ಪ್ರಿಪೇಯ್ಡ್‌ ಪ್ಲಾನ್‌ಗಳ ಶುಲ್ಕವನ್ನು ಹೆಚ್ಚಿಸಿದ ಬಿಎಸ್‌ಎನ್‌ಎಲ್‌!

|

ಪ್ರಸ್ತುತ ದಿನಗಳಲ್ಲಿ ಟೆಲಿಕಾಂ ಕಂಪೆನಿಗಳು ಸುಂಕ ಹೆಚ್ಚಳ ವಿಚಾರದಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡುತ್ತಿವೆ. ಈ ವರ್ಷದ ಆರಂಭದಿಂದಲೇ ಟಾರಿಫ್‌ ಹೆಚ್ಚಿಸುವ ಪ್ರಕ್ರಿಯೆ ಆರಂಭವಾಗಿದೆ. ಸುಂಕ ಹೆಚ್ಚಳ ಎಂದರೆ ರೀಚಾರ್ಜ್‌ ಪ್ಲಾನ್‌ ಒಂದೇ ಆಗಿರುತ್ತದೆ, ಆದರೆ ಪ್ರಯೋಜನಗಳು ಮಾತ್ರ ಕಡಿಮೆ ಆಗಿರುತ್ತದೆ. ಈಗಾಗಲೇ ಏರ್‌ಟೆಲ್ ಮತ್ತು ವಿ ಟೆಲಿಕಾಂ ಗಳು ತಮ್ಮ 49 ರೂಗಳ ಪ್ರಿಪೇಯ್ಡ್ ಪ್ಲಾನ್ ರದ್ದು ಮಾಡಿವೆ. ಅಲ್ಲದೆ ತಮ್ಮ ಬೇಸ್‌ ಪ್ಲಾನ್‌ ಅನ್ನು 79ರೂ ಗಳಿಂದ ಪ್ರಾರಂಭಿಸಿವೆ. ಇದೀಗ ಸರ್ಕಾರಿ ಸ್ವಾಮ್ಯದ BSNL ತನ್ನ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಷ್ಕರಿಸಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ತನ್ನ ಟಾರಿಫ್‌ ಅನ್ನು ಹೆಚ್ಚಿಸುವುದಕ್ಕೆ ಮುಂದಾಗಿದೆ. ಇದೇ ಕಾರಣಕ್ಕೆ ತನ್ನ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಷ್ಕರಿಸಿದೆ. ಪ್ಲಾನ್‌ಗಳ ಬೆಲೆ ಒಂದೇ ಆಗಿದ್ದರೂ ಸಹ ಈ ಪ್ಲಾನ್‌ಗಳು ನೀಡುವ ಪ್ರಯೋಜನಗಳು ಕಡಿಮೆ ಆಗಲಿದೆ. ಸದ್ಯ ಬಿಎಸ್‌ಎನ್‌ಎಲ್‌ ತನ್ನ ಹದಿನಾಲ್ಕು ಪ್ಲಾನ್‌ಗಳ ದರಗಳನ್ನು 153ರೂ , 199ರೂ , 197ರೂ , 397ರೂ , 399ರೂ , 485ರೂ , 666ರೂ , 699ರೂ, 999ರೂ, 997ರೂ , 1499ರೂ , 1999ರೂ, ಮತ್ತು 2399ರೂ ಮತ್ತು ಮೊದಲ ರೀಚಾರ್ಜ್ 249 ರೂ. ಗಳಲ್ಲಿ ಪರಿಷ್ಕರಣೆ ಮಾಡಿದೆ. ಹಾಗಾದ್ರೆ ಬಿಎಸ್‌ಎನ್‌ಎಲ್‌ ಯಾವೆಲ್ಲಾ ಪ್ಲಾನ್‌ಗಳನ್ನು ಪರಿಷ್ಕರಿಸಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ ಪರಿಷ್ಕರಣೆ ಮಾಡಿರುವ ಈ ಪ್ಲಾನ್‌ಗಳಲ್ಲಿ ಉಚಿತ ಅಥವಾ ಯೋಜನೆ ಸಿಂಧುತ್ವ ಅವಧಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸುಂಕದ ಬದಲಾವಣೆಯು ಬೇಸ್ ಸುಂಕಕ್ಕೆ ಮಾತ್ರ ಅನ್ವಯಿಸುತ್ತದೆ, ಅಂದರೆ ಕರೆ, ಎಸ್‌ಎಂಎಸ್, ಡಾಟಾ ಶುಲ್ಕಗಳು ಸಂಬಂಧಿತ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ಬದಲಾಗಲಿವೆ. ಈ ಪರಿಷ್ಕರಣೆ ಎಲ್ಲಾ ಟೆಲಿಕಾಂ ವಲಯಗಳಲ್ಲಿ ಸೆಪ್ಟೆಂಬರ್ 2 ರಿಂದ 10 ದಿನಗಳ ಒಳಗೆ ದರಗಳು ಜಾರಿಗೆ ಬರಲಿವೆ. ಹೊಸ ಟಾರಿಫ್‌ ಪ್ಲಾನ್‌ಗಳು ಟೆಲಿಕಾಂ ಕಂಪೆನಿಗಳು ತಮ್ಮ ಬೇಸ್‌ ಪ್ಲಾನ್‌ಗಳನ್ನು ಬದಲಾಯಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.

ಬಿಎಸ್‌ಎನ್‌ಎಲ್‌

ಸದ್ಯ ಬಿಎಸ್‌ಎನ್‌ಎಲ್‌ನ ಈ ಹೊಸ ಪರಿಷ್ಕರಣೆ ಪ್ಲಾನ್‌ಗಳ ಪ್ರಕಾರ ಎಸ್‌ಎಂಎಸ್ ಸೌಲಭ್ಯವು ಕೇವಲ ಪ್ರಿಪೇಯ್ಡ್ ಪ್ಲಾನ್‌ಗಳಿಗೆ ಮಾತ್ರ ಅನುಮತಿಸಲಿದೆ. ಆದರೆ ಈ ಪ್ಲಾನ್‌ಗಳ ಎಂಆರ್‌ಪಿ ರೂ 147 ಕ್ಕಿಂತ ಹೆಚ್ಚಿರುತ್ತದೆ. ಸದ್ಯ ಬಿಎಸ್‌ಎನ್‌ಎಲ್ ಹೊಸ ಪ್ರಮೋಷನ್‌ ಪ್ಲಾನ್‌ಗಳನ್ನು ಆರಂಭಿಸಲಿದ್ದು, ತನ್ನ ಗ್ರೇಸ್ ಅವಧಿಯಲ್ಲಿ ಬಳಕೆದಾರರನ್ನು ಸಕ್ರಿಯ ಗ್ರಾಹಕರಾಗಲು ಪ್ರೋತ್ಸಾಹಿಸಲು ಮುಂದಾಗಿದೆ. ಇನ್ನು ಬಿಎಸ್‌ಎನ್‌ಎಲ್‌ SMS ಸೌಲಭ್ಯವನ್ನು ಉತ್ತರ ವಲಯ ಮತ್ತು ಪಶ್ಚಿಮ ವಲಯದ ಪ್ರಿಪೇಯ್ಡ್ ಮೊಬೈಲ್ ಗ್ರಾಹಕರಿಗೆ ಮಾತ್ರ ಅನುಮತಿಸಲಿದೆ. ಈ ಮೂಲಕ ತನ್ನ ಬಳಕೆದಾರರನ್ನು ತನ್ನ ಬಳಿಯೆ ಉಳಿಸಿಕೊಳ್ಳುವುದಕ್ಕೆ ಮುಂದಾಗಿದೆ.

ಬಿಎಸ್ಎನ್ಎಲ್

ಇದಲ್ಲದೆ ಬಿಎಸ್ಎನ್ಎಲ್ ತನ್ನ ಪೂರ್ವ ವಲಯ ಮತ್ತು ದಕ್ಷಿಣ ವಲಯದ ಎಲ್ಲಾ ಸಿಂಧುತ್ವ ಅವಧಿ ಮೀರಿದ ಪ್ರಿಪೇಯ್ಡ್ ಮೊಬೈಲ್ ಗ್ರಾಹಕರಿಗೆ ಒಳಬರುವ SMS ಸೌಲಭ್ಯವನ್ನು ಸ್ಟಾಪ್‌ ಮಾಡಲಿದೆ. ಉತ್ತರ ವಲಯ ಮತ್ತು ಪಶ್ಚಿಮ ವಲಯವು ಒಳಬರುವ SMS ಸೌಲಭ್ಯವನ್ನು ಗ್ರಾಹಕರ ಗ್ರೇಸ್ ಅವಧಿಯೊಂದಿಗೆ 60 ದಿನಗಳವರೆಗೆ ಪ್ರಮೋಷನ್‌ ಆಧಾರದ ಮೇಲೆ ಅನುಮತಿಸಲಾಗುವುದು ಎಂದಿದೆ. ಹಾಗೆಯೇ ದಕ್ಷಿಣ ವಲಯ ಮತ್ತು ಪೂರ್ವ ವಲಯವು GP2 ಗ್ರಾಹಕರಿಗೆ VLR ನಲ್ಲಿ GP2 ಗ್ರಾಹಕರನ್ನು ರೀಚಾರ್ಜ್ ಮಾಡಲು ಮತ್ತು ಸಕ್ರಿಯ ಗ್ರಾಹಕರನ್ನಾಗಿ ಪರಿವರ್ತಿಸಲು ಪ್ರೋತ್ಸಾಹಿಸಲು 60 ದಿನಗಳ ಪ್ರಮೋಷನ್‌ ಮಾಡಲು ಮುಂದಾಗಿದೆ.

Best Mobiles in India

English summary
BSNL will also launch new promotional plans starting today, September 6, 2021.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X