Just In
Don't Miss
- News
ಕೇಂದ್ರ ಬಜೆಟ್: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಜೆಟ್ ಬಗ್ಗೆ ಭಾರೀ ಮೆಚ್ಚುಗೆ!
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Movies
'ಕಬ್ಜ', 'ಕೆಜಿಎಫ್' ಅಂಥಹಾ ಸಿನಿಮಾ ಮಾಡಲು ತಾಕತ್ ಇರಬೇಕು: ಆರ್ ಚಂದ್ರು
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವವರಿಗೆ ಅಮೆಜಾನ್‌ನಲ್ಲಿ ಸಿಗಲಿದೆ ಬಿಗ್ ಆಫರ್!
ಇ-ಕಾಮರ್ಸ್ ದೈತ್ಯ ತನ್ನ ಗ್ರಾಹಕರಿಗಾಗಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಅಯೋಜಿಸಲು ಸಿದ್ಧತೆ ನಡೆಸಿದೆ. ಈ ಸೇಲ್ ಇದೇ ಸೆಪ್ಟೆಂಬರ್ 23ರಿಂದ ಪ್ರಾರಂಭವಾಗಲಿದ್ದು, ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಇನ್ನು ಈ ಸೇಲ್ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ನಡೆಯಲಿದೆ ಈ ಸಮಯದಲ್ಲಿ ಗ್ರಾಹಕರು ಹಲವು ಪ್ರಾಡಕ್ಟ್‌ಗಳ ಮೇಲೆ ಬಿಗ್ ಡಿಸ್ಕೌಂಟ್ ಪಡೆದುಕೊಳ್ಳಲಿದ್ದಾರೆ. ಈಗಾಗಲೇ ಅಮೆಜಾನ್ ತನ್ನ ಸೇಲ್‌ನಲ್ಲಿ ಯಾವೆಲ್ಲಾ ಪ್ರಾಡಕ್ಟ್‌ಗಳಿಗೆ ಡಿಸ್ಕೌಂಟ್ ದೊರೆಯಲಿದೆ ಅನ್ನೊದನ್ನ ರಿವೀಲ್ ಮಾಡುತ್ತಾ ಬಂದಿದೆ.

ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಈ ಭಾರಿ ಭರ್ಜರಿ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಗ್ರಾಹಕರು ವಿಶೇಷ ರಿಯಾಯಿತಿಯನ್ನು ಪಡೆಯಲಿದ್ದಾರೆ. ಅದರಂತೆ ಅಮೆಜಾನ್ ಕೂಡ ಸೇಲ್ ಶುರುವಾಗುವ ಮುನ್ನವೇ ಗ್ರಾಹಕರಿಗೆ ಕೆಲವು ಸ್ಮಾರ್ಟ್‌ಫೋನ್ ಡೀಲ್‌ಗಳನ್ನು ಬಹಿರಂಗಪಡಿಸಿದೆ. ಹಾಗಾದ್ರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ನೀವು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್ 12
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಟೀಸರ್ ಪ್ರಕಾರ ಐಫೋನ್ 12 40,000ರೂ. ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಸದ್ಯ ಇದರ ನಿಖರವಾದ ಬೆಲೆ ವಿವರಗಳು ಬಹಿರಂಗವಾಗಿಲ್ಲ ವಾದರೂ 40,000ರೂ. ಗಿಂತ ಕಡಿಮೆ ಇರಲಿದೆ ಅನ್ನೊದು ಪಕ್ಕಾ ಆಗಿದೆ. ಇನ್ನು ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್ ಆಂಗಲ್ ಸೆನ್ಸಾರ್‌ಗಳನ್ನು ಹೊಂದಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S22 5G
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 5G ಫೋನ್ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ 52,999ರೂ.ಬೆಲೆಗೆ ಲಭ್ಯವಾಗಲಿದೆ ಎಂದು ಬಹಿರಂಗವಾಗಿದೆ. ಇದರಲ್ಲಿ ಬ್ಯಾಂಕ್ ಆಫರ್‌ಗಳು ಕೂಡ ಸೇರಿರುವ ಸಾಧ್ಯತೆಯಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.1 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ ಕೋರ್ 4nm SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಜೊತೆಗೆ 3,700mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G
ಅಮೆಜಾನ್ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್ 11,999 ರೂ.ಗಳಿಗೆ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ HD+ ಇನ್ಫಿನಿಟಿ V ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ-ಕೋರ್ 5nm ಎಕ್ಸಿನೋಸ್ ಪ್ರೊಸೆಸರ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M53 5G
ಸ್ಯಾಮ್‌ಸಂಗ್ ಗ್ಯಾಲಕ್ಸಿ M53 5G ಸ್ಮಾರ್ಟ್‌ಫೋನ್ 32,999ರೂ. ಬದಲಿಗೆ 19,999ರೂ. ಬೆಲೆಯಲ್ಲಿ ಸೇಲ್ ಆಗಲಿದೆ ಎಂದು ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್ 6.7-ಇಂಚಿನ ಫುಲ್ HD+ ಇನ್ಫಿನಿಟಿ ಒ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ f/1.8 ಅಪರ್ಚರ್ ಲೆನ್ಸ್ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಐಕ್ಯೂ Z6 ಪ್ರೊ 5G
ಐಕ್ಯೂ Z6 ಪ್ರೊ 5G ಸ್ಮಾರ್ಟ್‌ಫೋನ್ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ 17,990ರೂ. ಬೆಲೆಯಲ್ಲಿ ಮಾರಾಟಕ್ಕೆ ಬರಲಿದೆ. ಈ ಸ್ಮಾರ್ಟ್‌ಫೋನ್ 6.44 ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಕೂಡ ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 66W ಫ್ಲ್ಯಾಶ್‌ಚಾರ್ಜ್ ಬೆಂಬಲಿಸಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470