ಒಂದೇ ಒಂದು ಕಾಮೆಂಟ್‌ ಮಾಡಿ, ಉಚಿತವಾಗಿ ನಥಿಂಗ್ ಫೋನ್ (1) ಪಡೆಯಿರಿ!

|

ಉಚಿತವಾಗಿ ನಥಿಂಗ್ ಫೋನ್ (1) ಪಡೆಯುವ ಅವಕಾಶ ಸಿಕ್ಕರೆ ಬಿಡ್ತಿರಾ?..ಖಂಡಿತಾ ಇಲ್ಲ ಎನ್ನುವುದಾದರೆ, ಇಲ್ಲಿ ಗಮನಿಸಿ. ಯುಕೆ ಮೂಲದ ನಥಿಂಗ್ ಸಂಸ್ಥಾಪಕ ಕಾರ್ಲ್ ಪೀ ಅವರ ಟ್ವಿಟರ್ ಕಾಮೆಂಟ್‌ ಸ್ಪರ್ಧೆಯಲ್ಲಿ ಭಾಗವಹಿಸಿ ಬಳಕೆದಾರರಿಗೆ ನಥಿಂಗ್ ಫೋನ್ (1) ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಆಸಕ್ತ ಬಳಕೆದಾರರು ಕಾರ್ಲ್ ಪೀ ಅವರ ಟ್ವೀಟ್‌ನಲ್ಲಿ ಕಾಮೆಂಟ್ ಮಾಡಬೇಕಿದ್ದು, ನಿಮ್ಮ ಕಾಮೆಂಟ್‌ ಜಿರೋ (zero) ಲೈಕ್‌ ಪಡೆದ್ರು ಫೋನ್‌ ಸಿಗುತ್ತೆ, ಅಥವಾ ಹೆಚ್ಚಿನ ಲೈಕ್‌ ಬಂದ್ರೂ ಫೋನ್‌ ಗೆಲ್ಲುವ ಚಾನ್ಸ್‌ ಇದೆ.

ಹೌದು, ಕಾರ್ಲ್ ಪೀ ಅವರು ಟ್ವಿಟರ್ ನಲ್ಲಿ ಬಳಕೆದಾರರಿಗೆ ಸ್ಪರ್ಧೆ ನೀಡಿದ್ದು, ಕಾಮೆಂಟ್‌ ಮಾಡಲು ಹೇಳಿದ್ದಾರೆ. ಕಾಮೆಂಟ್‌ಗೆ ಜಿರೋ (zero) ಲೈಕ್‌ ಪಡೆಯುವ ಬಳಕೆದಾರರು ಫ್ರೀ ಯಾಗಿ ನಥಿಂಗ್ ಫೋನ್ (1) ಗೆಲ್ಲಬಹುದಾಗಿದೆ. ಹಾಗೆಯೇ ಕಾಮೆಂಟ್‌ಗೆ ಅತೀ ಹೆಚ್ಚು ಲೈಕ್‌ಗಳನ್ನು ಬಳಕೆದಾರರಿಗೂ ಉಚಿತವಾಗಿ ನಥಿಂಗ್ ಫೋನ್ (1) ಫೋನ್‌ ನೀಡಲಿದ್ದಾರೆ. ವಿಜೇತರನ್ನು 24 ಗಂಟೆಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ನಥಿಂಗ್ ಫೋನ್ (1) 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಹೊಂದಿದ್ದು, 1,200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ HDR10+ ಬೆಂಬಲ, 402 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ಪ್ರೊಟೆಕ್ಷನ್‌ ಅನ್ನು ಹೊಂದಿದೆ.

ಪ್ರೊಸೆಸರ್‌ ಕಾರ್ಯವೈಖರಿ ಹೇಗಿದೆ?

ಪ್ರೊಸೆಸರ್‌ ಕಾರ್ಯವೈಖರಿ ಹೇಗಿದೆ?

ನಥಿಂಗ್ ಫೋನ್ (1) ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM + 128GB, 8GB RAM + 256 GB ಮತ್ತು 12GB RAM + 256 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ಯಾವುದೇ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯವನ್ನು ಬೆಂಬಲಿಸುವುದಿಲ್ಲ ಎಂದು ನಥಿಂಗ್‌ ಕಂಪೆನಿ ಹೇಳಿದೆ.

ಕ್ಯಾಮೆರಾ ಸೆನ್ಸಾರ್ ವಿಶೇಷತೆ

ಕ್ಯಾಮೆರಾ ಸೆನ್ಸಾರ್ ವಿಶೇಷತೆ

ನಥಿಂಗ್ ಫೋನ್ (1) ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್‌ JN1 ಸೆನ್ಸಾರ್‌ ಹೊಂದಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪನೋರಮಾ ನೈಟ್ ಮೋಡ್, ಪೋರ್ಟ್ರೇಟ್ ಮೋಡ್, ಸೀನ್ ಡಿಟೆಕ್ಷನ್, ಎಕ್ಸ್‌ಟ್ರೀಮ್ ನೈಟ್ ಮೋಡ್ ಮತ್ತು ಎಕ್ಸ್‌ಪರ್ಟ್ ಮೋಡ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೋನಿ IMX471 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟು? ಇತರೆ ಫೀಚರ್ಸ್‌ಗಳೇನು?

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟು? ಇತರೆ ಫೀಚರ್ಸ್‌ಗಳೇನು?

ನಥಿಂಗ್ ಫೋನ್ (1) ಸ್ಮಾರ್ಟ್‌ಫೋನ್‌ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್‌ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, Wi-Fi 6 ಡೈರೆಕ್ಟ್, ಬ್ಲೂಟೂತ್ v5.2, NFC, GPS/A-GPS, ಗ್ಲೋನಾಸ್‌ ಮತ್ತು USB ಟೈಪ್-ಸಿ ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಫೇಸ್ ಅನ್‌ಲಾಕ್ ಬೆಂಬಲವನ್ನು ಕೂಡ ಹೊಂದಿದೆ.

Best Mobiles in India

English summary
Want a free Nothing Phone 1? You have to say something that no one likes.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X