Subscribe to Gizbot

ನಿಮ್ಮತ್ರ 4G/3G ಫೋನ್ ಇದ್ದರೂ BSNL ಸಿಮ್ ಬಳಕೆ ಮಾಡ್ಬೇಕು?..ಏಕೆ ಗೊತ್ತಾ?

Written By:

4G ಮೊಬೈಲ್ ಖರೀದಿಸಿದವರೂ ಕೂಡ 3G ಡೇಟಾ ಯೂಸ್ ಮಾಡ್ಲಿ ಅಂತ BSNL ಗೆ ಆಸೇಯೋ ಏನೋ? ಬೇರೆ ಟೆಲಿಕಾಂ ಕಂಪೆನಿಗಳ 4G ಡೇಟಾಕ್ಕೆ ಸೆಡ್ಡು ಹೊಡೆದು ಭಾರಿ ಆಫರ್ ಅನ್ನು BSNL ನೀಡುತ್ತಿದೆ.! ಹೌದು, 4G ಫೀಚರ್ ಹೊಂದಿಲ್ಲದ BSNL ಕೂಡ ದರಸಮರದಲ್ಲಿ ನಿಂತಿದೆ.!!

BSNL ಕೂಡ ಟೆಲಿಕಾಂ ದರಸಮರದಲ್ಲಿ ನಿಂತಿರುವುದಕ್ಕೆ ಕಾರಣ ಇದೆ.! ಇನ್ನೇನು ಕೆಲವೇ ತಿಂಗಳುಗಳಲ್ಲಿ BSNL ಕೂಡ 4G ಸೇವೆಯನ್ನು ಹೊರತರುತ್ತಿದ್ದು, ಪ್ರಸ್ತುತ ಗ್ರಾಹಕರು ಬೇರೆ ಟೆಲಿಕಾಂಗಳಿಗೆ ಜಾರಿಹೋಗಬಾರದು ಎಂದು 3G ಗ್ರಾಹಕರಿಗೂ ಹೆಚ್ಚು ಆಫರ್ ನೀಡುತ್ತದೆ.!!

ಪ್ರಸ್ತುತ ಮೊಬೈಲ್ ಬಳಕೆದಾರರು BSNL ಸಿಮ್ ಅನ್ನು ಯೂಸ್ ಮಾಡುವುದೇ ಹೆಚ್ಚು ಲಾಭ ಎನ್ನಬಹುದು.! ಏಕೆಂದರೆ ಬೇರೆ ಯಾವುದೇ ಕಂಪೆನಿಗಳೂ ಕೂಡ 3G ಗ್ರಾಹಕರನ್ನು ಲೆಕ್ಕಕ್ಕೆ ಪರಿಗಣಿಸಿಲ್ಲ.! ಹಾಗಾದರೆ, BSNL ನೀಡಿರುವ ಪ್ರಮುಖ ಆಫರ್‌ಗಳು ಯಾವುವು ಅವುಗಳ ವಿಶೇಷತೆ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
BSNL ಸಿಕ್ಸರ್ 666

BSNL ಸಿಕ್ಸರ್ 666

ಟೆಲಿಕಾಂಗಳಿಗೆ ಸೆಡ್ಡು ಹೊಡೆದು ಬಿಎಸ್ಎನ್ಎಲ್ ಸಹ ಆಕರ್ಷಕ ಆಫರ್ ಗಳನ್ನು ಪರಿಚಯಿಸುತ್ತಿದ್ದು, ಅನಿಯಮಿತ ಧ್ವನಿ ಕರೆ, 6೦ ದಿನಗಳವರೆಗೆ ದಿನಕ್ಕೆ 2 ಜಿಬಿ ಡಾಟಾ ಸಿಗುವ ಬಿಎಸ್ಎನ್ಎಲ್ ಸಿಕ್ಸರ್ ಆಫರ್ ಪರಿಚಯಿಸಿದೆ. 3G ಬಳಕೆದಾರರಿಗೆ ಇದಕ್ಕಿಂತ ಉತ್ತಮ ಬೇರೊಂದು ಆಫರ್ ಇಲ್ಲ.!!

BSNL ಚೌಕ 444

BSNL ಚೌಕ 444

ಕೇವಲ ಡೇಟಾ ಬಳಸುವವರಿಗಾಯೇ BSNL ಬಿಡುಗಡೆ ಮಾಡಿರುವ ಅತ್ಯುತ್ತಮ ಆಫರ್ ಇದು. 444 ರೂಪಾಯಿಗಳಿಗೆ 90 ದಿನಗಳ ವರೆಗೆ ಪ್ರತಿ ದಿನ 4 ಜಿಬಿಯಂತೆ ಡಾಟಾ ಬಳಕೆ ಸೌಲಭ್ಯ ಒದಗಿಸುತ್ತಿದೆ.! ಹಾಗಾಗಿ, ಇದು ಕೂಡ ಅತ್ಯುತ್ತಮ ಎಂದು ಹೇಳಬಹುದು.!!

ತ್ರಿಪಲ್ ಎಸಿಇ-333

ತ್ರಿಪಲ್ ಎಸಿಇ-333

ಈ ಆಫರ್ ಸಹ ಡೇಟಾ ಬಳಕೆದಾರರಿಗೆ ಉತ್ತಮವಾದುದೆ. ಪ್ರತಿ ದಿನಕ್ಕೆ 3 ಜಿಬಿಯಂತೆ 90 ದಿನಗಳವರೆಗೆ ಡೇಟಾ ಬಳಕೆ ಸೌಲಭ್ಯ ನೀಡಿತ್ತು. ಕೇವಲ 2 ರೂಪಾಯಿಗಳ ಒಳಗೆ ಒಂದು gB ಡೇಟಾ ನೀಡಿರುವುದು BSNL ವಿಶೇಷತೆ.!!

ದಿಲ್ ಖೋಲ್ ಕೆ ಬೋಲ್-349!!

ದಿಲ್ ಖೋಲ್ ಕೆ ಬೋಲ್-349!!

ಕರೆ ಮತ್ತು ಡೇಟಾ ಬಳಕೆ ಮಾಡುವವರಿಗೆ ದಿಲ್ ಖೋಲ್ ಕೆ ಬೋಲ್-349 ಅತ್ಯುತ್ತಮ ಆಫರ್ ಎನ್ನಬಹುದು. 349 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಕರೆ ಮತ್ತು ಪ್ರತಿದಿನವೂ 2gB ಡೇಟಾವನ್ನು BSNL ನೀಡಿದೆ.! ಇನ್ನು ಇದಕ್ಕೆ 28 ದಿವಸಗಳ ವ್ಯಾಲಿಡಿಟಿ ಇದೆ.!!

ಓದಿರಿ:ಗೂಗಲ್ ಮ್ಯಾಪ್‌ ಮೂಲಕ ನಿಮ್ಮ ಸ್ನೇಹಿತರನ್ನು ಟ್ರಾಕ್ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Now, to compete with Reliance, BSNL has come up with an amazing data plan too. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot