ಬಿಎಸ್‌ಎನ್‌ಎಲ್‌ನ 109ರೂ. ಪ್ಲ್ಯಾನಿನಲ್ಲಿ ಡಬಲ್‌ ಡೇಟಾ: ದಂಗಾದ ಖಾಸಗಿ ಟೆಲಿಕಾಂಗಳು!

|

ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳಿಗೆ ನೇರ ಪೈಪೋಟಿ ನೀಡುತ್ತಾ ಮುನ್ನುಗ್ಗುತ್ತಿರುವ ಬಿಎಸ್‌ಎನ್‌ಎಲ್‌ ಈಗಾಗಲೇ ಹಲವು ಆಕರ್ಷಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಮೂಲಕ ಬಳಕೆದಾರರ ಗಮನ ಸೆಳೆದಿದೆ. ಇತ್ತೀಚಿಗೆ ತನ್ನ ಕೆಲವು ಜನಪ್ರಿಯ ಯೋಜನೆಗಳ ಪರಿಷ್ಕರಣೆ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಈ ನಿಟ್ಟಿನಲ್ಲಿ ಅಗ್ಗದ ಯೋಜನೆಯೊಂದರ ಪ್ರಯೋಜನಗಳಲ್ಲಿ ಈಗ ಬದಲಾವಣೆ ಘೋಷಿಸಿದೆ.

ಬಿಎಸ್‌ಎನ್ಎಲ್

ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಟೆಲಕಾಂ ಸಂಸ್ಥೆಯು ಇದೀಗ ತನ್ನ 'ಮಿತ್ರಮ್ ಪ್ಲಸ್‌ 109ರೂ. ಪ್ಲ್ಯಾನ್' ಅನ್ನು ಪರಿಷ್ಕರಣ ಮಾಡಿದೆ. ಸಂಸ್ಥೆಯು ಈ ಯೋಜನೆಯಲ್ಲಿ ಈಗ ಡಬಲ್‌ ಡೇಟಾ ಕೊಡುಗೆ ಆಫರ್ ಘೋಷಿಸಿದೆ. ಈ ಅಲ್ಪಾವಧಿಯ ರೀಚಾರ್ಜ್‌ನಲ್ಲಿ ಇದೀಗ ಗ್ರಾಹಕರಿಗೆ ಒಟ್ಟು 10GB ಡೇಟಾ ಸೌಲಭ್ಯ ಲಭ್ಯವಾಗಲಿದ್ದು, ವ್ಯಾಲಿಡಿಟಿ ಅವಧಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಯೋಜನೆಯ ಪೂರ್ಣ ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಮಿತ್ರಮ್ ಪ್ಲಸ್‌ 109ರೂ. ಪ್ಲ್ಯಾನ್ ಪ್ರಯೋಜನಗಳು

ಮಿತ್ರಮ್ ಪ್ಲಸ್‌ 109ರೂ. ಪ್ಲ್ಯಾನ್ ಪ್ರಯೋಜನಗಳು

ಬಿಎಸ್ಎನ್ಎಲ್‌ನ ಈ ಮಿತ್ರಮ್ ಪ್ಲಸ್‌ 109ರೂ. ಪ್ಲ್ಯಾನ್‌ ಒಟ್ಟು 75 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಆರಂಭಿಕ 20 ದಿನಗಳ ಅವಧಿಯಲ್ಲಿ ಯಾವುದೇ ಎಫ್‌ಯುಪಿ ಮಿತಿಯಿಲ್ಲದೆ ದೇಶದ ಯಾವುದೇ ನೆಟವರ್ಕಗೆ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ಪಡೆದಿದೆ. ಇದರೊಂದಿಗೆ 10GB ಡೇಟಾ (ಮೊದಲು 5GB ಇತ್ತು, ಈಗ ಡಬಲ್ ಡೇಟಾ ಕೊಡುಗೆಯಿದೆ) ಪ್ರಯೋಜನ ಸಹ ಇದೆ. ನಿಗದಿತ 20 ದಿನಗಳ ವ್ಯಾಲಿಡಿಟಿಗೆ ಮಾತ್ರ ಈ ಸೌಲಭ್ಯಗಳು ಲಭ್ಯ.

ಸೀಮಿತ ಅವಧಿಯ ಕೊಡುಗೆ

ಸೀಮಿತ ಅವಧಿಯ ಕೊಡುಗೆ

ಬಿಎಸ್‌ಎನ್‌ಎಲ್‌ ಟೆಲಿಕಾಂ ಇದೀಗ 109ರೂ. ಬೆಲೆಯ ಮಿತ್ರಮ್ ಪ್ಲಸ್‌ ಯೋಜನೆಯಲ್ಲಿ ಘೋಷಿಸಿರುವ ಡಬಲ್‌ ಡೇಟಾ ಕೊಡುಗೆಯು ಸೀಮಿತ ಅವಧಿಯ ಪಡೆದಿದೆ. ಅಂದರೇ ಈ ಡಬಲ್ ಡೇಟಾ ಕೊಡುಗೆಯು ಇದೇ ಮಾರ್ಚ್ 31, 2021ರ ವರೆಗೂ ಮಾತ್ರ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಹೇಳಿದೆ.

ಮಿತ್ರಮ್

ಅಂದಹಾಗೇ 109ರೂ. ಬೆಲೆಯ ಮಿತ್ರಮ್ ಪ್ಲಸ್ ಯೋಜನೆಯನ್ನು ಬಿಎಸ್ಎನ್ಎಲ್ ತೆಗೆದುಹಾಕುವ ಸಾಧ್ಯತೆಗಳಿವೆ ಎನ್ನಲಾಗಿದೆ. ಸಂಸ್ಥೆಯು ಗ್ರಾಹಕರನ್ನು ಪಿವಿ 106 ಅಥವಾ ಪಿವಿ 107 ರೀಚಾರ್ಜ್ ಯೋಜನೆಗಳತ್ತ ಸೆಳೆಯಲು ಉದ್ದೇಶಿಸಿದೆ ಎನ್ನಲಾಗಿದೆ. ಇನ್ನು ಪಿವಿ 106 3 ಜಿಬಿ ಉಚಿತ ಡೇಟಾ, 100 ನಿಮಿಷಗಳ ಉಚಿತ ಧ್ವನಿ ಕರೆಗಳು, 60 ದಿನಗಳವರೆಗೆ ಉಚಿತ ಬಿಎಸ್ಎನ್ಎಲ್ ಟ್ಯೂನ್ಸ್ ಚಂದಾದಾರಿಕೆ ಮತ್ತು 100 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಪಿವಿ 106 / ಪಿವಿ 107 ಯೋಜನೆ ಮಾನ್ಯತೆ ವಿಸ್ತರಣೆ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ.

Most Read Articles
Best Mobiles in India

English summary
The Rs 109 Mithram Plus prepaid plan from BSNL offers unlimited voice calling without any FUP limit for 20 days along with 10GB of data.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X