ಜಿಯೋ, ಏರ್‌ಟೆಲ್‌ಗೆ ಎಚ್ಚರಿಕೆ: ವಿಶ್ವದಲ್ಲೇ ಮೊದಲು 5G ತರಲಿದೆಯಂತೆ BSNL!!

|

ಟೆಲಿಕಾಂ ಕ್ಷೇತ್ರದಲ್ಲಿ ಸಾಂಪ್ರದಾಯಿಕತೆಗೆ ಅಂಟಿಕೊಂಡಿದ್ದ ಬಿಎಸ್‌ಎನ್‌ಎಲ್‌ಗೆ ಅನ್ನು ಮಾರ್ಪಡಿಸಲು ಸರ್ಕಾರ ಮುಂದಾಗಿದೆ. 4G ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದೆ ಒಂದು ದಶಕದ ಕಾಲ ಹಿಂರುಳಿದಿದ್ದ ಸರ್ಕಾರಿ ನಿಯಮಿತ ಟೆಲಿಕಾಂ ಕಂಪೆನಿ ಬಿಎಸ್‌ಎನ್‌ಎಲ್‌, ಇದೀಗ ಖಾಸಾಗಿ ಟೆಲಿಕಾಂ ಕಂಪೆನಿಗಳ ಹೆಡೆಮುರಿ ಕಟ್ಟುವಂತಹ ಹೇಳಿಕೆಯೊಂದನ್ನು ನೀಡಿದೆ.

ಜಿಯೋ, ಏರ್‌ಟೆಲ್‌ಗೆ ಎಚ್ಚರಿಕೆ: ವಿಶ್ವದಲ್ಲೇ ಮೊದಲು 5G ತರಲಿದೆಯಂತೆ BSNL!!

ಹೌದು, ಜಿಯೋ, ಏರ್‌ಟೆಲ್ ಶೀಘ್ರದಲ್ಲೇ 5ಜಿ ಸೇವೆಗಳನ್ನು ಜಾಗತಿಕವಾಗಿ ಜಾರಿಗೆ ತರುವುದಾಗಿ ಘೋಷಿಸಿಕೊಂಡ ನಂತರ ಬಿಎಸ್‌ಎನ್​ಎಲ್ ಗುಡುಗಿದೆ. ಖಾಸಾಗಿ ಟೆಲಿಕಾಂ ಕಂಪೆನಿಗಳಿಗಿಂತ ಮೊದಲೇ 5ಜಿ ನೆಟ್​ವರ್ಕ್​ಗಳನ್ನು ದೇಶದೆಲ್ಲೆಡೆ ಲಾಂಚ್​ ಮಾಡುವುದಾಗಿ ಬಿಎಸ್ಎನ್​ಎಲ್ ಸಂಸ್ಥೆ ಪ್ರಧಾನ ವ್ಯವಸ್ಥಾಪಕರಾದ ಅನಿಲ್​ ಜೈನ್​ ಸುದ್ದಿಗಾರರರೊಂದಿಗೆ ಹೇಳಿದ್ದಾರೆ.

4ಜಿ ಬಸ್ ಮಿಸ್ ಆಗಿದೆ!!

4ಜಿ ಬಸ್ ಮಿಸ್ ಆಗಿದೆ!!

ನಾವು 4ಜಿ ಬಸ್​ ಅನ್ನು ಮಿಸ್​ ಮಾಡಿಕೊಂಡಿದ್ದೇವೆ. ಆದರೆ, ನಾವು 5ಜಿ ಬಸ್​ ಅನ್ನು ಮಿಸ್​ ಮಾಡಿಕೊಳ್ಳಲು ತಯಾರಿಲ್ಲ. 'ಬಿಎಸ್ಎನ್​ಎಲ್​ಗಿಂತ ಮುಂಚಿತವಾಗಿ ಭಾರತದಲ್ಲಿ ಯಾರೂ 5ಜಿ ಸೇವೆಗಳನ್ನು ಲಾಂಚ್​ ಮಾಡುವುದಿಲ್ಲ ಎಂದು ನಾನು ಹೇಳಬಲ್ಲೆ' ಎನ್ನುವ ಮೂಲಕ, ಜಿಯೋ, ಏರ್‌ಟೆಲ್ ಸೇರಿದಂತೆ ಎಲ್ಲಾ ಖಾಸಾಗಿ ಟೆಲಿಕಾಂ ಕಂಪೆನಿಗಳಿಗೂ ಎಚ್ಚರಿಕೆ ರವಾನಿಸಿದ್ದಾರೆ.

2019ರಲ್ಲಿಯೇ ಭಾರತಕ್ಕೆ 5G!

2019ರಲ್ಲಿಯೇ ಭಾರತಕ್ಕೆ 5G!

ಜಾಗತಿಕವಾಗಿ 2020ರ ವೇಳೆಗೆ 5ಜಿ ಸೇವೆಗಳು ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಆದರೆ, 2019ರ ಒಳಗೆಯೇ ಭಾರತದಲ್ಲಿ 5G ಲಾಂಚ್​ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಆಪರೇಟರ್​ಗಳಾದ ನೋಕಿಯಾ ಮತ್ತಯ ಎನ್​ಟಿಟಿ ಅಡ್ವಾನ್ಸ್ ಟೆಕ್ನಾಲಜಿ ಜತೆಗೆ ಬಿಎಸ್‌ಎನ್‌ಎಲ್‌ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಅನಿಲ್ ಜೈನ್​ ತಿಳಿಸಿದ್ದಾರೆ.

ಸಂವಹನ ವೇಗ 100ಪಟ್ಟು ಹೆಚ್ಚು!!

ಸಂವಹನ ವೇಗ 100ಪಟ್ಟು ಹೆಚ್ಚು!!

5ಜಿ ನೆಟ್‌ವರ್ಕ್‌ ತಂತ್ರಜ್ಞಾನ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬಂದರೆ ಸಂವಹನ ವೇಗ 4ಜಿಗಿಂತ 100ಪಟ್ಟು ಹೆಚ್ಚಾಗಲಿದೆ. 4ಜಿ ನೆಟ್‌ವರ್ಕ್‌ನ ಸೌಲಭ್ಯಗಳ ಜತೆಗೆ, OFDM, MC-CDMA, LAS-CDMA, UWB, LMDS ನೆಟ್‌ವರ್ಕ್ ಮತ್ತು IPV6ನಂತಹ ಹಲವು ಸೌಲಭ್ಯಗಳು ಬಳಕೆದಾರರಿಗೆ ಸಿಗಲಿವೆ.!

ವರ್ಚುವಲ್ ರಿಯಾಲಿಟಿ!!

ವರ್ಚುವಲ್ ರಿಯಾಲಿಟಿ!!

ಪರಸ್ಪರ ಸಂವಹನ ಸಾಧಿಸುವ ಡಿಜಿಟಲ್‌ ಉಪಕರಣಗಳು ಆಗ್ಯುಮೆಂಟ್ ರಿಯಾಲಿಟಿ ಹಾಗೂ ವರ್ಚುವಲ್ ರಿಯಾಲಿಟಿಯಂತಹ ತಂತ್ರಜ್ಞಾನ ಬಳಕೆ ಮತ್ತಷ್ಟು ಹೆಚ್ಚಾಗಲಿದೆ. ಮನೆ, ಕಾರುಗಳೆಲ್ಲವೂ ಸ್ಮಾರ್ಟ್‌ ಆಗಲಿವೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ವೇಗ ಸಮರ್ಥವಾಗಿ ಅಂತರ್ಜಾಲ ಬಳಕೆ ಮಾಡುವ ಸೌಲಭ್ಯವನ್ನು ಈ ನೆಟ್‌ವರ್ಕ್‌ ಕಲ್ಪಿಸಲಿದೆ.!

ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ!

ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ!

ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ ಪಡೆಯುವ ತಂತ್ರಿಕತೆಯನ್ನು 5G ನೆಟ್‌ವರ್ಕ್‌ ಹೊಂದಿದೆ. ಅಂದರೆ, ನೀವು ಕಣ್ಣುಮುಚ್ಚಿ ಕಣ್ಣು ಬಿಡುವುದರ ಒಳಲಾಗಿ ಅಂತರ್ಜಾಲ 10 ಬಾರಿ ಲೋಡಿಂಗ್ ಆಗಿರಲಿದೆ. ಹಾಗಾಗಿಯೇ, 5G ನೆಟ್‌ವರ್ಕ್‌ ವೇಗಕ್ಕೆ ವಿಶ್ವವೇ ಆಶ್ಚರ್ಯದಿಂದ ಕಾಯುತ್ತಿದೆ.!

ಸಿನಿಮಾ ಡೌನ್‌ಲೋಡ್ ಆಗಲು ಸೆಕೆಂಡ್ಸ್ ಸಾಕು!

ಸಿನಿಮಾ ಡೌನ್‌ಲೋಡ್ ಆಗಲು ಸೆಕೆಂಡ್ಸ್ ಸಾಕು!

ಭವಿಷ್ಯದ 5G ನೆಟ್‌ವರ್ಕ್‌ ಬಳಕೆಗೆ ಬಂದರೆ ಎರಡೂವರೆ ಗಂಟೆ ಅವಧಿಯ ಚಲನಚಿತ್ರ ಡೌನ್‌ಲೋಡ್ ಆಗಲು ಕೇವಲ 5 ಸೆಕೆಂಡುಗಳಲ್ಲಿ ಸಾಕಾಗುತ್ತವೆ. ಪ್ರಸ್ತುತ ಜಿ ನೆಟ್‌ವರ್ಕ್‌ ಸಾಮರ್ಥ್ಯ 100ಎಂಬಿಪಿಎಸ್‌ನಿಂದ 1ಜಿಬಿವರೆಗೆ ಇದ್ದರೆ ಇದರ ಹತ್ತು ಪಟ್ಟು ವೇಗವನ್ನು 5G ನೆಟ್‌ವರ್ಕ್‌ ಪಡೆಯಲಿದೆ ಎಂದು ಹೇಳಲಾಗಿದೆ.!

Best Mobiles in India

English summary
We have missed the 4G bus.. BSNL doesn’t want to miss the 5G bus in the entire country, he said.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X