ವಿಶ್ವದ ದೈತ್ಯ ಕಂಪನಿಗಳಿಗೆ ಸೆಡ್ಡುಹೊಡೆದ ಬೈರೇಗೌಡ ತಯಾರಿಸಿದ್ದು ಅಂತಿಂಥ ವಾಹನವಲ್ಲ!!

|

ನಮ್ಮೂರಿನ ಬೈರೇಗೌಡ ಏನು ಮಾಡಲು ಸಾಧ್ಯ ಎಂದುಕೊಂಡಿದ್ದವವರು ಇಂದು ಮೂಗಿನ ಮೇಲೆ ಬೆರಳನ್ನು ಇಟ್ಟುಕೊಳ್ಳಬೇಕು. ಏಕೆಂದರೆ, ಬಿಸಿಲಿದ್ದರೆ ಸೋಲಾರ್ ಶಕ್ತಿಯಲ್ಲಿ ಓಡುವ, ಮೋಡ ಕವಿದಿದ್ದರೆ ಎಲೆಕ್ಟ್ರಿಕ್ ಚಾರ್ಜ್ ಮಾಡಿರುವ ಬ್ಯಾಟರಿಯಲ್ಲಿ ಸಾಗುವ ಒಂದು ನವೀಕರಿಸಬಹುದಾದ ಇಂಧನದಿಂದ ಚಲಿಸುವ ವಾಹನವೊಂದಕ್ಕೆ ಈಗ ಬೈರೇಗೌಡ ರೂಪಕೊಟ್ಟಿದ್ದಾರೆ.!

ಹೌದು, ದೈತ್ಯ ಕಂಪನಿಗಳು ಸಹ ಇಂಥಹ ವಾಹನಗಳ ತಯಾರಿಕೆಗಾಗಿ ಸ್ಪರ್ಧೆಗಿಳಿದಿರುವ ಹೊತ್ತಲ್ಲಿ, ನೆಲಮಂಗಲ ಸಮೀಪದ ದೊಡ್ಡಮಸ್ಕಲ್‌ನ ರೈತರ ಮಗ ಬೈರೇಗೌಡ ಅವರು ಗಮನಸೆಳೆದಿದ್ದಾರೆ. ತನ್ನ ಸ್ನೇಹಿತರೊಂದಿಗೆ ಸೇರತಿಕೊಂಡು ಅಂತಿಮ ವರ್ಷದ ಪದವಿಯ ಪ್ರಾಜೆಕ್ಟ್‌ಗಾಗಿ ಸೌರ ಮತ್ತು ಬ್ಯಾಟರಿ ಚಾಲಿತ ಅದ್ಬುತ ವಾಹನ ಒಂದನ್ನು ಸಿದ್ಧಪಡಿಸಿದ್ದಾರೆ.

ದೈತ್ಯ ಕಂಪನಿಗಳಿಗೆ ಸೆಡ್ಡುಹೊಡೆದ ಬೈರೇಗೌಡ ತಯಾರಿಸಿದ್ದು ಅಂತಿಂಥ ವಾಹನವಲ್ಲ!!

ಬೈರೇಗೌಡ ಅವರು ತಯಾರಿಸಿರುವ ಈ ಮೂರು ಚಕ್ರದ ಪರಿಸರಸ್ನೇಹಿ ವಾಹನಕ್ಕೆ ಅವರೇ 'ಗೋ ಗ್ರೀನ್, ಗ್ಲೋ ಗ್ರೀನ್ ಸೆಟ್ 3' ಎಂದು ಹೆಸರಿಟ್ಟಿದ್ದು, ಈ ವಾಹನ ಭವಿಷ್ಯದ ತಂತ್ರಜ್ಞಾನದ ಕೊಡುಗೆಯಾಗಿದೆ. ಹಾಗಾದರೆ, ನಮ್ಮ ಬೈರೇಗೌಡ ಅವರು ತಯಾರಿಸಿರುವ ಅದ್ಬುತ ನವೀಕರಿಸಬಹುದಾದ ಇಂಧನ ಚಾಲಿತ ವಾಹನ ಹೇಗಿದೆ ಎಂದನ್ನು ಮುಂದೆ ನೋಡಿ ತಿಳಿಯಿರಿ.

ಸೌರ ಮತ್ತು ಬ್ಯಾಟರಿ ಚಾಲಿತ ವಾಹನ ಹುಟ್ಟಿದ್ದೇಗೆ?

ಸೌರ ಮತ್ತು ಬ್ಯಾಟರಿ ಚಾಲಿತ ವಾಹನ ಹುಟ್ಟಿದ್ದೇಗೆ?

ನೆಲಮಂಗಲ ಸಮೀಪದ ದೊಡ್ಡಮಸ್ಕಲ್‌ನ ರೈತರ ಮಗ ಈ ಬೈರೇಗೌಡ. ಆಳ್ವಾಸ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ ಬೈರೇಗೌಡ ಡಿಪ್ಲೊಮಾ ಓದಿ ಎಂಜಿನಿಯರಿಂಗ್ ಸೇರಿದವರು. ಎಂಜಿನಿಯರಿಂಗ್ 5ನೇ ಸೆಮಿಸ್ಟರ್‌ನಿಂದಲೇ ಪರಿಸರಸ್ನೇಹಿ ವಾಹನ ತಯಾರಿಕೆ ಯೋಜನೆ ರೂಪಿಸಿದರು. ಇದಕ್ಕೆ ರೈತ ಹಿನ್ನಲೆಯೂ ಕಾರಣವಿರಬಹುದಂತೆ.!

ಹೇಗಿದೆ ವಾಹನ?

ಹೇಗಿದೆ ವಾಹನ?

ಸೌರ ಮತ್ತು ಬ್ಯಾಟರಿ ಚಾಲಿತ‘ಗೋ ಗ್ರೀನ್, ಗ್ಲೋ ಗ್ರೀನ್ ಸೆಟ್ 3' ವಾಹನ ನೋಡೋಕೆ ಆಟೊ ತರಹ ಕಾಣುತ್ತದೆ. ಆದರೆ, ಕಾರಿನ ಗುಣಲಕ್ಷಣಗಳನ್ನು ಹೊಂದಿರುವ ಈ ವಾಹನ ಕಾರಿಗಿಂತ ಚಿಕ್ಕದಾಗಿದ್ದು, ಸತತ ಒಂದು ವರ್ಷ, ಎರಡು ತಿಂಗಳ ಪರಿಶ್ರಮದೊಂದಿಗೆ ತಯಾರಾಗಿರುವ ವಾಹನವನ್ನು ಬೇಸಿಗೆ, ಮಳೆಗಾಲ, ಚಳಿಗಾಲ ಹೀಗೆ ಎಲ್ಲ ಕಾಲದಲ್ಲೂ ಓಡಿಸಬಹುದು.

ಹೇಗೆ ತಯಾರಾಗಿದೆ ಈ ವಾಹನ?

ಹೇಗೆ ತಯಾರಾಗಿದೆ ಈ ವಾಹನ?

‘ಗೋ ಗ್ರೀನ್, ಗ್ಲೋ ಗ್ರೀನ್ ಸೆಟ್ 3' ವಾಹನವನ್ನು ಅಲ್ಯುವಿನಿಯಂ ಆಲಾಯ್ 6063 ಮೆಟಲ್ ಬಳಸಿ ತಯಾರಿಸಿಸಲಾಗಿದೆ. ಹಾಗಾಗಿ, ವಾಹನದ ತೂಕ ಕಡಿಮೆಯಿದೆ. ವಾಹನದ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನಲ್ ಹಾಗೂ ಸುಮಾರು 20 ಲಿಥಿಯಂ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಇದರಿಂದ ಸೌರ ಮತ್ತು ಬ್ಯಾಟರಿ ಶಕ್ತಿ ವಾಹನಕ್ಕೆ ದೊರೆಯಲಿದೆ.

 ವಿನ್ಯಾಸ  ಹೇಗಿದೆ?

ವಿನ್ಯಾಸ ಹೇಗಿದೆ?

ಈ ವಾಹನದಲ್ಲಿ ಮುಂದೆ 2 ಚಕ್ರಗಳಿವೆ. ಹಿಂದೆ ಒಂದು ಚಕ್ರವಿದೆ. ಚಾಲಕನ ಸುರಕ್ಷತೆಯ ದೃಷ್ಟಿಯಿಂದ ಹೀಗೆ ವಿನ್ಯಾಸ ಮಾಡಲಾಗಿದೆ. ಮುಂದಿನ ಚಕ್ರಗಳಿಗೆ ಡ್ರಮ್ ಬ್ರೇಕ್ ಇದ್ದರೆ ಹಿಂಬದಿ ಚಕ್ರಕ್ಕೆ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಸೆನ್ಸರ್ ಸೌಲಭ್ಯವೂ ಇದೆ. ಮೂವರು ಪ್ರಯಾಣಿಸಬಹುದಾದ ಈ ವಾಹನ ಇಂಡಿಪೆಂಡೆಂಟ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಸಹ ಒಳಗೊಂಡಿದೆ.

ವಾಹನ ಚಾಲನೆ ಹೇಗಿರಲಿದೆ?

ವಾಹನ ಚಾಲನೆ ಹೇಗಿರಲಿದೆ?

ಡಾಂಬಾರು ರಸ್ತೆ ಸೇರಿದಂತೆ, ಈ ವಾಹನವನ್ನು ಯಾವುದೇ ಕಚ್ಚಾ ರಸ್ತೆಯಲ್ಲಾದರೂ ಓಡಿಸಬಹುದು. ಮೂರರಿಂದ ನಾಲ್ಕು ಗಂಟೆ ಒಳಗೆ ಇದರ ಬ್ಯಾಟರಿ ಚಾರ್ಜ್ ಆಗಲಿದ್ದು, ಚಾಲನೊಬ್ಬನೇ ಇದ್ದರೆ 70 ರಿಂದ 80 ಕಿ.ಮೀ ಸಾಗುವ ಈ ವಾಹನ ಇಬ್ಬರನ್ನು ಹೊತ್ತು 60 ಕಿ.ಮೀ ನಿಂದ 65 ಕಿ.ಮೀ ದೂರ ಕ್ರಮಿಸುವಷ್ಟು ಬಲಿಷ್ಠವಾಗಿದೆ ಎಂದು ಬೈರೇಗೌಡ ಅವರು ತಿಳಿಸಿದ್ದಾರೆ.

ವಾಹನದಲ್ಲಿ ತಂತ್ರಜ್ಞಾನ ಬಳಕೆ!

ವಾಹನದಲ್ಲಿ ತಂತ್ರಜ್ಞಾನ ಬಳಕೆ!

ವಾಹನದ ಒಳಗಡೆ ಸೆಂಟ್ರಲ್ ಲಾಕಿಂಗ್ ಸಿಸ್ಟಮ್, ಜಿಪಿಆರ್ಎಸ್ ಸೇರಿದಂತೆ ಸಂಪೂರ್ಣ ಕಾರಿನ ವ್ಯವಸ್ಥೆ ಇದೆ. ರಿಮೋಟ್ ಲಾಕ್ ಹಾಗೂ ಜಿಪಿಎಸ್: ಈ ಸೌಲಭ್ಯದಿಂದ ವಾಹನ ಕಳುವಾದರೆ ಸುಲಭವಾಗಿ ಪತ್ತೆ ಮಾಡಬಹುದು. ಜತೆಗೆ ರಿಮೋಟ್ ಮೂಲಕ ಗಾಡಿ ಮುಂದೆ ಸಾಗದಂತೆ ಲಾಕ್ ಮಾಡಬಹುದು. ಇದು ವಾಹನದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ವಾಹನದ ವಿಶೇಷತೆಗಳೇನು?

ವಾಹನದ ವಿಶೇಷತೆಗಳೇನು?

‘ಗೋ ಗ್ರೀನ್, ಗ್ಲೋ ಗ್ರೀನ್ ಸೆಟ್ 3' ವಾಹನ ಒಟ್ಟು 85 ಕೆ.ಜಿ. ತೂಕವಿದ್ದು, ವಾಹನ ಗರಿಷ್ಠ 225 ಕೆ.ಜಿ. ತೂಕವನ್ನು ಹೊರುವ ಸಾಮರ್ಥ್ಯ ಹೊಂದಿದೆ. ವಾಹನ ತಯಾರಿಕೆಗೆ ಬಳಸಿರುವ ಅಲ್ಯೂಮಿನಿಯಂ ತುಕ್ಕು ಹಿಡಿಯುವುದಿಲ್ಲವಾದುದರಿಂದ 10 ವರ್ಷಗಳ ಕಾಲ ವಾಹನ ಯಾವುದೇ ಸಮಸ್ಯೆ ಇಲ್ಲದೇ ಸಂಚರಿಸುತ್ತದೆ ಎಂದು ಬೈರೇಗೌಡ ಅವರು ಹೇಳಿದ್ದಾರೆ.

ವಾಹನ ತಯಾರಿಕಾ ವೆಚ್ಚವೆಷ್ಟು?

ವಾಹನ ತಯಾರಿಕಾ ವೆಚ್ಚವೆಷ್ಟು?

ನಾನು ಪ್ರಾಜೆಕ್ಟ್‌ಗಾಗಿ ಒಂದೇ ‘ಗೋ ಗ್ರೀನ್, ಗ್ಲೋ ಗ್ರೀನ್ ಸೆಟ್ 3' ವಾಹನವನ್ನು ತಯಾರಿಸಿರುವುದರಿಂದ 1.60 ಲಕ್ಷ ಹಣ ಖರ್ಚಾಗಿತ್ತು. ಆದರೆ, ದೊಡ್ಡ ಪ್ರಮಾಣದಲ್ಲಿ (ಬಲ್ಕ್) ತಯಾರಿಸಿದರೆ, ಒಂದು ‘ಗೋ ಗ್ರೀನ್, ಗ್ಲೋ ಗ್ರೀನ್ ಸೆಟ್ 3' ತಯಾರಿಕೆಗೆ ಸುಮಾರು 90 ಸಾವಿರದಷ್ಟು ಉತ್ಪಾದನಾ ವೆಚ್ಚವಾಗಬಹುದು ಎಂದು ಬೈರೇಗೌಡ ಅವರು ಹೇಳುತ್ತಾರೆ.

21ನೇ ವಯಸ್ಸಿಗೆ ಕೋಟ್ಯಾಧೀಶ್ವರ; ಸ್ವಂತ ಮನೆ, ಬಿಎಂಡಬ್ಲೂ ಒಡೆಯನಾದ ಬಡ ಯುವಕನ ಯಶೋಗಾಥೆ!

21ನೇ ವಯಸ್ಸಿಗೆ ಕೋಟ್ಯಾಧೀಶ್ವರ; ಸ್ವಂತ ಮನೆ, ಬಿಎಂಡಬ್ಲೂ ಒಡೆಯನಾದ ಬಡ ಯುವಕನ ಯಶೋಗಾಥೆ!

ಹತ್ತನೇ ವಯಸ್ಸಿನಲ್ಲಿ ಆತನಿಗೆ ಉಡುಗೊರೆಯಾಗಿ ಸಿಕ್ಕಿದ್ದು ಒಂದು ಕಂಪ್ಯೂಟರ್ ಮಾತ್ರ. ಅಲ್ಲಿಂದ ಆತ ಯಾವತ್ತೂ ಸಹ ಜೀವನವನ್ನು ಹಿಂತಿರುಗಿ ನೋಡಲೇ ಇಲ್ಲ. ಏಕೆಂದರೆ, ಆ ಕಂಪ್ಯೂಟರ್ ಜೊತೆಗಿನ ಅವನ ಒಡನಾಟ ಮತ್ತು ಆತನ ಕಠಿಣ ಪರಿಶ್ರಮ ಇಂದು ಆತನನ್ನು ಕೋಟ್ಯಾಧಿಪತಿಯನ್ನಾಗಿಸಿದೆ. ಆತನ 21ನೇ ವಯಸ್ಸಿನ ವೇಳೆಗೆ ವಾರ್ಷಿಕ ಎರಡು ಕೋಟಿ ರೂಪಾಯಿ ಆದಾಯ ಹೊಂದಿರುವ ಕಂಪೆನಿಯ ಮಾಲಿಕನನ್ನಾಗಿಸಿದೆ ಎಂದರೆ ನೀವು ನಂಬಲೇಬೇಕು.!

ಹೌದು, ಇದು ಕೇರಳ ರಾಜ್ಯದ ಕಣ್ಣೂರಿನ ಹುಡುಗ ಜಾವೇದ್ ಎಂಬ ಯುವಕನ ಯಶಸ್ವಿ ಯುವಕನ ಕಥೆ. ಈ ಉದ್ಯಮಶೀಲ ಯುವಕನ ಯಶೋಗಾಥೆ ಎಲ್ಲರಿಗೂ ಸ್ಪೂರ್ತಿಯ ಚಿಲುಮೆ. ಎಳೆಯ ವಯಸ್ಸಿನಲ್ಲಿಯೇ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯದಿಂದ ಅದ್ಬುತ ಯಶಸ್ಸನ್ನು ಸಾಧಿಸಿರುವ ಈತ ಈಗ ಯುವಕರ ಆಶಾಕಿರಣ ಎಂದರೆ ತಪ್ಪಾಗಲಾರದು.! ಏಕೆಂದರೆ, ಈಗ ತನ್ನ 21ನೇ ವಯಸ್ಸಿನ ವೇಳೆಗೆ ಹತ್ತಾರು ಜನರಿಗೆ ಉದ್ಯೋಗ ನೀಡಿರುವ ಈಗ ವಿಶ್ವದಾಧ್ಯಂತ ಗ್ರಾಹಕರನ್ನು ಹೊಂದಿದ್ದಾನೆ.

ಇ-ಕಾಮರ್ಸ್, ವೆಬ್‌ಡಿಸೈನ್ ಮತ್ತು ಮೊಬೈಲ್ ಅಪ್ಲಿಕೇಷನ್ ಅಭಿವೃದ್ದಿಪಡಿಸುವ "ಟಿಎಂಎನ್ ಆನ್‌ಲೈನ್ ಸೊಲ್ಯೂಷನ್'' ಎಂಬ ತನ್ನದೇ ಸ್ವಂತ ಕಂಪೆನಿಯನ್ನು ಹುಟ್ಟಿಹಾಕಿಕೊಂಡಿರುವ ಜಾವೇದ್ ಈಗ ಎಲ್ಲರಿಗೂ ಚಿರಪರಿಚಿತನಾಗಿದ್ದಾನೆ, ಹಾಗಾದರೆ, ಕಣ್ಣೂರಿನ ಹುಡುಗ ಜಾವೇದ್ ಬಾಲ್ಯ ಜೀವನ ಹೇಗಿತ್ತು? ಕಂಪ್ಯೂಟರ್ ಪ್ರಪಂಚದಲ್ಲಿ ಜಾವೇದ್ ಕೋಟಿ ಕೋಟಿ ಹಣವನ್ನು ಗಳೀಸಲು ಸಾಧ್ಯವಾಗಿದ್ದು ಹೇಗೆ? ಕಂಪ್ಯೂಟರ್ ಜೊತೆಗಿನ ಜಾವೆದ್‌ನ ಒಡನಾಟ ಮತ್ತು ಆತನ ಕಠಿಣ ಪರಿಶ್ರಮ ಹೇಗಿತ್ತು ಎಂಬ ಕುತೋಹಲ ಮಾಹಿತಿಯನ್ನು ಮುಂದೆ ತಿಳಿಯಿರಿ.

ಕಂಪ್ಯೂಟರ್ ಮತ್ತು ಇಂಟರ್‌ನೆಟ್!!

ಕಂಪ್ಯೂಟರ್ ಮತ್ತು ಇಂಟರ್‌ನೆಟ್!!

ಈಗ ಯಶಸ್ವಿ ಉದ್ಯಮಿಯಾಗಿರುವ ಜಾವೇದ್ ಅವರ ಮೂಲ ಹೆಸರು ಮೊಹಮ್ಮದ್ ಜಾವೇದ್ ಟಿ ಎನ್ ಎಂದಾಗಿತ್ತು. ಹತ್ತನೇ ವಯಸ್ಸಿನಲ್ಲಿ ಜಾವೇದ್ ಹುಟ್ಟುಹಬ್ಬಕ್ಕೆ ಅವರ ತಂದೆ ಕಂಪ್ಯೂಟರ್ ಮತ್ತುನ ಇಂಟರ್‌ನೆಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದು ಜಾವೇದ್‌ಗೆ ಬಹಳ ಕುತೋಹಲ ಮೂಡಿಸಿತ್ತು. ನಂತರದ ದಿನಗಳಲ್ಲಿ ಜಾವೇದ್‌ನ ಕಂಪ್ಯೂಟರ್ ಮೇಲಿನ ಕುತೋಹಲ ಅವನನ್ನು ಕಂಪ್ಯೂಟರ್ ಲೋಕಕ್ಕೆ ಇಳಿಸಿಬಿಟ್ಟಿತ್ತು.

ಗೂಗಲ್ ಕೊಟ್ಟಿದ್ದು ಲಕ್ಕಿ ನೇಮ್!!

ಗೂಗಲ್ ಕೊಟ್ಟಿದ್ದು ಲಕ್ಕಿ ನೇಮ್!!

ಅಪ್ಪ ಏನೋ ಕಂಪ್ಯೂಟರ್ ಕೊಡಿಸಿದರು. ಆದರೆ, ಆ ಹಂತದಲ್ಲಿ ಜಾವೇದ್ ಬಳಿಯಲ್ಲಿ ಐಡಿ ಇರಲಿಲ್ಲ. ಹಾಗಾಗಿ, ಜಾವೇದ್ ಹೆಸರಿನಲ್ಲಿ ಐಡಿ ಕ್ರಿಯೇಟ್ ಮಾಡಲು ಮುಂದಾಗಿದ್ದರೆ, ಆ ಹೆಸರಿನಲ್ಲಿ ಐಡಿ ಲಭ್ಯವಿರಲಿಲ್ಲ. ಇದರ ಬದಲಾಗಿ ಟಿಎನ್‌ಎಮ್ ಜಾವೇದ್ ಎಂಬ ಹೆಸರಿನಲ್ಲಿ ಐಡಿ ಸೃಷ್ಟಿಸುವಂತೆ ಗೂಗಲ್‌ನಿಂದ ಸಲಹೆ ಬಂತು. ಆ ಹೆಸರು ಜಾವೇದ್ ಅವರಿಗೆ ಲಕ್ಕಿ ಹೆಸರಾಗಿಯೂ ಕ್ಲಿಕ್ ಆಯಿತು. ಗೂಗಲ್‌ನ ಸದ್ಬಳಕೆಯಿಂದ ಕೋಟಿ, ಕೋಟಿ ಹಣಗಳಿಸುವಂತೆ ಸಹ ಮಾಡಿತು.

ವೆಬ್‌ಸೈಟ್ ಸೃಷ್ಟಿಸುವುದು ಹೇಗೆ?

ವೆಬ್‌ಸೈಟ್ ಸೃಷ್ಟಿಸುವುದು ಹೇಗೆ?

ಬಾಲಕ ಜಾವೇದ್ ಕಂಪ್ಯೂಟರ್ ಜೊತೆಗೆ ಸಮಯ ಕಳೆಯುವ ವೇಳೆ ಆತನಿಗೆ ಯಾವಾಗಲೂ ತಲೆಯಲ್ಲಿ ಪ್ರಶ್ನೆಗಳು ತುಂಬಿರುತ್ತಿದ್ದವಂತೆ.! ವೆಬ್‌ಸೈಟ್ ಸೃಷ್ಟಿಸುವುದು ಹೇಗೆ?, ಅವು ಹೇಗೆ ಕಾರ್ಯನಿರ್ವಹಿಸುತ್ತವೆ? ಇದನ್ನೆಲ್ಲಾ ಮಾಡುವವರು ಯಾರು? ಹೀಗೆ ಪ್ರತಿಯೊಂದನ್ನು ತಿಳಿದುಕೊಳ್ಳುವುದರಲ್ಲಿ ನನಗೆ ಕುತೋಹಲವಿತ್ತು. ಒಂದರ್ಥದಲ್ಲಿ ಆ ಸಮಯದಲ್ಲಿ ನಾನು ಕಂಪ್ಯೂಟರ್ ವ್ಯಸನಿಯಾಗಿದ್ದೆ, ಆದರೆ ಒಳ್ಳೆಯ ಉದ್ದೇಶಕ್ಕಾಗಿ ಎಂದು ಜಾವೇದ್ ಅವರು ನೆನಪಿಸಿಕೊಳ್ಳುತ್ತಾರೆ.

10 ನೇ ತರಗತಿಯಲ್ಲಿ ವೆಬ್‌ಸೈಟ್ ತಯಾರಿಸಿದ!!

10 ನೇ ತರಗತಿಯಲ್ಲಿ ವೆಬ್‌ಸೈಟ್ ತಯಾರಿಸಿದ!!

ಕಂಪ್ಯೂಟರ್ ಜಗತ್ತಿನ ಬಗ್ಗೆ ಜಾವೇದ್‌ಗೆ ತಿಳಿದುಕೊಳ್ಳುವ ಹಂಬಲದಿಂದ ಆ ಕಂಪ್ಯೂಟರ್ ಬಗ್ಗೆ ಹೆಚ್ಚೆಚ್ಚು ತಿಳಿಯಲು ಆರಂಭಿಸಿದ. ಬ್ಲಾಗಿಂಗ್ ಮತ್ತು ವೆಬ್‌ಡಿಸೈನಿಂಗ್ ವಿಷಯಗಳ ಬಗ್ಗೆ ಆನ್‌ಲೈನ್ ಮೂಲಕವೇ ಹೆಚ್ಚು ತಿಳಿದುಕೊಳ್ಳುತ್ತಿದ್ದನಂತೆ. ತನ್ನ ಹತ್ತನೇ ತರಗತಿ ವೇಳೆಗೆ ಹಲವು ಬ್ಲಾಗ್‌ಗಳನ್ನು ಸೃಷ್ಟಿಸಿದ್ದ ಜಾವೇದ್, ನಂತರ ತನ್ನ ಸಹಪಾಠಿ ಸಿರಾಜ್ ಜೊತೆ ಸೇರಿ ಜೆಸ್ರಿ.ಟಿಕೆ ಎಂಬ ವೆಬ್‌ಸೈಟ್ ಕ್ರಿಯೇಟ್ ಮಾಡಿದ್ದರಂತೆ. ಡೊಮೈನ್ ಖರೀದಿಸಲು ಹಣವಲ್ಲದೇ ಉಚಿತ ಡೊಮೈನ್ ಮೂಲಕ ವೆಬ್‌ಸೈಟ್ ಸೃಷ್ಟಿಮಾಡಿದ್ದರಂತೆ.!

"ಟಿಎಂಎನ್ ಆನ್‌ಲೈನ್ ಸೊಲ್ಯೂಷನ್''

ಕಂಪ್ಯೂಟರ್ ಆಸಕ್ತಿಯ ಜೊತೆಗೆ ಅಧ್ಯಯನಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡ ಜಾವೇದ್, ವೆಬ್‌ಸೈಟ್ ಅಭಿವೃದ್ದಿಗೆ ಸಾಕಷ್ಟು ಅವಕಾಶಗಳಿರುವುದನ್ನು ಅಂದೇ ಕಂಡುಕೊಂಡಿದ್ದ. ಆಗಲೇ ತನ್ನ ಮೊಟ್ಟ ಮೊದಲ "ಟಿಎಂಎನ್ ಆನ್‌ಲೈನ್ ಸೊಲ್ಯೂಷನ್'' ಎಂಬ ಡೊಮೈನ್ ನೇಮ್ ಅನ್ನು ನೊಂದಾಯಿಸಿದ. ಅಂದು ಜಾವೇದ್ ನೊಂದಾಯಿಸಿದ ಈ ಡೊಮೈನ್ ನೇಮ್ ಈಗಲೂ ವರ್ಚುವಲ್ ಕಂಪೆನಿಯಾಗಿ ಬೆಳದುನಿಂತಿದೆ. ಆಗಲೇ ಹೇಳಿದಂತೆ ಜಾವೇದ್‌ಗೆ ಇದು ಗೂಗಲ್ ಲಕ್ಕಿ ನೇಮ್.!!

ಸಾವಿರ ರೂಪಾಯಿಗೆ ವೆಬ್‌ಸೈಟ್ ಆಫರ್!!

ಸಾವಿರ ರೂಪಾಯಿಗೆ ವೆಬ್‌ಸೈಟ್ ಆಫರ್!!

ಡೊಮೈನ್ ನೇಮ್ ಖರೀದಿಸಿ ಕಂಪೆನಿಯನ್ನು ಕಟ್ಟಿದ ಜಾವೇದ್, ಸಾವಿರ ರೂಪಾಯಿಗೆ ವೆಬ್‌ಸೈಟ್ ಆಫರ್ ಅನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ. ಆದರೆ, ಹೆಚ್ಚಿನ ತಾಂತ್ರಿಕ ಕೌಶಲ್ಯಗಳಿಲ್ಲದೆ ಅವರ ಕೆಲಸ ವಿಫಲವಾಗಿತ್ತು. ಆದರೆ, ಛಲಬಿಡದ ಜಾವೇದ್ ಕೆಲ ವೆಬ್‌ಸೈಟ್ ಡಿಸೈನ್ ಕಂಪೆನಿಗಳಿಗೆ ಭೇಟಿ ನೀಡಿ ಅಲ್ಲಿ ಹೆಚ್ಚಿನದನ್ನು ತಿಳಿದುಕೊಂಡ. ನಂತರ ಶಿಕ್ಷಕಿಯೋರ್ವರು ಕೇಳಿದಂತೆ ಮೊದಲ ವೆಬ್‌ಸೈಟ್ ತಯಾರಿಸಿ ನೀಡಿ 2500 ರೂ.ಹಣಗಳಿಸಿ ತನ್ನ ತಾಯಿಯ ಕೈಗಿಟ್ಟನಂತೆ ಜಾವೇದ್.!

ಕಂಪೆನಿ ಬಂಡವಾಳಕ್ಕೂ ಕಷ್ಟವಿತ್ತು!!

ಕಂಪೆನಿ ಬಂಡವಾಳಕ್ಕೂ ಕಷ್ಟವಿತ್ತು!!

ಜಾವೇದ್ ಇತ್ತ ವೆಬ್‌ಡಿಸೈನಿಂಗ್ ಕಲಿಯುತ್ತದ್ದ ವೇಳೆಯೇ ಅವನಿಗೆ ಮತ್ತೊಂದು ಕಷ್ಟ ಎದುರಾಗಿತ್ತು. ದುಬೈನಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಜಾವೇದ್ ತಂದೆ ಉದ್ಯೋಗ ತೊತರೆದು ವಾಪಸ್ ಆಗಿದ್ದರು. ಇದರಿಂದ ಜಾವೇದ್ ಅವರ ಮನೆಯ ಪರಿಸ್ಥಿತಿ ಬಹಳ ಕಷ್ಟವಾಗಿತ್ತು. ಈ ಸಮಯದಲ್ಲಿ ಜಾವೇದ್ ಅವರ ತಂದೆಗೆ 1 ಲಕ್ಷ ಹಣ ನೀಡಿದರೆ ಕಂಪೆನಿ ಶುರುಮಾಡುವುದಾಗಿ ಕೇಳಿಕೊಂಡನು. ಕಂಪ್ಯೂಟರ್ ಬಗ್ಗೆ ಜಾವೇದ್‌ಗೆ ಇದ್ದ ಆಸಕ್ತಿ ನೋಡಿ ಆ ಕಷ್ಟದಲ್ಲಿಯೇ ಅವರ ತಂದೆ 1 ಲಕ್ಷ ಹಣವನ್ನು ಹೊಂದಿಸಿ ನೀಡಿದ್ದರಂತೆ.

ಚಿನ್ನದ ಬಳೆಗಳನ್ನು ಇಟ್ಟು ಕಚೇರಿ ನಿರ್ವಹಣೆ

ಚಿನ್ನದ ಬಳೆಗಳನ್ನು ಇಟ್ಟು ಕಚೇರಿ ನಿರ್ವಹಣೆ

1 ಲಕ್ಷ ಹಣ ಹೂಡಿ ಕಂಪೆನಿ ತೆರೆದಿದ್ದ ಜಾವೇದ್‌ನ ಮೊದಲ ದಿನಗಳು ಬಹಳ ಕಷ್ಟದ ದಿನಗಳಾಗಿದ್ದವು. ಆ ಸಮಯದಲ್ಲಿ ಓದು ಮತ್ತು ಕೆಲಸ ಎರಡರಲ್ಲಿಯೂ ಜೀವನದ ಜಂಜಾಟದಲ್ಲಿ ಜಾವೇದ್ ಇದ್ದರು. ಆಫಿಸ್ ಬಾಡಿಗೆ ನಿಡುವಷ್ಟು ಸಹ ಆದಾಯವಿರಲಿಲ್ಲ. ಮನೆ ಪರಿಸ್ಥಿತಿ ಸಹ ಹದಗೆಟ್ಟಿತ್ತು. ಯಾವುದೇ ಪ್ರಾಜೆಕ್ಟ್ ಸಹ ಜಾವೇದ್ ಕೈ ಸೇರಿರಲಿಲ್ಲ. ಇಂತಹ ಸಮಯದಲ್ಲಿ ಜಾವೇದ್ ಧೃತಿಗೆಟ್ಟಿದ್ದರಂತೆ. ತಮ್ಮ ತಾಯಿಯ ಚಿನ್ನದ ಬಳೆಗಳನ್ನು ಇಟ್ಟು ಕಚೇರಿಯನ್ನು ನಿರ್ವಹಣೆ ಮಾಡಿದ್ದರಂತೆ.

ಇಂದು ಸ್ವಂತ ಮನೆ, ಐಶಾರಾಮಿ ಕಾರು!!

ಇಂದು ಸ್ವಂತ ಮನೆ, ಐಶಾರಾಮಿ ಕಾರು!!

ಹಗಲು, ರಾತ್ರಿ ಎನ್ನದೇ ಸಿಕ್ಕಿದ ಕೆಲ ಗ್ರಾಹಕರ ಜೊತೆ ವ್ಯವಹರಿಸಿದ ಜಾವೇದ್ ನಂತರ ಕೇರಳದಲ್ಲಿ 10 ಸಣ್ಣ ಪ್ರಮಾಣದ ಕೆಲಸ ಪಡೆದರಂತೆ. ಆ ಸಮಯದಲ್ಲಿ ಆದಾಯಕ್ಕಿಂತ ಕೆಲಸದಲ್ಲಿ ವೈವಿಧ್ಯ ಮುಖ್ಯ ಎಂಬುದನ್ನು ಅರಿತ ಜಾವೇದ್ ಅವರು ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ನಂತರ ಯಶಸ್ವಿ ವೆಬ್‌ಡಿಸೈನ್ ಉದ್ಯಮಿಯಾಗಿ ಜಾವೇದ್ ಬೆಳೆದು ನಿಂತಿದ್ದಾರೆ. ಬಾಡಿಗೆ ಮನೆಯಲ್ಲಿಯೇ ಬೆಳೆದ ಜಾವೇದ್ ತನ್ನ ಆಸೆಯಂತೆ 19ನೇ ವಯಸ್ಸಿನಲ್ಲಿಯೇ ಸ್ವಂತ ಮನೆಯನ್ನು ಕಟ್ಟಿದ್ದಾರೆ. ಬಿಎಂಡಬ್ಲೂ ಕಾರನ್ನು ಸಹ ಖರೀದಿಸಿದ್ದಾರೆ.!

Most Read Articles
Best Mobiles in India

English summary
Running on a solar panel, it weighs over 85kg as it's made of aluminum alloy. Byre Gowda led the project with classmates. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more