Subscribe to Gizbot

ಇದೇ 23ನೇ ತಾರೀಖಿನೊಳಗೆ BSNL ಆಫರ್‌ಗಳಿಗೆ ರೀಚಾರ್ಜ್ ಮಾಡಿಸಿ.!! ಇಲ್ಲದಿದ್ದರೆ?

Written By:

ಜಿಯೋ ತನ್ನ ನೂತನ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದ ನಂತರ ಟೆಲಿಕಾಂನಲ್ಲಿ ಮತ್ತೆ ಅಲ್ಲೋಲ ಕಲ್ಲೋಲ ಶುರುವಾಗಿದ್ದು, ಬೇರೆ ಟೆಲಿಕಾಂ ಕಂಪೆನಿಗಳು ಕೂಡ ಭಾರೀ ಆಫರ್ ನಿಡುತ್ತವೆ.!! ಆದರೆ, ಸರ್ಕಾರಿ ಟೆಲಿಕಾಂ ಸಂಸ್ಥೆ BSNL ಮಾತ್ರ ತನ್ನ ಪ್ರಸ್ತುತ ಆಫರ್‌ಗಳನ್ನೇ ಬದಲಾವಣೆ ಮಾಡಿ ದರಸಮರದಿಂದ ಹೊರನಡೆಯುತ್ತಿದೆ.!!

ಹೌದು, BSNL ಪ್ರಸ್ತುತ ತನ್ನ ಆಫರ್‌ಗಳನ್ನು ಬದಲಾವಣೆ ಮಾಡಿಕೊಂಡಿದ್ದು, BSNL ನೀಡಿದ್ದ ಎಸ್‌ಟಿವಿ 395 ಮತ್ತು ಎಸ್‌ಟಿವಿ 333 ಪ್ಲಾನ್‌ಗಳು ಬದಲಾಗಿವೆ.!! ಹಾಗೂ, ಚೌಕ 444 ಆಫರ್ ಮೂಲಕ ಭಾರಿ ಡೇಟಾ ಆಫರ್ ನೀಡಿದ್ದ BSNL ಈ ಆಫರ್ ವಾಪಸ್ ಪಡೆದಿದೆ.!!

ಹಾಗಾದರೆ, BSNL ತನ್ನ ಆಫರ್‌ಗಳಲ್ಲಿ ಏನೆಲ್ಲಾ ಬದಲಾವಣೆ ಮಾಡಿದೆ? ಬದಲಾದ ಆಫರ್‌ಗಳು ಪ್ರಸ್ತುತ ಏನು ಪ್ಲಾನ್ ಒಳಗೊಂಡಿವೆ? ಆಫರ್ ಲಾಸ್ಟ್ ಡೇಟ್ ಯಾವುದು? BSNL ಆಫರ್ ಕಡಿತಗೊಳಿಸುತ್ತಿರುವುದೇಕೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚೌಕ 444 ಆಫರ್‌ಗೆ ಕೊನೆ?

ಚೌಕ 444 ಆಫರ್‌ಗೆ ಕೊನೆ?

ಚೌಕ 444 ಆಫರ್‌ ಮೂಲಕ 444 ರೂಪಾಯಿಗಳಿಗೆ ಪ್ರತಿದಿನ 4GB ಯಂತೆ 90 ದಿವಸಗಳ ಡೇಟಾ ನೀಡಿದ್ದ BSNL ತನ್ನ ಅತ್ಯದ್ಬುತ ಡೇಟಾ ಆಫರ್ ಅನ್ನು ವಾಪಸ್ ಪಡೆದಿದೆ ಎಂದು ಹಲವು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿವೆ.! ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ಚೌಕ ಆಫರ್‌ ಯಾವುದೇ ಕಾರಣಗಳಿಲ್ಲದೆ ನಿಂತು ಹೋದಂತಾಗಿದೆ.!!

BSNL ಎಸ್‌ಟಿವಿ 395 ಆಫರ್.!!

BSNL ಎಸ್‌ಟಿವಿ 395 ಆಫರ್.!!

ಚೌಕ ಆಫರ್‌ ಯಾವುದೇ ಕಾರಣಗಳಿಲ್ಲದೆ ನಿಂತು ಹೋದರೆ BSNLನ ಮತ್ತೊಂದು ಆಫರ್ ಎಸ್‌ಟಿವಿ 395 ರೀಚಾರ್ಜ್ ಪ್ಲಾನ್ ಪ್ರಸ್ತುತ ಇದ್ದ ಆಫರ್‌ ಅನ್ನೇ ಕಡಿಮೆಗೊಳಿಸಿದೆ.!! ನೂತನ BSNL ಎಸ್‌ಟಿವಿ 395 ಆಫರ್ ಪ್ರತಿದಿನ 2GB ಡೇಟಾ, 3000 BSNL ಟು BSNL ಕರೆಗಳು ಹಾಗೂ ಬೇರೆ ನೆಟ್‌ವರ್ಕ್ 1800 BSNL ಕರೆ ಮಾಡಬಹುದಾಗಿದೆ.!! ವ್ಯಾಲಿಡಿಟಿಯನ್ನು ಕಡಿತ ಮಾಡಲಾಗಿದ್ದು, 71 ದಿವಸಗಳಿಂದ 56 ದಿವಸಗಳಿಗೆ ಇಳಿಸಲಾಗಿದೆ.!!

BSNL ಎಸ್‌ಟಿವಿ 333 ರೂ. ಆಫರ್.!!

BSNL ಎಸ್‌ಟಿವಿ 333 ರೂ. ಆಫರ್.!!

BSNL ಎಸ್‌ಟಿವಿ 333 ರೂ. ಆಫರ್ ಸಹ ವ್ಯಾಲಿಡಿಟಿ ಕಡಿತಗೊಂಡಿದ್ದು, ಮೊದಲಿದ್ದ 3GB ಡೇಟಾ 90 ದಿವಸಗಳ ವರೆಗೆ ಕಡಿತಗೊಂಡು ಇದೀಗ 2GB ಡೇಟಾ 56 ದಿವಸಗಳವರೆಗೆ ಮಾತ್ರ ಲಭ್ಯವಿದೆ.! ಹಾಗಾಗಿ, ಈ ಆಫರ್ ಕೂಡ ಭಾರಿ ಕಡಿತಗೊಂಡಿದೆ.

ಇದೇ ತಿಂಗಳ 23 ರ ನಂತರ ಆಫರ್ ಚೇಂಜ್!!

ಇದೇ ತಿಂಗಳ 23 ರ ನಂತರ ಆಫರ್ ಚೇಂಜ್!!

BSNL ತನ್ನ ಮೂರು ಮುಖ್ಯ ಆಫರ್‌ಗಳನ್ನು ಕಡಿತ ಮಾಡುತ್ತಿದ್ದು, ಅದರಲ್ಲಿಯೂ ಚೌಕ 444ಆಫರ್ ಕೊನೆಯಾಗುತ್ತಿದೆ. ಇದೇ ತಿಂಗಳ ಇದೇ ತಿಂಗಳ 23 ನೇ ತಾರೀಖಿನ ನಂತರ BSNLನ ಮೂರು ಆಫರ್‌ಗಳು ಕಡಿತವಾಗಲಿದ್ದು, ಈ ಸಮಯದ ಒಳಗಾಗಿ ಈ ಆಫರ್ ಪಡೆಯಬಹುಹುದು.!

ಹಿಂದೆಜ್ಜೆ ಇಟ್ಟ BSNL !!

ಹಿಂದೆಜ್ಜೆ ಇಟ್ಟ BSNL !!

ಜಿಯೋ ಹೊಸ ಆಫರ್‌ಗಳನ್ನು ಬಿಡುಗಡೆ ಮಾಡಿದ ನಂತರ ಹೊಸ ಹೊಸ ಆಫರ್‌ಗಳನ್ನು BSNL ಬಿಡುಗಡೆ ಮಾಡುತ್ತದೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಜಿಯೋ ಆಫರ್ ನಂತರ BSNL ಹಿಂದೆ ಹೆಜ್ಜೆ ಇಟ್ಟಿದ್ದು, ಟೆಲಿಕಾಂ ದರಸಮರದಿಂದ ಹೊರನಡೆದಿದೆ.!!

ಓದಿರಿ:3ನೇ ವರ್ಷಕ್ಕೆ ಶಿಯೋಮಿ ಭಾರಿ ಆಫರ್..1 ರೂ.ಗೆ ಫ್ಲಾಶ್‌ಸೇಲ್!! ಯಾವಾಗ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
State run telecom operator BSNL is pulling themselves back from the race for some unknown reasons. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot