ವಾಟ್ಸಪ್‌ನಲ್ಲಿ ಸರ್ಕಾರದ ಕೊರೊನಾ ಹೆಲ್ಪ್‌ಡೆಸ್ಕ್ ಬಳಕೆ ಹೇಗೆ?

|

ಕೊರೊನಾ ವೈರಸ್‌ ನಿಯಂತ್ರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳಿತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಸೂಕ್ತ ಮಾಹಿತಿಗಳನ್ನು ನೀಡುತ್ತದೆ. ಆದರೆ ಸಾರ್ವಜನಿಕರಲ್ಲಿ ಕೊರೊನಾ ವೈರಾಣು ಬಗ್ಗೆ ಸಾಕಷ್ಟು ಗೊಂದಲಗಳು ಇವೆ. ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೊರೊನಾ ಕುರಿತಾಗಿ ಸಾರ್ವಜನಿಕರ ಪ್ರಶ್ನೆಗಳಿಗೆ ಸೂಕ್ತ ಮಾಹಿತಿ ಒದಗಿಸುವುದಕ್ಕಾಗಿ ಸಹಾಯವಾಣಿ ನಂಬರ್‌ಗಳನ್ನು ನೀಡಿದೆ.

ಆರೋಗ್ಯ ಮತ್ತು ಕುಟುಂಬ

ಹೌದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈಗಾಗಲೇ ಕೊರೊನಾ/COVID19ಗೆ ಸಂಬಂಧಿತ ಪ್ರಶ್ನೆಗಳಿಗೆ ವಿವಿಧ ರಾಜ್ಯಗಳ ಸಹಾಯವಾಣಿ ಸಂಖ್ಯೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ + 91-11-23978046 ಮತ್ತು 1075 (ಟೋಲ್-ಫ್ರೀ) ಈ ಎರಡು ನಂಬರ್ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆಗಳಾಗಿವೆ. ಹಾಗೆಯೇ ಸರ್ಕಾರವು ಕೊರೊನಾ ಬಗ್ಗೆ ಮಾಹಿತಿಗಾಗಿ MyGov Corona Helpdesk ಹೆಸರಿನಲ್ಲಿ ವಾಟ್ಸಪ್‌ ಚಾಟ್‌ ಬೋಟ್ ರಚಿಸಿದೆ.

ವಾಟ್ಸಪ್‌ನಲ್ಲಿ ಕೊರೊನಾ ಮಾಹಿತಿ

ವಾಟ್ಸಪ್‌ನಲ್ಲಿ ಕೊರೊನಾ ಮಾಹಿತಿ

ಸರ್ಕಾರವು MyGov Corona Helpdesk ಹೆಸರಿನಲ್ಲಿ ವಾಟ್ಸಪ್ ಚಾಟ್‌ ಬೋಟ್ ರಚಿಸಿದ್ದು, ಈ ಚಾಟ್‌ ಬೋಟ್ನಲ್ಲಿ ಜನರ ಪ್ರಶ್ನೆಗಳಿಗೆ ತ್ವರಿತವಾಗಿ ಸ್ವಯಂಚಾಲಿತ ಪ್ರತಿಕ್ರಿಯೆಗಳೊಂದಿಗೆ ಲಭ್ಯವಾಗಲಿವೆ. ಸಾರ್ವಜನಿಕರು ಕೊರೊನಾ ವೈರಸ್‌ ಬಗ್ಗೆ ಯಾವುದೇ ಸಂದೇಶ ಇದ್ದರು ಇಲ್ಲಿ ಮಾಹಿತಿ ಪಡೆಯಬಹುದಾಗಿದೆ. ಈ ಚಾಟ್‌ ಬೋಟ್ ಇಂಗ್ಲಿಷ್ ಭಾಷೆಯನ್ನು ಮಾತ್ರ ಬೆಂಬಲಿಸುತ್ತದೆ. ಕೊರೊನಾ ಕುರಿತಾದ ನಿಮ್ಮ ಸಂದೇಹಗಳಿಗೆ ಸೂಕ್ತ ಮಾಹಿತಿ ಪಡೆಯಲು ಫೋನಿನಲ್ಲಿ ಈ ಹಂತಗಳನ್ನು ಅನುಸರಿಸಿ.

ಹಂತ 1

ಹಂತ 1

ಸಾರ್ವಜನಿಕರು ಸ್ಮಾರ್ಟ್‌ಫೋನಿನಲ್ಲಿ ಸರ್ಕಾರದ ಪರಿಚಯಿಸಿರುವ ಕೊರೊನಾ ಸಹಾಯವಾಣಿ ನಂಬರ- 90-131-515-15 ಸೇವ್ ಮಾಡಿಕೊಳ್ಳಬೇಕು. ಈ ನಂಬರ್‌ಗೆ MyGov Corona Helpdesk ಎಂಬ ಹೆಸರಿನಲ್ಲಿ ಸೇವ್ ಮಾಡಿಕೊಳ್ಳಿರಿ.

ಹಂತ  2

ಹಂತ 2

ನಂತರ ಫೋನಿನಲ್ಲಿ ವಾಟ್ಸಪ್ ತೆರೆದು ಸರ್ಚ್‌ನಲ್ಲಿ MyGov Corona Helpdesk ಎಂದು ಸರ್ಚ್‌ ಮಾಡಿ. ನೀವು ಸೇವ್ ಮಾಡಿಕೊಂಡಿರುವ ಸಹಾಯವಾಣಿ ನಂಬರ್ ಕಾಣಿಸುತ್ತದೆ. ಆಗ ಆ ನಂಬರ್ ಟ್ಯಾಪ್ ಮಾಡಿ.

ಹಂತ 3

ಹಂತ 3

ಮಾರಕ ಕೊರೊನಾ ವೈರಸ್‌ ಬಗ್ಗೆ ನಿಮ್ಮಲ್ಲಿರುವ ಯಾವುದೇ ಸಂದೇಹ, ಪ್ರಶ್ನೆಗಳನ್ನು ಮೆಸೆಜ್ ಮಾಡಿರಿ. ಕೊರೊನಾ ಬರದಂತೆ ತಡೆಯಲು ಯಾವೆಲ್ಲಾ ಕ್ರಮ ಅನುಸರಿಸಬೇಕು, ಸೂಕ್ತ ಮಾಹಿತಿ ಕೋರಿ ಮೆಸೆಜ್ ಬರೆದು (MyGov Corona Helpdesk) ಸೆಂಡ್ ಮಾಡಿ.

ಹಂತ 4

ಹಂತ 4

ಸರ್ಕಾರದ MyGov Corona Helpdesk ಕೊರೊನಾ ವೈರಸ್‌ ವಾಟ್ಸಪ್‌ ಸಹಾಯವಾಣಿಯು ಸ್ವಯಂಚಾಲಿತ ಪ್ರತಿಕ್ರಿಯೆ ನೀಡುವ ಸೌಲಭ್ಯ ಹೊಂದಿದ್ದು, ನೀವು ಕೇಳಿರುವ ಪ್ರಶ್ನೆಗಳಿಗೆ ತ್ವರಿತವಾಗಿ ಸೂಕ್ತ ಮಾಹಿತಿ ಒದಗಿಸುತ್ತದೆ.

ಹಂತ 5

ಹಂತ 5

ಸಹಾಯವಾಣಿಯಿಂದ ಬಂದ ಮಾಹಿತಿ ಓದಿದ ಬಳಿಕ ಮತ್ತೆ ಮೇನ್ ಮೆನುವಿಗೆ ಹಿಂದಿರುಗಲು Menu ಎಂದು ಮೆಸೆಜ್ ಬರೆದು ಸೆಂಡ್ ಮಾಡಿ. ಏಕೆಂದರೇ ಮಾಹಿತಿ ಹೆಚ್ಚು ವಿವರಗಳನ್ನು ಒಳಗೊಂಡಿರಲಿದೆ.

ಕೊರೊನಾ ಬಗ್ಗೆ ಆತಂಕ ಬೇಡ

ಕೊರೊನಾ ಬಗ್ಗೆ ಆತಂಕ ಬೇಡ

ಕೊರೊನಾ ವೈರಸ್‌ ಸೋಂಕಿನ ಭೀತಿಯಿಂದ ಆತಂಕ ಪಡಬೇಡಿ. ಸರ್ಕಾರ ಮತ್ತು ಆರೋಗ್ಯ ಸಂಸ್ಥೆಗಳು ತಿಳಿಸಿರುವ ಸರಿಯಾದ ಮುಂಜಾಗ್ರತೆಯ ಕ್ರಮಗಳನ್ನು ಅನುಸರಿಸಿ. ಮುಖ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದೆ.

Most Read Articles
Best Mobiles in India

English summary
The Government has created a WhatsApp chatbot on corona. Called the MyGov Corona Helpdesk.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X