ಅಂಧರು ಓದಬಹುದಾದ ಬ್ರೈಲ್‌ ಟ್ಯಾಬ್ಲೆಟ್‌

By Suneel
|

ಟೆಕ್‌ ದೇಶದ ಅಭಿವೃದ್ಧಿಗೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಮುಖ ಅಂಶವಾಗಿದೆ. ಆದರೆ ಇಂದು ಏನೆಲ್ಲಾ ಟೆಕ್ನಾಲಜಿಗಳಿದ್ದರೂ ಸಹ ಭಾರತ ದೇಶದಲ್ಲಿರುವ 12 ಮಿಲಿಯನ್‌ ಅಂಧರಿಗೆ ಉಪಯೋಗಕ್ಕೆ ಬರುತ್ತಿಲ್ಲ. ಅಭಿವೃದ್ದಿಗೊಂಡ ಎಷ್ಟೊ ಟೆಕ್‌ಗಳು ಅವರಿಗೆ ದಕ್ಕುತ್ತಿಲ್ಲ. ಕಾರಣ ಅವರು ಇರುವ ಪ್ರದೇಶಗಳೆಲ್ಲಾ ಬಡತನ ಪ್ರದೇಶಗಳು.

ಓದಿರಿ: ದಸರಾ ಸ್ಪೆಶಲ್: ಸ್ನಾಪ್‌ಡೀಲ್ ತರುತ್ತಿದೆ ಅದ್ಭುತ ಡಿಸ್ಕೌಂಟ್ ಆಫರ್ಸ್

ಆದರೆ ಒಂದು ವಿಷಯ ನೆನಪಿರಲಿ, ಅಂಧರು ನೋಡಲು ಸಾಧ್ಯವಿಲ್ಲದಿದ್ದರೂ ವಿಷಯಗಳನ್ನು ಧ್ವನಿ ಮುಖಾಂತರ ಮಾತ್ರ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಸ್ಮಾರ್ಟ್‌ಫೋನ್‌ಗಳು ಅಂತಹ ಆಡಿಯೋ ಸಿಸ್ಟಮ್‌ಗಳನ್ನು ಹೊಂದಿವೆ. ಅವರಿಗೆ ಓದಲು ಸಹ ಆಗುವುದಿಲ್ಲ. ಆದರೆ ಈಗ ಟೆಕ್‌ ತಜ್ಞರು, ಅಂಧರು ಅಕ್ಷರಗಳ ಮೇಲೆ ಬೆರಳುಗಳನ್ನು ಆಡಿಸಿ ಓದಲು ಅನುವಾಗುವಂತ ಗ್ಯಾಜೆಟ್‌ ಒಂದನ್ನು ಅಭಿವೃದ್ದಿ ಪಡಿಸಿದ್ದಾರೆ. ಅದರ ಹೆಸರು ಬ್ರೈಲ್. ಇದರಿಂದ ಅಂಧರೂ ಹೇಗೆ ಓದಬಹುದು ಎಂಬ ಇನ್ನಿತರ ಪ್ರಮುಖ ಅಂಶಗಳನ್ನು ಗಿಜ್‌ಬಾಟ್‌ ಲೇಖನದಲ್ಲಿ ನಿಮಗಾಗಿ ತಂದಿದೆ.

 ಬ್ರೈಲ್ ಟ್ಯಾಬ್ಲೆಟ್‌

ಬ್ರೈಲ್ ಟ್ಯಾಬ್ಲೆಟ್‌

ಅಂಧರಿಗಾಗಿ ಓದಲು ಸಾಧ್ಯವಾಗುವಂತೆ ಅಭಿವೃದ್ದಿ ಪಡಿಸಲಾದ ಟ್ಯಾಬ್ಲೆಟ್‌ ಹೆಸರು ಬ್ರೈಲ್.

ಅಕ್ಷರಗಳನ್ನು ಹೊರಚಾಚುತ್ತದೆ

ಅಕ್ಷರಗಳನ್ನು ಹೊರಚಾಚುತ್ತದೆ

ಪ್ರಸ್ತುದಲ್ಲಿ ಅಂಧರು ಬಳಕೆ ಮಾಡುತ್ತಿರುವ ಈ ಟ್ಯಾಬ್ಲೆಟ್‌ ಭಾಷೆ ಆಧಾರಿತ ಅಕ್ಷರಗಳನ್ನು ಹೊರಚಾಚುತ್ತದೆ. ಅಂಧರು ಅಕ್ಷರಗಳ ಮೇಲೆ ಬೆರಳು ಆಡಿಸಿ ಅದನ್ನು ಓದಬಹುದಾಗಿದೆ.

 ವೇಗವಾಗಿ ಓದಲು ಉತ್ತಮ ಗ್ಯಾಜೆಟ್‌

ವೇಗವಾಗಿ ಓದಲು ಉತ್ತಮ ಗ್ಯಾಜೆಟ್‌

ಬ್ರೈಲ್‌ ಬಳಕೆ ಮಾಡಲು ಕಷ್ಟಕರವಾಗಿಲ್ಲ. ಅಂಧರು ವೇಗವಾಗಿ ಓದಲು ಉತ್ತಮ ಗ್ಯಾಜೆಟ್‌ ಆಗಿದೆ.

ಇತರ ಭಾಷೆಯ ಮಾಹಿತಿಯನ್ನು ಬ್ರೈಲ್‌ಗೆ ಭಾಷಾಂತರ

ಇತರ ಭಾಷೆಯ ಮಾಹಿತಿಯನ್ನು ಬ್ರೈಲ್‌ಗೆ ಭಾಷಾಂತರ

ಬ್ರೈಲ್‌ ನಲ್ಲಿ ಎಲ್ಲವನ್ನು ಓದಲು ಸಾಧ್ಯವಿಲ್ಲ. ಇತರ ಭಾಷೆಯ ಮಾಹಿತಿಯನ್ನು ಭಾಷಾಂತರ ಮಾಡಿ ಬ್ರೈಲ್‌ ಭಾಷೆಗೆ ಭಾಷಾಂತರ ಮಾಡಿದಾಗ ಮಾತ್ರ ಓದಲು ಸಾಧ್ಯವಾಗುತ್ತದೆ.

ಬ್ಲಿಟಾಬ್ ಟೆಕ್ನಾಲಜೀಸ್‌

ಬ್ಲಿಟಾಬ್ ಟೆಕ್ನಾಲಜೀಸ್‌

ಆಸ್ಟ್ರಿಯನ್‌ ಬ್ಲಿಟಾಬ್ ಟೆಕ್ನಾಲಜೀಸ್‌ ಎಂಬ ಕಂಪನಿಯೊಂದು ಬ್ರೈಲ್‌ ಕಂಪ್ಯೂಟರ್‌ ಟ್ಯಾಬ್ಲೆಟ್‌ ಅನ್ನು ಅಭಿವೃದ್ದಿ ಪಡಿಸಿದ್ದು, ಬ್ರೈಲ್‌ ಭಾಷೆಯನ್ನು ಅಂಧರು ಬೆರಳುಗಳಲ್ಲಿ ಸ್ಪರ್ಶಿಸಿ ಓದಲು ಅನುಕೂಲವಾಗಿದೆ.

ಬ್ಲಿಟಾಬ್ ಯುವಕ

ಬ್ಲಿಟಾಬ್ ಯುವಕ

ಎಲ್ಲರೂ ಅಂಧರಿಗೆ ಪರಿಹಾರವಾಗಿ ಟೆಕ್‌ ಅಭಿವೃದ್ದಿ ಪಡಿಸಬೇಕು ಎಂದು ಭಾವಿಸುತ್ತಾರಾದರೂ, ಇದನ್ನು ಬ್ಲಿಟಾಬ್‌ ಯುವಕನೊಬ್ಬ ಕಂಡುಹಿಡಿದಿದ್ದಾನೆ.

ಬಬಲ್ಸ್‌ಗಳ ಪ್ರದರ್ಶನ

ಬಬಲ್ಸ್‌ಗಳ ಪ್ರದರ್ಶನ

ಬ್ರೈಲ್‌ ಡಿಸ್ಪ್ಲೇಯಲ್ಲಿ ಸಣ್ಣ ಬಬಲ್ಸ್‌ಗಳನ್ನು ಪ್ರದರ್ಶಿಸಿ ನಂತರದಲ್ಲಿ ಸಂದೇಶದ ಪ್ರಕಾರ ಅವುಗಳು ಹೋಗುತ್ತವೆ.

2016 ರ ಕೊನೆಯಲ್ಲಿ ಬಿಡುಗಡೆ

2016 ರ ಕೊನೆಯಲ್ಲಿ ಬಿಡುಗಡೆ

ಬ್ರೈಲ್‌ ಅನ್ನು 2016 ರ ಕೊನೆಯಲ್ಲಿ ಬಿಡುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಆದರೆ ಪ್ರಕ್ರಿಯೆ ಅಜ್ಞಾತವಾಗಿದೆ ಎನ್ನಲಾಗಿದೆ. ಹಾಗೂ ಉತ್ಪಾದನೆಗೆ ಹೆಚ್ಚು ಹಣದ ಅವಶ್ಯಕತೆ ಇದೆ.

Best Mobiles in India

English summary
Using smartphones isn’t that difficult for blind people as most systems come with audio support for them to use. They can navigate and control it via sound commands, but they can only get voice-based results.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X