ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

By Ashwath
|

ಫೇಸ್‌ಬುಕ್‌ನಿಂದಾಗಿ ನಮ್ಮ ಸಂಬಂಧಗಳು ಹತ್ತಿರಗೊಳ್ಳುತ್ತಿದೆ. ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತ ವ್ಯಕ್ತಿಯನ್ನು ನಾವು ಫೇಸ್‌ಬುಕಿನಲ್ಲಿ ಹುಡುಕಬಹುದು. ಸಮಾನ ಮನಸ್ಕರ ಗುಂಪುಗಳನ್ನು ರಚಿಸಿಕೊಂಡು ಅಭಿಪ್ರಾಯಗಳನ್ನು ಹಂಚಬಹುದು. ಗೊತ್ತಿಲ್ಲದ ವಿಷಯಗಳನ್ನು ತಜ್ಞರ ಮೂಲಕ ಪಡೆಯಬಹುದು. ಒಟ್ಟಿನಲ್ಲಿ ಇಂದು ಫೇಸ್‌ಬುಕ್‌ ನಮ್ಮ ಜೀವನದಲ್ಲಿ ಭಾರೀ ಪ್ರಭಾವ ಬೀರುವ ಹೊಸ ಮಾಧ್ಯಮವಾಗಿ ರೂಪುಗೊಂಡಿದೆ.

ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿ ಬದಲಾಗುತ್ತಿರುವ ಈ ಫೇಸ್‌ಬುಕ್‌ನ್ನು ಎಷ್ಟು ಎಚ್ಚರದಿಂದ ಬಳಸುತ್ತೇವೋ ಅಷ್ಟು ಒಳ್ಳೆಯದು. ಹಾಗಾಗಿ ಫೇಸ್‌ಬುಕ್‌ ಬಳಸುವಾಗ ಯಾವ ರೀತಿ ಎಚ್ಚರದಲ್ಲಿರಬೇಕು ಎಂಬುದಕ್ಕೆ ಕೆಲವು ಮಾಹಿತಿಗಳು ಇಲ್ಲಿವೆ .ಒಂದೊಂದೆ ಪುಟ ತಿರುಗಿಸಿ ಓದಿಕೊಂಡು ಹೋಗಿ.

ಲಿಂಕ್‌ : ಫೇಸ್‌ಬುಕ್‌ನಿಂದ ಕಳ್ಳನ ಸೆರೆ

ಲಿಂಕ್‌ : ಬೆಂಗಳೂರು ಪೋಲಿಗಳು ಫೇಸ್‌ಬುಕ್‌ನಲ್ಲಿ ಸೆರೆ

ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

ಸೂಕ್ಷ್ಮ ವಿಷಯದ ಮೇಲೆ ಸಾರ್ವಜನಿಕ ಚರ್ಚೆ ನಡೆಯುತ್ತಿದ್ದರೆ, ಪ್ರಚೋದನಾಕಾರಿ ಕಾಮೆಂಟ್‌ಗಳನ್ನು Like ಮಾಡದಿರಿ. ಯಾಕೆಂದರೆ ಒಂದು ಕಾಮೆಂಟ್ ವ್ಯಕ್ತಿಯನ್ನು ಕಂಬಿ ಹಿಂದೆ ತಳ್ಳಬಹುದು. ಒಂದು ‘Like'ನಿಂದಾಗಿ ಪೊಲೀಸರು ನಿಮ್ಮ ಮನೆಗೆ ಬರಬಹುದು

ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

ಸ್ನೇಹಿತರಿಗೆ ಕಾಮೆಂಟ್ ಮಾಡುವಾಗ ಎಚ್ಚರವಿರಿ. ತೀರಾ ಸಲುಗೆಯ, ತುಂಟತನದ ಕಾಮೆಂಟ್ ಇಲ್ಲದಿದ್ದರೆ ಉತ್ತಮ. ಯಾಕೆಂದರೆ ಆ ಕಾಮೆಂಟನ್ನು ಸ್ನೇಹಿತರು ಮಾತ್ರ ನೋಡುವುದಿಲ್ಲ. ಬದಲು ಅಲ್ಲಿರುವ ಇಡೀ ನೆಟ್‌ವರ್ಕ್‌ ಜನರು ನೋಡುತ್ತಾರೆ. ಎಲ್ಲರಿಗೂ ನಿಮ್ಮ ವ್ಯಕ್ತಿತ್ವದ ದರ್ಶನವಾಗುತ್ತದೆ.

ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

ಜೋಕ್‌ಗಳನ್ನು ಪೋಸ್ಟ್ ಮಾಡುವಾಗ ಸ್ವಲ್ಪ ಆಲೋಚನೆ ಮಾಡಿ ಪೋಸ್ಟ್‌ ಮಾಡಿ. ತೀರಾ ಪೋಲಿ ಎಸ್‌ಎಂಎಸ್‌ಗಳನ್ನು ಪೋಸ್ಟ್ ಮಾಡಿ ನಿಮ್ಮ ಮಾನವನ್ನು ನೀವೇ ಹರಾಜು ಹಾಕಿಕೊಳ್ಳಬೇಡಿ.

ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

ಫೋಟೋಗಳನ್ನು ಶೇರ್‌ ಮಾಡುವಾಗ ಎಚ್ಚರವಿರಿ. ಫೋಟೋಗಳಿಗೂ ವ್ಯಕ್ತಿಗೂ ಸಂಬಂಧವಿಲ್ಲದಿದ್ದರೇ ಫೋಟೋವನ್ನು ಟ್ಯಾಗ್‌ ಮಾಡದಿರಿ. ಅನಗತ್ಯವಾಗಿ ಹೆಚ್ಚು ಹೆಚ್ಚು ಫೋಟೋ ಟ್ಯಾಗ್‌ ಮಾಡಿ ನಿಮ್ಮ ಸ್ನೇಹಿತರಿಂದಲೇ ಅನ್‌ಫ್ರೆಂಡ್‌ ಆಗದಿರಿ.

ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

ಯಾವುದೇ ಧರ್ಮ,ಜಾತಿಯ ವಿಷಯಗಳ ಬಗ್ಗೆ ತೆಗಳಿ,ಅವಮಾನಿಸುವ ಫೋಟೋ /ಕಮೆಂಟ್‌ ಹಾಕದಿರಿ.

ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

ಆಫೀಸ್‌ಗೆ ಸಂಬಂಧಿಸಿದ ಮಾಹಿತಿ, ವೈಯಕ್ತಿಕ ಜೀವನದ ಮಾಹಿತಿಗಳನ್ನು ಶೇರ್‌ ಮಾಡದಿರಿ.

ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ

ಒಬ್ಬ ವ್ಯಕ್ತಿಯ ಮನಸ್ಥಿತಿ, ಗುಣ, ವರ್ತನೆ, ಜ್ಞಾನ ಎಂಥದ್ದು ಎಂದು ನೋಡಲು ಅವರ ಫೇಸ್‌ಬುಕ್ ಅಕೌಂಟ್ ನೋಡಿದರೆ ಸಾಕು ಎನ್ನುವ ಅಭಿಪ್ರಾಯ ಈಗ ಚಾಲ್ತಿಯಲ್ಲಿದೆ. ಅಷ್ಟೇ ಅಲ್ಲದೇ ಇಂದಿನ ದಿನದಲ್ಲಿ ಹೊಸದಾಗಿ ಕೆಲಸ ಕೊಡುವವರು ಫೇಸ್‌ಬುಕ್‌ ಅಕೌಂಟ್‌ನ್ನು ನೋಡಿ ಕೆಲಸ ಕೊಡಬಹುದು. ಮದುವೆ ಸಂದರ್ಭದಲ್ಲಿ ಹುಡುಗ ಅಥವಾ ಹುಡುಗಿಯ ಮನೆಯವರು ಫೇಸ್‌ಬುಕ್‌ ನೋಡಿ ನಿರ್ಧಾರ ಕೈಗೊಳ್ಳಬಹುದು. ಹಾಗಾಗಿ ಫೇಸ್‌ಬುಕ್‌ನ್ನು ಬಳಸುವಾಗ ಸ್ವಲ್ಪ ಎಚ್ಚರದಿಂದ ಬಳಸಿ..

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X