CES 2020 ಕಾರ್ಯಕ್ರಮ: ಅಚ್ಚರಿಯ ಸ್ಮಾರ್ಟ್‌ ಡಿವೈಸ್‌ಗಳ ಅನಾವರಣ!

|

ಸದ್ಯ ಮಾರುಕಟ್ಟೆಗೆ ಅನೇಕ ನೂತನ ಗ್ಯಾಡ್ಜೆಟ್ಸ್‌ಗಳು, ಹೊಸ ಪರಿಕರಗಳು, ಸ್ಮಾರ್ಟ್‌ ಡಿವೈಸ್‌ಗಳು ಎಂಟ್ರಿ ಕೊಡುತ್ತಿವೆ. ಹೀಗೆ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ ನಮೂನೆಯ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಪ್ರದರ್ಶಿಸಲು ಮೇಳಗಳು/ಕಾರ್ಯಕ್ರಮಗಳು ವೇದಿಕೆ ನೀಡುತ್ತವೆ. ಆ ಪೈಕಿ ಇದೀಗ ಲಾಸ್‌ ವೆಗಾಸ್‌ನಲ್ಲಿ 'ಕನ್ಸೂಮರ್‌ ಎಲೆಕ್ಟ್ರಾನಿಕ್ಸ್‌ ಶೋ-2020'(Consumer Electronics Show (CES-2020) ಕಾರ್ಯಕ್ರಮ ಶುರುವಾಗಿದೆ.

ಕನ್ಸೂಮರ್ ಎಲೆಕ್ಟ್ರಾನಿಕ್ಸ್‍ ಶೋ

ನಾಲ್ಕು ದಿನಗಳ ಕಾಲ ನಡೆಯುವ ಈ ಕನ್ಸೂಮರ್ ಎಲೆಕ್ಟ್ರಾನಿಕ್ಸ್‍ ಶೋ ಕಾರ್ಯಕ್ರಮವು ಇಂದು (ಜ.7) ಆರಂಭವಾಗಿದ್ದು, ಇದೇ ಜನವರಿ 10ರ ವರೆಗೂ ನಡೆಯಲಿದೆ. ಟೆಕ್ ದಿಗ್ಗಜ ಕಂಪನಿಗಳಿಂದ ಅಚ್ಚರಿಯ ಸ್ಮಾರ್ಟ್‌ ಡಿವೈಸ್‌ಗಳು ಹಾಗೂ ನೂತನ ಮಾದರಿಯ ಗ್ಯಾಡ್ಜೆಟ್ಸ್‌ಗಳು ಅನಾವರಣಗೊಳ್ಳಲಿವೆ. ಗ್ರಾಹಕರ ಊಹೆಗೆ ಮೀರಿದ ಹೊಸ ನಮೂನೆಯ ಟೆಕ್ ಉತ್ಪನ್ನಗಳು ಮೇಳದಲ್ಲಿ ಕಾಣಿಸಿಕೊಳ್ಳುತ್ತವೆ. ಆ ಕುರಿತು ಮಾಹಿತಿ ಇಲ್ಲಿದೆ ಮುಂದೆ ಓದಿರಿ.

ಕಾರ್ಯಕ್ರಮದ ಮೊದಲ ದಿನ

ಕಾರ್ಯಕ್ರಮದ ಮೊದಲ ದಿನ

ಜನವರಿ 7ರಿಂದ ಆರಂಭವಾಗಿರುವ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್, ಆಸೂಸ್, ಸೇರಿದಂತೆ ಜನಪ್ರಿಯ ಕಂಪನಿಗಳ ಹಲವು ಆಕರ್ಷಕ ಉತ್ಪನ್ನಗಳ ಪ್ರದರ್ಶನ ನಡೆಯಿತು. ಅವುಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌ ಲೈಟ್ ಫೋನ್‌ಗಳು, ಸ್ಯಾಮ್‌ಸಂಗ್ ಸೆರೊ ರೋಟೆಟಿಂಗ್ ಟಿವಿ, AI ಬೆಂಬಲಿತ ಸ್ಮಾರ್ಟ್‌ ಬೂತ್‌ ಬ್ರೆಶ್, ಲ್ಯಾಪ್‌ಟಾಪ್, ಗೇಮಿಂಗ್ ಮಾನಿಟರ್, ಇನ್ನು ಹಲವು ಡಿವೈಸ್‌ಗಳು ಅನಾವರಣ ಆದವು.

ಸ್ಯಾಮ್‌ಸಂಗ್ ಗ್ಯಾಲಾಕ್ಸಿ S ಲೈಟ್‌

ಸ್ಯಾಮ್‌ಸಂಗ್ ಗ್ಯಾಲಾಕ್ಸಿ S ಲೈಟ್‌

ಈ ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್ ತನ್ನ ಗ್ಯಾಲಾಕ್ಸಿ ಎಸ್‌ ಲೈಟ್‌ ಸರಣಿಯಲ್ಲಿನ ಸ್ಮಾರ್ಟ್‌ಫೋನ್‌ಗಳ ಅನಾವರಣ ಮಾಡಿದೆ. ಕಳೆದ ವಾರ ಸಂಸ್ಥೆಯ ಘೋಷಿಸಿದ್ದ, ಗ್ಯಾಲಾಕ್ಸಿ ಎಸ್‌10 ಲೈಟ್, ಗ್ಯಾಲಾಕ್ಸಿ ಎಸ್‌10 ಲೈಟ್ ಫೋನ್‌ಗಳ ಆಕರ್ಷಕ ಫೀಚರ್ಸ್‌ ಪಡೆದಿವೆ. ಇನ್ನು ಗ್ಯಾಲಾಕ್ಸಿ ಎಸ್‌ 10 e ಫೋನಿಗೆ ಇವು ಪರ್ಯಾಯವಾಗಲಿವೆ ಎನ್ನಲಾಗಿದೆ. ಹೊಸ ಕ್ಯಾಮೆರಾ, ಸ್ನ್ಯಾಪ್‌ಡ್ರಾಗನ್ 855 ಚಿಪ್‌ಸೆಟ್, ಹೊಂದಿವೆ. ಆದರೆ ಫೋನ್‌ಗಳ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾಹಿತಿ ನೀಡಿಲ್ಲ.

ಸ್ಯಾಮ್‌ಸಂಗ್ ಸೆರೊ ರೊಟೆಟ್ ಟಿವಿ

ಸ್ಯಾಮ್‌ಸಂಗ್ ಸೆರೊ ರೊಟೆಟ್ ಟಿವಿ

ಈಗಾಗಲೇ ಹಲವು ಹೊಸ ಮಾದರಿಯ ಸ್ಮಾರ್ಟ್‌ ಟಿವಿಗಳನ್ನು ಬಿಡುಗಡೆ ಮಾಡಿರುವ ಸ್ಯಾಮ್‌ಸಂಗ್ ಇದೀಗ ರೊಟೆಟಿಂಗ್(ತಿರುಗುವ) ಮಾದರಿಯ ಟಿವಿ ಬಿಡುಗಡೆಗೆ ತಯಾರಿ ನಡೆಸಿದೆ. ಆ ಬಗ್ಗೆ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ-2020 ದಲ್ಲಿ ಬಹಿರಂಗಪಡಿಸಿದೆ. ಈ ಟಿವಿಯು 43 ಇಂಚಿನಲ್ಲಿರಲಿದ್ದು, 4K QLED ಡಿಸ್‌ಪ್ಲೇಯನ್ನು ಹೊಂದಿರಲಿದೆ. ವಿಶೇಷ ರೋಟೆಟಿಂಗ್ ಸ್ಟ್ಯಾಂಡ್ ಸೌಲಭ್ಯ ಪಡೆದಿರಲಿದೆ.

ಸ್ಮಾರ್ಟ್‌ ಬೂತ್‌ ಬ್ರೆಶ್‌

ಸ್ಮಾರ್ಟ್‌ ಬೂತ್‌ ಬ್ರೆಶ್‌

ಇಂದಿನ ಬಹುತೇಕ ಅಗತ್ಯ ವಸ್ತುಗಳು ಸ್ಮಾರ್ಟ್‌ ಟಚ್ ಪಡೆಯುತ್ತಿವೆ. ಇದೀಗ ಹಲ್ಲುಜ್ಜುವ ಬ್ರೆಶ್‌ ಸಹ ಸ್ಮಾರ್ಟ್‌ ರೂಪ ಹೊಂದಿದೆ. ಜನಪ್ರಿಯ ಓರಲ್‌-ಬಿ ಕಂಪನಿಯು IO ಮತ್ತು AI ಸಪೋರ್ಟ್‌ನ ಸ್ಮಾರ್ಟ್‌ ಬ್ರೆಶ್ ಪರಿಚಯಿಸಲು ಸಜ್ಜಾಗಿದೆ. ಮ್ಯಾಗ್ನೆಟಿಕ್ ಡ್ರೈವ್ ಸಾಮರ್ಥ್ಯ ಪಡೆದಿರುವ ಈ ಬ್ರೇಶ್‌ ಅನ್ನು ಒಮ್ಮೆ ಚಾರ್ಜ್ ಮಾಡಿದರೇ ಸುಮಾರು 12 ದಿನಗಳ ಬಾಳಿಕೆ ಬರಲಿದೆ ಎಂದು ಸಂಸ್ಥೆಯು ಹೇಳಿಕೊಂಡಿದೆ.

ಗೇಮಿಂಗ್ ಡಿಸ್‌ಪ್ಲೇ

ಗೇಮಿಂಗ್ ಡಿಸ್‌ಪ್ಲೇ

ಜನಪ್ರಿಯ ಟೆಕ್ ಸಂಸ್ಥೆ ಆಸೂಸ್ ಇದೀಗ ಹೈ ಎಂಡ್ ಮಾದರಿಯ ಗೇಮಿಂಗ್ ಡಿಸ್‌ಪ್ಲೇ ಡಿವೈಸ್ ರೂಪಿಸಿದೆ. ಈ ಗೇಮಿಂಗ್ ಸ್ಮಾರ್ಟ್‌ ಡಿಸ್‌ಪ್ಲೇಯು 360Hz ರೀಫ್ರೇಶ್‌ ರೇಟ್ ಸಾಮರ್ಥ್ಯವನ್ನು ಪಡೆದಿರುವುದು ವಿಶೇಷ.

Best Mobiles in India

English summary
CES 2020 in Las Vegas has shown us the usual array of several smart gadgets but a host of sleek laptops are also present to satisfy the inner geeks. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X