ಬಿಎಸ್‌ಎನ್‌ಎಲ್‌ನ 199ರೂ. ಪ್ಲ್ಯಾನಿನಲ್ಲಿ ಪರಿಷ್ಕರಣೆ; ಜಿಯೋಗೆ ಟಾಂಗ್!

|

ಬಿಎಸ್‌ಎನ್ಎಲ್ ಟೆಲಿಕಾಂ ಸಂಸ್ಥೆಯು ಇತ್ತೀಚಿಗೆ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ನೇರವಾಗಿ ಪೈಪೋಟಿ ನೀಡುವ ಯೋಜನೆಗಳನ್ನು ಪರಿಚಯಿಸುತ್ತ ಸಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲವು ಆಕರ್ಷಕ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಇದೀಗ ಬಿಎಸ್‌ಎನ್ಎಲ್ ತನ್ನ ಅಗ್ಗದ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ವೊಂದನ್ನು ಪರಿಷ್ಕರಿಸಿದ್ದು, ಈ ಆಕರ್ಷಕ ಪ್ರಯೋಜನ ಒದಗಿಸಿದೆ.

ಜನಪ್ರಿಯ

ಹೌದು, ಬಿಎಸ್‌ಎನ್ಎಲ್ ಇದೀಗ ತನ್ನ ಜನಪ್ರಿಯ 199ರೂ.ಗಳ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ ಅನ್ನು ಪರಿಷ್ಕರಣೆ ಮಾಡಿದೆ. ಈ ಯೋಜನೆಯಲ್ಲಿ ಡೇಟಾ ಸೌಲಭ್ಯದ ಜೊತೆಗೆ 300 ನಿಮಿಷಗಳ ಆಫ್-ನೆಟ್ ಕರೆಗಳ ಸೌಲಭ್ಯ ಪಡೆದಿತ್ತು. ಆದರೆ ಇದೀಗ ಬಿಎಸ್‌ಎನ್‌ಎಲ್‌ ಕರೆಯ ಮಿತಿಯನ್ನು ತೆಗೆದಿದ್ದು, ಸಂಪೂರ್ಣ ಅನಿಯಮಿತ ಕರೆಯ ಪ್ರಯೋಜನ ನೀಡಿದೆ. ಈ ಮೂಲಕ ಜಿಯೋದ 199ರೂ. ಪೋಸ್ಟ್‌ಪೇಯ್ಡ್‌ ಯೋಜನೆಗೆ ನೇರವಾಗಿ ಸ್ಪರ್ಧೆ ಒಡ್ಡಿದೆ. ಹಾಗಾದರೇ ಬಿಎಸ್‌ಎನ್‌ಎಲ್‌ನ 199ರೂ. ಪೋಸ್ಟ್‌ಪೇಯ್ಡ್‌ ಯೋಜನೆಯ ಪ್ರಯೋಜನಗಳೆನು ಹಾಗೂ ಇತರೆ ಪೋಸ್ಟ್‌ಪೇಯ್ಡ್‌ ಯೋಜನೆಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ 199ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 199ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಟೆಲಿಕಾಂನ 199ರೂ. ಪೋಸ್ಟ್‌ಪೇಯ್ಡ್ ಯೋಜನೆಯು ಜಿಯೋದಂತೆ ಅನಿಯಮಿತ ಆನ್-ನೆಟ್ ವಾಯ್ಸ್ ಕಾಲಿಂಗ್ ಸೌಲಭ್ಯವನ್ನು ಪಡೆದಿದೆ. ಹಾಗೆಯೇ 25GB ಡೇಟಾ ಸೌಲಭ್ಯದೊಂದಿಗೆ, 75GB ವರೆಗೆ ಡೇಟಾ ರೋಲ್‌ಓವರ್‌ ಪ್ರಯೋಜನ ಸಿಗಲಿದೆ. ಇದರೊಂದಿಗೆ ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಸಹ ಗ್ರಾಹಕರಿಗೆ ಲಭ್ಯವಾಗಲಿವೆ. ಈ ಯೋಜನೆ ಪರಿಷ್ಕರಣೆಗೊಂಡಿದ್ದು, ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯವನ್ನು ಒದಗಿಸಿದೆ.

ಬಿಎಸ್‌ಎನ್‌ಎಲ್‌ 399ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 399ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ 399ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳು 70GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ 210GB ವರೆಗೂ ಡೇಟಾ ರೋಲ್‌ ಓವರ್ ಸೌಲಭ್ಯ ಸಹ ದೊರೆಯಲಿದೆ. ಹಾಗೆಯೇ ಯಾವುದೇ ನೆಟ್‌ವರ್ಕ್‌ಗೂ ಅನಿಯಮಿತ ವಾಯಿಸ್‌ ಕರೆ ಸೌಲಭ್ಯ, ಪ್ರತಿದಿನ 100ಎಸ್‌ಎಮ್‌ಎಸ್‌ಗಳ ಪ್ರಯೋಜನಗಳನ್ನು ಈ ಯೋಜನೆಯು ಒಳಗೊಂಡಿದೆ.

ಬಿಎಸ್‌ಎನ್‌ಎಲ್ 798ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌

ಬಿಎಸ್‌ಎನ್‌ಎಲ್ 798ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌

ಈ ಪೋಸ್ಟ್‌ಪೇಯ್ಡ್ ಯೋಜನೆಯು 50GB ಹೈಸ್ಪೀಡ್ ಡೇಟಾವನ್ನು ಡಾಟಾ ರೋಲ್‌ಓವರ್‌ನೊಂದಿಗೆ 150GB ವರೆಗೆ ಅನುಮತಿಸುತ್ತದೆ. ಡೇಟಾ ಮಿತಿಯನ್ನು ತಲುಪಿದ ನಂತರ, ಬಳಕೆದಾರರಿಗೆ ಪ್ರತಿ GBಗೆ 10.24 ರೂ.ಶುಲ್ಕ ವಿಧಿಸುತ್ತದೆ. ಈ ಪೋಸ್ಟ್‌ಪೇಯ್ಡ್ ಯೋಜನೆಯು ಎಂಟಿಎನ್‌ಎಲ್ ನೆಟ್‌ವರ್ಕ್‌ನಲ್ಲಿ ಮುಂಬೈ ಮತ್ತು ದೆಹಲಿ ಸೇರಿದಂತೆ ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ.

ಬಿಎಸ್‌ಎನ್‌ಎಲ್ 999ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌

ಬಿಎಸ್‌ಎನ್‌ಎಲ್ 999ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ನ ಈ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ 22GB ವರೆಗೆ ಡೇಟಾ ರೋಲ್‌ಓವರ್‌ನೊಂದಿಗೆ 75GB ಹೈಸ್ಪೀಡ್ ಡೇಟಾವನ್ನು ನೀಡುತ್ತದೆ. ಡೇಟಾ ಮಿತಿಯನ್ನು ತಲುಪಿದ ನಂತರ, ಬಳಕೆದಾರರಿಗೆ ಪ್ರತಿ GBಗೆ 10.24 ರೂ.ವಿಧಿಸುತ್ತದೆ. ಇನ್ನು ಈ ಯೋಜನೆಯು ಅನಿಯಮಿತ ವಾಯ್ಸ್‌ ಕಾಲ್‌, ಕುಟುಂಬಕ್ಕೆ 75GB ಡೇಟಾ ಮತ್ತು ದಿನಕ್ಕೆ 100 ಎಸ್‌ಎಂಎಸ್ ಹೊಂದಿರುವ 3 ಕುಟುಂಬ ಸಂಪರ್ಕಗಳನ್ನು ತರುತ್ತದೆ.

Most Read Articles
Best Mobiles in India

English summary
Customers opting for the Rs 199 postpaid plans from telecom operators generally lookout for basic benefits, especially the unlimited calling.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X