ಬಿಎಸ್‌ಎನ್‌ಎಲ್‌ನ ಹೊಸ ನಡೆಗೆ ಖಾಸಗಿ ಟೆಲಿಕಾಂಗಳು ಗಪ್‌ಚುಪ್‌!

|

ಪ್ರಸ್ತುತ ದೇಶದ ಟೆಲಿಕಾಂ ವಲಯದಲ್ಲಿ ಟಾರೀಫ್‌ಗಳ ಬೆಲೆ ಏರಿಕೆಯದ್ದೇ ಸದ್ದು ನಡೆಯುತ್ತಿದ್ದೆ. ಏರ್‌ಟೆಲ್, ವೊಡಾಪೋನ್ ಮತ್ತು ಜಿಯೋ ಸಂಸ್ಥೆಗಳು ಪ್ಲ್ಯಾನ್ ಬೆಲೆ ಹೆಚ್ಚಳ ಮಾಡಿದ್ದು, ಈ ನಡೆ ಗ್ರಾಹಕರಿಗೆ ಭಾರಿ ಹೊರೆ ತಂದಿದೆ. ಇನ್ನು ಈ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಸಂಸ್ಥೆಯು ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಗ್ರಾಹಕರಿಗೆ ಸರ್‌ಪ್ರೈಸ್‌ ನೀಡುವ ಹೆಜ್ಜೆಗಳನ್ನು ಹಾಕಿದ್ದು, ಅಧಿಕ ವ್ಯಾಲಿಡಿಟಿ, ಅಧಿಕ ಡಾಟಾ ಪ್ರಯೋಜನ ನೀಡಲು ಮುಂದಾಗಿದೆ.

ಬಿಎಸ್‌ಎನ್ಎಲ್

ಹೌದು, ಬಿಎಸ್‌ಎನ್ಎಲ್ ಸಂಸ್ಥೆಯು ಇದೀಗ ತನ್ನ 399ರೂ ಮತ್ತು 449ರೂ. ಪ್ರೀಪೇಡ್ ಪ್ಲ್ಯಾನ್‌ಗಳಲ್ಲಿ ಅಪ್‌ಡೇಟ್ ಮಾಡಿದ್ದು, ಗ್ರಾಹಕರಿಗೆ ಅಧಿಕ ವ್ಯಾಲಿಡಿಟಿ ಜೊತೆಗೆ ಡಾಟಾ, ಉಚಿತ ಕರೆಗಳ ಪ್ರಯೋಜನ ಒದಗಿಸಿದೆ. ಖಾಸಗಿ ಟೆಲಿಕಾಂಗಳು ಸಹ 399ರೂ ಮತ್ತು 449ರೂ.ಪ್ರೀಪೇಡ್ ಪ್ಲ್ಯಾನ್‌ ಹೊಂದಿದ್ದು, ಆದರೆ ಅವು ಕೇವಲ 56 ದಿನಗಳ ವ್ಯಾಲಿಡಿಟಿ ಅವಧಿ ನೀಡುತ್ತಿವೆ. ಜಿಯೋ ಇತರೆ ಕರೆಗಳಿಗೆ 2,000 ಉಚಿತ ನಿಮಿಷ ಹೊಂದಿದೆ. ಈ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್‌ನ ಈ ಎರಡು ಪ್ಲ್ಯಾನ್‌ಗಳು ಗ್ರಾಹಕರನ್ನು ಆಕರ್ಷಿಸುವ ಸೂಚನೆಗಳನ್ನು ನೀಡಿವೆ.

ಬಿಎಸ್‌ಎನ್ಎಲ್ 399ರೂ ಪ್ಲ್ಯಾನ್

ಬಿಎಸ್‌ಎನ್ಎಲ್ 399ರೂ ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ 399ರೂ. ಪ್ಲ್ಯಾನ್‌ ಒಟ್ಟು 80 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ವಾಯ್ದೆಯ ಅವಧಿಯಲ್ಲಿ ಪ್ರತಿದಿನ 250 ನಿಮಿಷಗಳ ಉಚಿತ ಕರೆಗಳ ಸೌಲಭ್ಯವನ್ನು ಒಳಗೊಂಡಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ 1GB ಡಾಟಾ ಪ್ರಯೋಜನಗಳನ್ನು ಸಹ ಪಡೆದಿದೆ. ಹಾಗೆಯೇ PRBT ಪ್ರಯೋಜನಗಳನ್ನು ಒದಗಿಸಲಿದೆ.

ಬಿಎಸ್‌ಎನ್ಎಲ್ 449ರೂ ಪ್ಲ್ಯಾನ್

ಬಿಎಸ್‌ಎನ್ಎಲ್ 449ರೂ ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ 399ರೂ. ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ವಾಯ್ದೆಯ ಅವಧಿಯಲ್ಲಿ ಪ್ರತಿದಿನ 250 ನಿಮಿಷಗಳ ಉಚಿತ ಕರೆಗಳ ಸೌಲಭ್ಯವನ್ನು ಒಳಗೊಂಡಿದೆ. ಇನ್ನು ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳು ಹಾಗೂ ಪ್ರತಿದಿನ 2GB ಡಾಟಾ ಪ್ರಯೋಜನಗಳನ್ನು ಸಹ ಹೊಂದಿದೆ. ಹಾಗೆಯೇ ಬಿಎಸ್‌ಎನ್ಎಲ್ PRBT ಬೇನಿಫಿಟ್ಸ್‌ಗಳು ಸಹ ಲಭ್ಯವಾಗಲಿವೆ.

ವೊಡಾಫೋನ್ 399ರೂ ಮತ್ತು 449ರೂ. ಪ್ಲ್ಯಾನ್‌ಗಳು

ವೊಡಾಫೋನ್ 399ರೂ ಮತ್ತು 449ರೂ. ಪ್ಲ್ಯಾನ್‌ಗಳು

ವೊಡಾಫೋನ್ 56 ದಿನಗಳ ವ್ಯಾಲಿಡಿಟಿ ಅವಧಿಯ ಎರಡು ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಅವು ಕ್ರಮವಾಗಿ 399ರೂ ಮತ್ತು 449ರೂ.ಬೆಲೆಯನ್ನು ಹೊಂದಿವೆ. ಈ ಎರಡು ಪ್ಲ್ಯಾನ್‌ಗಳು ಒಟ್ಟು ಪೂರ್ಣ ವ್ಯಾಲಿಡಿಟಿ ವಾಯ್ದೆಗೆ ಸಂಪೂರ್ಣ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಪಡೆದಿವೆ. ಇನ್ನು 499ರೂ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಲಭ್ಯವಾಗಲಿದೆ. ಹಾಗೂ 399ರೂ. ಪ್ಲ್ಯಾನಿನಲ್ಲಿ 1.5GB ಡೇಟಾ ಪ್ರಯೋಜನ ಸಿಗಲಿದೆ.

ಏರ್‌ಟೆಲ್ 399ರೂ ಮತ್ತು 449ರೂ. ಪ್ಲ್ಯಾನ್‌ಗಳು

ಏರ್‌ಟೆಲ್ 399ರೂ ಮತ್ತು 449ರೂ. ಪ್ಲ್ಯಾನ್‌ಗಳು

ಏರ್‌ಟೆಲ್ ಸಹ 399ರೂ ಮತ್ತು 449ರೂ.ಬೆಲೆಯ ಎರಡು ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದ್ದು, ಇವುಗಳು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿವೆ. ಈ ವ್ಯಾಲಿಡಿಟಿ ವಾಯ್ದೆಯಲ್ಲಿ ಸಂಪೂರ್ಣ ಅನಿಯಮಿತ ಉಚಿತ ಕರೆಗಳ ಪ್ರಯೋಜನವನ್ನು ಒಳಗೊಂಡಿವೆ. ಇನ್ನು 399ರೂ. ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಲಭ್ಯವಾಗಲಿದೆ. ಹಾಗೂ 449ರೂ. ಪ್ಲ್ಯಾನಿನಲ್ಲಿ 2GB ಡೇಟಾ ಪ್ರಯೋಜನ ಸಿಗಲಿದೆ.

ಜಿಯೋ 399ರೂ ಮತ್ತು 444ರೂ. ಪ್ಲ್ಯಾನ್‌ಗಳು

ಜಿಯೋ 399ರೂ ಮತ್ತು 444ರೂ. ಪ್ಲ್ಯಾನ್‌ಗಳು

ಜಿಯೋ 399ರೂ ಮತ್ತು 444ರೂ.ಗಳ ಬೆಲೆಯ ಎರಡು ಹೊಸ ಪ್ಲ್ಯಾನ್‌ಗಳನ್ನು ಹೊಂದಿದ್ದು, ಈ ಎರಡು ಪ್ಲ್ಯಾನ್‌ಗಳು ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿವೆ. ಹಾಗೆಯೇ ಈ ಎರಡು ಪ್ಲ್ಯಾನ್‌ಗಳು ಜಿಯೋ ಟು ಜಿಯೋ ಕರೆ ಉಚಿತ ಹಾಗೂ ಇತರೆ ಟೆಲಿಕಾಂಗಳಿಗೆ 2000 ನಿಮಿಷಗಳ ಉಚಿತ ಕರೆ ಮಿತಿಯ ಸೌಲಭ್ಯ ಹೊಂದಿವೆ. ಇನ್ನು 399ರೂ ಪ್ಲ್ಯಾನ್‌ ಪ್ರತಿದಿನ 1.5GB ಮತ್ತು 444ರೂ.ಪ್ಲ್ಯಾನ್ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿವೆ.

Most Read Articles
Best Mobiles in India

English summary
BSNL is also shipping plans in the Rs 399 and Rs 449 price range which competes with the new plans from private telcos which come with 56 days validity. to know morte visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X