ಭಾರತದಲ್ಲಿ ಬೋಲ್ಟ್‌ನಿಂದ ಹೊಸ TWS ಇಯರ್‌ಬಡ್ಸ್‌ ಬಿಡುಗಡೆ! 35 ಗಂಟೆಗಳ ಪ್ಲೇಟೈಮ್!

|

ಸ್ಮಾರ್ಟ್‌ಫೋನ್‌ ಬಳಸುವ ಬಹುತೇಕ ಮಂದಿ ಜೊತೆಗೊಂದು ಇಯರ್‌ಫೋನ್‌ ಬಳಸುವುದಕ್ಕೆ ಇಷ್ಟ ಪಡುತ್ತಾರೆ. ಮ್ಯೂಸಿಕ್‌ ಆಲಿಸುವುದಕ್ಕೆ ಮಾತ್ರವಲ್ಲದೆ ಕರೆಗಳನ್ನು ಸ್ವಿಕರಿಸುವುದಕ್ಕೆ ಕೂಡ ಇಯರ್‌ಬಡ್ಸ್‌ ಬಳಸುವುದು ಸಾಮಾನ್ಯವಾಗಿದೆ. ಇದಕ್ಕೆ ತಕ್ಕಂತೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ವಿವಿಧ ಮಾದರಿಯ ಇಯರ್‌ಫೋನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಬೋಲ್ಟ್‌ ಕಂಪೆನಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಈಗಾಗಲೇ ಹಲವು ಇಯರ್‌ಫೋನ್‌ ಪರಿಚಯಿಸಿರುವ ಬೋಲ್ಟ್‌ ಕಂಪೆನಿ ಇದೀಗ ಹೊಸ TWS ಇಯರ್‌ಬಡ್ಸ್‌ ಪರಿಚಯಿಸಿದೆ.

ಬೋಲ್ಟ್‌

ಹೌದು, ಭಾರತದಲ್ಲಿ ಬೋಲ್ಟ್‌ ಕಂಪೆನಿ ಹೊಸ TWS ಇಯರ್‌ಬಡ್ಸ್‌ಗಳನ್ನು ಲಾಂಚ್‌ ಮಾಡಿದೆ. ಇದನ್ನು ಬೋಲ್ಟ್‌ ಮೇವರಿಕ್‌ ಎಂದು ಹೆಸರಿಸಲಾಗಿದೆ. ಈ ಇಯರ್‌ಬಡ್ಸ್‌ ಆಕರ್ಷಕವಾದ ವಿನ್ಯಾಸವನ್ನು ಹೊಂದಿದ್ದು, ಎಕೋ ನಾಯ್ಸ್‌ ಕ್ಯಾನ್ಸಲ್‌ ಅನ್ನು ಒಳಗೊಂಡಿದೆ. ಇನ್ನು ಈ ಇಯರ್‌ಬಡ್ಸ್‌ ಬಜೆಟ್‌ ಪ್ರೈಸ್‌ ಟ್ಯಾಗ್‌ನಲ್ಲಿ ಖರೀದಿಸುವವರನ್ನು ಗುರಿಯಾಗಿಸಿಕೊಂಡು ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದ್ರೆ ಈ ಇಯರ್‌ಬಡ್ಸ್‌ನ ವಿಶೇಷತೆ ಏನಿದೆ? ಇದರ ಫೀಚರ್‌ಗಳೇನು? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಇಯರ್‌ಬಡ್ಸ್‌

ಬೋಲ್ಟ್ ಮೇವರಿಕ್ ಇಯರ್‌ಬಡ್ಸ್‌ ಸೂಪರ್‌ಬಾಸ್ ಬೂಮ್‌ಎಕ್ಸ್‌ ಅನ್ನು ಹೊಂದಿದ್ದು, 10 ಎಂಎಂ ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಕರೆ ಗುಣಮಟ್ಟವನ್ನು ಸುಧಾರಿಸುವುದಕ್ಕಾಗಿ ಕ್ವಾಡ್-ಮೈಕ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಇನ್ನು ಈ ಇಯರ್‌ಬಡ್ಸ್‌ ಬ್ಲೂಟೂತ್ 5.3 ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಜೊತೆಗೆ ಇಯರ್‌ಬಡ್ಸ್‌ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದೆ.

ಇಯರ್‌ಬಡ್ಸ್‌

ಬೋಲ್ಟ್‌ ಮೇವರಿಕ್‌ ಇಯರ್‌ಬಡ್ಸ್‌ ಕಾಂಬ್ಯಾಟ್ TM ಗೇಮಿಂಗ್ ಮೋಡ್‌ ಅನ್ನು ಹೊಂದಿದೆ. ಇದು 45ms ಅಲ್ಟ್ರಾ ಲೋ ಲೇಟೆನ್ಸಿಯನ್ನು ಆಕ್ಟಿವ್‌ ಮಾಡಲಿದೆ. ಇದರಿಂದ ನಿಮ್ಮ ಗೇಮಿಂಗ್‌ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲಿದೆ. ಇನ್ನು ಈ ಇಯರ್‌ಬಡ್ಸ್‌ 35 ಗಂಟೆಗಳ ಪ್ಲೇಟೈಮ್ ಬ್ಯಾಕಪ್ ಅನ್ನು ಹೊಂದಿರುವುದರಿಂದ ದಿನವಿಡೀ ಗೇಮಿಂಗ್‌ ಪ್ರಿಯರು ಇಯರ್‌ಬಡ್ಸ್‌ ಅನ್ನು ಬಳಸಬಹುದಾಗಿದೆ. ಜೊತೆಗೆ ಈ ಇಯರ್‌ ಬಡ್ಸ್‌ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಹೊಂದಿರುವುದರಿಂದ ಕಡಿಮೆ ಅವಧಿಯಲ್ಲಿಯೇ ಪೂರ್ತಿ ಚಾರ್ಜಿಂಗ್‌ ಅನ್ನು ಮಾಡಬಹುದಾಗಿದೆ.

ಚಾರ್ಜ್‌ನಲ್ಲಿ

ಇದು ಸಿಂಗಲ್‌ ಚಾರ್ಜ್‌ನಲ್ಲಿ 7 ಗಂಟೆಗಳವರೆಗೆ ಬ್ಯಾಟರಿಯನ್ನು ಒದಗಿಸಲಿದೆ. ಅಂದರೆ ಈ ಇಯರ್‌ಬಡ್ಸ್‌ ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸುವುದರಿಂದ ಕೇವಲ 10 ನಿಮಿಷಗಳ ಕಾಲ ಚಾರ್ಜ್ ಮಾಡಿದರೆ, 120 ನಿಮಿಷಗಳ ಪ್ಲೇಬ್ಯಾಕ್ ಟೈಂ ಅನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಇಯರ್‌ಬಡ್ಸ್‌ ಬ್ಲೂಟೂತ್ 5.3 ಕನೆಕ್ಟಿವಿಟಿಯನ್ನು ಆಕ್ಟಿವ್‌ ಮಾಡಲಿದೆ. ಇದು ಟೆಕ್-ರಿಚ್ ಬಾಸ್, ಕ್ವಾಡ್ ಮೈಕ್‌ಗಳು, IPX5 ವಾಟರ್‌ ರೆಸಿಸ್ಟೆನ್ಸಿ, ಆಂಬಿಯೆಂಟ್‌ ಲೈಟಿಂಗ್ ಮತ್ತು ಸ್ಯಾಂಡ್ ಸ್ಟೇಟ್‌ಮೆಂಟ್ ಪಾರದರ್ಶಕ ಕೇಸ್‌ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಬೋಲ್ಟ್‌ ಮೇವರಿಕ್‌ TWS ಇಯರ್‌ಬಡ್ಸ್‌ ಬೆಲೆ 1799ರೂ. ಆಗಿದೆ. ಈ ಇಯರ್‌ಬಡ್ಸ್‌ ಅಮೆಜಾನ್‌. ಫ್ಲಿಪ್‌ಕಾರ್ಟ್‌ ಮತ್ತು www.boultaudio.com ನಲ್ಲಿ ಖರೀದಿಸಬಹುದಾಗಿದೆ.

ಬೋಟ್

ಇನ್ನು ನೀವು ಭಾರತದಲ್ಲಿ ಅಗ್ಗದ ಬೆಲೆಯಲ್ಲಿ ಇಯರ್‌ಬಡ್ಸ್‌ ಖರೀದಿಸಲು ಬಯಸಿದರೆ ಬೋಟ್ ಏರ್‌ಡೋಪ್ಸ್ 402 ಉತ್ತಮ ಆಯ್ಕೆಯಾಗಿದೆ. ಇದು ಇನ್-ಇಯರ್ ವಾಯರ್‌ಲೆಸ್ ವಿನ್ಯಾಸವನ್ನು ಹೊಂದಿರುವುದರಿಂದ ಆರಾಮದಾಯಕವಾದ ಅನುಭವವನ್ನು ನೀಡಲಿದೆ. ಇನ್ನು ಈ ಇಯರ್‌ಬಡ್‌ಗಳು 20Hz ನಿಂದ 20kHz ಫ್ರಿಕ್ವೆನ್ಸಿ ರೇಂಜ್‌ ಹೊಂದಿದ್ದು, ಎರಡು 10mm ಡ್ರೈವರ್‌ಗಳನ್ನು ಒಳಗೊಂಡಿದೆ. ಈ ಇಯರ್‌ಬಡ್ಸ್‌ ವಾಟರ್‌ ಪ್ರೂಫ್‌ ಆಗಿದ್ದು, ಬ್ಲೂಟೂತ್ 5.0 ಕನೆಕ್ಟಿವಿಟಿ ಹೊಂದಿದೆ. ಇದು 4 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ಸಹ ನೀಡಿದೆ.

ರಿಯಲ್‌ಮಿ ಬಡ್ಸ್ Q2 ನಿಯೋ

ರಿಯಲ್‌ಮಿ ಬಡ್ಸ್ Q2 ನಿಯೋ

2,000ರೂ. ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗುವ ಇಯರ್‌ಬಡ್ಸ್‌ಗಳಲ್ಲಿ ರಿಯಲ್‌ಮಿ ಬಡ್ಸ್‌Q2 ನಿಯೋ ಕೂಡ ಸೇರಿದೆ. ಇದು ಇನ್-ಇಯರ್ ಇಯರ್‌ಬಡ್‌ಗಳೊಂದಿಗೆ ಕೋಬ್ಲೆಸ್ಟೋನ್ ವಿನ್ಯಾಸವನ್ನು ಹೊಂದಿದೆ. ಇದರಲ್ಲಿ ನೀವು ಮೂರು ವಿಭಿನ್ನ ಗಾತ್ರಗಳಲ್ಲಿ ಸಿಲಿಕೋನ್ ಇಯರ್‌ ಟಿಪ್ಸ್‌ ಪಡೆಯಬಹುದಾಗಿದೆ. ಇನ್ನು ರಿಯಲ್‌ಮಿನ ಬಡ್ಸ್ Q2 ನಿಯೋ ಇಯರ್‌ಬಡ್ಸ್‌ 10mm ಬಾಸ್ ಬೂಸ್ಟ್ ಡ್ರೈವರ್‌ಗಳನ್ನು ಹೊಂದಿದ್ದು, ಮ್ಯೂಸಿಕ್‌ಗೆ ಉತ್ತಮವಾದ ಬಾಸ್ ನೀಡುತ್ತದೆ. ಈ ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜ್‌ನಲ್ಲಿ 17 ರಿಂದ 18 ಗಂಟೆಗಳವರೆಗಿನ ಬಾಳಿಕೆಯನ್ನು ನೀಡಲಿದೆ. ಪ್ರಸ್ತುತ ಈ ಇಯರ್‌ಬಡ್ಸ್‌ ಬೆಲೆ 1,599 ರೂ.ಆಗಿದೆ.

Best Mobiles in India

Read more about:
English summary
Boult has launched new TWS earbuds in India:price

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X