ಮಾರುಕಟ್ಟೆಗೆ ಎರಡು ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಲಿದೆ ಬ್ಲಾಕ್ ಬೇರಿ..!

By Precilla Dias
|

ಮಾರುಕಟ್ಟೆಗೆ ಬ್ಲಾಕ್ ಬೇರಿ ಎರಡು ಸ್ಮಾರ್ಟ್ ಫೋನ್ ಗಳನ್ನು ಪರಿಚಯ ಮಾಡಲು ತುದಿಗಾಲಿನಲ್ಲಿ ನಿಂತಿದೆ. ಗೋಸ್ಟ್ ಹೆಸರಿನ ಬ್ರೆಜಿಲ್ ಲೈಸ್ ವಿನ್ಯಾಸದ ಸ್ಮಾರ್ಟ್ ಪೋನ್ ಬಿಡುಗಡೆಗೆ ರೆಡಿಯಾಗಿದೆ. ಇದೇ ಮುಂದಿನ ತಿಂಗಳ ಅಂತ್ಯದ ವೇಳೆಗೆ ಈ ಸ್ಮಾರ್ಟ್ ಫೋನ್ ಲಾಂಚ್ ಆಗುವ ಸಾಧ್ಯತೆ ಇದೆ. ಇದಲ್ಲದೇ ಈ ಸ್ಮಾರ್ಟ್ ಫೋನ್ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಭಾರತದಲ್ಲಿಯೇ ನಿರ್ಮಾಣ ಮಾಡಲಿದೆ ಎನ್ನುವ ಮಾತು ಕೇಳಿಬಂದಿದೆ.

ಮಾರುಕಟ್ಟೆಗೆ ಎರಡು ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಲಿದೆ ಬ್ಲಾಕ್ ಬೇರಿ..!


ಬ್ಲಾಕ್ ಬೇರಿ ಮಾರುಕಟ್ಟೆಗೆ ಉತ್ತಮವಾದ ಫೋನ್ ಅನ್ನು ಲಾಂಚ್ ಮಾಡಲಿದ್ದು, ಇದಕ್ಕಾಗಿ ರೊಡಸ್ಟ್ ಸೆಕ್ಯೂರಿಟಿಯನ್ನು ನೀಡಲಿದೆ. ಅಲ್ಲದೇ ಬ್ಲಾಕ್ ಬರಿ ಹಬ್ ಅನ್ನು ಈ ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದೆ. ಇದರೊಂದಿಗೆ ಚಾರ್ಜಿಂಗ್ ಸಹ ಭಿನ್ನವಾಗಿರಲು ಹೊಸ ಮಾದರಿಯೊಂದನ್ನು ಪರಿಚಯ ಮಾಡಲು ಮುಂದಾಗಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಲು ಈ ಸ್ಮಾರ್ಟ್ ಫೋನ್ ಸಹಾಯ ಮಾಡಲಿದೆ.

ಈ ಎರಡು ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಬ್ಲಾಕ್ ಬೇರಿಗೆ ಉತ್ತಮ ಸ್ಥಾನವನ್ನು ತಂದು ಕೊಡಲಿದ್ದು, ಹೆಚ್ಚಿನ ಬಳಕೆದಾರರನ್ನು ಸೆಳೆಯುವಲ್ಲಿ ಶಕ್ತವಾಗಲಿದೆ. ಇದಲ್ಲದೇ ಬ್ಲಾಕ್ ಬೇರಿ ವಿವಿಧ ಶ್ರೇಣಿಗಳ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು, ಇದಕ್ಕಾಗಿ ಭರ್ಜರಿ ತಯಾರಿಯನ್ನು ನಡೆಸಿದೆ.

ಈ ಹೊಸ ಸ್ಮಾರ್ಟ್ ಫೋನಿನಲ್ಲಿ ಸದ್ಯ ಟ್ರೆಂಡ್ ಆಗಿರುವ 18:9 ಅನುಪಾತದ ಡಿಸ್ ಪ್ಲೇ, ಬ್ರಜಿಲ್ ಲೈಸ್ ವಿನ್ಯಾಸ, ಡ್ಯುಯಲ್ ಕ್ಯಾಮೆರಾ ಸೇರಿಂದತೆ ಹೊಸ ಮಾದರಿಯ ಆಯ್ಕೆಗಳನ್ನು ಹೊಂದಿರಲಿದೆ. ಇದಲ್ಲದೇ ಎರಡು ಆವೃತ್ತಿಯಲ್ಲಿ ಸ್ಮಾರ್ಟ್ ಫೋನ್ ಕಾಣಿಸಿಕೊಳ್ಳಲಿದ್ದು, ಮಧ್ಯಮ ಬೆಲೆಯಲ್ಲಿ ಮತ್ತು ಟಾಪ್ ಎಂಡ್ ಆವೃತ್ತಿಯಲ್ಲಿ ಮಾರಾಟವಾಗುವ ಸಾಧ್ಯತೆ ಇದೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಈ ಆಪ್‌ನಿಂದ ನಿಮ್ಮವರನ್ನು ಗೂಗಲ್ ಮ್ಯಾಪ್ ಮೂಲಕ ಟ್ರ್ಯಾಕ್ ಮಾಡಬಹುದು!!ಈ ಆಪ್‌ನಿಂದ ನಿಮ್ಮವರನ್ನು ಗೂಗಲ್ ಮ್ಯಾಪ್ ಮೂಲಕ ಟ್ರ್ಯಾಕ್ ಮಾಡಬಹುದು!!

ಈ ಹಿಂದೆ ಕ್ವರ್ಟಿ ಕೀಪ್ಯಾಡ್ ಹೊಂದಿರುವ ಸ್ಮಾರ್ಟ್ ಫೋನ್ ವೊಂದನ್ನು ಲಾಂಚ್ ಮಾಡಿದ್ದ ಬ್ಲಾಕ್ ಬೇರಿ, ಹೆಚ್ಚಿನ ಬಳಕೆದಾರರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಈ ಹಿಂದಿನ ಸೋಲಿನ ಕಹಿಯನ್ನು ಮರೆತು ಹೊಸದಾಗಿ ಸ್ಮಾರ್ಟ್ ಫೋನ್ ಲಾಂಚ್ ಮಾಡುವ ಮೂಲಕ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಅದೃಷ್ಠ ಪರಿಕ್ಷೆಯನ್ನು ಮಾಡಲು ಮುಂದಾಗಿದೆ.

Best Mobiles in India

English summary
BlackBerry is been reported to work on two new devices which will be the launch in this quarter in India. According to the Hardip Singh, Executive Director at Optiemus, both devices will have the DTEK security monitoring app installed as well as the Blackberry Hub. However, the hardware specification was not disclosed by Singh.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X