ಟಾಲ್‌

1.6 ಮಿಲಿಯನ್ ಅಪ್ಲಿಕೇಶನ್ ಇನ್‌ಸ್ಟಾಲ್‌

ಎರಡು ದಿನಗಳಲ್ಲಿ 1.6 ಮಿಲಿಯನ್ ಅಪ್ಲಿಕೇಶನ್ ಇನ್‌ಸ್ಟಾಲ್‌ಗಳನ್ನು ನಾವು ಹೊಂದಿದ್ದೇವೆ ಎಂದು ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನ ಮುಖ್ಯಸ್ಥರಾದ ಮುಕೇಶ್ ಬನ್ಸಾಲ್ ತಿಳಿಸಿದ್ದಾರೆ.

30 ಮಿಲಿಯನ್‌ಗಿಂತಲೂ ಅಧಿಕ ಉತ್ಪನ್ನ

30 ಮಿಲಿಯನ್‌ಗಿಂತಲೂ ಅಧಿಕ ಉತ್ಪನ್ನ

70 ಕ್ಕಿಂತ ಹೆಚ್ಚಿನ ವರ್ಗಗಳಲ್ಲಿ 30 ಮಿಲಿಯನ್‌ಗಿಂತಲೂ ಅಧಿಕ ಉತ್ಪನ್ನಗಳನ್ನು ಫ್ಲಿಪ್‌ಕಾರ್ಟ್ ಒದಗಿಸುತ್ತಿದ್ದು ಪುಸ್ತಕ, ಮೀಡಿಯಾ, ಗ್ರಾಹಕ ಇಲೆಕ್ಟ್ರಾನಿಕ್ಸ್ ಮತ್ತು ಲೈಫ್‌ಸ್ಟೈಲ್ ಅನ್ನು ಇದು ಒಳಗೊಂಡಿದೆ.

8 ಮಿಲಿಯನ್ ಶಿಪ್‌ಮೆಂಟ್‌ಗಳ ಡೆಲಿವರಿ

8 ಮಿಲಿಯನ್ ಶಿಪ್‌ಮೆಂಟ್‌ಗಳ ಡೆಲಿವರಿ

ಕಂಪೆನಿಯ ಪ್ರಸ್ತುತ ಉದ್ಯೋಗಿಗಳು 33,000 ಜನರಾಗಿದ್ದು, 50 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಇದು ಹೊಂದಿದೆ ನಿತ್ಯವೂ 10 ಮಿಲಿಯನ್ ಭೇಟಿಗಳನ್ನು ಇದು ಹೊಂದಿದ್ದು ತಿಂಗಳಲ್ಲಿ 8 ಮಿಲಿಯನ್ ಶಿಪ್‌ಮೆಂಟ್‌ಗಳ ಡೆಲಿವರಿಯನ್ನು ಇದು ಸಕ್ರಿಯಗೊಳಿಸುತ್ತದೆ.

Best Mobiles in India

English summary
E-commerce marketplace Flipkart has said that it sold 10 lakh products in the first 10 hours of the Big Billion Days festive sale, with 6 million visits from across the nation and 25 items sold per second.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X