ಆಪಲ್‌ನ ಈ ಟೆಕ್ನಾಲಜಿ ಆಂಡ್ರಾಯ್ಡ್‌ನಲ್ಲೂ ಲಭ್ಯವಾಗುವ ಕಾಲ ದೂರವಿಲ್ಲ!

|

ಇತ್ತೀಚಿನ ದಿನಗಳಲ್ಲಿ ವಾಯರ್‌ಲೆಸ್‌ ಚಾರ್ಜಿಂಗ್‌ ಟೆಕ್ನಾಲಜಿ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ತಿದೆ. ಇದಕ್ಕೆ ತಕ್ಕಂತೆ ಆಂಡ್ರಾಯ್ಡ್‌ ಮತ್ತು ಐಒಎಸ್‌ ಡಿವೈಸ್‌ಗಳನ್ನು ಬೆಂಬಲಿಸುವ ವಾಯರ್‌ಲೆಸ್‌ ಟೆಕ್ನಾಲಜಿ ಲಭ್ಯವಿದೆ. ಇದರಲ್ಲಿ Qi ವೈರ್‌ಲೆಸ್ ಚಾರ್ಜಿಂಗ್ ಸಿಸ್ಟಂ ಆಂಡ್ರಾಯ್ಡ್‌ ಡಿವೈಸ್‌ಗಳನ್ನು ಬೆಂಬಲಿಸಿದರೆ, ಆಪಲ್‌ನ ಐಫೋನ್‌ಗಳಿಗಾಗಿ ಮ್ಯಾಗ್‌ಸೇಫ್‌ ವಾಯರ್‌ಲೆಸ್‌ ಚಾರ್ಜಿಂಗ್‌ ಟೆಕ್ನಾಲಜಿ ಲಭ್ಯವಿದೆ. ಆಪಲ್‌ನ ಮ್ಯಾಗ್‌ಸೇಫ್‌ ವಾಯರ್‌ಲೆಸ್‌ ಚಾರ್ಜಿಂಗ್‌ ಸಿಸ್ಟಂ ಸಾಕಷ್ಟು ಅಪ್ಡೇಟ್‌ ಆಗಿದ್ದು, ಅಡ್ವಾನ್ಸ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಆಪಲ್‌

ಹೌದು, ಆಪಲ್‌ ಮ್ಯಾಗ್‌ಸೇಫ್‌ ವಾಯರ್‌ಲೆಸ್‌ ಚಾರ್ಜಿಂಗ್‌ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಇದಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ವಾಯರ್‌ಲೆಸ್ ಪವರ್ ಕನ್ಸೋರ್ಟಿಯಂ Qi2 ವಾಯರ್‌ಲೆಸ್‌ ಚಾರ್ಜಿಂಗ್‌ ಟೆಕ್ನಾಲಜಿಯನ್ನು ಘೋಷಿಸಿದೆ. ಇದು CES 2023 ನಲ್ಲಿ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಇನ್ನು Qi2 ವಾಯರ್‌ಲೆಸ್‌ ಚಾರ್ಜಿಂಗ್‌ ಟೆಕ್ನಾಲಜಿ ಹೈ ಎಂಡ್‌ ಆಂಡ್ರಾಯ್ಡ್‌ ಫೋನ್‌ಗಳಿಗೆ ಸೂಕ್ತವಾಗಿದೆ. Qi2 ಆಪಲ್‌ನ ಮ್ಯಾಗ್‌ಸೇಫ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ.

ಮ್ಯಾಗ್‌ಸೇಫ್‌

ಮ್ಯಾಗ್‌ಸೇಫ್‌ ಐಫೋನ್‌ಗಳು ಮತ್ತು ಇತರ ಆಪಲ್ ಡಿವೈಸ್‌ಗಳಿಗೆ ಹೇಗೆ ಕಾರ್ಯನಿರ್ವಹಿಸಲಿದೆ ಅದೇ ಮಾದರಿಯಲ್ಲಿಯೇ ಚಾರ್ಜಿಂಗ್ ಪ್ಯಾಡ್‌ನೊಂದಿಗೆ ಡಿವೈಸ್‌ಗಳನ್ನು ಜೋಡಿಸಲು ಸಹಾಯ ಮಾಡುವ ಮ್ಯಾಗ್ನೆಟಿಕ್ ಸಾಮರ್ಥ್ಯವನ್ನು ಹೊಂದಿರುತ್ತದೆ. ಆಪಲ್‌ನ ಮ್ಯಾಗ್‌ಸೇಫ್ ಐಫೋನ್‌ನ ಹಿಂಭಾಗದಲ್ಲಿರುವ ವಾಯರ್‌ಲೆಸ್ ಚಾರ್ಜಿಂಗ್ ರಿಸೆಪ್ಟರ್‌ನೊಂದಿಗೆ ಚಾರ್ಜರ್ ಅನ್ನು ಜೋಡಿಸಲು ಮ್ಯಾಗ್ನೆಟ್‌ಗಳ ರಿಂಗ್ ಅನ್ನು ಬಳಸುತ್ತದೆ. ಆದರೆ Qi2 ಮ್ಯಾಗ್ನೆಟಿಕ್ ಪವರ್ ಪ್ರೊಫೈಲ್ ತಂತ್ರಜ್ಞಾನವನ್ನು ಬಳಸುತ್ತದೆ.

ಮ್ಯಾಗ್ನೆಟಿಕ್

ಇನ್ನು ಈ ಹೊಸ ಮ್ಯಾಗ್ನೆಟಿಕ್ ಪವರ್ ಪ್ರೊಫೈಲ್ ಆಪಲ್‌ನ ಮ್ಯಾಗ್‌ಸೇಫ್ ಸ್ಟ್ಯಾಂಡರ್ಡ್ ಅನ್ನು ಆಧರಿಸಿದೆ ಎಂದು ವರದಿಯಾಗಿದೆ. ಇದು ಐಫೋನ್‌ನಲ್ಲಿರುವಂತೆ ಆಂಡ್ರಾಯ್ಡ್‌ ಫೋನ್‌ಗಳಿಗೆ ಮ್ಯಾಗ್ನೆಟಿಕ್ ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಸಪ್ಲೇ ಮಾಡಲಿದೆ. ಇನ್ನು Qi2 ನ ಮ್ಯಾಗ್ನೆಟಿಕ್ ಪವರ್ ಪ್ರೊಫೈಲ್ ಫೋನ್‌ಗಳನ್ನು ಚಾರ್ಜಿಂಗ್ ಡಿವೈಸ್‌ಗಳೊಂದಿಗೆ ಕನೆಕ್ಟ್‌ ಮಾಡಲಾಗಿದೆಯಾ ಇಲ್ಲವೇ ಅನ್ನೊದನ್ನ ತಿಳಿಸಲಿದೆ. ಈ ಮೂಲಕ ಸುಧಾರಿತ ಮತ್ತು ವೇಗವಾದ ಚಾರ್ಜಿಂಗ್‌ ಅನ್ನು ಒದಗಿಸಲಿದೆ.

ವಾಯರ್‌ಲೆಸ್

ಈಗಾಗಲೇ ಲಭ್ಯವಿರುವ Qi ವಾಯರ್‌ಲೆಸ್ ಚಾರ್ಜಿಂಗ್ ಸಿಸ್ಟಂ ಚಾರ್ಜಿಂಗ್ ಪ್ಯಾಡ್‌ಗಳು ಮತ್ತು ಡಿವೈಸ್‌ಗಳನ್ನು ಮ್ಯಾಗ್ನೇಟಿಕ್‌ ಆಗಿ ಒಂದಕೊಂದು ಅಂಟಿಕೊಳ್ಳುವುದಿಲ್ಲ. ಆದರಿಂದ ಚಾರ್ಜಿಂಗ್‌ ಡಿವೈಸ್‌ನಿಂದ ಸ್ವಲ್ಪ ದೂರ ಸರಿದರೂ ಚಾರ್ಜಿಂಗ್‌ ಸ್ಟಾಪ್‌ ಆಗಲಿದೆ. ಆದರೆ ಆಪಲ್ ಅಲ್ಲದ ಡಿವೈಸ್‌ಗಳಿಗೆ ವಾಯರ್‌ಲೆಸ್ ಚಾರ್ಜಿಂಗ್‌ನ ಪ್ರಸ್ತುತ ಪರಿಸ್ಥಿತಿಗೆ ಲೋಕಲ್‌ ಸಪೋರ್ಟ್‌ ಫೂಲ್‌ಪ್ರೂಫ್ ಸಲ್ಯೂಶನ್‌ ಆಗಿದೆ ಎನ್ನಬಹುದು.

ವಾಯರ್‌ಲೆಸ್

ಇದೀಗ ಅನಾವರಣಗೊಂಡಿರುವ ಹೊಸ Qi2 ವಾಯರ್‌ಲೆಸ್ ಚಾರ್ಜಿಂಗ್ ಸಿಸ್ಟಂ, ಹೊಸ ರೂಪದ ಅಂಶಗಳಿಗೆ ವಾಯರ್‌ಲೆಸ್ ಚಾರ್ಜಿಂಗ್ ಅನ್ನು ತೆರೆಯಬಹುದು ಎಂದು WPC ಹೇಳಿದೆ. ಇದು ಸಮತಟ್ಟಾದ ಮೇಲ್ಮೈ ಇಲ್ಲದ ಡಿವೈಸ್‌ಗಳು ಮತ್ತು ಚಾರ್ಜರ್‌ಗಳು ಪ್ರಸ್ತುತ ಸಾಧ್ಯವಾಗದ ಮ್ಯಾಗ್ನೆಟಿಕ್ ಪವರ್ ಪ್ರೊಫೈಲ್ ಫೀಚರ್ಸ್‌ ಬಳಸುವುದಕ್ಕೆ ಅವಕಾಶ ನೀಡಲಿದೆ ಎಂದು ಹೇಳಲಾಗಿದೆ. ಆದರೆ Qi2 ಸ್ಟ್ಯಾಂಡರ್ಡ್‌ನೊಂದಿಗೆ ಮೊದಲ ಸ್ಮಾರ್ಟ್‌ಫೋನ್‌ಗಳು ಅಥವಾ ಚಾರ್ಜರ್‌ಗಳು ಯಾವಾಗ ಬರುತ್ತವೆ ಎಂಬುದು ಇನ್ನು ಬಹಿರಂಗವಾಗಿಲ್ಲ ಇದು CES 2023ನಲ್ಲಿ ಬಹಿರಂಗವಾಗುವ ಸಾಧ್ಯತೆಯಿದೆ.

ಸ್ಟಫ್‌ಕೂಲ್‌

ಇತ್ತೀಚಿಗೆ ಭಾರತದಲ್ಲಿ ಸ್ಟಫ್‌ಕೂಲ್‌ ಕಂಪೆನಿ ಕೂಡ ಹೊಸ ವಾಯರ್‌ಲೆಸ್‌ ಪವರ್‌ಬ್ಯಾಂಕ್‌ ಬಿಡುಗಡೆ ಮಾಡಿದೆ. ಭಾರತದಲ್ಲಿ ಸ್ಟಫ್‌ಕೂಲ್‌ PB9063W 5,000mAh ಮ್ಯಾಗ್ನೆಟಿಕ್ ವಾಯರ್‌ಲೆಸ್ ಪವರ್ ಬ್ಯಾಂಕ್ ಪರಿಚಯಿಸಿದ್ದು, ಇದು ತನ್ನ ಅತ್ಯಾಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಇದರಲ್ಲಿ ನಿಮ್ಮ ಡಿವೈಸ್‌ ಅನ್ನು ಚಾರ್ಜ್‌ ಮಾಡಬೆಕಾದರೆ ಯಾವುದೇ ಕೇಬಲ ಕನೆಕ್ಟ್ ಮಾಡಬೇಕಾದ ಅನಿವಾರ್ಯತೆಯಿಲ್ಲ. ಇದು ಪ್ರಾರಂಭಿಕವಾಗಿ ಆಪಲ್‌ನ ಸ್ಮಾರ್ಟ್‌ವಾಚ್‌, ಡಿವೈಸ್‌ಗಳನ್ನು ಕೂಡ ಚಾರ್ಜ್‌ ಮಾಡುವುದಕ್ಕೆ ಸೂಕ್ತವಾದ ವಿನ್ಯಾಸವನ್ನು ಪಡೆದುಕೊಂಡಿದೆ.

Best Mobiles in India

English summary
CES 2023: Wireless Power Consortium announced Qi2 incorporating features of Apple’s MagSafe

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X