ಕೆಳದರ್ಜೆಯ ಉದ್ಯೋಗದಿಂದ ಮೇಲ್ದರ್ಜೆಗೇರಿದ ಟೆಕ್ ನಕ್ಷತ್ರಗಳು

By Shwetha

ನಿಮ್ಮ ಜೀವನದಲ್ಲಿ ಮುಂದೆ ಬರಲು ಅವಕಾಶಗಳು ಮಾತ್ರ ಇದ್ದರೆ ಸಾಲದು. ಪ್ರತಿಯೊಂದನ್ನು ಸಾಧಿಸುತ್ತೇನೆ ಎಂಬ ಛಲ ಇರಬೇಕು. ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎನ್ನುವುದಕ್ಕಿಂತಲೂ ಅವುಗಳ ಬೆನ್ನು ಹತ್ತಿ ನಮ್ಮ ಪ್ರಯಾಣವನ್ನು ನಾವು ಮಾಡಿದರೆ ಅಂದುಕೊಂಡಿದ್ದನ್ನು ನಮಗೆ ಸಾಧಿಸಬಹುದು.

ಓದಿರಿ: ಅತಿಯಾದ ಫೋನ್ ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ

ಇಂದು ವಿಶ್ವದಲ್ಲೇ ಮಾನ್ಯತೆಯನ್ನು ಗಳಿಸಿರುವ ಪ್ರಚಂಡ ದಿಗ್ಗಜರನ್ನೇ ನಮಗೆ ಕಾಣಬಹುದು. ಇವರಲ್ಲಿ ಹೆಚ್ಚಿನವರು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರಲ್ಲ. ಸಾಧನೆ ಮತ್ತು ಪರಿಶ್ರಮವನ್ನೇ ಜೀವನದ ಧ್ಯೇಯವಾಗಿರಿಸಿಕೊಂಡು ಮುಂದೆ ಬಂದವರು. ಶ್ರಮದಲ್ಲೇ ಸಾರ್ಥಕತೆ ಇದೆ ಎಂಬುದನ್ನು ನಂಬಿದವರು. ಇಂದಿನ ಲೇಖನದಲ್ಲಿ ಇಂತಹುದೇ ಪ್ರೇರಣೆಯನ್ನಿಟುಕೊಂಡು ಮುಂದೆ ಬಂದವರ ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಓದಿರಿ: ಮರೆತು ಹೋದ ವೈಫೈ ಪಾಸ್‌ವರ್ಡ್ ಪಡೆದುಕೊಳ್ಳುವುದು ಹೇಗೆ?

ಅದರಲ್ಲೂ ತಂತ್ರಜ್ಞಾನ ಕ್ಷೇತ್ರದಂತಹ ಸವಾಲಿನ ಸಾಗರವನ್ನೇ ದಾಟಿ ಇವರುಗಳು ಮುಂದೆ ಬಂದಿದ್ದಾರೆ. ಕೆಳಗಿನ ಸ್ಲೈಡರ್‌ಗಳಲ್ಲಿ ಇದರ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ.

ಮರೀಸ್ಸಾ ಮೇಯರ್

ಮರೀಸ್ಸಾ ಮೇಯರ್

ಯಾಹೂ ಅಧ್ಯಕ್ಷೆ ಮತು ಸಿಇಒ
ಮರೀಸ್ಸಾ ತಮ್ಮ 16 ರ ಹರೆಯದಲ್ಲಿ ಬೇಸಿಗೆ ಸಮಯದ ಕೆಲಸವನ್ನಾಗಿ ದಿನಸಿ ಅಂಗಡಿಯ ಕ್ಲರ್ಕ್ ಉದ್ಯೋಗವನ್ನು ಮಾಡಿದ್ದರು. ಆರ್ಥಿಕ ವ್ಯವಸ್ಥೆಯ ಪಾಠವನ್ನು ಮರೀಸ್ಸಾ ಈ ಉದ್ಯೋಗದಲ್ಲಿ ಕಲಿತಿದ್ದಾರೆ ಎಂಬುದು ಅವರ ಮಾತಾಗಿದೆ.

ಜೆಫ್ ಬಿಸೋಜ್

ಜೆಫ್ ಬಿಸೋಜ್

ಅಮೆಜಾನ್ ಸ್ಥಾಪಕರು ಮತ್ತು ಸಿಇಒ
ಪ್ರಾರಂಭದಲ್ಲಿ ಮೆಕ್ ಡೊನಾಲ್ಡ್‌ಸ್‌ನ ತಂಡ ಸದಸ್ಯರಾಗಿ ಕಾರ್ಯನಿರ್ವಹಿಸಿದ ಜೆಫ್ ಮತ್ತು ಅವರ ತಂದೆ ಬೇಸಿಗೆಯ ಉದ್ಯೋಗವನ್ನಾಗಿ ಈ ಕೆಲಸವನ್ನು ಆಯ್ದುಕೊಂಡಿದ್ದರು.

 ಜಾನ್ ಕೋಮ್

ಜಾನ್ ಕೋಮ್

ವಾಟ್ಸಾಪ್ ಸಹಸ್ಥಾಪಕರು ಮತ್ತು ಸಿಇಒ
ನೆಲ ಗುಡಿಸುವವರಾಗಿ ತಮ್ಮ ಉದ್ಯೋಗವನ್ನು ಆರಂಭಿಸಿದ ಜಾನ್ ಕೋಮ್ ತಮ್ಮ ದೈನಂದಿನ ಖರ್ಚಿಗಾಗಿ ತಾಯೊಯೊಂದಿಗೆ ಈ ಕೆಲಸವನ್ನು ಮಾಡುತ್ತಿದ್ದರು.

ಮೈಕೆಲ್ ಡೆಲ್
 

ಮೈಕೆಲ್ ಡೆಲ್

ಡೆಲ್ ಇಂಕ್ ಸ್ಥಾಪಕರು ಮತ್ತು ಸಿಇಒ
ಮೈಕೆಲ್ ಡೆಲ್ ಬಾಲ್ಯದಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದರು. ನಂತರ ಬಸ್‌ನಲ್ಲಿ ಕೂಡ ಕೆಲಸ ಮಾಡುತ್ತಿದ್ದರು.

ಟೋನಿ ಫೆಡಲ್

ಟೋನಿ ಫೆಡಲ್

ನೆಸ್ಟ್ ಲ್ಯಾಬ್ಸ್ ಸ್ಥಾಪಕರು ಮತ್ತು ಸಿಇಒ
ಮೊಟ್ಟೆ ಮಾರುವ ಹುಡುಗನಾಗಿ ತಮ್ಮ ವೃತ್ತಿ ರಂಗವನ್ನು ಇವರು ಆರಂಭಿಸಿದರು. ಎಂಟನೆಯ ವಯಸ್ಸಿನಲ್ಲಿಯೇ ಇವರು ಮೊಟ್ಟೆ ಉದ್ಯೋಗವನ್ನು ಆರಂಭಿಸಿದ್ದರು.

ರೀಡ್ ಹ್ಯಾಸ್ಟಿಂಗ್ಸ್

ರೀಡ್ ಹ್ಯಾಸ್ಟಿಂಗ್ಸ್

ನೆಟ್‌ಫ್ಲಿಕ್ಸ್ ಸಹಸ್ಥಾಪಕರು ಮತ್ತು ಸಿಇಒ
ಇವರು ತಮ್ಮ ವೃತ್ತಿ ರಂಗವನ್ನು ವಾಕ್ಯುಮ್ ಕ್ಲೀನರ್ ಮಾರಾಟಗಾರರಾಗಿ ಆರಂಭಿಸಿದರು.

ಮಾರ್ಕ್ ಕ್ಯುಬನ್

ಮಾರ್ಕ್ ಕ್ಯುಬನ್

ಬಿಲಿಯನೇರ್, ಡಲ್ಲಾಸ್ ಮೆವ್ರಿಕ್ಸ್ ಮಾಲೀಕರು
ಇವರು ಗಾರ್ಬೇಜ್ ಬ್ಯಾಗ್ ಮಾರಾಟಗಾರರಾಗಿ ತಮ್ಮ ವೃತ್ತಿ ರಂಗವನ್ನು ಆರಂಭಿಸಿದರು.

ಸುಸಾನ್ ವಜೀಕಿ

ಸುಸಾನ್ ವಜೀಕಿ

ಯೂಟ್ಯೂಬ್ ಸಿಇಒ
ಇವರು ತಮ್ಮ ವೃತ್ತಿ ಜೀವನದ ತೊಡಕವನ್ನು ಹೋಟೆಲ್‌ಗಳಲ್ಲಿ ಆರಂಭಿಸಿದರು.

ಶೆರಿಲ್ ಸ್ಯಾಂಡ್‌ಬರ್ಗ್

ಶೆರಿಲ್ ಸ್ಯಾಂಡ್‌ಬರ್ಗ್

ಫೇಸ್‌ಬುಕ್ ಸಿಒಒ
ರೀಟೈಲ್ ಮಳಿಗೆಯಲ್ಲಿ ಕ್ಲರ್ಕ್ ಆಗಿ ಇವರು ಕಾರ್ಯನಿರ್ವಹಿಸಿದವರು.

Most Read Articles
 
English summary
Here are the goofiest, crappiest, and most unglamorous early jobs of big shot tech executives, from McDonald's team member to vacuum salesman..
Please Wait while comments are loading...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more