Subscribe to Gizbot

ಐಫೋನ್ ಕದ್ದು ದ್ರೋಹ ಬಗೆದ ಫ್ಲಿಪ್‌ಕಾರ್ಟ್ ವಿತರಕ

Written By:

ಫ್ಲಿಪ್‌ಕಾರ್ಟ್, ಅಮೆಜಾನ್ ಸ್ನ್ಯಾಪ್‌ಡೀಲ್ ಮೊದಲಾದ ರೀಟೈಲ್ ತಾಣಗಳು ಹೇಗೆ ಪ್ರಸಿದ್ಧಿಯನ್ನು ಪಡೆದುಕೊಂಡಿವೆಯೋ ಅಂತೆಯೇ ಮೋಸಗಾರರ ಜಾಲಕ್ಕೂ ಸಿಲುಕಿ ತಮ್ಮ ಹೆಸರನ್ನು ಕೆಡಿಸಿಕೊಳ್ಳುತ್ತಿವೆ. ಈ ತಾಣಗಳಲ್ಲಿ ಮೊಬೈಲ್ ಆರ್ಡರ್ ಮಾಡಿ ನಂತರ ಇಟ್ಟಿಗೆಯನ್ನು ಪಡೆದುಕೊಂಡ ಗ್ರಾಹಕರ ಕಥೆಯನ್ನು ನೀವು ಓದಿರುತ್ತೀರಿ. ಐಫೋನ್ ಬುಕ್ ಮಾಡಿದವರಿಗೂ ಈ ಸೈಟ್‌ಗಳು ಚಳ್ಳೆ ಹಣ್ಣು ತಿನ್ನಿಸಿವೆ ಎಂಬುದಾಗಿಯೇ ಖರೀದಿರಾರರು ದೂರು ದಾಖಲಿಸಿದ್ದಾರೆ.

ಓದಿರಿ: ಸ್ಮಾರ್ಟ್‌ಫೋನ್‌ ಅನ್ನು ಕಣ್ಣಿನಿಂದಲೇ ಆಪರೇಟ್‌ ಮಾಡಿ; ಐಟ್ರ್ಯಾಕರ್!

ಆದರೆ ಕಂಪೆನಿಯು ಈ ಆಪಾದನೆಯನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದು ಇಲ್ಲಿರುವ ವರ್ತಕರು ಮಾಡಿರುವ ತಪ್ಪಿಗೆ ಕಂಪೆನಿಯನ್ನು ದೂರಬಾರದು ಎಂಬುದಾಗಿ ಕೇಳಿಕೊಂಡಿದೆ. ಈ ಎಲ್ಲಾ ಸುದ್ದಿಗಳು ತಣ್ಣಗಾಗುತ್ತಿದೆ ಎಂಬುದರ ಬೆನ್ನಿನಲ್ಲೇ ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ ಫ್ಲಿಪ್‌ಕಾರ್ಟ್ ಡೆಲಿವರಿ ಹುಡುಗ ತನ್ನ ಉದ್ಯೋಗಿಯಿಂದ 12 ಐಫೋನ್‌ಗಳನ್ನು ಕದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಕಲಿ ವಿಳಾಸ

ನಕಲಿ ವಿಳಾಸ

ಬಿ ನವೀನ್ ಹೆಸರಿನ ಡೆಲಿವರಿ ಬಾಯ್, 21 ರ ಹರೆಯದವನಾಗಿದ್ದು ಚೆನ್ನೈ ಮೂಲದವನು. ಆತ ಸರ್ವೀಸ್ ಮಾಡುವ ಜಾಗದಿಂದ ಈತ ಆರ್ಡರ್ ಅನ್ನು ಪಡೆದುಕೊಂಡಿದ್ದು ನಕಲಿ ವಿಳಾಸಕ್ಕೆ ಈತ ಫೋನ್ ಅನ್ನು ತಲುಪಿಸಿದ್ದಾನೆ.

ನಕಲಿ ಚೈನೀಸ್ ಐಫೋನ್‌

ನಕಲಿ ಚೈನೀಸ್ ಐಫೋನ್‌

ಐಫೋನ್ ಅನ್ನು ನಕಲಿ ಚೈನೀಸ್ ಐಫೋನ್‌ಗೆ ರೀಪ್ಲೇಸ್ ಮಾಡಿದ್ದು ಗ್ರಾಹಕರು ಫೋನ್‌ನಿಂದ ತೃಪ್ತಿಯನ್ನು ಪಡೆದುಕೊಂಡಿಲ್ಲ ಎಂಬುದಾಗಿ ತಿಳಿಸಿದ್ದಾನೆ.

ಸಿಸಿಟಿವಿ ಅಳವಡಿಕೆ

ಸಿಸಿಟಿವಿ ಅಳವಡಿಕೆ

ಸಿಸಿಟಿವಿ ಅಳವಡಿಕೆಯಾಗಿರುವ ಹಿನ್ನಲೆಯಲ್ಲಿ ನವೀನ್ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು ನಾಜೂಕಾಗಿ ತನ್ನ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾನೆ.

ತನಿಖೆ

ತನಿಖೆ

ಹಲವಾರು ತಿಂಗಳುಗಳಿಂದ ನವೀನ್ ಈ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಬಳಕೆಯಲ್ಲಿಲ್ಲ ಸಂಖ್ಯೆಯೊಂದು ಆ ಪ್ರದೇಶದಿಂದ ಹಿಂತಿರುಗಿತ್ತಿರುವುದು ಫ್ಲಿಪ್‌ಕಾರ್ಟ್ ಗಮನಕ್ಕೆ ಬಂದಿದ್ದು ತನಿಖೆಯನ್ನು ನಡೆಸಲು ಮುಂದಾಗಿದೆ.

ಉಗ್ರಾಣ ಮಾಲೀಕ ಪತ್ತೆ

ಉಗ್ರಾಣ ಮಾಲೀಕ ಪತ್ತೆ

ತನಿಖೆಯ ನಂತರ ನಕಲಿ ಐಫೋನ್ ಮತ್ತು ಉಗ್ರಾಣ ಮಾಲೀಕ, ಪತ್ತೆಯಾಗಿದ್ದು ಪೊಲೀಸಿಗೆ ಈ ಕುರಿತು ದೂರು ದಾಖಲಾಗಿದೆ.

ಪೊಲೀಸರ ವಶ

ಪೊಲೀಸರ ವಶ

ಈತನ ವಶದಲ್ಲಿದ್ದ ಎಲ್ಲಾ ಐಫೋನ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಒಟ್ಟಾರೆ 5 ಲಕ್ಷದಷ್ಟು ಹಾನಿ ಕಂಪೆನಿಗೆ ಉಂಟಾಗಿದೆ.

ಮೊದಲ ಬಾರಿಗೆ ಈ ರೀತಿಯ ಕೃತ್ಯ

ಮೊದಲ ಬಾರಿಗೆ ಈ ರೀತಿಯ ಕೃತ್ಯ

ಈತ ಇದೇ ಮೊದಲ ಬಾರಿಗೆ ಈ ರೀತಿಯ ಕೃತ್ಯವನ್ನು ಮಾಡುತ್ತಿದ್ದು ತನ್ನ ತಪ್ಪನ್ನು ಈತ ಒಪ್ಪಿಕೊಂಡಿದ್ದಾನೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A Flipkart delivery boy has been arrested for stealing at least 12 iPhones from his employer.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot