ಬಿಎಸ್ಎನ್ಎಲ್ ನಿಂದ ರುಪಾಯಿ 1,277 ರ ಹೊಸ ಬ್ರಾಡ್ ಬ್ಯಾಂಡ್ ಪ್ಲಾನ್ ಪರಿಚಯ

|

ಬಿಎಸ್ಎನ್ಎಲ್ Rs 777, Rs 3,999, Rs 5,999, Rs 9,999 ಮತ್ತು Rs 16,999 ಪ್ಲಾನ್ ಗಳಿಗೆ ಸೇರ್ಪಡೆಗೊಳ್ಳುವಂತಹ ಮತ್ತೊಂದು ಹೊಸ FTTH ಬ್ರಾಡ್ ಬ್ಯಾಂಡ್ ಪ್ಲಾನ್ ನ್ನು ಪರಿಚಯಿಸಿದೆ. ಈ ಹೊಸ ಪ್ಲಾನ್ ದೇಶದಾದ್ಯಂತ ಚಾಲ್ತಿಯಲ್ಲಿದೆ ಮತ್ತು 100 Mbps ಡೌನ್ ಲೋಡ್ ಮತ್ತು ಅಪ್ ಲೋಡ್ ವೇಗದಲ್ಲಿರುತ್ತದೆ ಮತ್ತು ಮಾಸಿಕ FUP 750GB ಆಗಿರುತ್ತದೆ.

ಬಿಎಸ್ಎನ್ಎಲ್ ನಿಂದ ರುಪಾಯಿ 1,277 ರ ಹೊಸ ಬ್ರಾಡ್ ಬ್ಯಾಂಡ್ ಪ್ಲಾನ್ ಪರಿಚಯ

ಅಂದರೆ ಒಟ್ಟಾರೆಯಾಗಿ ಪ್ರಮುಖ ಬ್ರಾಡ್ ಬ್ಯಾಂಡ್ ಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ಬಿಎಸ್ಎನ್ಎಲ್ 3.5TB ಅಥವಾ 3500GB ಡಾಟಾವನ್ನು ಗರಿಷ್ಠ 100 Mbps ವೇಗದಲ್ಲಿ ನೀಡುತ್ತದೆ. ಈ ಹೊಸ Rs 1,277 ಬ್ರಾಡ್ ಬ್ಯಾಂಡ್ ಪ್ಲಾನ್ ಮೂಲಕ ಬಿಎಸ್ಎನ್ಎಲ್ ಆಕ್ಟ್ ಫೈಬರ್ ನೆಟ್ ನ Rs 1,050 ಬ್ರಾಡ್ ಬ್ಯಾಂಡ್ ಪ್ಲಾನ್ ನೊಂದಿಗೆ ಸ್ಪರ್ಧಿಸುತ್ತದ. ಅದರಲ್ಲಿ 100 Mbps ವೇಗ ಮತ್ತು 750 GB FUP ಡೌನ್ ಲೋಡ್ + ಅಪ್ ಲೋಡ್ ಅವಕಾಶವಿರುತ್ತದೆ.

ಬಿಎಸ್ಎನ್ಎಲ್ ನ Rs 1,277 ಬ್ರಾಡ್ ಬ್ಯಾಂಡ್ ಪ್ಲಾನ್ : ಆಫರ್ ನಲ್ಲಿ ಏನಿದೆ?

ಬಿಎಸ್ಎನ್ಎಲ್ ನ Rs 1,277 ಬ್ರಾಡ್ ಬ್ಯಾಂಡ್ ಪ್ಲಾನ್ : ಆಫರ್ ನಲ್ಲಿ ಏನಿದೆ?

ಬಿಎಸ್ಎನ್ಎಲ್ ನ ಫೈಬ್ರೋ ಕೋಂಬೋ ULD 1277 ಬ್ರಾಡ್ ಬ್ಯಾಂಡ್ ಪ್ಲಾನ್ ನ ಅಡಿಯಲ್ಲಿ ಬಳಕೆದಾರರಿಗೆ 100 Mbps ಸ್ಪೀಡ್ ನಲ್ಲಿ 750GB FUP ಲಿಮಿಟ್ ನಲ್ಲಿ ಬ್ರಾಡ್ ಬ್ಯಾಂಡ್ ಸೇವೆ ಲಭ್ಯವಾಗುತ್ತದೆ. FUP ಲಿಮಿಟ್ ನ ನಂತರ ವೇಗವು 2 Mbps ಕಡಿಮೆಯಾಗುತ್ತದೆ. Rs 777 ಬ್ರಾಡ್ ಬ್ಯಾಂಡ್ ಪ್ಲಾನ್ ನಲ್ಲಿ 50 Mbps ಡೌನ್ ಲೋಡ್ ಸ್ಪೀಡ್ ಇರುತ್ತದೆ ಜೊತೆಗೆ 500GB FUP ಮತ್ತು FUP ಸ್ಪೀಡ್ ನ ನಂತರ 1 Mbps ವೇಗದಲ್ಲಿ ಸೇವೆಯು ಲಭ್ಯವಾಗುತ್ತದೆ.

ಒಂದು ತಿಂಗಳ ಅವಧಿಗೆ ಪ್ಲಾನ್ ಲಭ್ಯವಾಗುತ್ತದೆ. 1,277 ರುಪಾಯಿಯ ಸೆಕ್ಯುರಿಟಿ ಡೆಪಾಸಿಟ್ ನ್ನು ಗ್ರಾಹಕರು ನೀಡಬೇಕಾಗುತ್ತದೆ. ವಾರ್ಷಿಕ ಪಾವತಿ ಆಯ್ಕೆಯನ್ನು ಕೂಡ ಬಿಎಸ್ಎನ್ಎಲ್ ನೀಡುತ್ತದೆ. ಎರಡು ವರ್ಷಕ್ಕೆ ಒಮ್ಮೆ ಪಾವತಿ ಆಯ್ಕೆಯೂ ಇದೆ ಮತ್ತು ಮೂರು ವರ್ಷದ ಆಯ್ಕೆಯೂ ಇದೆ ಅವುಗಳು ಕ್ರಮವಾಗಿ Rs 14,047, Rs 26,817 ಮತ್ತು Rs 38,310 ಆಗಿರುತ್ತದೆ. ಈ ಹೊಸ ಬ್ರಾಡ್ ಬ್ಯಾಂಡ್ ಪ್ಲಾನ್ ಹೊಸ ಮತ್ತು ಈಗಾಗಲೇ ಇರುವ ಹಳೆಯ ಬ್ರಾಡ್ ಬ್ಯಾಂಡ್ ಗ್ರಾಹಕರಿಗೂ ಕೂಡ ಲಭ್ಯವಿರುತ್ತದೆ.

ಬಿಎಸ್ಎನ್ಎಲ್ ನಲ್ಲಿ ಇನ್ನೂ 5 FTTH ಪ್ಲಾನ್ ಗಳು :

ಬಿಎಸ್ಎನ್ಎಲ್ ನಲ್ಲಿ ಇನ್ನೂ 5 FTTH ಪ್ಲಾನ್ ಗಳು :

ಕೇವಲ Rs 1,277 ಬ್ರಾಡ್ ಬ್ಯಾಂಡ್ ಪ್ಲಾನ್ ಮಾತ್ರವೇ ಅಲ್ಲ ಬದಲಾಗಿ ಬಿಎಸ್ಎನ್ಎಲ್ ನಲ್ಲಿ ಇನ್ನೂ 5 FTTH ಪ್ಲಾನ್ ಗಳು ಲಭ್ಯವಿದೆ.ಅವುಗಳೆಂದರೆ Rs 777, Rs 3,999, Rs 5,999, Rs 9,999 and Rs 16,999. Rs 777 ಬ್ರಾಡ್ ಬ್ಯಾಂಡ್ ಪ್ಲಾನ್ ನಲ್ಲಿ 50 Mbps ವೇಗದಲ್ಲಿ 500GB FUP ಲಭ್ಯವಾಗುತ್ತದೆ. Rs 3,999 ಪ್ಲಾನ್ ನಲ್ಲಿ 60 Mbps ವೇಗದಲ್ಲಿ ಮತ್ತು 750GB FUPಯು Rs 5,999 ರಲ್ಲಿ ಬಳಕೆದಾರರಿಗೆ ಲಭ್ಯವಾಗುತ್ತದೆ ಇದರಲ್ಲಿ 1.25TB ವರೆಗೆ 70 Mbps ವೇಗವಿರುತ್ತದೆ. Rs 9,999 ಮತ್ತು Rs 16,999 ಬ್ರಾಡ್ ಬ್ಯಾಂಡ್ ಪ್ಲಾನ್ ನಲ್ಲಿ ವೇಗವು 100 Mbps ಆಗಿರುತ್ತದೆ ಆದರೆ FUP ಕ್ರಮವಾಗಿ 2.25TB ಮತ್ತು 3.5TB ಆಗಿರುತ್ತದೆ.

ಭಾರತದ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯ ಲೀಡರ್ :

ಭಾರತದ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯ ಲೀಡರ್ :

ಕಳೆದ 10 ವರ್ಷಗಳಿಂದ ಬಿಎಸ್ಎನ್ಎಲ್ ಭಾರತೀಯ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯ ನಂಬರ್ 1 ಸ್ಥಾನದಲ್ಲಿದೆ. ದೇಶದಲ್ಲಿ ಸದ್ಯ ಬಿಎಸ್ಎನ್ಎಲ್ 55% ಕ್ಕೂ ಹೆಚ್ಚಿನ ಮಾರುಕಟ್ಟೆ ಶೇರ್ ನ್ನು ಹೊಂದಿದೆ. ಆದರೆ ರಿಲಯನ್ಸ್ ಜಿಯೋ ಸದ್ಯದಲ್ಲೇ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿ ದೊಡ್ಡ ಹೆಜ್ಜೆ ಇಡುವುದಕ್ಕೆ ಚಿಂತನೆ ನಡೆಸಿದೆ. ಮುಖೇಶ್ ಅಂಬಾನಿ ಮಾಲೀಕತ್ವದ ಜಿಯೋ ಗಿಗಾಫೈಬರ್ ಸೇವೆಯು ದೇಶದಾದ್ಯಂತ ಬಿಡುಗಡೆಗೊಳ್ಳಲಿದೆ. ಸದ್ಯ ಜಿಯೋ ಉಚಿತವಾಗಿ 100 Mbps ವೇಗದ ಕನೆಕ್ಷನ್ ಮತ್ತು 1.1TB FUP ಯನ್ನು ಒಂದು ತಿಂಗಳ ಅವಧಿಗೆ ಪ್ರಿವ್ಯೂ ಆಫರ್ ನ ಭಾಗವಾಗಿ ನೀಡುತ್ತಿದೆ. ಜಿಯೋ ಪ್ರಿವ್ಯೂ ಆಫರ್ ಮೂರು ತಿಂಗಳ ಅವಧಿಯನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಿನ ಅವಧಿಗೆ ಮುಂದುವರಿಯುವ ಸಾಧ್ಯತೆ ಇದೆ.

Best Mobiles in India

Read more about:
English summary
BSNL Rs 1,277 FTTH Broadband Plan With 750GB FUP and 100 Mbps Speeds Unveiled

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X