ಸಿಂಗಾಪುರದ ವಿಮಾನ ನಿಲ್ದಾಣ ವಿಶ್ವದಲ್ಲೇ ಬೆಸ್ಟ್‌‌

By Ashwath
|

ಸಿಂಗಾಪುರದ ಚಾಂಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದಲ್ಲೇ ಅತ್ಯಂತ ಉತ್ತಮವಾದ ವಿಮಾನ ನಿಲ್ದಾಣ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.ಸ್ಕೈಟ್ರಾಕ್ಸ್ ಟಾಪ್‌‌ ಹತ್ತು ಬೆಸ್ಟ್‌ ವಿಮಾನ ನಿಲ್ದಾಣ ಪಟ್ಟಿಯಲ್ಲಿ ಸಿಂಗಾಪುರ ವಿಮಾನ ನಿಲ್ದಾಣ ಪ್ರಥಮ ಸ್ಥಾನಗಳಿಸಿದೆ.ದಕ್ಷಿಣ ಕೊರಿಯಾದ ಇನ್ಚಿಯಾನ ವಿಮಾನ ನಿಲ್ದಾಣ ಎರಡನೇ ಸ್ಥಾನಪಡೆದುಕೊಂಡಿದೆ.

ಬ್ರಿಟನ್ ಮೂಲದ ಸ್ಕೈಟ್ರಾಕ್ಸ್(Skytrax )ಸಂಸ್ಥೆ ಪ್ರತಿ ವರ್ಷ‌ ವಿಶ್ವದ ಟಾಪ್‌ ಹತ್ತು ವಿಮಾನ ನಿಲ್ದಾಣಗಳಿಗೆ ಈ ಪ್ರಶಸ್ತಿಯನ್ನು ನೀಡುತ್ತಿದ್ದು,ಈ ವರ್ಷ‌ ವಿಶ್ವದ 410 ವಿಮಾನ ನಿಲ್ದಾಣಗಳನ್ನು ಅಧ್ಯಯನಕ್ಕೆ ಪರಿಗಣಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷದ ಪಟ್ಟಿಯಲ್ಲೂ ಪ್ರಥಮ ಸ್ಥಾನ ಪಡೆದಿದ್ದ ಸಿಂಗಾಪುರ ವಿಮಾನ ನಿಲ್ದಾಣ ಈ ಬಾರಿಯೂ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ.ಭಾರತದ ವಿಮಾನ ನಿಲ್ದಾಣಗಳು ಈ ಪಟ್ಟಿಯಲ್ಲಿ ಸ್ಥಾನಗಳಿಸುವಲ್ಲಿ ವಿಫಲವಾಗಿದೆ.

ಒಂದು ಕೋಟಿಗೂ ಅಧಿಕ ಪ್ರಯಾಣಿಕರು ನೀಡಿದ ಮಾಹಿತಿಯನ್ನು ಆಧಾರಿಸಿ ಈ ಪಟ್ಟಿಯನ್ನು ಸ್ಕೈಟ್ರಾಕ್ಸ್ ಸಿದ್ದಪಡಿಸಿದೆ.ವಿಶ್ವ ಪಟ್ಟಿ ಹೊರತಾಗಿ ಏಷ್ಯಾದ ಉತ್ತಮ ವಿಮಾನ ನಿಲ್ದಾಣ ಪಟ್ಟಿಯಲ್ಲಿ ಹೈದರಾಬಾದ್‌ನ ವಿಮಾನ ನಿಲ್ದಾಣ ನಾಲ್ಕನೇಯ ಸ್ಥಾನ ಪಡೆದುಕೊಂಡಿದೆ.ಬೆಂಗಳೂರಿನ ವಿಮಾನ ನಿಲ್ದಾಣ ಐದನೇ ಸ್ಥಾನಪಡೆದಕೊಂಡಿದೆ.ಮುಂದಿನ ಪುಟದಲ್ಲಿ ಈ ಪಟ್ಟಿಯಲ್ಲಿ ಸ್ಥಾನಗಳಿಸಿದ ವಿಮಾನ ನಿಲ್ದಾಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

1

1

ಸ್ಥಾನ: 10, ಹೀಥ್ರೂ ವಿಮಾನ ನಿಲ್ದಾಣ, ಲಂಡನ್‌

2

2

ಸ್ಥಾನ: 9 ವ್ಯಾಂಕೂವರ್ ವಿಮಾನ ನಿಲ್ದಾಣ,ಕೆನಡಾ

3

3

ಸ್ಥಾನ: 8 ಜುರಿಚ್ ವಿಮಾನ ನಿಲ್ದಾಣ,ಸ್ವಿಜರ್‌ಲ್ಯಾಂಡ್‌

4

4

ಸ್ಥಾನ: 7ಬೀಜಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ,ಚೀನಾ

5

5

ಸ್ಥಾನ: 6 ಟೋಕಿಯೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ,ಜಪಾನ್‌

6

6

ಸ್ಥಾನ: 5,ಆಂಸ್ಟರ್ಡ್ಯಾಮ್ ವಿಮಾನ ನಿಲ್ದಾಣ,ನೆದರ್ಲ್ಯಾಂಡ್ಸ್

7

7

ಸ್ಥಾನ: 4 ಹಾಂಕಾಂಗ್‌ ವಿಮಾನ ನಿಲ್ದಾಣ,ಹಾಂಕಾಂಗ್‌

8

8

ಸ್ಥಾನ: 3 ಮ್ಯುನಿಕ್ ವಿಮಾನ ನಿಲ್ದಾಣ, ಜರ್ಮ‌ನಿ

9

9

ಸ್ಥಾನ: 2 ಇನ್ಚಿಯಾನ ವಿಮಾನ ನಿಲ್ದಾಣ ,ದಕ್ಷಿಣ ಕೊರಿಯಾ

10

10

ಸ್ಥಾನ: 1ಚಾಂಗಿ ವಿಮಾನ ನಿಲ್ದಾಣ, ಸಿಂಗಾಪುರ

ಮಾಹಿತಿ:www.worldairportawards.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X