ಕಾಲ್ ಹಿಸ್ಟರಿಯನ್ನು ಆಂಡ್ರಾಯ್ಡ್ ಫೋನ್ ನಲ್ಲಿ ಡಿಲೀಟ್ ಮಾಡುವುದು ಹೇಗೆ?

By Gizbot Bureau
|

ಆಂಡ್ರಾಯ್ಡ್ ಫೋನ್ ಬಳಕೆದಾರರು ಬಹಳ ಸುಲಭವಾಗಿ ತಮಗೆ ಬಂದ ಕರೆಗಳು, ತಾವು ಮಾಡಿದ ಕರೆಗಳು ಮತ್ತು ರಿಸೀವ್ ಮಾಡದೆ ಮಿಸ್ ಆದ ಕರೆಗಳನ್ನು ಪರಿಶೀಲಿಸಬಹುದು.ಆದರೆ ಒಂದು ವೇಳೆ ಅವರು ಯಾವುದೋ ನಿರ್ಧಿಷ್ಟ ಕರೆಯ ವಿವರವನ್ನು ಡಿಲೀಟ್ ಮಾಡಲು ಬಯಸುವುದೇ ಆದಲ್ಲಿ ಅಥವಾ ಸಂಪೂರ್ಣ ಕರೆಗಳ ಹಿಸ್ಟರಿಯನ್ನೇ ಡಿಲೀಟ್ ಮಾಡುವುದೇ ಆದಲ್ಲಿ ಏನು ಮಾಡಬೇಕು? ಯಾವ ಹಂತಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ವಿವರ.

ಕಾಲ್ ಹಿಸ್ಟರಿಯನ್ನು ಆಂಡ್ರಾಯ್ಡ್ ಫೋನ್ ನಲ್ಲಿ ಡಿಲೀಟ್ ಮಾಡುವುದು ಹೇಗೆ?

1.ಆಂಡ್ರಾಯ್ಡ್ ಫೋನಿನಲ್ಲಿ ಫೋನ್ ಆಪ್ ನ್ನು ಹುಡುಕಾಡಿ ಮತ್ತು ತೆರೆಯಿರಿ.ಕಾಲ್ ಹಿಸ್ಟರಿಯ ಲಿಸ್ಟ್ ಅಲ್ಲಿ ತೆರೆದುಕೊಳ್ಳುತ್ತದೆ.

2. ಕೆಳಭಾಗದ ಎಡಗಡೆ ಇರುವ ರೀಸೆಂಟ್ಸ್ ನ್ನು ಟ್ಯಾಪ್ ಮಾಡಿ

3.ಒಂದು ವೇಳೆ ನೀವು ಯಾವುದೋ ನಿರ್ಧಿಷ್ಟ ಒಂದು ಕರೆಯನ್ನು ಡಿಲೀಟ್ ಮಾಡಲು ಇಚ್ಛಿಸುತ್ತೀರಾದರೆ ಸಣ್ಣ ಐ ಅಕ್ಷರವು ಒಂದು ವೃತ್ತದೊಳಗೆ ಇರುವ ಬಟನ್ ನ್ನು ಗಮನಿಸಿ ಮತ್ತು ಅದನ್ನು ಟ್ಯಾಪ್ ಮಾಡಿ

4. ಮೂರು ಚುಕ್ಕಿಗಳ ಲಂಬವಾಗಿರುವ ಐಕಾನ್ ನ್ನು ಟ್ಯಾಪ್ ಮಾಡಿ.ಮೇಲ್ಬಾಗದ ಬಲಭಾಗದಲ್ಲಿ ಹೊಸ ಪರದೆಯೊಂದು ತೆರೆದುಕೊಳ್ಳುತ್ತದೆ.

5.ಅದರಲ್ಲಿ ಡಿಲೀಟ್ ಆಲ್ ಕಾಲ್ಸ್ ಆಫ್ ದಿಸ್ ನಂಬರ್ ನ್ನು ಸೆಲೆಕ್ಟ್ ಮಾಡಿದರೆ ನಿರ್ಧಿಷ್ಟ ನಂಬರ್ ನ ಎಲ್ಲಾ ಕಾಲ್ ಹಿಸ್ಟರಿಯೂ ಡಿಲೀಟ್ ಆಗುತ್ತದೆ.

6.ಒಂದು ವೇಳೆ ನೀವು ನಿಮ್ಮ ಫೋನಿಗೆ ಬಂದಿರುವ ಎಲ್ಲಾ ಕರೆಗಳ ವಿವರವನ್ನೂ ಡೀಲೀಟ್ ಮಾಡಲು ಬಯಸುವುದಾದರೆ ಎರಡನೇ ಹಂತದಲ್ಲಿ ನಮೂದಿಸಲಾಗಿರುವಂತೆ ರೀಸೆಂಟ್ಸ್ ಗೆ ತೆರಳಿ.

7.ಮೇಲ್ಬಾಗದಲ್ಲಿ ಮೂರು ಚುಕ್ಕಿಗಳ ಐಕಾನ್ ವೊಂದನ್ನು ಗಮನಿಸಬಹುದು.ಅದನ್ನು ಟ್ಯಾಪ್ ಮಾಡಿ.

8.ಅಲ್ಲಿ ಡಿಲೀಟ್ ಕಾಲ್ ಲಾಗ್ಸ್ ನ್ನು ಸೆಲೆಕ್ಟ್ ಮಾಡಿ.ಒಂದು ವೇಳೆ ನೀವು ಈ ಆಯ್ಕೆಯನ್ನು ಗಮನಿಸದೇ ಇದ್ದಲ್ಲಿ ಸೆಟ್ಟಿಂಗ್ಸ್ ಗೆ ತೆರಳಿ, ಅಲ್ಲಿ ಕಾಲ್ಸ್ ಗೆ ಹೋಗಿ. ನಂತರ ಕಾಲ್ ಲಾಗ್ಸ್ ಗೆ ಹೋಗಿ ಅಲ್ಲಿಂದ ಡಿಲೀಟ್ ಕಾಲ್ ಲಾಗ್ ಮಾಡಬಹುದು.

ಇದರ ಜೊತೆಗೆ ಫ್ಯಾಕ್ಟರಿ ರಿಸೀಟ್ ಕೂಡ ಮಾಡಬಹುದಾಗಿದ್ದು ಇದು ನಿಮ್ಮ ಫೋನಿನಲ್ಲಿರುವ ಎಲ್ಲಾ ಫೈಲ್ಸ್ ಗಳು ಮತ್ತು ಇತರೆ ಸೆಟ್ಟಿಂಗ್ಸ್ ಗಳನ್ನು ಕೂಡ ಡೀಫಾಲ್ಟ್ ಮಾಡುತ್ತದೆ.ಜೊತೆಗೆ ಎಲ್ಲಾ ಕರೆಗಳ ವಿವರಗಳನ್ನೂ ಕೂಡ ಡಿಲೀಟ್ ಮಾಡುತ್ತದೆ.ಆದರೆ ಇದು ಅತ್ಯಂತ ಕೊನೆಯ ಆಯ್ಕೆಯಾಗಿರಬೇಕು.ಇದು ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿರುವ ಎಲ್ಲಾ ಡಾಟಾಗಳನ್ನು ಕೂಡ ತೆಗೆಯುವ ಕಾರಣದಿಂದಾಗಿ ನಿಮಗೆ ಅಗತ್ಯವಿರುವ ಡಾಟಾ ಬ್ಯಾಕ್ ಅಪ್ ಮಾಡಿಕೊಳ್ಳುವುದು ಬಹಳ ಇಂಪಾರ್ಟೆಂಟ್.

Most Read Articles
Best Mobiles in India

Read more about:
English summary
Call History On Android: Steps To Delete Call History, Records On Android Smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X