'ಬಿಜೆಪಿ' ಗೆದ್ದ ನಂತರ ಗೂಗಲ್ ‘ಪಾರದರ್ಶಕ ವರದಿ’ ನೋಡಿ ಶಾಕ್ ಆಗಬೇಡಿ!

|

ಭಾರತದ ಚುನಾವಣಾ ಫಲಿತಾಂಶವು ಇನ್ನೇನು ಫೈನಲ್ ಹಂತದಲ್ಲಿರುವಾಗ ಗೂಗಲ್ ಬಿಡುಗಡೆ ಮಾಡಿರುವ 'ಪಾರದರ್ಶಕ ವರದಿ' ಕೂಡ ಗಮನಸೆಳೆದಿದೆ. ದೇಶದ ಗದ್ದುಗೆಯನ್ನು ಮತ್ತೆ ಏರಲು ಸಜ್ಜಾಗಿರುವ ಬಿಜೆಪಿಯಿಂದ ಹಿಡಿದು, ಗೆದ್ದೇ ಗೆಲ್ಲುವೆ ಎಂದು ಬೀಗಿ ಮಣ್ಣಿಗೆ ಬಿದ್ದಿರುವ ಕಾಂಗ್ರೆಸ್ ತನಕ ಭಾರತದ ರಾಜಕೀಯ ಪಕ್ಷಗಳು ಮತ್ತು ಅದರ ಅಂಗ ಸಂಸ್ಥೆಗಳು ಚುನಾವಣಾ ಪ್ರಚಾರಕ್ಕಾಗಿ ಖರ್ಚು ಮಾಡಿದ ಹಣ ಎಷ್ಟು ಎಂಬುದು ಪಕ್ಷಗಳ ಗೆಲುವಿನ ಮೇಲೂ ಪರಿಣಾಮ ಬೀರಿದೆ ಎಂದು ಹೇಳಬಹುದು.

ಹೌದು, ಕಳೆದ ಫೆಬ್ರುವರಿ 19ರಿಂದ ಈಚೆಗೆ ಗೂಗಲ್‌ನಲ್ಲಿ ಸರಿ ಸುಮಾರು 29 ಕೋಟಿ 30 ಲಕ್ಷದಷ್ಟು ಚುನಾವಣಾ ಜಾಹಿರಾತು ನೀಡಲಾಗಿದ್ದು, ಈಗ ಗೆದ್ದಿರುವ ಪಕ್ಷಗಳಿಗೂ ಹಾಗೂ ಆ ಪಕ್ಷಗಳು ಗೂಗಲ್‌ ಜಾಹಿರಾತುವಿಗಾಗಿ ವೆಚ್ಚ ಮಾಡಿರುವ ಹಣಕ್ಕೂ ತಾಳೆಹಾಕಿದರೆ ಫಲಿತಾಂಶ ಕೂಡ ಜಾಹಿರಾತುವಿನ ಆಧಾರದಲ್ಲೇ ಬಂದಂತೆ ಕಾಣುತ್ತಿದೆ. ಏಕೆಂದರೆ, ಗೂಗಲ್‌ ನೀಡಿರುವ 'ಪಾರದರ್ಶಕ ವರದಿ'ಯಲ್ಲಿ ಆಡಳಿತ ರೂಢ ಬಿಜೆಪಿಯೇ ಮೊದಲ ಸ್ಥಾನದಲ್ಲಿದ್ದರೆ, ಉಳಿದ ಫಲಿತಾಂಶಗಳು ಕೂಡ ಜಾಹಿರಾತು ಪಾತ್ರದಂತೆ ಕಾಣುತ್ತಿವೆ.

'ಬಿಜೆಪಿ' ಗೆದ್ದ ನಂತರ ಗೂಗಲ್ ‘ಪಾರದರ್ಶಕ ವರದಿ’ ನೋಡಿ ಶಾಕ್ ಆಗಬೇಡಿ!

₹ 183,183,000 ರಷ್ಟು ಖರ್ಚು ಮಾಡಿರುವ ಬಿಜೆಪಿ ದೇಶದಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದ್ದರೆ, ತಮಿಳುನಾಡಿನ ಪ್ರತಾದೇಶಿಕ ಪಕ್ಷವಾದ ದ್ರಾವಿಡ ಮುನ್ನೆತ್ರಾ ಕಳಗಂ ₹ 41,007,000 ಖರ್ಚು ಮಾಡಿ ಫಲಿತಾಂಶದಲ್ಲಿ ಮೂರನೇ ಸ್ಥಾನಕ್ಕೇರಿದೆ. ಇನ್ನು ಫಲಿತಾಂಶದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ₹ 30,459,250 ಖರ್ಚು ಮಾಡಿರುವುದನ್ನು ನೀವು ನೋಡಬಹುದು. ಹಾಗಾದರೆ, ಜಾಹಿರಾತಿಗಾಗಿ ಯಾವ ಯಾವ ರಾಜಕೀಯ ಪಕ್ಷಗಳು ಎಷ್ಟೆಷ್ಟು ಖರ್ಚು ಮಾಡಿವೆ ಎಂಬುದನ್ನು ನೋಡೋಣ ಬನ್ನಿ.

ಬಿಜೆಪಿ

ಬಿಜೆಪಿ

ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಭಾರಿಸಿರುವ ಭಾರತೀಯ ಜನತಾ ಪಾರ್ಟಿ ಚುನಾವಣೆಯ ಜಾಹಿರಾತಿಗಾಗಿ ಸುಮಾರು 183,183,000ರೂ.ಗಳನ್ನು ಖರ್ಚು ಮಾಡಿದೆ. ಬಿಜೆಪಿಯು ಚುನಾವಣೆಯ ಜಾಹಿರಾತಿಗಾಗಿ ಅತೀ ಹೆಚ್ಚು ಹಣ ಖರ್ಚು ಮಾಡಿದ ಪಕ್ಷಗಳಲ್ಲಿ ಮೊದಲ ಸ್ಥಾನದದ್ದು, ಹಾಗೆಯೇ ಲೋಕಸಭಾ ಫಲಿತಾಂಶದಲ್ಲೂ ಮೊದಲ ಸ್ಥಾನದಲ್ಲಿಯೇ ಇದೆ.

ಡಿಎಂಕೆ

ಡಿಎಂಕೆ

ತಮಿಳು ನಾಡಿನ ಪ್ರಾದೇಶಿಕ ರಾಜಕೀಯ ಪಕ್ಷ 'ದ್ರಾವಿಡ್‌ ಮುನೆತ್ರ ಕಳಗಮ್' ಸುಮಾರು 41,007,000ರೂ.ಗಳನ್ನು ಚುನಾವಣೆಯ ಜಾಹಿರಾತಿಗಾಗಿ ಖರ್ಚುಮಾಡಿ ಎರಡನೇ ಸ್ಥಾನದಲ್ಲಿದೆ. ಹಾಗೆಯೇ, ಲೋಕಸಭಾ ಚುನಾವಣೆಯ ಫಲಿತಾಂಶದಲ್ಲೂ ಮೂರನೇ ಸ್ಥಾನದಲ್ಲಿರುವ ದ್ರಾವಿಡ್‌ ಮುನೆತ್ರ ಕಳಗಮ್' ಬಿಜೆಪಿ ಮತ್ತು ಕಾಂಗ್ರೆಸ್ ನಂತರದ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಕಾಂಗ್ರೆಸ್‌

ಕಾಂಗ್ರೆಸ್‌

ದೇಶ ಪ್ರಮುಖ ರಾಷ್ಟ್ರೀಯ ಪಕ್ಷ ಎನಿಸಿಕೊಂಡಿರುವ 'ಇಂಡಿಯನ್ ನಾಷನಲ್ ಕಾಂಗ್ರೆಸ್‌' (ಕಾಂಗ್ರೆಸ್‌) ಪಕ್ಷವು ಸುಮಾರು 30,459,250 ರೂ.ಗಳನ್ನು ಗೂಗಲ್‌ನಲ್ಲಿ ಜಾಹಿರಾತು ನೀಡಲು ವ್ಯಯಿಸಿದೆ. ಜಾಹಿರಾತಿಗಾಗಿ ಹೆಚ್ಚು ಹಣ ಖರ್ಚು ಮಾಡಿದ ಪಕ್ಷಗಳ ಲಿಸ್ಟ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಕಾಂಗ್ರೆಸ್ ಫಲಿತಾಣಶದಲ್ಲಿ ಮಾತ್ರ ಬಿಜೆಪಿಯ ನಂತರ ಸ್ಥಾನವನ್ನು ಅಲಂಕರಿಸಿದೆ.

YSR ಕಾಂಗ್ರೆಸ್‌

YSR ಕಾಂಗ್ರೆಸ್‌

ಪ್ರಾದೇಶಿಕ ಪಕ್ಷವಾದ YSR ಕಾಂಗ್ರೆಸ್‌ ಪಾರ್ಟಿಯು ಲೋಕಸಭಾ ಚುನಾವಣೆಯ ಜಾಹಿರಾತಿಗಾಗಿ ಸುಮಾರು 23,144,500ರೂ.ಗಳ ವ್ಯಯಿಸಿದೆ. ಅದರಂತೆಯೇ, ಲೋಕಸಭಾ ಮತ್ತು ವಿಧಾನಸಭೆ ಚುನಾವಣೆ ಫಲಿತಾಂಶದಲ್ಲೂ YSR ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದೆ. YSR ಕಾಂಗ್ರೆಸ್‌ ಪಾರ್ಟಿ ಆಂಧ್ರಪ್ರದೇಶದ ಎಲ್ಲಾ 23 ಲೋಕಸಭಾ ಸ್ಥಾನ ಗೆಲ್ಲುವತ್ತ ಹೆಜ್ಜೆಹಾಕಿದೆ.

ಇತರೆ ಪಕ್ಷಗಳು!

ಇತರೆ ಪಕ್ಷಗಳು!

ಇವಿಷ್ಟು ಪಕ್ಷಗಳು ನೇರವಾಗಿ ಜಾಹಿರಾತು ನೀಡಿದರೆ, ಇತರೆ ಪಕ್ಷಗಳು ಪರೋಕ್ಷವಾಗಿ ರಾಜಕೀಯ ಜಾಹಿರಾತುಗಳನ್ನು ನೀಡಿವೆ. ಪ್ರಮನ್ಯಾ ಸ್ಟ್ರೇಟರ್ಜಿ ಪೈ.ಲಿ- 19,330,250, ರೂ. 2)ಬ್ರಾಂಡಮ್ ಟೆಕ್ ಸೊಲ್ಯುಶನ್ಸ್ ಪ್ರೈ.ಲಿ- 10,240,750ರೂ 3)EYWA ಮೀಡಿಯಾ ಇನ್ವೆವೇಷನ್ ಪ್ರೈ.ಲಿ-1,782,500ರೂ., 4)ಸಿಲ್ವರ್‌ಎಡ್ಜ್‌ ಟೆಕ್ನಾಲಜೀಸ್ ಪ್ರೈ.ಲಿ-365,500ರೂ. , 5) ಎಥೀನೋಸ್‌ ಡಿಜಿಟಲ್‌ ಮಾರ್ಕೆಟಿಂಗ್ ಪ್ರೈ.ಲಿ- 156,750ರೂ ಹೆಸರುಗಳಲ್ಲಿ ಇತರೆ ಪಕ್ಷಗಳು ಗೂಗಲ್‌ನಲ್ಲಿ ಜಾಹಿರಾತು ನೀಡಿವೆ.

Best Mobiles in India

English summary
BJP largest ad spender on Google, regional parties take second spot. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X