2013 ರೌಂಡಪ್‌:ಟೆಕ್‌ ಜಗತ್ತಿನಲ್ಲಿ ಹೆಚ್ಚು ಸುದ್ದಿಯಾದ ಸುದ್ದಿಗಳು

Posted By:

ಈ ವರ್ಷ‌ ವಿಜ್ಞಾನ, ತಂತ್ರಜ್ಞಾನ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ನಡೆದಿದೆ. 2013 ಕೆಲವೊಂದು ಕಂಪೆನಿಗಳಿಗೆ ಲಾಭವಾಗಿದ್ದರೆ, ಕೆಲವೊಂದು ಕಂಪೆನಿಗಳು ನಷ್ಟ ಅನುಭವಿಸಿದೆ.ಟೆಕ್‌ ಜಗತ್ತಿನ ಸ್ಪೋಟಕ ಸುದ್ದಿಗಳು ಪ್ರಕಟಗೊಂಡ ವರ್ಷವು ಹೌದು. ಅಷ್ಟೇ ಅಲ್ಲದೇ ಈ ವರ್ಷ‌ದಿಂದ ಹೊಸ ಗ್ಯಾಜೆಟ್‌ಗಳ ಪರ್ವ ಆರಂಭಗೊಂಡಿದೆ.


ಹೀಗಾಗಿ ಇಲ್ಲಿ ಈ ವರ್ಷ ಟೆಕ್‌ ಜಗತ್ತಿನಲ್ಲಿ ಹೆಚ್ಚು ಸುದ್ದಿಯಾದ ಕೆಲವು ಸುದ್ದಿಗಳನ್ನು ಇಲ್ಲಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಮೈಕ್ರೋಸಾಫ್ಟ್‌ ನೋಕಿಯಾ ಡೀಲ್‌

2013 ರೌಂಡಪ್‌:ಟೆಕ್‌ ಜಗತ್ತಿನಲ್ಲಿ ಹೆಚ್ಚು ಸುದ್ದಿಯಾದ ಸುದ್ದಿಗಳು

ವಿಶ್ವದ ಮೊಬೈಲ್‌ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್‌ ಸಾಧನಗಳ ಮುಂದೆ ಬೇಡಿಕೆ ಕುಸಿದಿರುವ ನೋಕಿಯಾ ಕಂಪೆನಿಗೆ ಪುನಶ್ಚೇತನ ನೀಡಲು ಮೈಕ್ರೋಸಾಫ್ಟ್‌‌ ಮುಂದಾಗಿದ್ದು, ನೋಕಿಯಾ ಕಂಪೆನಿಯನ್ನು 5.44 ಶತಕೋಟಿ ಯುರೋ ನೀಡಿ ಸೆಪ್ಟೆಂಬರ್‌‌ನಲ್ಲಿ ಖರೀದಿಸಿತ್ತು.

 ಬ್ಲ್ಯಾಕ್‌ಬೆರಿ ಮಾರುಕಟ್ಟೆ ಕುಸಿತ:

2013 ರೌಂಡಪ್‌:ಟೆಕ್‌ ಜಗತ್ತಿನಲ್ಲಿ ಹೆಚ್ಚು ಸುದ್ದಿಯಾದ ಸುದ್ದಿಗಳು


ಬ್ಲ್ಯಾಕ್‌ಬೆರಿ ಮೊಬೈಲ್‌ ಮಾರುಕಟ್ಟೆ ತೀವ್ರ ಕುಸಿತಗೊಂಡ ಪರಿಣಾಮವಾಗಿ 4.7 ಶತಕೋಟಿ ಡಾಲರ್‌(ಅಂದಾಜು 29 ಸಾವಿರ ಕೋಟಿ ರೂ)ಮೊತ್ತಕ್ಕೆ ಫೇರ್‌ಫ್ಯಾಕ್ಸ್‌ ಹೋಲ್ಡಿಂಗ್ಸ್‌ ಲಿ. ಸಂಸ್ಥೆಗೆ ಮಾರಾಟವಾಗಿದೆ.ಭಾರತೀಯ ಮೂಲದ ಪ್ರೇಮ್‌ ವಾಟ್ಸಾ ಸಿಇಒ ಆಗಿರುವ ಕೆನಡಾ ಮೂಲದ ಕಂಪನಿ ಫೇರ್‌ಫ್ಯಾಕ್ಸ್‌ (Fairfax) ಬ್ಲ್ಯಾಕ್‌ಬೆರಿಯಲ್ಲಿ ಮುಖ್ಯ ಷೇರುದಾರ ಕಂಪನಿಯಾಗಿದ್ದು, ಬ್ಲ್ಯಾಕ್‌ಬೆರಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಕಂಪೆನಿ ಎಂದು ಹೇಳುತ್ತಿದ್ದ ಪ್ರೇಮ್‌ ವಾಟ್ಸಾ ಈಗ ಫೇರ್‌ಫ್ಯಾಕ್ಸ್‌ ನೇತೃತ್ವದಲ್ಲಿ ಹೂಡಿಕೆದಾರರ ಒಕ್ಕೂಟವನ್ನು ರಚಿಸಿಕೊಂಡು ಅದರ ಮೂಲಕ ಬ್ಲಾಕ್‌ಬೆರಿ ಕಂಪೆನಿಯನ್ನು ಖರೀದಿಸಿದ್ದಾರೆ.

 ಮೈಕ್ರೋಸಾಫ್ಟ್‌‌‌ನಿಂದ ಸ್ವೀವ್‌ ಬಾಲ್ಮರ್‌ ನಿವೃತ್ತಿ:

2013 ರೌಂಡಪ್‌:ಟೆಕ್‌ ಜಗತ್ತಿನಲ್ಲಿ ಹೆಚ್ಚು ಸುದ್ದಿಯಾದ ಸುದ್ದಿಗಳು


ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ 2000ರ ಜನವರಿಯಲ್ಲಿ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯಿಂದ ಕೆಳಗಿಳಿದು, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಿಲ್‌ ಗೇಟ್ಸ್‌ ನಂತರ ಮೈಕ್ರೋಸಾಫ್ಟ್‌ ಕಾರ್ಯ‌ನಿರ್ವ‌ಹಣಾಧಿಕಾರಿ ಪಟ್ಟ ಸ್ಟೀವ್‌ ಬಾಲ್ಮರ್‌ಗೆ ಲಭಿಸಿತ್ತು. ಬಿಲ್‌ ಗೇಟ್ಸ್‌ ಹೊರನಡೆದಾಗ ಮೈಕ್ರೋಸಾಫ್ಟ್‌ ಕಂಪನಿ 38 ಲಕ್ಷ ಕೋಟಿ ರೂ.ನಷ್ಟು ಮಾರುಕಟ್ಟೆ ಮೌಲ್ಯ ಹೊಂದಿತ್ತು. ಆದರೆ ಕಳೆದ 13 ವರ್ಷಗಳಲ್ಲಿ ಕಂಪನಿಯ ಮೌಲ್ಯ 17 ಲಕ್ಷ ಕೋಟಿ ರೂ.ಗೆ ಇಳಿದ ಪರಿಣಾಮವಾಗಿ ಸ್ವೀವ್‌ ಬಾಲ್ಮರ್‌ ಅಗಸ್ಟ್‌ನಲ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು.

ಮೈಕ್ರೋಸಾಫ್ಟ್‌‌ನ ಸಿಇಒ ಸ್ವೀವ್‌ ಬಾಲ್ಮರ್‌‌ ನಿವೃತ್ತಿ ಹಿನ್ನೆಲೆಯಲ್ಲಿ,ಈ ಹುದ್ದೆಗೆ ಮೈಕ್ರೋಸಾಫ್ಟ್‌‌ ಶೋಧ ನಡೆಸುತ್ತಿದ್ದು ಭಾರತೀಯ ಮೂಲದ ಸತ್ಯ ನಾಡೆಲ್ಲಾ ಮತ್ತು ಫೋರ್ಡ್ ಮೋಟಾರ್ಸ್‌‌ನ ಅಲನ್‌ ಮುಲಲೆ(Alan Mulally)ಹೆಸರುಗಳು ಮುಂಚೂಣಿಯಲ್ಲಿದೆ.

 ಅಮೆರಿಕದ ಸೈಬರ್‌ ಪತ್ತೆದಾರಿಕೆ

2013 ರೌಂಡಪ್‌:ಟೆಕ್‌ ಜಗತ್ತಿನಲ್ಲಿ ಹೆಚ್ಚು ಸುದ್ದಿಯಾದ ಸುದ್ದಿಗಳು


ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್ಎಸ್ಎ ) ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್ ಅಮೆರಿಕ, ಭಾರತ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳ ಮಾಹಿತಿಯನ್ನು ಕದಿಯುತ್ತಿದೆ ಎಂದು ಆಧಾರ ಸಮೇತ ಬಹಿರಂಗ ಪಡಿಸಿದ್ದ.

ಬ್ರಿಟನಿನ ಗಾರ್ಡಿ‌ಯನ್‌ ಮತ್ತು ವಾಷಿಂಗ್ಟನ್‌ ಪೋಸ್ಟ್‌ ಜೂ.5ರಿಂದ ಆರಂಭಗೊಂಡು ಜೂ.25ರವರೆಗೆ ಸ್ನೊಡೆನ್‌ ತಿಳಿಸಿದ ಮಾಹಿತಿಯನ್ನು ಪ್ರಕಟಿಸಿತ್ತು.ಯಾಹೂ, ಗೂಗಲ್‌, ಮೈಕ್ರೋಸಾಫ್ಟ್,ಫೇಸ್‌ಬುಕ್‌, ಟ್ವೀಟರ್‌‌ ಸ್ಕೈಪ್‌, ಯೂಟ್ಯೂಬ್‌ ಯಾವುದೂ ಸುರಕ್ಷಿತವಲ್ಲ. ಇಂಟರ್‌ನೆಟ್‌ನಲ್ಲಿ ತಮ್ಮ ಖಾಸಗಿ ಮಾಹಿತಿ ಸುರಕ್ಷಿತ ಎಂದು ಹೇಳಿಕೊಂಡಿದ್ದರೆ ಅದಕ್ಕಿಂತ ದೊಡ್ಡ ತಪ್ಪು ಕಲ್ಪನೆ ಬೇರೆ ಇಲ್ಲ ಎಂದು ಸ್ನೋಡೆನ್‌ ಹೇಳುವ ಮೂಲಕ ವಿಶ್ವದ ಮುಂದೆ ಅಮೆರಿಕವನ್ನು ಬೆತ್ತಲಾಗಿಸಿದ್ದ.

ಸ್ನೋಡೆನ್‌ ಈ ಸುದ್ದಿಯನ್ನು ಬಹಿರಂಗ ಪಡಿಸಿದ ಬಳಿಕ ಎಚ್ಚೆತ್ತ ಭಾರತ ಸರ್ಕಾರ ಅಮೆರಿಕದ ಸೈಬರ್‌ ಪತ್ತೆದಾರಿಕೆಗೆ ತುತ್ತಾಗದಂತೆ ತನ್ನೆಲ್ಲಾ ಸರ್ಕಾರಿ ನೌಕರರಿಗೆ ಜಿ ಮೇಲ್‌ನಂತಹ ಇಮೇಲ್‌ ಬಳಕೆಯ ಮೇಲೆ ನಿಷೇಧ ಹೇರಿದೆ.ಅಮೆರಿಕದಲ್ಲಿ ಸರ್ವರ್‌ ಹೊಂದಿರುವ ಕಂಪೆನಿಗಳ ಇಮೇಲ್‌‌ ಬದಲಾಗಿ ಸರ್ಕಾರದ್ದೇ ಆದ ಎನ್‌ಐಸಿ(National Informatics Centre)ಸಿದ್ದ ಪಡಿಸಿರುವ ಇಮೇಲ್‌ ಖಾತೆಗಳ ಮೂಲಕ ಸಂವಹನ ನಡಸುವುದು ಕಡ್ಡಾಯಮಾಡಿದೆ.

 ಆಪಲ್‌ನಿಂದ ಎರಡು ಐಫೋನ್‌.

2013 ರೌಂಡಪ್‌:ಟೆಕ್‌ ಜಗತ್ತಿನಲ್ಲಿ ಹೆಚ್ಚು ಸುದ್ದಿಯಾದ ಸುದ್ದಿಗಳು


ದುಬಾರಿ ಬೆಲೆಯ ಐಫೋನ್‌ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದ ಆಪಲ್‌ ಈ ವರ್ಷ ಭಾರತ ಸೇರಿದಂತೆ ಏಷ್ಯಾ ಆಫ್ರಿಕಾದಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್‌‌ಫೋನ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಐಫೋನ್‌ 5ಸಿಯನ್ನು ಬಿಡುಗಡೆ ಮಾಡಿತ್ತು.ಆದರೆ ಆಪಲ್‌ ಮಾರುಕಟ್ಟೆ ತಂತ್ರ ಐಫೋನ್‌ 5ಸಿ ಮಾರಾಟದಲ್ಲಿ ಯಶಸ್ವಿಯಾಗದ ಕಾರಣ ಉತ್ಪಾದನೆ ನಿಲ್ಲಿಸಿತ್ತು.

ಆದರೆ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‍ ತಂತ್ರಜ್ಞಾನದಲ್ಲಿ ಬಿಡುಗಡೆಯಾದ ದುಬಾರಿ ಬೆಲೆಯ ಐಫೋನ್‌ 5 ಎಸ್‌ ಮಾರುಕಟ್ಟೆಯಲ್ಲಿ ಕ್ಲಿಕ್‌ ಆಗಿದ್ದು, ಖರೀದಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ.

 ಟ್ವೀಟರ್‌ ಅಮೆರಿಕನ್‌ ಷೇರು ಪೇಟೆಗೆ ಎಂಟ್ರಿ:

2013 ರೌಂಡಪ್‌:ಟೆಕ್‌ ಜಗತ್ತಿನಲ್ಲಿ ಹೆಚ್ಚು ಸುದ್ದಿಯಾದ ಸುದ್ದಿಗಳು


ಮೈಕ್ರೋಬ್ಲಾಗಿಂಗ್ ತಾಣಗಳಲ್ಲೇ ಅತ್ಯಂತ ಜನಪ್ರಿಯವಾದ ತಾಣ ಟ್ವೀಟರ್‌ ಈ ವರ್ಷ‌ ಅಮೆರಿಕ ಷೇರುಪೇಟೆಗೆ ಪ್ರವೇಶಿಸಿದೆ. ಷೇರುಪೇಟೆಯಲ್ಲಿ ಮೊದಲ ದಿನವೇ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುವ ಹೂಡಿಕೆದಾರರಿಗೆ ಭರ್ಜರಿ ಲಾಭವನ್ನು ನೀಡಿತ್ತು. ಭಾರತೀಯ ಮೂಲದ ಹೂಡಿಕೆದಾರ ಸುಹೇಲ್‌ ರಿಜ್ವಿ(Suhail Rizvi) ಒಂದೇ ದಿನದಲ್ಲಿ 3.8 ಬಿಲಿಯನ್‌ ಡಾಲರ್‌(ಅಂದಾಜು 23,500 ಕೋಟಿ)ಗಳಿಸುವ ಮೂಲಕ ಈ ವರ್ಷ ಟ್ವೀಟರ್‌ ಬಿಲಿಯನೇರ್‌‌ ಆಗಿದ್ದರು.2011ರಿಂದಲೇ ಹಂತಹಂತವಾಗಿ ಟ್ವೀಟರ್‌ನಲ್ಲಿ ಷೇರುಗಳನ್ನು ಖರೀದಿಸುತ್ತಿದ್ದ ಸುಹೇಲ್‌ ರಿಜ್ವಿ ಈಗ ಶೇ.15ರಷ್ಟು ಟ್ವೀಟರ್‌‌ ಷೇರು ಹೊಂದುವ ಮೂಲಕ ಟ್ವೀಟರ್‌ನ ದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ.

 ವೇರಬಲ್‌ ಗ್ಯಾಜೆಟ್‌‌ ವರ್ಷ‌:

2013 ರೌಂಡಪ್‌:ಟೆಕ್‌ ಜಗತ್ತಿನಲ್ಲಿ ಹೆಚ್ಚು ಸುದ್ದಿಯಾದ ಸುದ್ದಿಗಳು


ಈ ವರ್ಷದ ವೇರಬಲ್‌ ಗ್ಯಾಜೆಟ್‌‌ಗಳ ವರ್ಷವಾಗಿತ್ತು. ಗೂಗಲ್‌ ಗ್ಲಾಸ್‌‌ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆಯಾಗದಿದ್ದರೂ ಇದರ ವಿಶೇಷತೆ,ವಿವಾದಗಳು ವರ್ಷ‌ವಿಡಿ ಸುದ್ದಿಯಾಗಿತ್ತು.ನಂತರ ಸ್ಯಾಮ್‌ಸಂಗ್‌ ಗೆಲಾಕ್ಸಿ ಗೇರ್‌ ಹೆಸರಿನ ಸ್ಮಾರ್ಟ್‌ವಾಚ್‌‌ ಬಿಡುಗಡೆ ಮಾಡಿತ್ತು. ಆಪಲ್‌ ಮತ್ತು ನೋಕಿಯಾ ಕಂಪೆನಿಗಳು ವೇರಬಲ್‌ ಗ್ಯಾಜೆಟ್‌ಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು,2014ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

 ಯಾಹೂ ಅಡಳಿತದಲ್ಲಿ ಹೊಸ ಬದಲಾವಣೆ

2013 ರೌಂಡಪ್‌:ಟೆಕ್‌ ಜಗತ್ತಿನಲ್ಲಿ ಹೆಚ್ಚು ಸುದ್ದಿಯಾದ ಸುದ್ದಿಗಳು


ಯಾಹೂ ಸಿಇಒ ಆದ ಮೇಲೆ ಕಂಪೆನಿಯ ಅಡಳಿತದಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದರು. ಯಾಹೂವಿನ Work From Home ಎಂಬ ಸೌಲಭ್ಯಕ್ಕೆ ಮರಿಸ್ಸಾ ಕತ್ತರಿ ಹಾಕಿದ್ದು ಉದ್ಯೋಗಿಗಳ ವಿರೋಧಕ್ಕೆ ಕಾರಣವಾಗಿತ್ತು.ಇನ್ನೂ ಮೈಕ್ರೋಬ್ಲಾಗಿಂಗ್‌ ತಾಣ ಟಂಬ್ಲರ್‌ನ್ನು 1.1 ಶತಕೋಟಿ ಡಾಲರ್‌ ನೀಡಿ ಯಾಹೂ ಖರೀದಿಸಿತ್ತು. ‌ಅಷ್ಟೇ ಅಲ್ಲದೇ ಮೇಯರ್‌ ಅಣತಿಯಂತೆ ಯಾಹೂ ಸೆಪ್ಟೆಂಬರ್‌ನಲ್ಲಿ ತನ್ನ ಲೋಗೋವನ್ನು ಬದಲಾಯಿಸಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot