500 Mbps ವೇಗದ ಬ್ರಾಡ್‌ಬ್ಯಾಂಡ್‌ ಯಾವುದು ಬೆಸ್ಟ್‌?..ಇಲ್ಲಿದೆ ಮಾಹಿತಿ!

|

ದೇಶದ ಬ್ರಾಡ್‌ಬ್ಯಾಂಡ್‌ ವಲಯದಲ್ಲಿ ಕಂಪನಿಗಳು ಭಿನ್ನ ಸಾಮರ್ಥ್ಯದ ವೇಗದಲ್ಲಿ ಯೋಜನೆಗಳ ಆಯ್ಕೆ ಹೊಂದಿವೆ. ಆ ಪೈಕಿ ಜಿಯೋ ಫೈಬರ್, ಏರ್‌ಟೆಲ್‌, ACT, ಟಾಟಾಸ್ಕೈ ನಂತಹ ಸಂಸ್ಥೆಗಳು ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ. ಅಲ್ಪ ವೇಗದ ಸಾಮರ್ಥ್ಯದೊಂದಿಗೆ ಹೈ ಸ್ಪೀಡ್‌ ಸಾಮರ್ಥ್ಯದ ಬ್ರಾಡ್‌ಬ್ಯಾಂಡ್‌ ಅದಾಗ್ಯೂ ಬಹುತೇಕ ಬಳಕೆದಾರರು ಬಜೆಟ್‌ ದರದಲ್ಲಿ ಲಭ್ಯವಿರುವ ಉನ್ನತ ವೇಗ ಯೋಜನೆಗಳಿಗೆ ಬೇಡಿಕೆ ಹೆಚ್ಚು.

ಬ್ರಾಡ್‌ಬ್ಯಾಂಡ್‌

ಹೌದು, ಜನಪ್ರಿಯ ಬ್ರಾಡ್‌ಬ್ಯಾಂಡ್‌ ಸಂಸ್ಥೆಗಳು ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ವೇಗದ ಸೇವೆಯ ಯೋಜನೆಗಳನ್ನು ಪರಿಚಯಿಸಿವೆ. ಈ ನಿಟ್ಟಿನಲ್ಲಿ ರಿಲಾಯನ್ಸ್‌ ಜಿಯೋ ಫೈಬರ್, ಸ್ಪೆಕ್ಟ್ರಾ ಫೈಬರ್ ಯೋಜನೆಗಳು 500Mbps ವೇಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳ ಆಯ್ಕೆಯನ್ನು ಪರಿಚಯಿಸಿವೆ. ಆದರೆ 100Mbps ವೇಗದ ಯೋಜನೆಗಳೆ ಹೆಚ್ಚು ಸದ್ದು ಮಾಡಿವೆ. ಹಾಗಾದರೇ 500Mbps ವೇಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋ ಫೈಬರ್ ಯೋಜನೆ

ಜಿಯೋ ಫೈಬರ್ ಯೋಜನೆ

ಜಿಯೋ ಫೈಬರ್ 2,499ರೂ. ಯೋಜನೆಯು ಬಳಕೆದಾರರಿಗೆ 500Mbps ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಒದಗಿಸುತ್ತದೆ. ಈ ಯೋಜನೆಯು 2,499ರೂ. ಪ್ರೈಸ್‌ಟ್ಯಾಗ್‌ನಲ್ಲಿದ್ದು, ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆಯು ವಾರ್ಷಿಕ ಮಾನ್ಯತೆಯೊಂದಿಗೆ ಲಭ್ಯವಿದೆ. ಬಳಕೆದಾರರು ಬ್ರಾಡ್‌ಬ್ಯಾಂಡ್ ಸಂಪರ್ಕ ಮತ್ತು ಉಚಿತ ಜಿಯೋ ಸೆಟ್-ಟಾಪ್ ಬಾಕ್ಸ್‌ನೊಂದಿಗೆ ಅನಿಯಮಿತ ವಾಯಿಸ್‌ ಕರೆ ಪಡೆಯುತ್ತಾರೆ. ಈ ಯೋಜನೆ 3.3TB ಅಥವಾ 3,300GB ಮಾಸಿಕ ಡೇಟಾವನ್ನು ರವಾನಿಸುತ್ತದೆ.

ಜಿಯೋ ಪ್ಲ್ಯಾನ್ ಪ್ರಯೋಜನೆಗಳು

ಜಿಯೋ ಪ್ಲ್ಯಾನ್ ಪ್ರಯೋಜನೆಗಳು

ಯೋಜನೆಯೊಂದಿಗೆ ಉಚಿತ ಓವರ್-ದಿ-ಟಾಪ್ (OTT) ಪ್ಲಾಟ್‌ಫಾರ್ಮ್ ಚಂದಾದಾರಿಕೆಗಳಿವೆ. ಬಳಕೆದಾರರು ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ವೂಟ್ ಕಿಡ್ಸ್, ಎಎಲ್‌ಟಿ ಬಾಲಾಜಿ, ಶೆಮರೂ ಮಿ, ವೂಟ್ ಸೆಲೆಕ್ಟ್, ಹೊಯಿಚೋಯ್, ಲಯನ್ಸ್‌ಗೇಟ್ ಪ್ಲೇ, ಇರೋಸ್ ನೌ, ಜಿಯೋಸಾವ್ನ್, ಸನ್‌ಕ್ಸ್ಟ್, ಸೋನಿಲೈವ್, ಡಿಸ್ಕವರಿ + ಮತ್ತು ಜಿಯೋ ಸಿನೆಮಾದ ಉಚಿತ ಚಂದಾದಾರಿಕೆಯನ್ನು ಬಳಕೆದಾರರು ಪಡೆಯುತ್ತಾರೆ.

ಸ್ಪೆಕ್ಟ್ರಾ ವೇಗದ ಬ್ರಾಡ್‌ಬ್ಯಾಂಡ್‌ ಯೋಜನೆ

ಸ್ಪೆಕ್ಟ್ರಾ ವೇಗದ ಬ್ರಾಡ್‌ಬ್ಯಾಂಡ್‌ ಯೋಜನೆ

ನಂತರ ಸ್ಪೆಕ್ಟ್ರಾ ವೇಗದ ಯೋಜನೆ ಇದೆ. ಈ ಯೋಜನೆಯು ಬಳಕೆದಾರರಿಗೆ 500 Mbps ಇಂಟರ್ನೆಟ್ ವೇಗವನ್ನು ಸಹ ನೀಡುತ್ತದೆ (ಡೌನ್‌ಲೋಡ್ ಮತ್ತು ಅಪ್‌ಲೋಡ್ ಎರಡೂ). ಆದಾಗ್ಯೂ, ಬಳಕೆದಾರರು ಈ ಯೋಜನೆಯೊಂದಿಗೆ ಸಂಪೂರ್ಣ ತಿಂಗಳಿಗೆ 750GB ಯಷ್ಟು ಕಡಿಮೆ ಡೇಟಾವನ್ನು ಪಡೆಯುತ್ತಾರೆ. 1500 ಜಿಬಿ ವರೆಗೆ ಡೇಟಾ ಕ್ಯಾರಿಓವರ್ ಸೌಲಭ್ಯವಿದೆ. ಈ ಯೋಜನೆ ವಿಭಿನ್ನ ಮಾಸಿಕ ಸಂರಚನೆಗಳಲ್ಲಿಯೂ ಲಭ್ಯವಿದೆ.

Best Mobiles in India

English summary
JioFiber and Spectra both provide users living in India with an option of getting a 500 Mbps internet speed plan.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X