CES 2018 : 256GB ಸಾಮರ್ಥ್ಯದ ಅತ್ಯಂತ ಚಿಕ್ಕ ಫ್ಲ್ಯಾಶ್ ಡ್ರೈವ್

By Tejaswini P G

  CES 2018ರಲ್ಲಿ ಮೂರು ಇತರ ಸ್ಟೋರೇಜ್ ಸಾಧನಗಳೊಂದಿಗೆ ವೆಸ್ಟರ್ನ್ ಡಿಜಿಟಲ್ (WD) ಸಂಸ್ಥೆಯು ಜಗತ್ತಿನ ಅತ್ಯಂತ ಚಿಕ್ಕ ಫ್ಲ್ಯಾಶ್ ಡ್ರೈವ್ ಅನ್ನು ಅನಾವರಣಗೊಳಿಸಿದೆ. ವೈರ್ಲೆಸ್ SSD(ಸಾಲಿಡ್-ಸ್ಟೇಟ್ ಡಿವೈಸ್), ಹೆಚ್ಚಿನ ಸಾಮರ್ಥ್ಯದ USB ಡ್ರೈವ್ ಮತ್ತು ಕಾಂಪ್ಯಾಕ್ಟ್ ರಗ್ಗ್ಡ್ SSD(ಸಾಲಿಡ್-ಸ್ಟೇಟ್ ಡಿವೈಸ್) CES 2018ರಲ್ಲಿ ಅನಾವರಣಗೊಂಡ ಇತರ ಮೂರು ಸಾಧನಗಳಾಗಿವೆ.

  CES 2018 : 256GB ಸಾಮರ್ಥ್ಯದ ಅತ್ಯಂತ ಚಿಕ್ಕ ಫ್ಲ್ಯಾಶ್ ಡ್ರೈವ್

  WD ಅನಾವರಣಗೊಳಿಸಿದ ಸ್ಯಾನ್ಡಿಸ್ಕ್ ಅಲ್ಟ್ರಾ ಫಿಟ್ ಫ್ಲ್ಯಾಶ್ ಡ್ರೈವ್ ಜಗತ್ತಿನ ಅತ್ಯಂತ ಕಿರಿಯ ಸ್ಟೋರೇಜ್ ಸಾಧನ ಎಂದು ಹೇಳಲಾಗುತ್ತಿದೆ. ಇದರ ಸ್ಪೆಸಿಫಿಕೇಶನ್ ಕುರಿತು ಹೇಳುವುದಾದರೆ ಇದರಲ್ಲಿದೆ 25GB ಸ್ಟೋರೇಜ್ ಸಾಮರ್ಥ್ಯ, 130MB/s ವೇಗ ಮತ್ತು USB 2.0 ಮತ್ತು 3.0 ಪೋರ್ಟ್ ಸಪೋರ್ಟ್.

  WD ಅದರ ಮೂಲಮಾದರಿಯಾದ ಅಲ್ಟ್ರಾ ಫಿಟ್ ನ 1TB ಟೈಪ್ C ಮಾಡೆಲ್ ಅನ್ನು ಪ್ರಸ್ತುತಪಡಿಸಿತು. ಈ ಸ್ಟೋರೇಜ್ ಸಾಧನಗಳು ಯಾವಾಗ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಮಾಹಿತಿ ಇಲ್ಲವಾದರೂ 16GB ಆವೃತ್ತಿಯ ಬೆಲೆ ಅಂದಾಜು ರೂ 1400 ಮತ್ತು 256GBಆವೃತ್ತಿಯ ಬೆಲೆ ರೂ 9,600 ಎಂದು ಹೇಳಲಾಗುತ್ತಿದೆ.

  How to Activate UAN Number? KANNADA
  ಸ್ಯಾನ್ಡಿಸ್ಕ್ ಮೈ ಪಾಸ್ಪೋರ್ಟ್ ವೈರ್ಲೆಸ್ SSD ಮತ್ತು ಸ್ಯಾನ್ಡಿಸ್ಕ್ ಎಕ್ಸ್ಟ್ರೀಮ್ ಪೋರ್ಟೇಬಲ್ SSD ಎಂಬ ಎರಡು ಹೊಸ SSD ಗಳನ್ನು ಪ್ರಸ್ತುತಪಡಿಸಿದೆ. ಒನ್ ಟಚ್ ಕಾರ್ಡ್ ಕಾಪಿ ಎನ್ನುವ ಫೀಚರ್ ಪಾಸ್ಪೋರ್ಟ್ ವೈರ್ಲೆಸ್ SSD ಯ ವಿಶೇಷತೆಯಾಗಿದ್ದು, ಸ್ಟೋರೇಜ್ ಸಾಧನದಲ್ಲಿರುವ ಮಾಹಿತಿಯನ್ನು ತುಂಬಾ ವೇಗವಾಗಿ ಎಡಿಟ್ ಮತ್ತು ಶೇರ್ ಮಾಡಲು ಇದು ಅನುವು ಮಾಡಿಕೊಡುತ್ತದೆ.

  CES 2018 : 256GB ಸಾಮರ್ಥ್ಯದ ಅತ್ಯಂತ ಚಿಕ್ಕ ಫ್ಲ್ಯಾಶ್ ಡ್ರೈವ್

  ಥರ್ಡ್ ಪಾರ್ಟಿ ಮೊಬೈಲ್ ಕ್ರಿಯೇಟಿವ್ ಆಪ್ಗಳಾದ ಫಿಲ್ಮಿಕ್ ಪ್ರೋ,ಲುಮಾಫ್ಯೂಶನ್ ಮೊದಲಾದ ಆಪ್ಗಳ ಮೂಲಕ ಈ ಸಾಧನವನ್ನು ನೇರವಾಗಿ ಆಕ್ಸೆಸ್ ಮಾಡಬಹುದಾಗಿದೆ. ಸ್ಯಾನ್ಡಿಸ್ಕ್ ಎಕ್ಸ್ಟ್ರೀಮ್ ಪೋರ್ಟೇಬಲ್ SSD ಹೈ ರೆಸೊಲ್ಯೂಶನ್ ಫೋಟೋ ಮತ್ತು ವೀಡಿಯೋಗಳನ್ನು ಆನ್-ದಿ-ಗೋ ಸೇವ್ ಮತ್ತು ಎಡಿಟ್ ಮಾಡಲು ಸೂಕ್ತವಾಗಿದೆ ಎಂದು ಸ್ಯಾನ್ಡಿಸ್ಕ್ ತಿಳಿಸಿದೆ.

  WD ಮೈ ಪಾಸ್ಪೋರ್ಟ್ ವೈರ್ಲೆಸ್ SSD 65MB/s ರೀಡಿಂಗ್ ಸ್ಪೀಡ್ ಹೊಂದಿದ್ದು 802.11 ac ವೈಪೈ ಕನೆಕ್ಟಿವಿಟಿಯನ್ನೂ ಹೊಂದಿದೆ. ಈ SSD USB 3.0 ಪೋರ್ಟ್ ಹೊಂದಿದ್ದು, 6700mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಇದನ್ನು ಪವರ್ ಬ್ಯಾಂಕ್ ಆಗಿ ಕೂಡ ಬಳಸಬಹುದೆಂದು WD ತಿಳಿಸಿದೆ. ನಿರಂತರವಾಗಿ 10 ಘಂಟೆಗಳ ಕಾಲ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯ ಈ ಹಿರಿದಾದ ಬ್ಯಾಟರಿಗೆ ಇದೆ.

  ಸಂಕ್ರಾಂತಿ ಸಂಭ್ರಮಕ್ಕೆ ಜಿಯೋ ಕೊಡುಗೆ: ಕಡಿಮೆ ಬೆಲೆಗೆ ಅನ್‌ಲಿಮಿಟೆಡ್ ಡೇಟಾ ಆಫರ್‌...!

  ಮೈ ಪಾಸ್ಪೋರ್ಟ್ ವೈರ್ಲೆಸ್ SSD ಯ 250GB ಆವೃತ್ತಿಯ ಬೆಲೆ ಅಂದಾಜು ರೂ 15,000 ಮತ್ತು 2TB ಆವೃತ್ತಿಯ ಬೆಲೆ ಅಂದಾಜು ರೂ 51,000 ಆಗಿದೆ.

  WD ಸಂಸ್ಥೆಯು ಇದೇ ಸಂದರ್ಭದಲ್ಲಿ USB-C ಸ್ಯಾನ್ಡಿಸ್ಕ್ ಎಕ್ಸ್ಟ್ರೀಮ್ ಪೋರ್ಟೇಬಲ್ SSD ಯನ್ನು ಅನಾವರಣಗೊಳಿಸಿದೆ. ನೀರು ಮತ್ತು ಧೂಳಿನ ವಿರುದ್ಧ ಹೊಂದಿರುವ ರೆಸಿಸ್ಟೆನ್ಸ್ ಗೆ IP5 ರೇಟಿಂಗ್ ಪಡೆದಿರುವ ಈ USB ಡ್ರೈವ್ 250GB ಯಿಂದ 2 TB ವರೆಗಿನ ಸ್ಟೋರೇಜ್ ಆವೃತ್ತಿಗಳಲ್ಲಿ ಲಭ್ಯವಿದೆ. ಈ ಪಾಕೆಟ್-ಗಾತ್ರದ SSD 550MB/s ರೀಡ್ ಸ್ಪೀಡ್ ಹೊಂದಿದೆ.

  USB-C ಸ್ಯಾನ್ಡಿಸ್ಕ್ ಎಕ್ಸ್ಟ್ರೀಮ್ ಪೋರ್ಟೇಬಲ್ SSD ಯ 250GB ಆವೃತ್ತಿಯ ಬೆಲೆ ಅಂದಾಜು ರೂ 6300 ಆಗಿದ್ದು, 2TB ಆವೃತ್ತಿಯ ಬೆಲೆ ರೂ 45,000 ಆಗಿದೆ.

  ಈ ಅಂಕಿಗಳು ಬಹಳ ದಿಗ್ಭ್ರಮೆ ಮೂಡಿಸುವಂತಿದ್ದು, ಈ USB ಡ್ರೈವ್ಗಳು ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಸಧ್ಯಕ್ಕೆ ಲಭ್ಯವಿಲ್ಲ.

  English summary
  Western Digial(WD) unveils worlds smallest Flash Drive with 256 GB storage memory. WD also announced USB Type C Extreme portable SSD along with Mypassport wireless SSD
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more