ಬಿಜೆಪಿ ವೆಬ್ ಸೈಟ್ ಹ್ಯಾಕ್ ಆಗಿದೆಯಂತೆ!

By Gizbot Bureau
|

ಇವತ್ತು ಬೆಳಿಗ್ಗೆ ಭಾರತೀಯ ಜನತಾ ಪಾರ್ಟಿಯ ವೆಬ್ ಸೈಟ್ ಹ್ಯಾಕ್ ಆಗಿದೆ ಎಂದು ಹೇಳಲಾಗುತ್ತಿದೆ. ವರದಿ ತುಂಬಿಸುತ್ತಿದ್ದಾಗ ವೆಬ್ ಸೈಟ್ ಡೌನ್ ಆಗಿದೆ ಮತ್ತು “ಎರರ್ 522” ಮೆಸೇಜ್ ಕಾಣಿಸುತ್ತಿತ್ತು.

ಯಾರು ಮಾಡಿದ್ದು?

ಯಾರು ಮಾಡಿದ್ದು?

ಸದ್ಯಕ್ಕೆ ಅಟ್ಯಾಕ್ ಮಾಡಿದವರು ಯಾರು ಎಂಬ ಬಗ್ಗೆ ಖಚಿತತೆ ಇಲ್ಲ ಆದರೆ ಕೆಲವು ಸಾಮಾಜಿಕ ಜಾಲತಾಣದ ಮಾಹಿತಿಯ ಪ್ರಕಾರ ಸೈಟ್ ಡೌನ್ ಆಗುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಬಗ್ಗೆ ಕೆಲವು ಮೆಮೊಗಳಿತ್ತು. ವೆಬ್ ಸೈಟ್ ಆಫ್ ಲೈನ್ ಆಗುವ ಮುನ್ನ ಅದೆಷ್ಟು ಸಮಯದವರಗೆ ಮೆಮೊಗಳು ಕಾಣಿಸಿದ್ದವು ಎಂಬ ಬಗ್ಗೆ ಇದುವರೆಗೂ ತಿಳಿದುಬಂದಿಲ್ಲ.

ಬದಲಾದ ಮೆಸೇಜ್:

ಬದಲಾದ ಮೆಸೇಜ್:

ಸದ್ಯಕ್ಕೆ ಈ ಸೈಟ್ ಡೌನ್ ಆಗಿದೆ ಆದರೆ "ಎರರ್ 522" ಮೇಸೇಜ್ ನ ಬದಲಾಗಿ ಕೆಲವು ಟೆಕ್ಸ್ಟ್ ಮೆಸೇಜ್ ಗಳು ಕಾಣಿಸುತ್ತಿದೆ. ಆ ಮೆಸೇಜ್ ನ ಸಾರಾಂಶ ಇಂತಿದೆ. "ನಾವು ಆದಷ್ಟು ಬೇಗ ವಾಪಾಸ್ ಬರುತ್ತೇವೆ!ಅಡಚಣೆಗಾಗಿ ದಯವಿಟ್ಟು ಕ್ಷಮಿಸಿ ಆದರೆ ನಾವು ಕೆಲವು ಪ್ರದರ್ಶನ ಮತ್ತು ನಿರ್ವಹಣಾ ಕಾರ್ಯಗಳನ್ನು ಮಾಡುತ್ತಿದ್ದೇವೆ.ನಾವು ಆದಷ್ಟು ಬೇಗನೆ ಆನ್ ಲೈನ್ ಆಗುತ್ತೇವೆ!-ವೆಬ್ ಅಡ್ಮಿನ್" ಎಂದು ಬರೆಯಲಾಗಿದೆ.

ತನಿಖೆಯ ಅಗತ್ಯತೆ:

ತನಿಖೆಯ ಅಗತ್ಯತೆ:

ಈ ನಿಟ್ಟಿನಲ್ಲಿ ತನಿಖೆಯ ಅಗತ್ಯತೆ ಇದ್ದು, ಯಾರು ಹ್ಯಾಕ್ ಮಾಡಿದ್ದಾರೆ? ನಿಜಕ್ಕೂ ಹ್ಯಾಕ್ ಆಗಿದೆಯೇ ಎಂಬಿತ್ಯಾದಿ ಮಾಹಿತಿಗಳು ಹೊರಬರಬೇಕಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ನಡೆಯುತ್ತಿರುವ ಈ ಘಟನೆ ಆತಂಕಕ್ಕೆ ಕಾರಣವಾಗಿದೆ.

Best Mobiles in India

Read more about:
English summary
BJP website down after alleged hacking

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X