ರಾತ್ರಿ ಮಲಗುವಾಗ ಮೊಬೈಲ್ ಬಳಸುವವರಿಗೆ ಬಿಗ್ ಶಾಕಿಂಗ್ ನ್ಯೂಸ್!!

|

ರಾತ್ರಿ ಮಲಗುವಾಗ ಹಾಸಿಗೆಯಲ್ಲೂ ಮೊಬೈಲ್‌ ಫೋನ್ ಹಿಡಿದುಕೊಂಡೇ ಹೆಚ್ಚು ಕಾಲ ಸಮಯವನ್ನು ವ್ಯರ್ಥಗೊಳಿಸುವ ಮೊಬೈಲ್ ಪ್ರಿಯರಿಗೆ ಬಿಗ್ ಶಾಕಿಂಗ್ ನ್ಯೂಸ್ ಒಂದು ಎದುರಾಗಿದೆ. ಅಮೆರಿಕದ ಟೊಲೆಡೊ ವಿವಿಯ ಸಂಶೋಧಕರ ತಂಡವೊಂದು ನಡೆಸಿದ ಅಧ್ಯಯನವೊಂದರ ಪ್ರಕಾರ, ರಾತ್ರಿ ಮಲಗುವಾಗ ಮೊಬೈಲ್‌ ಫೋನ್ ಬಳಕೆ ಕಣ್ಣಿಗೆ ಹಾನಿಯನ್ನುಂಟು ಮಾಡಬಹುದು. ಅದು ಎಷ್ಟರಮಟ್ಟಿಗೆ ಎಂದರೆ ಅದರಿಂದ ಕೆಲವೇ ಸಮಯದಲ್ಲಿ ಕಣ್ಣಿನ ದೃಷ್ಟಿನಾಶಕ್ಕೂ ಇದು ಕಾರಣವಾಗಬಹುದು ಎಂದು ಹೇಳಲಾಗಿದೆ.

ಹೌದು, ರಾತ್ರಿ ಮಲಗುವಾಗ ಮೊಬೈಲ್‌ನಲ್ಲಿ ನೋಟಿಫಿಕೇಶನ್‌ಗಳನ್ನು ಚೆಕ್‌ ಮಾಡುತ್ತಾ, ಇಂಟರ್‌ನೆಟ್ ಬಳಸುತ್ತಾ, ಜೊತೆಗೆ ಸಿನಿಮಾಗಳನ್ನು ನೋಡುತ್ತಾ ಮಲಗುವ ಅಭ್ಯಾಸ ಹೆಚ್ಚು ಜನರಿಗೆ ಇದೆ. ಆದರೆ, ಇದು ಎಷ್ಟು ಅಪಾಯಕಾರಿ ಎಂದರೆ, ಇದರಿಂದ ದೃಷ್ಟಿ ಕಳೆದುಕೊಳ್ಳುಬಹುದು. ಮೊಬೈಲ್‌ ಫೋನ್‌ಗಳಿಂದ ಹೊರಸೂಸುವ ನೀಲಿ ಬಣ್ಣದ ಬೆಳಕು ಕಣ್ಣಿನ ರೆಟಿನಾದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಇದು ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ರಾತ್ರಿ ಮಲಗುವಾಗ ಮೊಬೈಲ್ ಬಳಸುವವರಿಗೆ ಬಿಗ್ ಶಾಕಿಂಗ್ ನ್ಯೂಸ್!!

ಫೋನ್‌ಗಳಿಂದ ಹೊರಸೂಸುವ ನೀಲಿ ಬಣ್ಣರೆಟಿನಾದಲ್ಲಿರುವ ಪ್ರಮುಖ ಕಣಗಳನ್ನು ಕೊಲ್ಲುವ ಜೀವಕೋಶಗಳಾಗಿ ಪರಿವರ್ತಿಸುತ್ತದೆ. ಹೀಗೆ ರೆಟಿನಾಲ್ ಮೇಲೆ ನೀಲಿ ಬೆಳಕು ಪ್ರತಿಫಲಿಸಿದಾಗ ರೆಟಿನಾಲ್ ಫೋಟೋರೆಸೆಪ್ಟರ್ ಕೋಶಗಳನ್ನು ನಾಶ ಮಾಡುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇನ್ನು ರಾತ್ರಿ ಮಲಗುವಾಗ ದೃಷ್ಟಿ ಕಳೆದುಕೊಳ್ಳುವ ತೊಂದರೆ ಮಾತ್ರವಲ್ಲದೇ, ನಿದ್ರೆಯ ಮೇಲೆ ಪರಿಣಾಮ ಉಂಟಾಗುವುದನ್ನು ಸಹ ಸಂಶೋಧಕರು ತಿಳಿಸಿದ್ದಾರೆ. ಹಾಗಾದರೆ, ಏನದು ಶಾಕಿಂಗ್ ವರದಿ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಕ್ರಮೇಣವಾಗಿ ದೃಷ್ಟಿಹೀನತೆ

ಕ್ರಮೇಣವಾಗಿ ದೃಷ್ಟಿಹೀನತೆ

ಮೊದಲೇ ಹೇಳಿದಂತೆ, ಫೋನ್‌ಗಳಿಂದ ಹೊರಸೂಸುವ ನೀಲಿ ಬಣ್ಣರೆಟಿನಾದಲ್ಲಿರುವ ಪ್ರಮುಖ ಕಣಗಳನ್ನು ಕೊಲ್ಲುವ ಜೀವಕೋಶಗಳಾಗಿ ಪರಿವರ್ತಿಸುತ್ತದೆ. ಹೀಗೆ ರೆಟಿನಾಲ್ ಮೇಲೆ ನೀಲಿ ಬೆಳಕು ಪ್ರತಿಫಲಿಸಿದಾಗ ರೆಟಿನಾಲ್ ಫೋಟೋರೆಸೆಪ್ಟರ್ ಕೋಶಗಳನ್ನು ನಾಶ ಮಾಡುತ್ತದೆ. ಇದಾದ ನಂತರದೃಷ್ಟಿಗೆ ಅಗತ್ಯವಾದ ಈ ಕೋಶಗಳು ಕಣ್ಣಿನಲ್ಲಿ ಮತ್ತೆ ಉತ್ಪತ್ತಿಯಾಗುವುದಿಲ್ಲ. ಈ ಕಾರಣದಿಂದಲೇ ಕ್ರಮೇಣವಾಗಿ ದೃಷ್ಟಿಹೀನತೆ ಉಂಟಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ನಿದ್ರೆಯ ಮೇಲೆ ಪರಿಣಾಮ

ನಿದ್ರೆಯ ಮೇಲೆ ಪರಿಣಾಮ

ಹಾಸಿಗೆಯಲ್ಲೂ ಮೊಬೈಲ್‌ ಫೋನ್ ಹಿಡಿದುಕೊಂಡೇ ಹೆಚ್ಚು ಕಾಲ ಮೊಬೈಲ್ ಬಳಸುವುದರಿಂದ ಕಣ್ಣಿನ ಮೇಲೆ ಬ್ಲೂ ಲೈಟ್ ಹೆಚ್ಚು ಬೀಳುತ್ತದೆ. ಇದರಿಂದ ಮೆದುಳು ಮೆಲಟೋನಿನ್ ಬಿಡುಗಡೆಯನ್ನು ನಿಧಾನಿಸುತ್ತದೆ. ಮೆಲಟೋನಿನ್ ನಿದ್ರೆಗೆ ಕಾರಣವಾದ ಹಾರ್ಮೋನ್‌ ಆದ್ದರಿಂದ ಇದರ ಕೊರತೆಯಾದಲ್ಲಿ ನಿದ್ರೆಯ ಮೇಲೆ ಪರಿಣಾಮ ಉಂಟಾಗುವುದು ಸಹಜ. ಆದ್ದರಿಂದ ರಾತ್ರಿ ಕತ್ತಲೆ ಕೋಣೆಯಲ್ಲಿ ಮೊಬೈಲ್‌ ಬಳಸದಂತೆ ಎಚ್ಚರಿಕೆ ವಹಿಸಿ ಎಂದು ಸಂಶೋಧಕರು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ವಹಿಸುವುದು ಉತ್ತಮ

ಮುನ್ನೆಚ್ಚರಿಕೆ ವಹಿಸುವುದು ಉತ್ತಮ

ಕಣ್ಣನ್ನು ರಕ್ಷಿಸಿಕೊಳ್ಳಲು ನಾವೇ ಮುನ್ನೆಚ್ಚರಿಕೆ ವಹಿಸುವುದು ಉತ್ತಮ ಎನ್ನುತ್ತಾರೆ ಸಂಶೋಧಕರು. ನಾವು ಹೆಚ್ಚಾಗಿ ಬಳಸುವ ಮೊಬೈಲ್‌, ಲ್ಯಾಪ್‌ಟಾಪ್ ಸೇರಿದಂತೆ ಎಲ್ಲಾ ಗ್ಯಾಜೆಟ್‌ಗಳಿಗೆ ಬ್ಲೂ ಲೈಟ್ ಫಿಲ್ಟರ್‌ಗಳನ್ನು ಅಳವಡಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಹಾಸಿಗೆಯಲ್ಲಿ ಮೊಬೈಲ್‌ ನಿಷೇಧಿಸಬೇಕಾದ್ದು ಮುಖ್ಯ. ಇದು ದೃಷ್ಟಿಗೆ ಹಿತವಷ್ಟೇ ಅಲ್ಲ, ಬೇಗ ನಿದ್ರೆಯೂ ಬರುತ್ತದೆ ಎಂದು ಅಧ್ಯಯನ ತಂಡದಲ್ಲಿರುವ ಪಿಎಚ್‌ಡಿ ವಿದ್ಯಾರ್ಥಿ ಕಸುನ್‌ ರತ್ನಾಯಕೆ ಅವರು ತಿಳಿಸಿದ್ದಾರೆ.

ಹೊಸ 'ಎಟಿಎಂ ಕಾರ್ಡ್' ಪಡೆದು ಬೆಚ್ಚಿಬಿದ್ದ ಸಾರ್ವಜನಿಕರು!..ಇದು ಭಯಾನಕ ಕೇಸ್!!

ಹೊಸ 'ಎಟಿಎಂ ಕಾರ್ಡ್' ಪಡೆದು ಬೆಚ್ಚಿಬಿದ್ದ ಸಾರ್ವಜನಿಕರು!..ಇದು ಭಯಾನಕ ಕೇಸ್!!

ನೀವು ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಬಿಲ್ ಪಾವತಿಗೆ ಮುಂದಾಗುತ್ತೀರಾ. ಆ ಸಮಯದಲ್ಲಿ ಒಂದು ವಿಚಿತ್ರ ನಡೆಯುತ್ತದೆ. ಅದೇನೆಂದರೆ, ನೀವು ಕಾರ್ಡ್ ನೀಡಿ ಅದರ ಪಿನ್ ಹಾಕುವ ಮುನ್ನವೇ ಆತ ನಿಮಗೆ ಹಣ ಪಾವತಿಯಾಗಿದೆ ಎಂಬ ಬಿಲ್ ನೀಡುತ್ತಾನೆ. ಇದು ಹೇಗಾಯ್ತು ಎಂದು ಆ ಸಮಯದಲ್ಲಿ ತಲೆಕೆಡುತ್ತದೆ.

ಹೌದು, ಇದು ಬಹುತೇಕರಿಗೆ ಆಶ್ಚರ್ಯವಾಗಿ ಕಂಡರೂ ಸಹ ಎಟಿಎಂ ಕಾರ್ಡ್ ಬಳಕೆದಾರರಿಗೆ ಭಯಮೂಡಿಸುವಂತಹ ವ್ಯವಸ್ಥೆಯಾಗಿದೆ. ಹಳೆಯ ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​ಗಳ ಬದಲಾಗಿ ಇದೀಗ ಬಂದಿರುವ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​ಗಳು ಗೌಪ್ಯ ಪಿನ್ ಇಲ್ಲದೆ ನೇರವಾಗಿ ಹಣವನ್ನು ಪಾವತಿಗೆ ದಾರಿ ಮಾಡಿಕೊಟ್ಟಿವೆ. ಆದರೆ, ಇದು ಈಗ ಸುರಕ್ಷತೆ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಈ ಹಿಂದೆ ಬಳಕೆಯಲ್ಲಿದ್ದ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್‌ಗಿಂತ ಹೊಸ ಕಾರ್ಡ್‌ ಹೆಚ್ಚು ಸುರಕ್ಷಿತ ಎನ್ನಲಾಗಿದೆಯಾದರೂ, ಹೊಸಕಾರ್ಡ್​ನಿಂದ​ ಬಳಕೆದಾರರಿಗೆ ತಿಳಿಯದಂತೆ ಹಣ ಪಡೆಯಬಹುದು ಎಂಬ ದೂರುಗಳು ಕೇಳಿ ಬಂದಿವೆ. ಹಾಗಾದರೆ, ಏನಿದು ಭಯಾನಕ ಸುದ್ದಿ? ಪಿನ್ ಇಲ್ಲದೆ ಪಾವತಿಯಾಗುತ್ತಿರುವುದು ಹೇಗೆ? ಇದಕ್ಕೆ ಪರಿಹಾರವಿದೆಯಾ ಎಂಬುದನ್ನು ಮುಂದೆ ಓದಿ ತಿಳಿಯಿರಿ.

   ಗೌಪ್ಯ ಪಿನ್ ಇಲ್ಲದೆ ಹಾಣ ಪಾವತಿ!

ಗೌಪ್ಯ ಪಿನ್ ಇಲ್ಲದೆ ಹಾಣ ಪಾವತಿ!

ಇತ್ತೀಚಿಗೆ ಬಹುಸುರಕ್ಷಿತ ಎಂದು ನೀಡಲಾಗಿರುವ ಹೊಸ ಚಿಪ್ ಸಹಿತ ಕಾರ್ಡ್‌ಗಳಲ್ಲಿ ಗೌಪ್ಯ ಪಿನ್ ಇಲ್ಲದೆ ಹಾಣ ಪಾವತಿ ಮಾಡಬಹುದಾಗಿದೆ. ಕಾರ್ಡ್ ಅನ್ನು ಸ್ವೈಪಿಂಗ್ ಮಷಿನ್ ಬಳಿ ಇಟ್ಟೊಡನೆಯೇ ಹಣ ಖಾತೆಯಿಂದ ಕಡಿತವಾಗುತ್ತದೆ. ಕಾರ್ಡ್‌ನಲ್ಲಿ ವೈಫೈ ಸೌಲಭ್ಯವನ್ನು ನೀಡಿರುವುದರಿಂದ ಈ ರೀತಿ ಪಾವತಿ ಸಾಧ್ಯ ಎಂದು ಬ್ಯಾಂಕ್‌ನವರು ಈ ಬಗ್ಗೆ ಮಾಹಿತಿ ನೀಡುತ್ತಾರೆ.

ಪಕ್ಕದಲ್ಲಿ ನಿಂತಿದ್ದರೂ ಹಣ ಖಾಲಿ!

ಪಕ್ಕದಲ್ಲಿ ನಿಂತಿದ್ದರೂ ಹಣ ಖಾಲಿ!

ಸ್ವೈಪ್​ ಮೆಷಿನ್​ಗಳನ್ನು ಜನರ ಜೇಬಿನ ಬಳಿ ಹಿಡಿದು​ ಸುಲಭವಾಗಿ ಹಣ ವರ್ಗಾವಣೆ ಮಾಡಿಕೊಳ್ಳಬಹುದಾಗಿದ್ದು, ಇದಕ್ಕೆ ಎಟಿಎಂ ಕಾರ್ಡ್ ಮೇಲೆ ವೈಫೈ ಮಾರ್ಕ್ ಇದ್ದರೆ ಸಾಕು. ವೈಫೈ ಸೌಲಭ್ಯದ ಸಹಾಯದಿಂದ ಸ್ವೈಪ್​ ಮೆಷಿನ್ ಮೂಲಕ ನಿಮ್ಮ ಜೇಬಿನ ಹತ್ತಿರ ಹಿಡಿದು ಹಣ ವರ್ಗಾವಣೆ ಮಾಡಿಕೊಳ್ಳಬಹುದು. ಈ ವ್ಯವಹಾರ ಕೆಲವೇ ಸೆಕೆಂಡ್‌ಗಳಲ್ಲಿ ಮುಗಿಯುತ್ತದೆ.

ವಂಚನೆಗೆ ದಾರಿ ಹೊಸ ಮಾರ್ಗ!

ವಂಚನೆಗೆ ದಾರಿ ಹೊಸ ಮಾರ್ಗ!

ಎಟಿಎಂ ಕಾರ್ಡ್ ​ಮೂಲಕ ಪಾಸ್​ವರ್ಡ್​ ನಮೂದಿಸದೇ ಹಣ ಪಾವತಿಸುವ ಸೌಲಭ್ಯದಿಂದ ಗ್ರಾಹಕರು ಹಣ ಪಾವತಿ ಮಾಡುವುದು ಈಗ ಸುಲಭವಾಗಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವಂಚಕರು, ವೈಫೈ ಸೌಲಭ್ಯದ ಸ್ವೈಪ್​ ಮೆಷಿನ್​ಗಳನ್ನು ಜನರ ಜೇಬಿನ ಬಳಿ ಹಿಡಿದು​ ಸುಲಭವಾಗಿ ಹಣ ದೋಚುವ ಉಪಾಯವನ್ನು ಕಂಡುಕೊಂಡಿದ್ದಾರೆ.

ಈ ಸೇವೆ ಬೇಡ ಎನ್ನುತ್ತಿದ್ದಾರೆ ಗ್ರಾಹಕರು!

ಈ ಸೇವೆ ಬೇಡ ಎನ್ನುತ್ತಿದ್ದಾರೆ ಗ್ರಾಹಕರು!

ಇನ್ನು ಸ್ವೈಪ್​ ಮೆಷಿನ್ ವೈಫೈ ಸೌಲಭ್ಯದ ಮೂಲಕ ಹಣ ವರ್ಗಾವಣೆ ಮಾಡುತ್ತಿರುವುದು ಸಾರ್ವಜನಿಕರಿಗೆ ಗೊಂದಲ ಮೂಡಿಸಿದೆ. ನಾವು ಪಿನ್ ಅನ್ನು ನಮೂದಿಸದೇ ಇದ್ದರೂ ಹಣ ವರ್ಗಾವಣೆ ಆಗಿದ್ದೇಗೆ ಎಂದು ಜನರು ಅಂದುಕೊಳ್ಳುತ್ತಿದ್ದಾರೆ. ನಮಗೆ ಎಷ್ಟೇ ಕಷ್ಟವಾದರೂ ಸರಿ ನಾವು ಪಿನ್ ನಮೂದಿಸಿದಾಗ ಮಾತ್ರ ಹಣ ವರ್ಗಾವಣೆಯಾಗಲಿ ಎಂದು ಹೇಳುತ್ತಿದ್ದಾರೆ.

ಮಾಹಿತಿ ತಿಳಿಯದೇ ಪರದಾಟ

ಮಾಹಿತಿ ತಿಳಿಯದೇ ಪರದಾಟ

ಒಂದು ವೇಳೆ ಈ ವೈಫೈ ಸೇವೆ ಬೇಡ ಎಂದಾದಲ್ಲಿ ಅದನ್ನು ಬ್ಲಾಕ್ ಮಾಡುವ ಆಯ್ಕೆಯನ್ನು ಬ್ಯಾಂಕ್‌ಗಳು ಆನ್‌ಲೈನಿನಲ್ಲಿ ಒದಗಿಸಿವೆ. ಆದರೆ. ಈ ಬಗ್ಗೆ ಸರಿಯಾದ ಮಾಹಿತಿ ತಿಳಿಯದ ಸಾರ್ವಜನಿಕರು ಅವರಿಗೆ ತಿಳಿಯದಂತೆ ಇದನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಬ್ಯಾಂಕ್‌ನವರು ಈ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡದಿರುವುದಕ್ಕೆ ಗ್ರಾಹಕರು ಸಿಟ್ಟಾಗಿದ್ದಾರೆ.

ಹಲವರು ಪೌಚ್ ಮೊರೆ!

ಹಲವರು ಪೌಚ್ ಮೊರೆ!

ಇಂತಹ ಸಮಸ್ಯೆಯನ್ನು ಅರಿತಿರುವ ಹಲವು ಇತ್ತೀಚಿಗೆ ಬಂದಿರುವ ಆಂಟಿ ಸ್ಕ್ಯಾನ್​ ಕಾರ್ಡ್​ ಪೌಚ್ಗೆ ಮೊರೆಹೋಗಿದ್ದಾರೆ. ಈ ಆಂಟಿ ಸ್ಕ್ಯಾನ್​ ಪೌಚ್ ಒಳಗೆ ಎಟಿಎಂ ಕಾರ್ಡ್ ಅನ್ನು ಹಾಕಿದರೆ ಅದು ಸ್ವಲ್ಪ ಸುರಕ್ಷತೆಯನ್ನು ಕಾಪಾಡುತ್ತದೆ. ಇದರಿಂದ ನಿಮಗೆ ತಿಳಿಯದಂತೆ ಸ್ಕ್ಯಾನ್​ ಮಾಡಿ ಹಣ ದೋಚುವುದನ್ನು ತಡೆಗಟ್ಟ ಆದರೆ, ಇದಕ್ಕೆ 100 ರೂ. ವೆಚ್ಚ ಮಾಡಬೇಕು.

Most Read Articles
Best Mobiles in India

English summary
Blue light emitted by smartphones and laptops accelerates blindness by making a molecule in our eyes toxic, according to a new studyto know morw visit to kannada.gizbot.kannada

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more