ವರ್ಕ್ ಫ್ರಂ ಹೋಮ್‌: ಬಿಎಸ್‌ಎನ್‌ಎಲ್‌ನಿಂದ ಪ್ರತಿದಿನ 5GB ಡೇಟಾ ಆಫರ್!

|

ಕೊರೊನಾ ವೈರಸ್‌ ಹರಡುವಿಕೆಯನ್ನು ತಡೆಯಲು ಬಹುತೇಕ ಸಂಸ್ಥೆಗಳು ವರ್ಕ್ ಫ್ರಂ ಹೋಮ್‌ಗೆ ಅವಕಾಶ ನೀಡಿವೆ. ವರ್ಕ್ ಫ್ರಂ ಹೋಮ್ ಕೆಲಸಕ್ಕೆ ಇಂಟರ್ನೆಟ್ ಅಗತ್ಯ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಟೆಲಿಕಾಂ ಸಂಸ್ಥೆಗಳು ಅಧಿಕ ಡೇಟಾ ಒದಗಿಸುವ ಪ್ಲ್ಯಾನ್‌ಗಳನ್ನು ಘೋಷಿಸಿವೆ. ಆ ಪೈಕಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಭರ್ಜರಿ ಆಫರ್‌ವೊಂದನ್ನು ಇದೀಗ ಬಿಡುಗಡೆ ಮಾಡಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆಯು ಕೊರೊನಾ ತಡೆಯಲು ವರ್ಕ್ ಫ್ರಂ ಹೋಮ್‌ ಅನ್ನು ಬೆಂಬಲಿಸಿದ್ದು, ಈ ನಿಟ್ಟಿನಲ್ಲಿ ಹೊಸದಾಗಿ ವರ್ಕ್ @ ಹೋಮ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಒಂದನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಪ್ರತಿದಿನ 5GB ಡೇಟಾ ಪ್ರಯೋಜನವನ್ನು ಹೊಂದಿರುವುದಾಗಿ ಸಂಸ್ಥೆಯು ತಿಳಿಸಿದೆ. ಅಂದಹಾಗೆ ದೇಶದ ಎಲ್ಲ ಟೆಲಿಕಾಂ ಸರ್ಕಲ್ ವ್ಯಾಪ್ತಿಗಳಲ್ಲಿಯೂ ಈ ಯೋಜನೆಯು ಲಭ್ಯವಾಗಲಿದೆ.

ಪ್ರತಿದಿನ 5GB

ಪ್ರತಿದಿನ 5GB ಇಂಟರ್ನೆಟ್ ಲಭ್ಯವಾಗಲಿದ್ದು, ಇಂಟರ್ನೆಟ್ ವೇಗವು 10MBPS ಸಾಮರ್ಥ್ಯದಲ್ಲಿ ಇರಲಿದೆ. ಇನ್ನು ಈ ಯೋಜನೆಯ ನಿಗದಿತ 5GB ಡೇಟಾ ಮುಗಿದ ಬಳಿಕ 1Mbps ನಲ್ಲಿ ಇಂಟರ್ನೆಟ್ ಸೇವೆಯು ಮುಂದುವರೆಯಲಿದೆ. ಈ ಯೋಜನೆಯು ಯಾವುದೇ ಎಫ್‌ಯುಪಿ-FUP ಮಿತಿಯನ್ನು ಹೊಂದಿಲ್ಲ. ಬಿಎಸ್‌ಎನ್ಎಲ್ ಲ್ಯಾಂಡ್‌ಲೈನ್ ಸಂಪರ್ಕ ಹೊಂದಿರುವ ಬಿಎಸ್‌ಎನ್‌ಎಲ್ ಚಂದಾದಾರರು ಮಾತ್ರ ಈ ಯೋಜನೆಯನ್ನು ಉಚಿತವಾಗಿ ಪಡೆಯಬಹುದು.

ಉದ್ಯೋಗಿಗಳಿಗೆ

ಬಿಎಸ್‌ಎನ್ಎಲ್ ಬ್ರಾಡ್‌ಬ್ಯಾಂಡ್‌ ಸಂಪರ್ಕ ಪಡೆದ ಮನೆಯಿಂದಲೇ ಕೆಲಸ ಮಾಡುತ್ತಿರುವ ಕಾರ್ಪೊರೇಟ್ ಉದ್ಯೋಗಿಗಳಿಗೆ ಈ ಕೊಡುಗೆಯು ಪ್ರಸ್ತುತ ಹೆಚ್ಚು ಉಪಯುಕ್ತ ಅನಿಸಲಿದೆ. ಬಿಎಸ್‌ಎನ್ಎಲ್‌ ಬ್ರಾಡ್‌ಬ್ಯಾಂಡ್‌ ಚಂದಾದಾರರಿಗೆ ಈ ಯೋಜನೆ ಪಡೆಯಲು ಯಾವುದೇ ಭದ್ರತಾ ಠೇವಣಿ ಇಡುವ ಅಗತ್ಯ ಇರುವುದಿಲ್ಲ ಹಾಗೂ ಮಾಸಿಕ ಶುಲ್ಕ ಭರಿಸುವ ಅಗತ್ಯ ಸಹ ಇರುವುದಿಲ್ಲ.

ಬ್ರಾಡ್‌ಬ್ಯಾಂಡ್

ಈಗಾಗಲೇ ಬಿಎಸ್ಎನ್ಎಲ್ ಲ್ಯಾಂಡ್‌ಲೈನ್ ಹೊಂದಿರುವ ಗ್ರಾಹಕರು ಬಿಎಸ್‌ಎನ್ಎಲ್‌ ಬ್ರಾಡ್‌ಬ್ಯಾಂಡ್ ಚಂದಾದಾರರಾಗಿ ಪರಿವರ್ತನೆಗೊಳ್ಳಲಿ ಎನ್ನುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ. ಹಾಗೆಯೇ ACT ಫೈಬರ್‌ನೆಟ್‌ ಹಾಗೂ ಏರ್‌ಟೆಲ್ ಎಕ್ಸ್‌ಟ್ರಿಮ್ ಫೈಬರ್‌ ಸಂಸ್ಥೆಗಳು ವರ್ಕ್‌ ಫ್ರಂ ಹೋಮ್‌ ಉತ್ತೇಜಿಸಲು ತಮ್ಮ ಪ್ಲ್ಯಾನ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ತಿಳಿಸಿವೆ. ಜಿಯೋ ಸಹ ತನ್ನ ಡೇಟಾ ವೋಚರ್‌ಗಳ ಪ್ರಯೋಜನ ಹೆಚ್ಚಿಸಿದೆ.

Best Mobiles in India

English summary
BSNL is offering its new broadband plan without any monthly charges and security deposit.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X