ಫ್ಲಿಪ್‌ಕಾರ್ಟ್‌ಗೆ ಬಿಗ್‌ ಶಾಕ್‌ ನೀಡಿದ ಬೆಂಗಳೂರಿನ ನಿವಾಸಿ! ಅಷ್ಟಕ್ಕೂ ಆಗಿದ್ದೇನು?

|

ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ಪ್ರಾಡಕ್ಟ್‌ಗೆ ಬದಲಿ ಪ್ರಾಡಕ್ಟ್‌ ಕಳುಹಿಸಿದ್ದ ಫ್ಲಿಪ್‌ಕಾರ್ಟ್‌ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸರಿಯಾಗಿ ಚಾಟಿ ಬೀಸಿದೆ. ಅದು ಕೂಡ ಬೆಂಗಳೂರಿನ ನಿವಾಸಿಯೊಬ್ಬರೂ ಫ್ಲಿಪ್‌ಕಾರ್ಟ್‌ ವಿರುದ್ದ ಗ್ರಾಹಕರು ವ್ಯಾಜ್ಯಗಳ ಪರಿಹಾರ ಆಯೋಗದ ಮೆಟ್ಟಿಲೇರಿ ಸರಿಯಾಗೇ ಪಾಠ ಕಲಿಸಿದ್ದಾರೆ. ಬೆಂಗಳೂರಿನ ನಿವಾಸಿಯಾಗಿರುವ ದಿವ್ಯಶ್ರೀ ಜೆ. ಅವರು ಫ್ಲಿಪ್‌ಕಾರ್ಟ್‌ಗೆ ದಂಡ ವಿಧಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಹಕರು

ಹೌದು, ಗ್ರಾಹಕರು ಆರ್ಡರ್‌ ಮಾಡಿದ್ದ ಪ್ರಾಡಕ್ಟ್‌ ಬದಲಿ ಪ್ರಾಡಕ್ಟ್‌ ಕಳುಹಿಸಿದ್ದ ಫ್ಲಿಪ್‌ಕಾರ್ಟ್‌ ಇದೀಗ ದಂಡ ಪಾವತಿಸಿದೆ. ಬೆಂಗಳೂರಿನ ನಿವಾಸಿ ದಿವ್ಯಶ್ರೀ ಜೆ. ಅವರು ಗ್ರಾಹಕ ವ್ಯವಹಾರ ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಫ್ಲಿಪ್‌ಕಾರ್ಟ್‌ಗೆ ಬುದ್ದಿಕಲಿಸಿದ್ದಾರೆ. ಅಷ್ಟಕ್ಕೂ ದಿವ್ಯಶ್ರಿ ಜೆ ಅವರು ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್‌ ಮಾಡಿದ್ದು ಏನು? ಅವರಿಗೆ ಫ್ಲಿಪ್‌ಕಾರ್ಟ್‌ ಏನನ್ನು ತಲುಪಿಸಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕಾಮರ್ಸ್‌

ಜನಪ್ರಿಯ ಇ-ಕಾಮರ್ಸ್‌ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ದಿವ್ಯಶ್ರೀ ಜೆ ಅವರು 12,499ರೂ ಮೌಲ್ಯದ ಫೋನ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಪ್ಲಿಪ್‌ಕಾರ್ಟ್‌ ಅವರ ಆರ್ಡರ್‌ ಅನ್ನು ತಲುಪಿಸುವಲ್ಲಿ ವಿಫಲವಾಗಿದೆ. ಜೊತೆಗೆ ದಿವ್ಯಶ್ರೀ ಅವರು ಫ್ಲಿಪ್‌ಕಾರ್ಟ್‌ಗೆ ತಾವು ಮಾಡಿರುವ ಆರ್ಡರ್‌ ತಲುಪಿಲ್ಲ ಎಂದು ಎಷ್ಟು ಭಾರಿ ಮನವಿ ಮಾಡಿದರೂ ಅದಕ್ಕೆ ಸೂಕ್ತವಾಗಿ ಸ್ಪಂಧಿಸಿಲ್ಲ. ಅಲ್ಲದೆ ಅವರ ಕರೆಯನ್ನು ಕೂಡ ಫ್ಲಿಪ್‌ಕಾರ್ಟ್‌ ಸ್ವೀಕರಿಸಲಿಲ್ಲ ಎನ್ನಲಾಗಿದೆ.

ಫ್ಲಿಪ್‌ಕಾರ್ಟ್‌

ಫ್ಲಿಪ್‌ಕಾರ್ಟ್‌ನಿಂದ ಯಾವುದೇ ಪ್ರತಿಕ್ರಿಯೆ ಬರದ ನಂತರ, ದಿವ್ಯಶ್ರೀ ಜೆ ಅವರು ಫ್ಲಿಪ್‌ಕಾರ್ಟ್‌ ವಿರುದ್ಧ ಗ್ರಾಹಕರು ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡು ಪರಿಶೀಲಿಸಿದ ಆಯೋಗವು ಇದೀಗ ತೀರ್ಪು ನೀಡಿದೆ. ಇನ್ನು ಬೆಂಗಳೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ನೀಡಿದ ತೀರ್ಪಿಣಲ್ಲಿ ಫ್ಲಿಪ್‌ಕಾರ್ಟ್‌ಗೆ 12,499ರೂ ಮೊತ್ತವನ್ನು ಪಾವತಿಸಲು ಕೇಳಿದೆ. ಜೊತೆಗೆ ಫೋನ್‌ನ ಬೆಲೆ ಮತ್ತು ವಾರ್ಷಿಕ ಬಡ್ಡಿ 12 ಪ್ರತಿಶತದಂತೆ ಒಟ್ಟು 20,000 ದಂಡವನ್ನು ಪಾವತಿಸುವಂತೆ ಹೇಳಿದೆ. ಹಾಗೆಯೇ ಕಾನೂನು ವೆಚ್ಚಕ್ಕಾಗಿ 10,000ರೂ. ದಂಡವನ್ನು ಪಾವತಿಸುವಂತೆ ಆಯೋಗದ ಅಧ್ಯಕ್ಷೆ ಎಂ.ಶೋಭಾ ಹಾಗೂ ಸದಸ್ಯೆ ರೇಣುಕಾದೇವಿ ದೇಶಪಾಂಡೆ ತೀರ್ಪು ನೀಡಿದ್ದಾರೆ.

ಫ್ಲಿಪ್‌ಕಾರ್ಟ್‌

ಈ ಮೂಲಕ ಫ್ಲಿಪ್‌ಕಾರ್ಟ್‌ ಇದೀಗ 42,000ರೂ. ಗಳನ್ನು ಪಾವತಿಸಬೇಕಾಗಿದೆ. ಇನ್ನು ಫ್ಲಿಪ್‌ಕಾರ್ಟ್ಗೇ ದಂಡ ವಿಧಿಸಿರುವ ಆಯೋಗವು ಸೇವೆಯ ವಿಷಯದಲ್ಲಿ "ಸಂಪೂರ್ಣ ನಿರ್ಲಕ್ಷ್ಯ" ತೋರಿಸಿದೆ ಮಾತ್ರವಲ್ಲದೆ ಅನೈತಿಕ ಅಭ್ಯಾಸಗಳನ್ನು ಅನುಸರಿಸಿದೆ ಎಂದು ಹೇಳಿದೆ. ಹಾಗೆಯೇ ಟೈಮ್‌ಲೈನ್‌ಗೆ ಅನುಗುಣವಾಗಿ ಫೋನ್ ವಿತರಿಸದ ಕಾರಣ ಗ್ರಾಹಕರು "ಆರ್ಥಿಕ ನಷ್ಟ" ಮತ್ತು "ಮಾನಸಿಕ ಆಘಾತ" ಅನುಭವಿಸಿದ್ದಾರೆ ಅನ್ನೊದನ್ನ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ತಮ್ಮ

ಇದರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್‌ ಮಾಡಿ ಸರಿಯಾದ ಸಮಯಕ್ಕೆ ತಮ್ಮ ಆರ್ಡರ್‌ ತಲುಪದಿದ್ದರೆ ಅಥವಾ ಪ್ರಾಡಕ್ಟ್‌ ಗ್ರಾಹಕರ ಕೈ ಸೇರದಿದ್ದರೆ ಏನು ಮಾಡಬೇಕು ಅನ್ನೊದನ್ನ ಬೆಂಗಳೂರಿನ ನಿವಾಸ ತೋರಿಸಿದ್ದಾರೆ. ಗ್ರಾಹಕರು ಸಂಪೂರ್ಣ ಹಣವನ್ನು ಪಾವತಿಸಿದ್ದರು ಪ್ರಾಡಕ್ಟ್‌ ಡೆಲಿವರಿ ಮಾಡದೆ ನಿರ್ಲಕ್ಷ್ಯ ತೋರಿದ ಫ್ಲಿಪ್‌ಕಾರ್ಟ್‌ಗೂ ಸರಿಯದ ಬುದ್ದಿ ಕಲಿಸಿದ್ದಾರೆ. ಇದರಿಂದ ನೀವು ಕೂಡ ಫ್ಲಿಪ್‌ಕಾರ್ಟ್‌ ಅಥವಾ ಯಾವುದೇ ಆನ್‌ಲೈನ್‌ ಶಾಪಿಂಗ್‌ ಸೈಟ್‌ನಿಂದ ಈ ರೀತಿಯ ತೊಂದರೆ ಅನುಭವಿಸಿದರೆ ಸೂಕ್ತ ಕ್ರಮಕ್ಕಾಗಿ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಅನುಸರಿಸಬೇಕಾದ ನಿಯಮಗಳು!

ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಅನುಸರಿಸಬೇಕಾದ ನಿಯಮಗಳು!

* ಆನ್‌ಲೈನ್‌ನಲ್ಲಿ ಏನನ್ನಾದರೂ ಆರ್ಡರ್ ಮಾಡುವ ಮೊದಲು ಮಾರಾಟಗಾರರ ವಿವರಗಳನ್ನು ಪರಿಶೀಲಿಸುವುದು ಉತ್ತಮ.
* ದುಬಾರಿ ಆರ್ಡರ್‌ಗಳಿಗೆ ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಆರಿಸಿಕೊಳ್ಳುವುದು ಸೂಕ್ತ.
* ಗ್ರಾಹಕರು ಆರ್ಡರ್ ಮಾಡಿದ ಫೋನ್‌ಗೆ ಬದಲಾಗಿ ಸಾಬೂನು ಸ್ವೀಕರಿಸಿದ ನಿದರ್ಶನಗಳಿವೆ. ಆದರಿಂದ ನೀವು ಓಪನ್-ಬಾಕ್ಸ್ ಡೆಲಿವರಿ ಸೇವೆಯನ್ನು ಆಯ್ಕೆ ಮಾಡುವುದು ಸೂಕ್ತವಾಗಿದೆ.
* ಆನ್‌ಲೈನ್ ಪ್ಲಾಟ್‌ಫಾರ್ಮ್‌ನಿಂದ ದುಬಾರಿ ಉತ್ಪನ್ನವನ್ನು ಖರೀದಿಸುವ ಮೊದಲು, ಯಾವಾಗಲೂ ಮಾರಾಟಗಾರರ ರೇಟಿಂಗ್ ಅನ್ನು ಪರಿಶೀಲಿಸುವುದು ಅತ್ಯಂತ ಸೂಕ್ತವಿಧಾನವಾಗಿದೆ.

Best Mobiles in India

English summary
Consumer Disputes Redressal Commission has fined e-commerce giant Flipkart

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X