ಟೆಕ್‌ ಲೋಕದ ಮೇಲೂ ಮಹಾಮಾರಿ ಕೊರೋನಾ ಕರಾಳ ಎಫೆಕ್ಟ್‌..!

By Gizbot Bureau
|

ವಿಶ್ವವನ್ನು ಆತಂಕಕ್ಕೆ ದೂಡಿರುವ ಡೆಡ್ಲಿ ವೈರಸ್‌ ಕೊರೋನಾ ಚೀನಾದಲ್ಲಿ ತನ್ನ ಮರಣ ಮೃದಂಗ ಮುಂದುವರೆಸಿದೆ. ಡ್ರ್ಯಾಗನ್‌ ದೇಶದಲ್ಲಿ ಹುಟ್ಟಿರುವ ಮಹಾಮಾರಿ ಕೇವಲ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿಲ್ಲ. ಬದಲಾಗಿ ಬೇರೆ ಕ್ಷೇತ್ರಗಳ ಮೇಲೂ ನಕರಾತ್ಮಕ ಪರಿಣಾಮವನ್ನುಂಟು ಮಾಡಿದೆ. ಅದರಂತೆ, ಕೈಗಾರಿಕೆಗಳ ಮೇಲೂ ಡೆಡ್ಲಿ ವೈರಸ್‌ ದುಷ್ಪರಿಣಾಮ ಬೀರಿದೆ. ಟೆಕ್‌ ಉದ್ಯಮಕ್ಕಂತೂ ಕೊರೋನಾ ದೊಡ್ಡ ಹೊಡೆತವನ್ನೇ ನೀಡಿದೆ. ಆಪಲ್, ಶಿಯೋಮಿ, ಸ್ಯಾಮ್‌ಸಂಗ್ ಮತ್ತು ಫೇಸ್‌ಬುಕ್‌ನಂತಹ ಹಲವಾರು ದೊಡ್ಡ ಕಂಪನಿಗಳು ವೈರಸ್‌ನಿಂದ ತೊಂದರೆ ಅನುಭವಿಸುತ್ತಿದ್ದು, ಗ್ರಾಹಕರಿಗೆ ದೊರೆಯಬೇಕಾದ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.

ಸ್ಮಾರ್ಟ್‌ಫೋನ್‌ ಸಾಗಣೆಯಲ್ಲಿ ವಿಳಂಬ

ಸ್ಮಾರ್ಟ್‌ಫೋನ್‌ ಸಾಗಣೆಯಲ್ಲಿ ವಿಳಂಬ

ಕೊರೋನಾ ವೈರಸ್‌ನಿಂದ ಶಿಯೋಮಿ ಕಂಪನಿ ಮೇಲೆ ಬಹಳ ದೊಡ್ಡ ಪರಿಣಾಮ ಉಂಟಾಗಿದೆ.

ವೈರಸ್‌ನಿಂದಾಗಿ ಚೀನಾದಲ್ಲಿ ಲಾಕ್‌ಡೌನ್ ಮುಂದುವರಿದರೆ ಕಂಪನಿಯು ಭಾರಿ ನಷ್ಟ ಎದುರಾಗಿ ಪೂರೈಕೆಯಲ್ಲಿ ಬಾರಿ ವ್ಯತ್ಯಯ ಉಂಟಾಗುತ್ತದೆ ಎಂದು ಶಿಯೋಮಿ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ

ಆಸುಸ್‌ ರೋಗ್‌ II ಕೊರತೆ

ಆಸುಸ್‌ ರೋಗ್‌ II ಕೊರತೆ

ಕೊರೋನಾ ವೈರಸ್‌ನಿಂದ ಪೂರೈಕೆ ಸರಪಳಿಯಲ್ಲಿ ಉಂಟಾಗುವ ಅಡೆತಡೆಗಳಿಂದ ಪ್ರಸಿದ್ಧ ರೋಗ್‌ II ಫೋನ್‌ ​​ತಾತ್ಕಾಲಿಕ ಕೊರತೆಯನ್ನು ಎದುರಿಸಲಿದೆ ಎಂದು ತೈವಾನೀಸ್ ಬ್ರಾಂಡ್ ಆಸುಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಏರ್‌ಪಾಡ್‌ಗಳ ಪೂರೈಕೆಯಲ್ಲಿ ವಿಳಂಬ

ಏರ್‌ಪಾಡ್‌ಗಳ ಪೂರೈಕೆಯಲ್ಲಿ ವಿಳಂಬ

ಆಪಲ್‌ ಉತ್ಪನ್ನಗಳ ತಯಾರಿಕೆಗೆ ಚೀನಾ ದೊಡ್ಡ ಕೇಂದ್ರವಾಗಿದೆ. ಕೊರೋನಾ ವೈರಸ್‌ನಿಂದ ಏರ್‌ಪಾಡ್ಸ್ ಪೂರೈಕೆ ವಿಳಂಬವಾಗಲಿದೆ ಎನ್ನಲಾಗಿದೆ.

ಮುಂದಿನ ಐಫೋನ್ ಪೂರೈಕೆಗೆ ತಡ

ಮುಂದಿನ ಐಫೋನ್ ಪೂರೈಕೆಗೆ ತಡ

ಆಪಲ್ ಅಗ್ಗದ ದರದ ಐಫೋನ್‌ನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ದಟ್ಟವಾಗಿದ್ದು, ಅದನ್ನು ಐಫೋನ್ 9 ಎಂದು ಕರೆಯಬಹುದು ಎನ್ನಲಾಗಿದೆ. ಕೊರೋನಾ ವೈರಸ್ ಕಾರಣದಿಂದ ಸರಬರಾಜು ಸರಪಳಿಯ ಮೇಲೆ ನೇರ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಅನೇಕ ವರದಿಗಳು ಹೇಳಿವೆ.

ಒಂದೇ ತಿಂಗಳ ಸ್ಟಾಕ್‌

ಒಂದೇ ತಿಂಗಳ ಸ್ಟಾಕ್‌

ಶಿಯೋಮಿಯ ಸ್ಪಿನ್‌ ಆಫ್‌ ಬ್ರಾಂಡ್‌ ಪೊಕೊ ಇತ್ತೀಚೆಗೆ ತನ್ನ ಮೊದಲ ಸ್ಮಾರ್ಟ್‌ಫೋನ್‌ ಪೊಕೊ ಎಕ್ಸ್2 ಅನ್ನು ಬಿಡುಗಡೆ ಮಾಡಿದೆ. ಆದರೆ, ಪೊಕೊ ಎಕ್ಸ್‌2 ಸ್ಮಾರ್ಟ್‌ಫೋನ್‌ನ ಸ್ಟಾಕ್‌ ಕೇವಲ 1 ತಿಂಗಳು ಮಾರಾಟವಾಗೋವಷ್ಟು ಮಾತ್ರ ಇದೆ. ಆ ನಂತರ ಪೊಕೊ ಎಕ್ಸ್‌ 2 ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಸಮಸ್ಯೆ ಉಂಟಾಗಲಿದೆ ಎನ್ನಲಾಗಿದೆ.

ಹುವಾಯಿ, ಒಪ್ಪೋ, ವಿವೊ ಪೂರೈಕೆ ಮೇಲೂ ಪರಿಣಾಮ

ಹುವಾಯಿ, ಒಪ್ಪೋ, ವಿವೊ ಪೂರೈಕೆ ಮೇಲೂ ಪರಿಣಾಮ

ಇತರ ಚೀನೀ ಬ್ರಾಂಡ್‌ಗಳಾದ ಒಪ್ಪೋ, ವಿವೊ, ಹುವಾಯೊ ಬ್ರಾಂಡ್‌ಗಳ ಮೇಲೂ ಕೊರೋನಾ ವೈರಸ್‌ ಪ್ರಭಾವ ಬೀರಲಿದ್ದು, ಅವುಗಳ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಸಮಸ್ಯೆ ಉಂಟಾಗಲಿದೆ.

ಟಿವಿ ಬೆಲೆಗಳ ಹೆಚ್ಚಳ

ಟಿವಿ ಬೆಲೆಗಳ ಹೆಚ್ಚಳ

ಕೊರೋನಾ ವೈರಸ್‌ನಿಂದ ಉತ್ಪಾದನೆ ಕಡಿಮೆಯಾದ ಕಾರಣ ಟಿವಿಗಳ ಲಭ್ಯತೆಯಲ್ಲಿ ಇಳಿಕೆ ಕಂಡುಬಂದಿದೆ. ಇದು ಎಲ್‌ಸಿಡಿ ಟಿವಿ ಪ್ಯಾನೆಲ್‌ಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಕಾರುಗಳ ವಿತರಣೆಯಲ್ಲೂ ವಿಳಂಬ

ಕಾರುಗಳ ವಿತರಣೆಯಲ್ಲೂ ವಿಳಂಬ

ಕೊರೋನಾ ವೈರಸ್‌ನಿಂದಾಗಿ ವಿಶ್ವದ ಕೆಲವು ಭಾಗಗಳಲ್ಲಿ ಮಾಡೆಲ್ 3 ಕಾರುಗಳ ವಿತರಣೆಯಲ್ಲಿ ವಿಳಂಬವಾಗಲಿದೆ ಎಂದು ಎಲೋನ್ ಮಸ್ಕ್ ನೇತೃತ್ವದ ಕಂಪನಿ ಟೆಸ್ಲಾ ತಿಳಿಸಿದೆ.

ಆಕ್ಯುಲಸ್ ವಿಆರ್ ಹೆಡ್‌ಸೆಟ್ ಉತ್ಪಾದನೆಯಲ್ಲಿ ವಿಳಂಬ

ಆಕ್ಯುಲಸ್ ವಿಆರ್ ಹೆಡ್‌ಸೆಟ್ ಉತ್ಪಾದನೆಯಲ್ಲಿ ವಿಳಂಬ

ಫೇಸ್‌ಬುಕ್ ತಯಾರಿಸುವ ಕೆಲವೇ ಕೆಲವು ಹಾರ್ಡ್‌ವೇರ್‌ಗಳಲ್ಲಿ ಆಕ್ಯುಲಸ್ ವಿಆರ್ ಹೆಡ್‌ಸೆಟ್ ಕೂಡ ಒಂದು. ಈಗ ಕೊರೋನಾ ವೈರಸ್‌ನಿಂದ ಹೆಡ್‌ಸೆಟ್‌ ಉತ್ಪಾದನೆಯು ವಿಳಂಬವಾಗಿದೆ ಎಂದು ವರದಿಯಾಗಿದೆ.

ಮುಚ್ಚಿದ ಆಪಲ್ ಕಚೇರಿಗಳು

ಮುಚ್ಚಿದ ಆಪಲ್ ಕಚೇರಿಗಳು

ಕೊರೋನಾ ವೈರಸ್‌ನಿಂದ ಚೀನಾದಲ್ಲಿ ಆಪಲ್‌ ತನ್ನ ಮಳಿಗೆಗಳು ಮತ್ತು ಕಚೇರಿಗಳನ್ನು ಫೆಬ್ರವರಿ 9 ರವರೆಗೆ ಮುಚ್ಚುವುದಾಗಿ ಘೋಷಿಸಿತ್ತು. ಆದಾಗ್ಯೂ, ಚೀನಾದಲ್ಲಿ ಕಚೇರಿಗಳು ಮತ್ತು ಮಳಿಗೆಗಳನ್ನು ತೆರೆಯಲು ಕಂಪನಿ ಇನ್ನಷ್ಟು ತಡಮಾಡಿದೆ.

Best Mobiles in India

Read more about:
English summary
Coronavirus outbreak results in price hike, shipment shortage and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X