ಕೇಂದ್ರ ಬಜೆಟ್‌ 2023: ಪ್ಯಾನ್‌ ಕಾರ್ಡ್‌ ಬಳಕೆದಾರರೇ ಇಲ್ಲಿ ಗಮನಿಸಿ!

|

ದೇಶವ್ಯಾಪ್ತಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಕೇಂದ್ರ ಬಜೆಟ್‌ 2023 ಇಂದು ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಂಸತ್ತಿನಲ್ಲಿ ಬಜೆಟ್‌ ಮಂಡನೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್‌ ಮೇಲೆ ಸಹಜವಾಗಿಯೇ ಎಲ್ಲಾ ವಲಯಗಳಿಂದಲೂ ನಿರೀಕ್ಷೆ ಇದ್ದೆ ಇರುತ್ತದೆ. ಅದರಂತೆ ಟೆಕ್‌ ವಲಯವೂ ಕೂಡ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಸದ್ಯ ಮಂಡನೆಯಾಗಿರುವ ಕೇಂದ್ರ ಬಜೆಟ್‌ನಲ್ಲಿ ಈ ಭಾರಿಯು ಕೂಡ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ.

ಕೇಂದ್ರ ಬಜೆಟ್‌ 2023: ಪ್ಯಾನ್‌ ಕಾರ್ಡ್‌ ಬಳಕೆದಾರರೇ ಇಲ್ಲಿ ಗಮನಿಸಿ!

ಹೌದು, ಕೇಂದ್ರ ಸರ್ಕಾರದ ಬಜೆಟ್‌ 2023ನಲ್ಲಿ ಡಿಜಿಟಲ್‌ ಇಂಡಿಯಾಗೆ ಒತ್ತನ್ನು ನೀಡಲಾಗಿದೆ. ಇನ್ನು ಈ ಬಜೆಟ್‌ನಲ್ಲಿ ಡಿಜಿಲಾಕರ್‌, ಆಧಾರ್‌ ಕಾರ್ಡ್‌ ಹಾಗೂ ಪಾನ್‌ಕಾರ್ಡ್‌ ಅನ್ನು ಕೆವೈಸಿ ದೃಡೀಕರಣಕ್ಕೆ ಪ್ರಮುಖ ದಾಖಲೆಯಾಗಿ ಬಳಸಬಹುದು ಎಂದು ಘೋಷಿಸಲಾಗಿದೆ. ಸರ್ಕಾರಿ ಸೇವೆಗಳನ್ನು ಹಾಗೂ ಇತರೆ ಪ್ರಮುಖ ಸೌಲಭ್ಯಗಳನ್ನು ಪಡೆಯಲು ಡಿಜಿಲಾಕರ್‌ ದಾಖಲೆಗಳು ಮತ್ತು ಪ್ಯಾನ್‌ಕಾರ್ಡ್‌ ಅನ್ನು ಪ್ರಮುಖ ದಾಖಲೆಯಾಗಿ ಬಳಸಬಹುದು ಎನ್ನಲಾಗಿದೆ. ಡಿಜಿಲಾಕರ್‌ ದಾಖಲೆಗಳನ್ನು ಪ್ರಮುಖ ದಾಖಲೆಗಳಾಗಿ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಜಿಲಾಕರ್‌ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸುವುದಕ್ಕೆ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಕೇಂದ್ರ ಬಜೆಟ್‌ 2023ರಲ್ಲಿ ಡಿಜಿಲಾಕರ್ ಅನ್ನು ಪ್ರಮುಖ ಕೆವೈಸಿ ನಿರ್ವಹಣಾ ವ್ಯವಸ್ಥೆಯಾಗಿ ಬಳಸಬಹುದು ಎಂದು ಘೋಷಿಸಲಾಗಿದೆ. ಅದರಂತೆ ಇನ್ಮುಂದೆ ದೇಶವಾಸಿಗಳು ಡಿಜಿಲಾಕರ್ ಮತ್ತು ಆಧಾರ್ ಅನ್ನು ಕೆವೈಸಿ ದಾಖಲೆಗಾಗಿ ಬಳಸಬಹುದಾಗಿದೆ. ಪ್ಯಾನ್‌ಕಾರ್ಡ್‌ ಅನ್ನು ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳ ಪ್ರಮುಖ ಗುರುತಿನ ಚೀಟಿಯಾಗಿ ಬಳಸಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ 2023 ಭಾಷಣದಲ್ಲಿ ಸ್ಪಷ್ಟ ಪಡಿಸಿದ್ದಾರೆ.

ಕೇಂದ್ರ ಬಜೆಟ್‌ 2023: ಪ್ಯಾನ್‌ ಕಾರ್ಡ್‌ ಬಳಕೆದಾರರೇ ಇಲ್ಲಿ ಗಮನಿಸಿ!

ಇನ್ನು ಸರ್ಕಾರ ನಿರ್ದಿಷ್ಟಪಡಿಸಿದ ಏಜೆನ್ಸಿಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ ಪಾನ್‌ಕಾರ್ಡ್‌ ಪ್ರಮುಖ ದಾಖಲೆಯಾಗಿ ಬಳಸಬಹುದಾಗಿದೆ. ಇದರಿಂದ ಸುಗಮ ತೆರಿಗೆ ಆಡಳಿತ ಮತ್ತು ಸುಲಭ ವ್ಯಾಪಾರ ಉದ್ಯಮಕ್ಕೆ ಸಹಾಯ ಮಾಡಲಿದೆ ಎಂದು ಭಾವಿಸಲಾಗಿದೆ. ಅಂದರೆ ಡಿಜಿಲಾಕರ್‌ನಲ್ಲಿ ಪ್ಯಾನ್‌ಕಾರ್ಡ್‌ ಅನ್ನು ಪ್ರಮುಖ ದಾಖಲೆಯಾಗಿ ಬಳಸುವುದರಿಂದ ನಿಮ್ಮ ಆಧಾಯ ತೆರಿಗೆ ವಿವರ ಹಾಗೂ ನಿಮ್ಮ ಉದ್ಯಮದ ವಿವರಗಳು ಸುಲಭವಾಗಿ ತಿಳಿಯಲು ಸಾಧ್ಯವಾಗಲಿದೆ ಅನ್ನೊದು ಕೇಂದ್ರ ಸರ್ಕಾರದ ನಿಲುವಾಗಿದೆ.

ಕೇಂದ್ರ ಬಜೆಟ್‌ 2023: ಪ್ಯಾನ್‌ ಕಾರ್ಡ್‌ ಬಳಕೆದಾರರೇ ಇಲ್ಲಿ ಗಮನಿಸಿ!

ಏನಿದು ಡಿಜಿಟಲ್ ಲಾಕರ್?
ಭಾರತ ಸರ್ಕಾರ ಡಿಜಿಟಲ್‌ ಇಂಡಿಯಾದ ಕನಸ್ಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪರಿಚಯಿಸಿರುವ ಉಪಯುಕ್ತ ಸೇವೆಗಳಲ್ಲಿ ಡಿಜಿಟಲ್‌ ಲಾಕರ್‌ ಒಂದಾಗಿದೆ. ಡಿಜಿಲಾಕರ್‌ನಲ್ಲಿ ನೀವು ನಿಮ್ಮ ಅಗತ್ಯ ದಾಖಲೆಗಳನ್ನು ಸಂಗ್ರಹಿಸಬಹುದು. ಅವುಗಳನ್ನು ಅವಶ್ಯಕತೆ ಇರುವೆಡೆ ಪ್ರದರ್ಶಿಸಬಹುದಾಗಿದೆ. ಅಂದರೆ ಕಾಗದ ರಹಿತ ದಾಖಲೆಗಳನ್ನು ಬಳಸುವ ನಿಟ್ಟಿನಲ್ಲಿ ಡಿಜಿಲಾಕರ್‌ ಒಂದು ಅತ್ಯುತ್ತಮ ಸೇವೆಯಾಗಿದೆ. ಇನ್ನು ಡಿಜಿಲಾಕರ್‌ನಲ್ಲಿರುವ ಡಿಜಿಟಲ್ ದಾಖಲೆಗಳು ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯಿದೆ 2000 ರ ಅಡಿಯಲ್ಲಿ ಮಾನ್ಯವಾದ ದಾಖಲೆಗಳಾಗಿರಲಿವೆ.

ಸಾಮಾನ್ಯ ಜನರು ಡಿಜಿಲಾಕರ್ ಅನ್ನು ಬಳಸುವುದು ಹೇಗೆ?
ಭಾರತ ಸರ್ಕಾರದ ಡಿಜಿಲಾಕರ್‌ ಸೇವೆಯನ್ನು ನೀವು ಬಳಸಬೇಕಾದರೆ ನೀವು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಅನ್ನು ಸ್ಕ್ಯಾನ್‌ ಮಾಡುವ ಮೂಲಕ ಲಾಗ್‌ ಇನ್‌ ಆಗಬೇಕಾಗುತ್ತದೆ. ಅಂದರೆ ಡಿಜಿಲಾಕರ್‌ ಅಪ್ಲಿಕೇಶನ್‌ ಅಲ್ಲಿ ಈ ಪ್ರಮುಖ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ನಿಮ್ಮ ಇ-ಸಿಗ್ನೇಚರ್‌ ಮೂಲಕ ಅಪ್‌ಲೋಡ್‌ ಮಾಡಿದರೆ ಮಾತ್ರ ಡಿಜಿಲಾಕರ್‌ನಲ್ಲಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ಸೇವ್‌ ಮಾಡಲು ಸಾಧ್ಯವಾಗಲಿದೆ.

ಕೇಂದ್ರ ಬಜೆಟ್‌ 2023: ಪ್ಯಾನ್‌ ಕಾರ್ಡ್‌ ಬಳಕೆದಾರರೇ ಇಲ್ಲಿ ಗಮನಿಸಿ!

ಡಿಜಿ ಲಾಕರ್‌ನಲ್ಲಿ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ಡಿಜಿ ಲಾಕರ್ ಅಪ್ಲಿಕೇಶನ್‌ಗೆ ಲಾಗ್ ಇನ್ ಆಗಿರಿ.
ಹಂತ:2 ನಂತರ, ಮೊದಲು ಅಪ್‌ಲೋಡ್ ಡಾಕ್ಯುಮೆಂಟ್ ಮೇಲೆ ಕ್ಲಿಕ್ ಮಾಡಿ.
ಹಂತ:3 ಇದರಲ್ಲಿ, ಅಪ್‌ಲೋಡ್ ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ:4 ಈಗ, ಲೋಕಲ್‌ ಡ್ರೈವ್‌ನಿಂದ ಫೈಲ್ ಅನ್ನು ಸರ್ಚ್‌ ಮಾಡಿ ಮತ್ತು ಅಪ್‌ಲೋಡ್ ಮಾಡಲು 'ಓಪನ್' ಆಯ್ಕೆಮಾಡಿ.
ಹಂತ:5 ಅಪ್‌ಲೋಡ್ ಮಾಡಿದ ಫೈಲ್ ಅನ್ನು ಅದರ ಪ್ರಕಾರವನ್ನು ನಿಯೋಜಿಸಲು 'ಡಾಕ್ ಪ್ರಕಾರವನ್ನು ಆಯ್ಕೆಮಾಡಿ' ಮೇಲೆ ಕ್ಲಿಕ್ ಮಾಡಿ. ಇಲ್ಲಿ ಎಲ್ಲಾ ದಾಖಲೆಗಳು ಒಟ್ಟಿಗೆ ಕಾಣಿಸಿಕೊಳ್ಳುತ್ತವೆ.
ಹಂತ:6 ಈಗ, ಡಾಕ್ಯುಮೆಂಟ್ ಪ್ರಕಾರವನ್ನು ಆಯ್ಕೆ ಮಾಡಿದ ನಂತರ, ಸೇವ್‌ ಕ್ಲಿಕ್ ಮಾಡಿ.
ಬಳಕೆದಾರರು ಇಷ್ಟ ಪಟ್ಟರೆ ಫೈಲ್ ನೇಮ್‌ ಅನ್ನು ರಿನೇಮ್‌ ಮಾಡಬಹುದು.

Best Mobiles in India

Read more about:
English summary
Budget 2023: DigiLocker will now be a one-stop KYC maintenance system for individuals

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X