ಮೊಬೈಲ್‌ನಿಂದ ಲ್ಯಾಂಡ್‌ಲೈನ್‌ಗೆ ಉಚಿತ ಕರೆ ವರ್ಗಾವಣೆ: ಬಿಎಸ್ಎನ್ಎಲ್

By Suneel
|

ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ ಇತ್ತೀಚೆಗೆ ತನ್ನ ಬಳಕೆದಾರರಿಗೆ ಹೆಚ್ಚು ಹೆಚ್ಚು ಅನುಕೂಲಗಳ ಉತ್ತಮ ಆಫರ್ ನೀಡುತ್ತಲೇ ಇದೆ. ಅಂದಹಾಗೆ ಬಿಎಸ್‌ಎನ್‌ಎಲ್‌ ಈಗ ತನ್ನ ಬಳಕೆದಾರರಿಗೆ ಹೊಸ ಆಫರ್‌ ಅನ್ನು ಪ್ರಕಟಗೊಳಿಸಿದೆ. " ಫ್ರೀ ಟು ಹೋಮ್‌ (Free to Home)" ಎಂಬ ಹೊಸ ಸೇವೆಯನ್ನು ಪ್ರಾರಂಭಿಸಿದ್ದು, ಬಿಎಸ್‌ಎನ್‌ಎಲ್‌ ಮೊಬೈಲ್‌ ಬಳಕೆದಾರರು ಉಚಿತವಾಗಿ ತಮ್ಮ ಕರೆಯನ್ನು ಬಿಎಸ್‌ಎನ್‌ಎಲ್‌ ಲ್ಯಾಂಡ್‌ಲೈನ್‌ ಫೋನ್‌ಗೆ ವರ್ಗಾವಣೆ ಮಾಡುವ ಅವಕಾಶ ಇದಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

1

1

"ಬಿಎಸ್‌ಎನ್‌ಎಲ್‌ 'ಫ್ರೀ ಟು ಹೋಮ್‌' ಸೇವೆಯನ್ನು ಲಾಂಚ್‌ ಮಾಡಿದ್ದು, ಬಿಎಸ್‌ಎನ್‌ಎಲ್‌ ಮೊಬೈಲ್‌ ಬಳಕೆದಾರರು ತಮ್ಮ ಕರೆಗಳನ್ನು ಮನೆಯಲ್ಲಿ ಅಥವಾ ಕಛೇರಿಗಳಲ್ಲಿ ಬಿಎಸ್‌ಎನ್‌ಎಲ್‌ ಲ್ಯಾಂಡ್‌ಲೈನ್‌ ಫೋನ್‌ನಲ್ಲಿ ಸ್ವೀಕರಿಸಬಹುದಾಗಿದೆ. ಈ ರೀತಿಯ ಕರೆ ಸ್ವೀಕಾರ ಉಚಿತವಾಗಿದೆ. ಯಾವುದೇ ಹಣ ಕಡಿತಗೊಳ್ಳುವುದಿಲ್ಲ" ಎಂದು ಬಿಎಸ್ಎನ್‌ಎಲ್‌ ಹೇಳಿದೆ.

2

2

ಬಿಎಸ್‌ಎನ್‌ಎಲ್‌ನ "ಫ್ರೀ ಟು ಹೋಮ್‌" ಫೀಚರ್ ಹಲವು ಕರೆ ವರ್ಗಾವಣೆ ಫೀಚರ್‌ ಹೊಂದಿದ್ದು, ಅಲ್ವೇಸ್‌ ಡೈವರ್ಟ್‌(Always divert), ಕಾಲ್‌ ಡೈವರ್ಸನ್‌ ವೆನ್‌ ಬ್ಯುಸಿ(call diversion when busy), ಹೆಡ್‌ಸೆಟ್‌ ಆಫ್‌ ಆದಾಗ ಕಾಲ್‌ ಡೈವರ್ಸನ್, ನೆಟ್‌ವರ್ಕ್‌ ಸಿಗದಿದ್ದ ಸಮಯದಲ್ಲಿ ಕರೆ ವರ್ಗಾವಣೆ ಆಗುವ ಎಲ್ಲಾ ಅವಕಾಶಗಳನ್ನು ಹೊಂದಿದೆ.

3

3

ಬಿಎಸ್ಎನ್ಎಲ್‌ ಗ್ರಾಹಕರು ತಮ್ಮ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಯಾವುದೇ ಆಯ್ಕೆಯನ್ನು ಪಡೆಯಬಹುದಾಗಿದೆ ಎನ್ನಲಾಗಿದೆ.

4

4

ಬಿಎಸ್‌ಎನ್‌ಎಲ್‌'ನ "ಫ್ರೀ ಟು ಹೋಮ್‌" ಸೇವೆಯನ್ನು ಟೆಲಿಕಾಂ ಸಚಿವರಾದ 'ರವಿ ಶಂಕರ್‌ ಪ್ರಸಾದ್‌'ರವರು ಲಾಂಚ್‌ ಮಾಡಿದ್ದಾರೆ. ಹಲವು ಭಾರಿ ಕೆಲವರು ಹೆಚ್ಚು ಕರೆಗಳಿಂದ ದಿನವಿಡಿ ಸಿಟ್ಟುಗೊಳ್ಳುತ್ತಾರೆ ಮತ್ತು ಸಮಸ್ಯೆ ಎಂದು ಭಾವಿಸುತ್ತಾರೆ. ಆದ್ದರಿಂದ ಈ ಹೊಸ ಆಫರ್‌ನಿಂದ ಅಂತಹವರು ತಮ್ಮ ಬಿಎಸ್‌ಎನ್‌ಎಲ್‌ ಕರೆಗಳನ್ನು ಉಚಿತವಾಗಿ ಬಿಎಸ್‌ಎನ್‌ಎಲ್‌ ಲ್ಯಾಂಡ್‌ಲೈನ್‌ ಫೋನ್‌ಗೆ ಕರೆ ವರ್ಗಾವಣೆ ಮಾಡಬಹುದು ಎಂದಿದ್ದಾರೆ.

5

5

'ಫ್ರೀ ಟು ಹೋಮ್‌' ಸೇವೆಯು ಮೊಬೈಲ್‌ನಿಂದ ನಿರ್ಧಿಷ್ಟ ಲ್ಯಾಂಡ್‌ಲೈನ್‌ಗೆ ಟೆಲಿಕಾಂ ವೃತ್ತದ ಹೊರವಲಯ ಮತ್ತು ಒಳಗೂ ಕರೆ ವರ್ಗಾವಣೆ ಫೀಚರ್ ಹೊಂದಬಹುದಾಗಿದೆ ಎಂದು ಹೇಳಲಾಗಿದೆ. ಆದರೆ ಕರೆ ದರ ಬಿಎಸ್‌ಎನ್‌ಎಲ್‌ ಮೊಬೈಲ್‌ನಿಂದ ಬಿಎಸ್‌ಎನ್‌ಎಲ್‌ ಲ್ಯಾಂಡ್‌ಲೈನ್‌ಗೆ ಮಾತ್ರ ಉಚಿತವಾಗಿದೆ.

6

6

ಅತಿ ಹೆಚ್ಚು ವೈರ್‌ಲೆಸ್‌ ಸಂಪರ್ಕವನ್ನು ಮಾರ್ಚ್‌ 2016 ರಲ್ಲಿ ಬಿಎಸ್‌ಎನ್‌ಎಲ್‌ ನೀಡಿರುವುದಾಗಿ ಟೆಲಿಕಾಂ ನಿಯಂತ್ರಣ ಸಂಸ್ಥೆ ಟ್ರಾಯ್‌ ಬಿಡುಗಡೆಮಾಡಿದ ಡೇಟಾ ಆಧಾರದಿಂದ ಹೇಳಲಾಗಿದೆ.

7

7

ಮಾರ್ಚ್‌ 16 ರಂದು ಬಿಎಸ್‌ಎನ್‌ಎಲ್‌, ಪ್ರಸ್ತುತ ಬೆಳವಣಿಗೆ ದರ ಶೇಕಡ 0.68 ಕ್ಕಿಂತ ಶೇಕಡ 1.79 ಬೆಳವಣಿಗೆ ಹೊಂದಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

ಭಾರತದ ಪಂಚಾಯತ್‌ಗಳಿಗೆ ಬಿಎಸ್‌ಎನ್‌ಎಲ್‌ನಿಂದ ಹೈ ಸ್ಪೀಡ್ ಇಂಟರ್ನೆಟ್ ಭಾರತದ ಪಂಚಾಯತ್‌ಗಳಿಗೆ ಬಿಎಸ್‌ಎನ್‌ಎಲ್‌ನಿಂದ ಹೈ ಸ್ಪೀಡ್ ಇಂಟರ್ನೆಟ್

ಗಿಜ್‌ಬಾಟ್‌

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
BSNL offers free call transfer from mobile to landline. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X