ನವೀಕರಿಸಿದ ಗೆಡ್ಜೆಟ್ ಗಳಿಗಾಗಿ ಇ-ಸ್ಟೋರ್ ಬಿಡುಗಡೆಗೊಳಿಸಿದ ಕ್ಯಾಷಿಫೈ

By Gizbot Bureau
|

ಇ-ಕಾಮರ್ಸ್ ಬ್ಯುಸಿನೆಸ್ ನಲ್ಲಿ ಆರು ವರ್ಷಗಳನ್ನು ಇತ್ತೀಚೆಗಷ್ಟೇ ಪೂರೈಸಿದ ಹಿನ್ನೆಲೆಯಲ್ಲಿ ಕ್ಯಾಷಿಫೈ ನವೀಕರಿಸಿದ ಸ್ಮಾರ್ಟ್ ಫೋನ್ ಗಳು, ಲ್ಯಾಪ್ ಟಾಪ್ ಗಳು ಮತ್ತು ಮೊಬೈಲ್ ಆಕ್ಸಸರೀಸ್ ಗಳನ್ನು ಭಾರತದಲ್ಲಿ ಮಾರಾಟ ಮಾಡುವ ಆನ್ ಲೈನ್ ಪೋರ್ಟಲ್ ನ್ನು ಕ್ಯಾಷಿಫೈ ಸಂಸ್ಥೆ ಬಿಡುಗಡೆಗೊಳಿಸಿದೆ.

ಸಿಇಓ ಹೇಳಿಕೆ:

ಸಿಇಓ ಹೇಳಿಕೆ:

"ರಿ-ಕಾಮರ್ಸ್ ಬ್ರ್ಯಾಂಡ್ ಆಗಿ ನಾವು ನವೀಕರಿಸಿದ ಗೆಡ್ಜೆಟ್ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ತರುವ ನಿರೀಕ್ಷೆಯಲ್ಲಿದ್ದೇವೆ.ಸ್ಮಾರ್ಟ್ ಫೋನ್ ಗಳು ಮತ್ತು ಲ್ಯಾಪ್ ಟಾಪ್ ಗಳು ನಮ್ಮ ಪ್ರಮುಖ ಕೆಟಗರಿಗಳು. ಭವಿಷ್ಯದಲ್ಲಿ ಹೊಸ ಪ್ರೊಡಕ್ಟ್ ಗಳನ್ನು ಸೇರಿಸಲಿದ್ದೇವೆ" ಎಂದು ಕ್ಯಾಷಿಫೈ ನ ಸಹ-ಸಂಸ್ಥಾಪಕ ಮತ್ತು ಸಿಇಓ ಮನದೀಪ್ ಮನೋಚಾ ಹೇಳಿದ್ದಾರೆ.

ನಿರ್ಧಿಷ್ಟ ಬ್ರ್ಯಾಂಡಿನ ಮಾಡೆಲ್ ಗಳು:

ನಿರ್ಧಿಷ್ಟ ಬ್ರ್ಯಾಂಡಿನ ಮಾಡೆಲ್ ಗಳು:

ಪ್ರಾರಂಭದಲ್ಲಿ ಕ್ಯಾಷಿಫೈ ಕೆಲವು ನಿರ್ಧಿಷ್ಟ ಬ್ರ್ಯಾಂಡ್ ಗಳ ಸ್ಮಾರ್ಟ್ ಫೋನ್ ಮಾಡೆಲ್ ಗಳನ್ನು ಮಾರಾಟ ಮಾಡುತ್ತದೆ. ಉದಾಹರಣೆಗೆ ಶಿಯೋಮಿ, ಆಪಲ್, ವಿವೋ, ಒನ್ ಪ್ಲಸ್, ಸ್ಯಾಮ್ ಸಂಗ್, ವಿವೋ, ಮತ್ತು ಲ್ಯಾಪ್ ಟಾಪ್ ಬ್ರ್ಯಾಂಡ್ ಗಳಲ್ಲಿ ಹೆಚ್ ಪಿ, ಲೆನೊವಾ ಮತ್ತು ಡೆಲ್ ಕಂಪೆನಿಗಳು ಸೇರಿರುತ್ತವೆ.

ಇ-ಸ್ಟೋರ್ ಗೆ ಭೇಟಿ ನೀಡಿ:

ಇ-ಸ್ಟೋರ್ ಗೆ ಭೇಟಿ ನೀಡಿ:

ಗ್ರಾಹಕರು ನವೀಕರಿಸಿದ ಗೆಡ್ಜೆಟ್ ಗಳನ್ನು ಖರೀದಿಸುವುದಕ್ಕಾಗಿ ಇ-ಸ್ಟೋರ್ ಗೆ ಭೇಟಿ ನೀಡಬಹುದು. ಸ್ಮಾರ್ಟ್ ಫೋನ್ ಕವರ್ ಗಳು, ಟೆಂಪರ್ಡ್ ಗ್ಲಾಸ್ ಗಳು, ಟೈಪ್ -ಸಿ ಕೇಬಲ್ ಗಳು, ಮೈಕ್ರೋ ಯುಎಸ್ ಬಿ ಕೇಬಲ್ ಗಳು ಮತ್ತು ಚಾರ್ಜರ್ ಗಳು ಇಲ್ಲಿ ಲಭ್ಯವಾಗುತ್ತದೆ.

ಉಚಿತ ಪಿಕ್ ಅಪ್:

ಉಚಿತ ಪಿಕ್ ಅಪ್:

ಇತ್ತೀಚೆಗೆ ಕ್ಯಾಷಿಫೈ ತನ್ನ ಸೇವೆಯನ್ನು ಹಳೆಯ ಗೆಡ್ಜೆಟ್ ಗಳ ಖರೀದಿಗಾಗಿ 1000 ಕ್ಕೂ ಅಧಿಕ ಸಿಟಿಗಳಲ್ಲಿ ವಿಸ್ತರಣೆ ಮಾಡಿದೆ.24 ರಿಂದ 48 ಘಂಟೆಗಳ ಸೇವೆಯನ್ನು ಹೊಂದಿದೆ. ತಾವು ಖರೀದಿಸುವ ಎಲ್ಲಾ ಬ್ರ್ಯಾಂಡ್ ಗಳ ಗೆಡ್ಜೆಟ್ ಗಳನ್ನು ಉಚಿತವಾಗಿ ಪಿಕ್-ಅಪ್ ಮಾಡುವ ಸೇವೆಯನ್ನು ಕಂಪೆನಿ ಆಫರ್ ಮಾಡುತ್ತದೆ.

Best Mobiles in India

Read more about:
English summary
Cashify Launches E-Stores In India For Refurbished Gadgets

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X