Jio, Airtel, Vi ವಾರ್ಷಿಕ ಪ್ಯಾನ್‌ಗಿಂತ BSNL 1,999ರೂ. ಪ್ಲ್ಯಾನ್‌ ಬೆಸ್ಟ್!

|

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ, ಏರ್‌ಟೆಲ್‌ ಹಾಗೂ ವೊಡಾಫೋನ್‌-ಐಡಿಯಾ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಈ ಟೆಲಿಕಾಂಗಳು ಭರ್ಜರಿ ಡೇಟಾ ಕೊಡುಗೆಗಳನ್ನು ಪರಿಚಯಿಸಿವೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಸಹ ಖಾಸಗಿ ಟೆಲಿಕಾಂಗಳಿಗೆ ಸೆಡ್ಡು ಹೊಡೆಯುವಂತಹ ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ದೀರ್ಘಾವಧಿ ವ್ಯಾಲಿಡಿಟಿಯ ಪ್ಲ್ಯಾನ್‌ಗಳು ಸೇರಿವೆ.

ಬಿಎಸ್ಎನ್ಎಲ್

ಹೌದು, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಸೇರಿದಂತೆ ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳು ಸಹ ವಾರ್ಷಿಕ ಯೋಜನೆಗಳನ್ನು ಹೊಂದಿವೆ. ಈ ಪೈಕಿ ಬಿಎಸ್‌ಎನ್‌ಎಲ್‌ ಇತ್ತೀಚೆಗೆ ತನ್ನ 1,999ರೂ. ಪ್ರಿಪೇಯ್ಡ್ ಯೋಜನೆಯ ವ್ಯಾಲಿಡಿಟಿಯನ್ನು ವಿಸ್ತರಿಸಿದೆ. ಈ ಯೋಜನೆಯು ಈ ಹಿಂದೆ ನೀಡಿದ್ದ 365 ದಿನಗಳಿಗೆ ಹೋಲಿಸಿದರೆ 425 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಹಾಗಾದರೇ ಬಿಎಸ್‌ಎನ್‌ಎಲ್‌, ಜಿಯೋ, ಏರ್‌ಟೆಲ್‌ ಹಾಗೂ ವೊಡಾಫೋನ್‌-ಐಡಿಯಾ ಟೆಲಿಕಾಂಗಳ ವಾರ್ಷಿಕ ಯೋಜನೆಗಳಲ್ಲಿ ಯಾವುದು ಉತ್ತಮ ಎನ್ನುವ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್‌ಎಲ್ 1,999ರೂ. ಪ್ಲ್ಯಾನ್‌

ಬಿಎಸ್‌ಎನ್‌ಎಲ್ 1,999ರೂ. ಪ್ಲ್ಯಾನ್‌

ಬಿಎಸ್‌ಎನ್‌ಎಲ್ ರೂ 1,999 ಯೋಜನೆಯು ಬಳಕೆದಾರರಿಗೆ 3GB ದೈನಂದಿನ ಡೇಟಾವನ್ನು ಅನಿಯಮಿತ ಕರೆ (ಪ್ರತಿದಿನ 250 ನಿಮಿಷಗಳು), ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ. ಇದರೊಂದಿಗೆ 365 ದಿನಗಳವರೆಗೆ ಇದ್ದ ವ್ಯಾಲಿಡಿಟಿ ಈಗ 425 ದಿನಗಳಿಗೆ ಬದಲಾಯಿಸಿದೆ. ಹಾಗೆಯೇ ಕಾಲರ್ ಟ್ಯೂನ್‌ ಬದಲಾಯಿಸುವ ಆಯ್ಕೆ ಮತ್ತು 2 ತಿಂಗಳ ಕಾಲ EROS Now ಚಂದಾದಾರಿಕೆ ಮುಂತಾದ ಹೆಚ್ಚುವರಿ ಪ್ರಯೋಜನಗಳಿವೆ.

ವಿ 2,595 ರೂ. ಪ್ಲ್ಯಾನ್

ವಿ 2,595 ರೂ. ಪ್ಲ್ಯಾನ್

ವಿ ಟೆಲಿಕಾಂನ 2,595 ರೂ.ಗಳ ಯೋಜನೆಯು ಬಳಕೆದಾರರಿಗೆ 2GB ದೈನಂದಿನ ಡೇಟಾವನ್ನು ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ. ಈ ಯೋಜನೆಯು ZEE5 ಪ್ರೀಮಿಯಂ, ವಿ ಮೂವೀಸ್ ಮತ್ತು ಟಿವಿಗೆ 1 ವರ್ಷದ ಪ್ರವೇಶದ ಜೊತೆಗೆ MPL ನಲ್ಲಿ ಕ್ಯಾಶ್‌ ಬೋನಸ್ ನಂತಹ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತದೆ. ಅಲ್ಲದೆ, ಈ ಯೋಜನೆಯು ಈಗ Vi ಯ ‘ವೀಕೆಂಡ್ ಡಾಟಾ ರೋಲ್‌ಓವರ್' ಕೊಡುಗೆಯೊಂದಿಗೆ ಬರುತ್ತದೆ. ಈ ಯೋಜನೆಯ ವ್ಯಾಲಿಡಿಟಿಯು 365 ದಿನಗಳು.

ಜಿಯೋ 2121ರೂ. ಪ್ಲ್ಯಾನ್

ಜಿಯೋ 2121ರೂ. ಪ್ಲ್ಯಾನ್

ಜಿಯೋ ಟೆಲಿಕಾಂ ಇತ್ತೀಚಿಗೆ ಬಿಡುಗಡೆ ಮಾಡಿರುವ ಜಿಯೋ 2121ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರತಿದಿನ 1.5GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. ಇದರೊಂದಿಗೆ ಜಿಯೋ ಟು ಜಿಯೋ ಕರೆಗಳು ಅನಿಯಮಿತ ಉಚಿತವಾಗಿರುತ್ತವೆ. ಇನ್ನು ಜಿಯೋದಿಂದ ಇತರೆ ಟೆಲಿಕಾಂ ಸಂಸ್ಥೆಗಳಿಗೆ ಹೊರ ಹೋಗುವ ಕರೆಗಳಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ 12,000 ಉಚಿತ ನಿಮಿಷಗಳ ಪ್ರಯೋಜನ ಹೊಂದಿದೆ. ಅಂದಹಾಗೆ ಈ ಪ್ಲ್ಯಾನ್ ಒಟ್ಟು 336 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ಏರ್‌ಟೆಲ್‌ 2498ರೂ. ಪ್ಲ್ಯಾನ್‌

ಏರ್‌ಟೆಲ್‌ 2498ರೂ. ಪ್ಲ್ಯಾನ್‌

ಏರ್‌ಟೆಲ್‌ನ ಹೊಸ 2498ರೂ. ಪ್ರೀಪೇಡ್‌ ಪ್ಲ್ಯಾನ್‌ ವಾರ್ಷಿಕ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯವಾಗುತ್ತದೆ. ಹೆಚ್ಚುವರಿಯಾಗಿ Wynk ಮ್ಯೂಸಿಕ್, ಎಕ್ಸ್‌ಟ್ರಿಮ್‌ ಪ್ರೀಮಿಯಂ ಸೇವೆಗಳ ಲಭ್ಯ.

ಕೊನೆಯ ಮಾತು

ಕೊನೆಯ ಮಾತು

ಬಿಎಸ್‌ಎನ್‌ಎಲ್‌, ಏರ್‌ಟೆಲ್‌, ಜಿಯೋ ಹಾಗೂ ವಿ ಟೆಲಿಕಾಂಗಳ ವಾರ್ಷಿಕ ಯೋಜನೆಗಳ ಪ್ರಯೋಜನಗಳನ್ನು ನೋಡಿದಾಗ ಬಿಎಸ್‌ಎನ್‌ಎಲ್‌ ಟೆಲಿಕಾಂನ 1,999ರೂ.ಯೋಜನೆಯು ಉತ್ತಮ ಅನಿಸಲಿದೆ.

Best Mobiles in India

English summary
Bharat Sanchar Nigam Limited (BSNL) much recently extended the validity of its Rs 1,999 prepaid plan.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X