ಬಿಎಸ್ಎನ್ಎಲ್ ಫೈಬರ್ ಬ್ರಾಡ್ ಬ್ಯಾಂಡ್ ಗೆ ಸ್ಪರ್ಧೆ ನೀಡುತ್ತಿರುವ ಈ ಪ್ಲಾನ್ ಗಳನ್ನು ನೀವು ತಿಳಿದಿರಲೇಬೇಕು!

By Gizbot Bureau
|

ಬಿಎಸ್ಎನ್ಎಲ್ ಒಂದಷ್ಟು ಹೊಸ ಪ್ಲಾನ್ ಗಳನ್ನು ತನ್ನ ಭಾರತ್ ಫೈಬರ್ ಬ್ರಾಡ್ ಬ್ಯಾಂಡ್ ನ ಅಡಿಯಲ್ಲಿ ಪರಿಚಯಿಸಿದೆ. ಬಿಎಸ್ಎನ್ಎಲ್ ವೆಬ್ ಸೈಟ್ ಗೆ ಭೇಟಿ ನೀಡಿದರೆ ಹಲವು ರೇಂಜಿನ ಪ್ಲಾನ್ ಗಳು ನಿಮಗೆ ಲಭ್ಯವಾಗುತ್ತದೆ ಮತ್ತು 449 ರುಪಾಯಿಯಿಂದ ಪ್ರಾರಂಭವಾಗಿ 9,999 ರುಪಾಯಿವರೆಗಿನ ತಿಂಗಳ ಪಾವತಿಯ ವಿಭಿನ್ನ ಪ್ಲಾನ್ ಗಳು ಸಿಗುತ್ತದೆ.ಆದರೆ ಅವುಗಳಲ್ಲಿ ಯಾವುದು ಹೊಸ ಪ್ಲಾನ್ ಎಂಬುದನ್ನು ನೀವು ಹೇಗೆ ತಿಳಿದುಕೊಳ್ಳುತ್ತೀರಿ? ಅದರಲ್ಲಿ ಸಣ್ಣ ಹಳದಿ ಬಣ್ಣದ ಟ್ಯಾಗ್ ಇರುತ್ತದೆ ಮತ್ತು 29 ಡಿಸೆಂಬರ್ ವರೆಗೆ ಎಂದು ನಮೂದಿಸಲಾಗಿರುತ್ತದೆ. ಇದರ ಅರ್ಥ ಇಷ್ಟೇ ಈ ಹೊಸ ಪ್ಲಾನ್ ಅಥವಾ ಆಫರ್ 29 ಡಿಸೆಂಬರ್ ವರೆಗೆ ಮಾತ್ರವೇ ಬಿಎಸ್ಎನ್ಎಲ್ ನಿಂದ ಲಭ್ಯವಿರುತ್ತದೆ ಎಂಬುದಾಗಿದೆ.

ಬಿಎಸ್ಎನ್ಎಲ್

ಬಿಎಸ್ಎನ್ಎಲ್ 4 ಹೊಸ ಪ್ಲಾನ್ ನ್ನು ಪರಿಚಯಿಸಿದ್ದು ಕೆಲವು ಕುತೂಹಲಕಾರಿ ಆಫರ್ ಗಳನ್ನು ಇದರಲ್ಲಿ ನೀಡಿದೆ. ಹಾಗಾದ್ರೆ ಅವುಗಳ ಬಗ್ಗೆ ತಿಳಿದುಕೊಳ್ಳೋಣ ಮತ್ತು ಏರ್ ಟೆಲ್ ಬ್ರಾಡ್ ಬ್ಯಾಂಡ್, ಜಿಯೋ ಫೈಬರ್ ಮತ್ತು ಟಾಟಾ ಸ್ಕೈ ಬ್ರಾಡ್ ಬ್ಯಾಂಡ್ ಗಿಂತ ಇದು ಹೇಗೆ ಭಿನ್ನವಾಗಿದೆ ಎಂಬುದನ್ನು ನೋಡೋಣ. ಅನಿಯಮಿತ ಡಾಟಾ ಡೌನ್ ಲೋಡ್ ಗೆ ಅವಕಾಶ ಎಂದರೆ ಇದರ ಅರ್ಥ ಪ್ರತಿ ತಿಂಗಳು 3300 ಜಿಬಿ ಡಾಟಾ ಡೌನ್ ಲೋಡ್ ಮಾಡುವುದಕ್ಕೆ ಅವಕಾಶವಿರುತ್ತದೆ ಎಂಬುದಾಗಿದೆ. ಮತ್ತು ಈ ಕೆಳಗೆ ನಮೂದಿಸಲಾಗಿರುವ ಬೆಲೆಯು ತೆರಿಗೆ ರಹಿತವಾಗಿದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.

ಬಿಎಸ್ಎನ್ಎಲ್ ಭಾರತ್ ಫೈಬರ್ 499 ರುಪಾಯಿ ಪ್ಲಾನ್

ಬಿಎಸ್ಎನ್ಎಲ್ ಭಾರತ್ ಫೈಬರ್ 499 ರುಪಾಯಿ ಪ್ಲಾನ್

ರುಪಾಯಿ 499 ಕ್ಕೆ ಬಳಕೆದಾರರಿಗೆ 30 Mbps ನ ಅನಿಯಮಿತ ಡೌನ್ ಲೋಡ್ ಗೆ ಅವಕಾಶವಿರುತ್ತದೆ. ಈ ಪ್ಲಾನ್ ನಲ್ಲಿ ಅನಿಯಮಿತ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳನ್ನು ಬಳಕೆದಾರರು ಮಾಡಬಹುದು.

ಏರ್ ಟೆಲ್ ಬ್ರಾಡ್ ಬ್ಯಾಂಡ್ ರುಪಾಯಿ 499 ಪ್ಲಾನ್

499 ರುಪಾಯಿಗೆ ಏರ್ ಟೆಲ್ ನಿಂದ ಬಳಕೆದಾರರು 40 Mbps ಸ್ಪೀಡ್ ನ ಅನಿಯಮಿತ ಡೌನ್ ಲೋಡ್ ನ್ನು ಪಡೆಯಬಹುದು. ಬಿಎಸ್ಎನ್ಎಲ್ ಗಿಂತ 10 Mbps ಹೆಚ್ಚು ವೇಗವನ್ನು ಏರ್ ಟೆಲ್ ಆಫರ್ ಮಾಡುತ್ತದೆ. ಈ ಪ್ಲಾನ್ ನಿಂದ ಬಳಕೆದಾರರು ವೂಟ್ ಬೇಸಿಕ್, ಯುರೋಸ್ ನೌ, ಹಂಗಾಮ ಪ್ಲೇ, ಶಿಮರೋ ಮಿ, ಆಲ್ಟ್ರಾವು ಏರ್ ಟೆಲ್ ನ ಎಕ್ಸ್ಟ್ರೀಮ್ ಆಪ್ ನ ಭಾಗವಾಗಿ ಸಿಗುತ್ತದೆ.

ಜಿಯೋಫೈಬರ್ 399 ರುಪಾಯಿಯ ಬ್ರಾಡ್ ಬ್ಯಾಂಡ್ ಪ್ಲಾನ್

ಬಿಎಸ್ಎನ್ಎಲ್ ಗಿಂತ 100 ರುಪಾಯಿ ಕಡಿಮೆ ಪಾವತಿ ಮಾಡಿದರೆ ಜಿಯೋಫೈಬರ್ ಪ್ಲಾನ್ ಸಿಗುತ್ತದೆ. ಅಂದರೆ 399 ರುಪಾಯಿ ಪಾವತಿ ಮಾಡಿದರೆ 30 Mbps ವೇಗದ ಅನಿಯಮಿತ ಡಾಟ್ ಕ್ಯಾಪ್ ಜಿಯೋಫೈಬರ್ ನಲ್ಲಿ ಸಿಗುತ್ತದೆ. ಆದರೆ ಈ ಪ್ಲಾನ್ ನಲ್ಲಿ ಯಾವುದೇ ರೀತಿಯ OTT ಚಂದಾದಾರಿಕೆ ಇರುವುದಿಲ್ಲ.

ಬಿಎಸ್ಎನ್ಎಲ್ ಭಾರತ್ ಫೈಬರ್ 799 ರುಪಾಯಿ ಪ್ಲಾನ್

ಬಿಎಸ್ಎನ್ಎಲ್ ಭಾರತ್ ಫೈಬರ್ 799 ರುಪಾಯಿ ಪ್ಲಾನ್

ಬಿಎಸ್ಎನ್ಎಲ್ ನ ಭಾರತ್ ಫೈಬರ್ 799 ರುಪಾಯಿ ಪ್ಲಾನ್ ನಲ್ಲಿ ಬಳಕೆದಾರರಿಗೆ 100 Mbps ಸ್ಪೀಡ್ ನ ಅನಿಯಮಿತ ಡಾಟಾ ಸಿಗುತ್ತದೆ. ಈ ಪ್ಲಾನ್ ನಲ್ಲಿ ಸ್ಥಳೀಯ ಮತ್ತು ಎಸ್ ಡಿಟಿ ಕರೆಗಳನ್ನು ಅನಿಯಮಿತವಾಗಿ ಮಾಡುವುದಕ್ಕೆ ಬಳಕೆದಾರರಿಗೆ ಅವಕಾಶವಿದೆ.

ಏರ್ ಟೆಲ್ ಬ್ರಾಡ್ ಬ್ಯಾಂಡ್ 799 ರುಪಾಯಿ ಪ್ಲಾನ್

ಇದೇ ಬೆಲೆಗೆ ಅಂದರೆ 799 ರುಪಾಯಿಗೆ ಬಳಕೆದಾರರಿಗೆ 100 Mbps ಅನಿಯಮಿತ ಡೌನ್ ಲೋಡ್ ಏರ್ ಟೆಲ್ ನಿಂದ ಲಭ್ಯ. ಈ ಪ್ಲಾನ್ ನಲ್ಲಿ ಅನೇಕ ಸ್ಟ್ರೀಮಿಂಗ್ ಸೇವೆಗಳು ಸಿಗುತ್ತದೆ. ಈ ಪ್ಲಾನ್ ನಿಂದ ಬಳಕೆದಾರರು ವೂಟ್ ಬೇಸಿಕ್, ಯುರೋಸ್ ನೌ, ಹಂಗಾಮ ಪ್ಲೇ, ಶಿಮರೋ ಮಿ, ಆಲ್ಟ್ರಾವು ಏರ್ ಟೆಲ್ ನ ಎಕ್ಸ್ಟ್ರೀಮ್ ಆಪ್ ನ ಭಾಗವಾಗಿ ಸಿಗುತ್ತದೆ.

ಜಿಯೋಫೈಬರ್ 699 ಬ್ರಾಡ್ ಬ್ಯಾಂಡ್ ಪ್ಲಾನ್

ಬಿಎಸ್ಎನ್ಎಲ್ ಮತ್ತು ಏರ್ ಟೆಲ್ ಗಿಂತ 100 ರುಪಾಯಿ ಕಡಿಮೆ ಬೆಲೆಗೆ ಜಿಯೋಫೈಬರ್ ಲಭ್ಯವಿದ್ದು 699 ರುಪಾಯಿ ಬೆಲೆಗ 100 Mbps ವೇಗದ ಅನಿಯಮಿತ ಡಾಟಾ ಕ್ಯಾಪ್ ಇದರಲ್ಲಿದೆ. ಆದರೆ ಈ ಪ್ಲಾನ್ ನಲ್ಲಿ ಯಾವುದೇ ರೀತಿಯ OTT ಚಂದಾದಾರಿಕೆ ಇರುವುದಿಲ್ಲ.

ಟಾಟಾ ಸ್ಕೈ ಬ್ರಾಡ್ ಬ್ಯಾಂಡ್ 850 ರುಪಾಯಿ ಪ್ಲಾನ್

ಟಾಟಾ ಸ್ಕೈ ಬ್ರಾಡ್ ಬ್ಯಾಂಡ್ 850 ರುಪಾಯಿ ಪ್ಲಾನ್

100 Mbps ವೇಗಕ್ಕೆ ದುಬಾರಿ ಪ್ಲಾನ್ ಎಂದರೆ ಅದು ಟಾಟಾ ಸ್ಕೈ ಬ್ರಾಡ್ ಬ್ಯಾಂಡ್. ಬಳಕೆದಾರರು 850 ರುಪಾಯಿ ಪಾವತಿಸಿ 100 Mbps ವೇಗದ ಅನಿಯಮಿತ ಡಾಟಾವನ್ನು ಪಡೆಯಬೇಕಾಗುತ್ತದೆ.

ಬಿಎಸ್ಎನ್ಎಲ್ ಭಾರತ್ ಫೈಬರ್ 999 ರುಪಾಯಿ ಪ್ಲಾನ್

ಬಿಎಸ್ಎನ್ಎಲ್ ಭಾರತ್ ಫೈಬರ್ 999 ರುಪಾಯಿ ಪ್ಲಾನ್ ನಲ್ಲಿ ಬಳಕೆದಾರರಿಗೆ 200 Mbps ವೇಗದ ಅನಿಯಮಿತ ಡಾಟಾ ಸಿಗುತ್ತದೆ. ಇದರಲ್ಲಿ ಬಳಕೆದಾರರು ಅನಿಯಮಿತ ಸ್ಥಳೀಯ ಮತ್ತು STD ಕರೆಗಳನ್ನು ಮಾಡಬಹುದು. ಡಿಸ್ನಿ+ ಹಾಟ್ ಸ್ಟಾರ್ ಪ್ರೀಮಿಯಂ ಪ್ಯಾಕ್ ಈ ಪ್ಲಾನ್ ಮೂಲಕ ಉಚಿತವಾಗಿ ಪಡೆಯುವ ಅವಕಾಶ ಬಳಕೆದಾರರಿಗೆ ಲಭ್ಯವಿದೆ.

ಏರ್ ಟೆಲ್ ಬ್ರಾಡ್ ಬ್ಯಾಂಡ್ 999 ಪ್ಲಾನ್

ಬಿಎಸ್ಎನ್ಎಲ್ ಗೆ ಸ್ಪರ್ಧೆ ನೀಡುವುದಕ್ಕೆ ಏರ್ ಟೆಲ್ ನಿಂದ ಬಳಕೆದಾರರಿಗಾಗಿ 999 ರುಪಾಯಿ ಪ್ಲಾನ್ ಲಭ್ಯವಿದ್ದು 200 Mbps ನ ಅನಿಯಮಿತ ಡೌನ್ ಲೋಡ್ ಗೆ ಇದರಲ್ಲಿ ಅವಕಾಶವಿದೆ.ಈ ಪ್ಲಾನ್ ಮೂಲಕ ಬಳಕೆದಾರರು ಅನೇಕ ಸ್ಟ್ರೀಮಿಂಗ್ ಸೇವೆಗಳಿಗೆ ಆಕ್ಸಿಸ್ ಪಡೆಯಬಹುದಾಗಿದ್ದು ಅದರಲ್ಲಿ ಲಯನ್ಸ್ ಗೇಟ್ ವೂಟ್ ಬೇಸಿಕ್,ಯೂರೋಸ್ ನೌ,ಹಂಗಾಮ ಪ್ಲೇ, ಆಲ್ಟ್ರಾ ಗಳು ಏರ್ ಟೆಲ್ ನ ಎಕ್ಸ್ ಟ್ರೀಮ್ ಆಪ್ ನ ಭಾಗವಾಗಿ ಸಿಗುತ್ತದೆ.

ಜಿಯೋಫೈಬರ್ 999 ಬ್ರಾಡ್ ಬ್ಯಾಂಡ್ ಪ್ಲಾನ್

ಏರ್ ಟೆಲ್ ಮತ್ತು ಬಿಎಸ್ಎನ್ಎಲ್ ಗೆ ಸ್ಪರ್ಧೆ ನೀಡುವುದಕ್ಕಾಗಿ ಜಿಯೋದಲ್ಲೂ ಕೂಡ ಇದೇ ರೀತಿಯ ಆಫರ್ ಇದ್ದು 999 ರುಪಾಯಿಗೆ 150 Mbps ವೇಗದ ಅನಿಯಮಿತ ಡಾಟಾ ಕ್ಯಾಪ್ ಸಿಗುತ್ತದೆ. ಇದು ಏರ್ ಟೆಲ್ ಮತ್ತು ಬಿಎಸ್ಎನ್ಎಲ್ ಗಿಂತ 50 Mbps ಕಡಿಮೆ ವೇಗದ್ದಾಗಿರುತ್ತದೆ. ಆದರೆ ಈ ಪ್ಲಾನ್ ಮೂಲಕ OTT ಚಂದಾದಾರಿಕೆಗೆ ಆಕ್ಸಿಸ್ ಇರುತ್ತದೆ. ಅದರಲ್ಲಿ ಅಮೇಜಾನ್ ಪ್ರೈಮ್ ವೀಡಿಯೋ, ಡಿಸ್ನಿ+ಹಾಟ್ ಸ್ಟಾರ್ ವಿಐಪಿ,ಸೋನಿ ಲೈವ್, ಝೀ5, ಸನ್ ನೆಕ್ಸ್ಟ್,ವೂಟ್ ಸೇರಿದಂತ ಇನ್ನೂ ಹಲವು ಇದೆ.

ಟಾಟಾ ಸ್ಕೈ ಬ್ರಾಡ್ ಬ್ಯಾಂಡ್ 950 ರುಪಾಯಿ ಪ್ಲಾನ್

ಟಾಟಾ ಸ್ಕೈ ಬ್ರಾಡ್ ಬ್ಯಾಂಡ್ 950 ರುಪಾಯಿ ಪ್ಲಾನ್

ಜಿಯೋ ಫೈಬರ್ ಜೊತೆಗೆ ಸ್ಪರ್ಧಿಸುವುದಕ್ಕಾಗಿ ಟಾಟಾ ಸ್ಕೈ ನಲ್ಲಿ 950 ರುಪಾಯಿ ಪ್ಲಾನ್ ಇದ್ದು ಬಳಕೆದಾರರಿಗೆ 150 Mbps ವೇಗವನ್ನು ಇದು ಆಫರ್ ಮಾಡುತ್ತದೆ. 1050 ರುಪಾಯಿಗೆ 200 Mbps ವೇಗವನ್ನು ಟಾಟಾ ಸ್ಕೈ ಆಫರ್ ಮಾಡುತ್ತದೆ.

ಬಿಎಸ್ಎನ್ಎಲ್ ಭಾರತ್ ಫೈಬರ್ ರುಪಾಯಿ 1499 ಪ್ಲಾನ್

ಟಾಪ್ ಲೈನ್ ನಲ್ಲಿ ಹೊಸ ಪ್ಲಾನ್ ಎಂದರೆ ಬಿಎಸ್ಎನ್ಎಲ್ ಭಾರತ್ ಫೈಬರ್ ನ 1499 ರುಪಾಯಿಯ ಪ್ಲಾನ್. ಇದರಲ್ಲಿ ಬಳಕೆದಾರರಿಗೆ 300 Mbps ವೇಗದ ಅನಿಯಮಿತ ಡಾಟಾ ಸಿಗುತ್ತದೆ. 3300GB ಯಿಂದ 4000GB ಗೆ ಇದನ್ನು ಹೆಚ್ಚಿಸಲಾಗಿದೆ.ಈ ಪ್ಲಾನ್ ಮೂಲಕ ಬಳಕೆದಾರರು ಉಚಿತ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳನ್ನು ಮಾಡಬಹುದು. ಡಿಸ್ನಿ+ಹಾಟ್ ಸ್ಟಾರ್ ಪ್ರೀಮಿಯಂ ಪ್ಯಾಕ್ ಗೆ ಇದರಲ್ಲಿ ಆಕ್ಸಿಸ್ ಇರುತ್ತದೆ.

ಏರ್ ಟೆಲ್ ಬ್ರಾಡ್ ಬ್ಯಾಂಡ್ ರುಪಾಯಿ1499 ಪ್ಲಾನ್

ಬಿಎಸ್ಎನ್ಎಲ್ ಗೆ ಸ್ಪರ್ಧೆ ನೀಡಲು 1499 ರುಪಾಯಿಯ ಏರ್ ಟೆಲ್ ಪ್ಲಾನ್ ಇದ್ದು ಬಳಕೆದಾರರಿಗೆ 300 Mbps ಅನಿಯಮಿತ ಡೌನ್ ಲೋಡ್ ಗೆ ಅವಕಾಶವಿರುತ್ತದೆ. ಈ ಪ್ಲಾನ್ ಮೂಲಕ ಅನೇಕ ಸ್ಟ್ರೀಮಿಂಗ್ ಸೇವೆಗಳನ್ನು ಪಡೆಯಬಹುದು. ಅದರಲ್ಲಿ ಲಯನ್ಸ್ ಟ್ಯಾಗ್ ವೂಟ್ ಬೇಸಿಕ್, ಯುರೋಸ್ ನೌ, ಹಂಗಾಮ ಪ್ಲೇ, ಶಿಮರೋ ಮಿ, ಆಲ್ಟ್ರಾ ಕೂಡ ಏರ್ ಟೆಲ್ ಎಕ್ಸ್ ಟ್ರೀಮ್ ಆಪ್ ನ ಭಾಗವಾಗಿರುತ್ತದೆ.

ಜಿಯೋ ಫೈಬರ್ 1499 ರುಪಾಯಿ ಬ್ರಾಡ್ ಬ್ಯಾಂಡ್ ಪ್ಲಾನ್

ಮೇಲಿನ ಎರಡೂ ಪ್ಲಾನ್ ಗೆ ಹೋಲಿಸಿದರೆ ಜಿಯೋ ಕೂಡ ಆಫರ್ ಮಾಡುತ್ತಿದ್ದು 1499 ರುಪಾಯಿಗೆ 300 Mbps ವೇಗದ ಅನಿಯಮಿತ ಡಾಟಾ ಪಡೆಯುವ ಅವಕಾಶ ಇದರಲ್ಲಿದೆ. ಈ ಪ್ಲಾನ್ ಮೂಲಕ OTT ಚಂದಾದಾರಿಕೆ ಆಕ್ಸಿಸ್ ಲಭ್ಯವಿದ್ದು ನೆಟ್ ಫ್ಲಿಕ್ಸ್(ಬೇಸಿಕ್),ಅಮೇಜಾನ್ ಪ್ರೈಮ್ ವೀಡಿಯೋ, ಡಿಸ್ನಿ+ಹಾಟ್ ಸ್ಟಾರ್ ವಿಐಪಿ, ಸೋನಿ ಲೈಟ್, ಝೀ5, ಸನ್ ನೆಕ್ಸ್ಟ್, ವೂಟ್, ಲಯನ್ಸ್ ಗೇಟ್ ಪ್ಲೇ, ಜಿಯೋ ಸಿನಿಮಾ, ಜಿಯೋಸಾವನ್ ಗೆ ಆಕ್ಸಿಸ್ ಇರುತ್ತದೆ.

ಟಾಟಾ ಸ್ಕೈ ಬ್ರಾಡ್ ಬ್ಯಾಂಡ್ 1500 ಪ್ಲಾನ್

ಕೊನೆಯದಾಗಿ ಟಾಟಾ ಸ್ಕೈ 300 Mbps ಪ್ಲಾನ್ ನ ಬೆಲೆ 1500 ರುಪಾಯಿಗಳು. ಪ್ರತಿ ಪ್ರೊವೈಡರ್ ಗಳು ಕೂಡ ಹೆಚ್ಚು ವೇಗವಾಗಿರುವ ವಿಭಿನ್ನ ವೇರಿಯಂಟ್ ನ ಡಾಟಾ ಕ್ಯಾಪ್ ನ್ನು ಆಫರ್ ಮಾಡುತ್ತವೆ. ನಾವಿಲ್ಲಿ ಭಾರತ್ ಫೈಬರ್ ಪ್ಲಾನ್ ನ ಹೊಸ ಪ್ಲಾನ್ ನೊಂದಿಗೆ ನೇರವಾಗಿ ಸ್ಪರ್ಧೆಗಿಳಿದಿರುವ ಪ್ಲಾನ್ ಗಳನ್ನು ಪಟ್ಟಿ ಮಾಡಿದ್ದೇವೆ. ನಿಮ್ಮ ಆಯ್ಕೆಯ ಪ್ಲಾನ್ ಖರೀದಿಸುವುದಕ್ಕೆ ಇದು ನಿಮ್ಮ ನೆರವಿಗೆ ಬರುತ್ತದೆ ಎಂದು ಭಾವಿಸಿದ್ದೇವೆ.

Best Mobiles in India

Read more about:
English summary
BSNL Bharat Fiber Broadband Pans Launched; Is It Better Than Airtel, Jio?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X