ಜಿಯೋ ಬ್ರಾಡ್‌ಬ್ಯಾಂಡ್ ಲಾಂಚ್ ಮುನ್ನವೇ BSNLನಿಂದ ಶಾಂಕಿಗ್ ಆಫರ್
ಫೈಬರ್ ಟು ದ ಹೋಮ್ ಸೇವೆಯನ್ನು ಆರಂಭಿಸಿರುವ BSNL ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಹೊಸದಾಗಿ ಮೂರು ಹೊಸ ಆಫರ್‌ಗಳನ್ನು ನೀಡಲು ಮುಂದಾಗಿದೆ.
ಜಿಯೋ ಬ್ರಾಡ್ ಬ್ಯಾಂಡ್ ದೇಶದಲ್ಲಿ ಸೇವೆ ಆರಂಭಿಸಲಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಬೇರೆ ಕಂಪನಿಗಳು ಮೊಬೈಲ್ ಬಳಕೆದಾರರನ್ನು ಕಳೆದುಕೊಡಂತೆ ತಮ್ಮ ಬ್ರಾಡ್ ಬ್ಯಾಂಡ್ ಗ್ರಾಹಕರನ್ನು ಉಳಿಸಿಕೊಳ್ಳಲು ಈಗಾಗಲೇ ಆಕರ್ಷಕ ಆಫರ್ ಘೋಷಣೆ ಮಾಡುವುದು ಸಾಮಾನ್ಯವಾಗಿದೆ.

ಓದಿರಿ: ಕೇವಲ ರೂ.5000ಕ್ಕೆ ದೊರೆಯಲಿದೆ ಜಿಯೋ 4G ಲ್ಯಾಪ್‌ಟಾಪ್...!?!?
ಇದೇ ಮಾದರಿಯಲ್ಲಿ ಸರಕಾರಿ ಸ್ವಾಮ್ಯದ BSNL ದೇಶಿಯ ಬ್ರಾಡ್‌ಬ್ಯಾಂಡ್ ವಲಯದಲ್ಲಿ ಸಾಕಷ್ಟು ಬಳಕೆದಾರರನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ತನ್ನ ಗ್ರಾಹಕರನ್ನು ಉಳಿಸಿಕೊಳ್ಳುವ ಸಲಯವಾಗಿ ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ನೀಡಲು ಮುಂದಾಗಿದೆ ಅದುವೇ ಅತೀ ವೇಗದ ಇಂಟರ್ನೆಟ್ ನೊಂದಿಗೆ.
ಓದಿರಿ: ನಿಮ್ಮವರು ಇನ್ನೊಬ್ಬರೊಂದಿಗೆ ಮಲಗಿದರೆ ಈ ಸ್ಮಾರ್ಟ್ ಹಾಸಿಗೆ ನಿಮಗೆ ಸಂದೇಶ ತಲುಪಿಸಲಿದೆ

ಮೂರು ಹೊಸ ಆಫರ್ ನೀಡಿದ BSNL:
ಫೈಬರ್ ಟು ದ ಹೋಮ್ ಸೇವೆಯನ್ನು ಆರಂಭಿಸಿರುವ BSNL ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಹೊಸದಾಗಿ ಮೂರು ಹೊಸ ಆಫರ್‌ಗಳನ್ನು ನೀಡಲು ಮುಂದಾಗಿದೆ. ಅದುವೇ 100Mbps ವೇಗದಲ್ಲಿ ಕಾರ್ಯನಿರ್ವಹಿಸುವ ಇಂಟರ್ನೆಟ್ ಸೇವೆಯನ್ನು ನೀಡಲು ಮುಂದಾಗಿದೆ.

FBBO ULD 998 ಪ್ಲಾನ್: ಬೆಲೆ ರೂ.998
BSNL ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಹೊಸದಾಗಿ ನೀಡಿರುವ FBBO ULD 998 ಪ್ಲಾನ್‌ನಲ್ಲಿ 40Mbps ವೇಗದ 50 GB ಡೇಟಾವನ್ನು ಬಳಕೆಗೆ ನೀಡಲಿದೆ. 50 GB ಮುಗಿದ ನಂತರ 1 Mbps ವೇಗದ ಇಂಟರ್‌ನೆಟ್ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ.

FBBO ULD 1298 ಪ್ಲಾನ್: ಬೆಲೆ ರೂ.1298
BSNL ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ನೀಡಿರುವ ಎರಡನೇ ಕೊಡುಗೆ ಇದಾಗಿದೆ. ಇದರಲ್ಲಿ 80Mbps ವೇಗದಲ್ಲಿ ಕಾರ್ಯನಿರ್ವಹಿಸುವ 125 GB ಡೇಟಾ ಬಳಕೆಗೆ ದೊರೆಯಲಿದೆ. ಇದು ಖಾಲಿಯಾದ ನಂತರದಲ್ಲಿ 1 Mbps ವೇಗದ ಇಂಟರ್‌ನೆಟ್ ಬಳಸಬಹುದಾಗಿದೆ.

FBBO ULD 1998 ಪ್ಲಾನ್: ಬೆಲೆ ರೂ.1998
BSNL ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ನೀಡಿರುವ ಉತ್ತಮ ಆಫರ್ ಇದಾಗಿದೆ ಎಂದರೆ ತಪ್ಪಾಗುವುದಿಲ್ಲ. ಇಲ್ಲಿ 100 Mbps ವೇಗದ 250GB ಡೇಟಾ ಬಳಕೆಗೆ ಮುಕ್ತವಾಗಿದೆ. ಇದು ಮುಗಿದ ನಂತರದಲ್ಲಿ 1 Mbps ವೇಗದ ಇಂಟರ್‌ನೆಟ್ ಗ್ರಾಹಕರಿಗೆ ದೊರೆಯಲಿದೆ.

ಮೇ 1 ರಿಂದ ಪ್ಲಾನ್ ಶುರು:
BSNL ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ನೀಡಿರುವ ಮೂರು ಹೊಸ ಪ್ಲಾನ್‌ಗಳನ್ನು ಮೇ 1ರಿಂದ ಶುರುವಾಗಲಿದೆ ಎನ್ನಲಾಗಿದೆ. ಬೇರೆ ಕಂಪನಿಗಳು ಈ ರೀತಿಯ ಯಾವುದೇ ಕೊಡುಗೆಯನ್ನು ನೀಡುತ್ತಿಲ್ಲ. ಜಿಯೋ ಆರಂಭಕ್ಕೂ ಮುನ್ನವೆ ಗ್ರಾಹಕರಿಗೆ ದೊರೆತಿರುವ ಭರ್ಜರಿ ಆಫರ್ ಇದಾಗಿದೆ.


Click it and Unblock the Notifications








