BSNL 198ರೂ. ಪ್ಲ್ಯಾನಿನಲ್ಲಿ ಈಗ ಸಿಗುತ್ತೆ ಡೇಟಾ ಜೊತೆ ಹೆಚ್ಚುವರಿ ಸೌಲಭ್ಯ!

|

ದೇಶದಲ್ಲಿ ಟೆಲಿಕಾಂ ವಲಯದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಾ ಸಾಗಿದ್ದು, ಹಲವು ಅತ್ಯುತ್ತಮ ಪ್ರೀಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿದೆ. ಹಾಗೆಯೇ ಗ್ರಾಹಕರಿಗೆ ಅಧಿಕ ಡೇಟಾ ಪ್ರಯೋಜನಕ್ಕಾಗಿ ಕೆಲವು ಡೇಟಾ ಪ್ಲ್ಯಾನ್‌ಗಳನ್ನು ನೀಡಿದೆ. ಆ ಪೈಕಿ ಬಿಎಸ್‌ಎನ್‌ಎಲ್ 198ರೂ ಡೇಟಾ ಪ್ಲ್ಯಾನಿನಲ್ಲಿ ಈಗ ಪರಿಷ್ಕರಣೆ ಮಾಡಿದ್ದು, ಚಂದಾದಾರರಿಗೆ ಉಪಯುಕ್ತ ಸೌಲಭ್ಯ ಸೇರ್ಪಡೆ ಮಾಡಿದೆ.

ಬಿಎಸ್‌ಎನ್‌ಎಲ್‌ ಟೆಲಿಕಾಂ

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ಇದೀಗ ತನ್ನ 198ರೂ. ಡೇಟಾ ಪ್ಲ್ಯಾನ್‌ ಅನ್ನು ಪರಿಷ್ಕರಣೆ ಮಾಡಿದ್ದು, ಉಚಿತ ಕಾಲರ್ ಟ್ಯೂನ್ ಸೌಲಭ್ಯ ಸೇರ್ಪಡೆ ಮಾಡಿದೆ. ಬಿಎಸ್‌ಎನ್‌ಎಲ್ ಈ ಡೇಟಾ ಯೋಜನೆಯು ದೇಶದ ಎಲ್ಲ ಟೆಲಿಕಾಂ ಸರ್ಕಲ್ ವ್ಯಾಪ್ತಿಯಲ್ಲಿಯೂ ಲಭ್ಯವಿದೆ. ಈ ಯೋಜನೆಯು 40 Kbps ಸಾಮರ್ಥ್ಯದ ವೇಗದಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಈ ಪ್ಲ್ಯಾನಿನ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿರಿ.

ಬಿಎಸ್‌ಎನ್ಎಲ್ 198ರೂ. ಡೇಟಾ ಪ್ಲ್ಯಾನ್

ಬಿಎಸ್‌ಎನ್ಎಲ್ 198ರೂ. ಡೇಟಾ ಪ್ಲ್ಯಾನ್

ಹೆಚ್ಚಿನ ಇಂಟರ್ನೆಟ್ ಬಳಕೆಗೆ ಅನುಕೂಲವಾಗಲೆಂದು ಬಿಎಸ್‌ಎನ್‌ಎಲ್ 198ರೂ. ಡೇಟಾ ಯೋಜನೆಯನ್ನು ಪರಿಚಯಿಸಿದೆ. ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ದೊರೆಯಲಿದ್ದು, 40 Kbps ವೇಗದಲ್ಲಿ ಡೇಟಾ ಲಭ್ಯವಾಗಲಿದೆ. ಇನ್ಜು ಈ ಯೋಜನೆಯು ಒಟ್ಟು 54 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಆದ್ರೆ ಈ ಪ್ಲ್ಯಾನ್ ಪರಿಷ್ಕರಣೆಯಿಂದಾಗಿ ಈಗ ಈ ಸೌಲಭ್ಯಗಳ ಜೊತೆಗೆ ಹೊಸದಾಗಿ ಉಚಿತ ಕಾಲರ್ ಟ್ಯೂನ್ ಸೌಲಭ್ಯ ದೊರೆಯಲಿದೆ.

ಪ್ಲ್ಯಾನ್‌ ಲಭ್ಯತೆ

ಪ್ಲ್ಯಾನ್‌ ಲಭ್ಯತೆ

ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಚೆನ್ನೈ, ಹರಿಯಾಣ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಹಲವಾರು ವಲಯಗಳಲ್ಲಿ ಬಳಕೆದಾರರಿಗೆ ಬಿಎಸ್‌ಎನ್ಎಲ್ 198ರೂ. ಡೇಟಾ ಪ್ಲ್ಯಾನ್ ಉಚಿತ ಕಾಲರ್ ಟ್ಯೂನ್ ಸೇವೆಯೊಂದಿಗೆ ಲಭ್ಯವಾಗಲಿದೆ. ಹಾಗೆಯೇ ಜಾರ್ಖಂಡ್, ಕರ್ನಾಟಕ, ಕೇರಳ, ಕೋಲ್ಕತಾ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳದ ಬಿಎಸ್‌ಎನ್‌ಎಲ್ ಬಳಕೆದಾರರು ಸಹ ಈ ಯೋಜನೆ ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ಈ ವಲಯಗಳಲ್ಲಿ ಸೌಲಭ್ಯ ಅಲಭ್ಯ

ಈ ವಲಯಗಳಲ್ಲಿ ಸೌಲಭ್ಯ ಅಲಭ್ಯ

ಬಿಎಸ್‌ಎನ್‌ಎಲ್‌ 198ರೂ ಡೇಟಾ ಪ್ಲ್ಯಾನ್‌ ನಲ್ಲಿ ಉಚಿತ ಕಾಲರ್ ಟ್ಯೂನ್ ಸೇವೆಯು ಹಲವು ಟೆಲಿಕಾಂ ಸರ್ಕಲ್‌ಗಳಲ್ಲಿ ಲಭ್ಯವಾಗಲಿದೆ. ಆದರೆ ಆಂಧ್ರಪ್ರದೇಶ ಮತ್ತು ತೆಲಂಗಾಣ ವಲಯಗಳಲ್ಲಿ ಮಾತ್ರ ಉಚಿತ ಕಾಲರ್ ಟ್ಯೂನ್ ಸೌಲಭ್ಯ ಲಭ್ಯವಾಗುವುದಿಲ್ಲ ಎನ್ನಲಾಗಿದೆ. ಹಾಗೆಯೇ ಬಿಎಸ್‌ಎನ್‌ಎಲ್ ಇತ್ತೀಚಿಗಷ್ಟೆ ಎರಡು ಹೊಸ ಪ್ರೀಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿದೆ. ಆ ಎರಡು ಪ್ಲ್ಯಾನ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ

ಬಿಎಸ್‌ಎನ್‌ಎಲ್‌ 693ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 693ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 693ರೂ. ಡೇಟಾ ಎಸ್‌ಟಿವಿ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದು ಡೇಟಾ ಪ್ರೀಪೇಯ್ಡ್ ಯೋಜನೆ ಆಗಿರುವುದರಿಂದ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ.

ಬಿಎಸ್‌ಎನ್‌ಎಲ್‌ 1,212ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 1,212ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 1,212ರೂ. ಡೇಟಾ ಎಸ್‌ಟಿವಿ ಡೇಟಾ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 500GB ಡೇಟಾ ಪ್ರಯೋಜನೆ ದೊರೆಯುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ. ಇದೊಂದು ಡೇಟಾ ಪ್ಲ್ಯಾನ್ ಆಗಿದೆ.

Most Read Articles
Best Mobiles in India

English summary
BSNL Rs 198 data plan ships with 2GB of daily data with speed reduced to 40 Kbps after reaching the set limit and a validity of 54 days.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X